ಕುಸಿಯುತ್ತಿರುವ ರೂಪಾಯಿ

ರೂಪಾಯಿ ಇಂದು ಭಾರತದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಮೌಲ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೇಂದ್ರ  ಬ್ಯಾಂಕ್‌ ಆಪತ್ಕಾಲಕ್ಕೆ ಅಂತ ಶೇಖರಿಸಿಟ್ಟುರುವ ತನ್ನ ವಿದೇಶಿ ವಿನಿಮಯದ ಮೀಸಲು ನಿಧಿಯಿಂದ ಡಾಲರನ್ನು ಮಾರುಕಟ್ಟೆಯಲ್ಲಿ ಮಾರಿ ರೂಪಾಯಿಯನ್ನು ಕೊಂಡುಕೊಳ್ಳುತ್ತದೆ. ಇದರಿಂದ ಚಲಾವಣೆಯಲ್ಲಿರುವ ರೂಪಾಯಿ ಪ್ರಮಾಣ ಕಡಿಮೆಯಾಗುತ್ತದೆ. ಡಾಲರಿನ ಪ್ರಮಾಣ ಹೆಚ್ಚುತ್ತದೆ. ಅದರಿಂದ ಡಾಲರಿನ ಮೌಲ್ಯ ಕುಸಿಯುತ್ತದೆ ಅನ್ನುವುದು ಈ ಹಣಕಾಸು ನೀತಿಯ ಹಿಂದಿನ ತರ್ಕ. ಆದರೆ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾದ ಅಂಶಗಳು ಹಾಗೆಯೇ ಇರುವುದರಿಂದ ಇಂತಹ ಕ್ರಮಗಳಿಂದ ರೂಪಾಯಿ ಮೌಲ್ಯ ಕುಸಿಯುವುದನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದೇ ಹೊರತು ನಿಲ್ಲಿಸುವುದಕ್ಕಾಗುವುದಿಲ್ಲ. ಹಾಗಂತ ‘ರೂಪಾಯಿ ತನ್ನ ಸ್ವಾಭಾವಿಕ ಮಟ್ಟವನ್ನು ಕಂಡುಕೊಳ್ಳಲಿ’ ಅಂತ ಸುಮ್ಮನಿರುವುದಕ್ಕೂ ಸಾಧ್ಯವಿಲ್ಲ.

-ವೇಣುಗೋಪಾಲ್ ಟಿ ಎಸ್

1947 ರಲ್ಲಿ ಒಂದು ಡಾಲರಿಗೆ 4.16 ರೂಪಾಯಿ ಇತ್ತು. ಈಗ ಅದು ನೂರು ರೂಪಾಯಿ ಕಡೆಗೆ ದಾಪುಗಾಲು ಹಾಕುತ್ತಿದೆ. ಇತ್ತೀಚಿನ ದಿನಗಳಲ್ಲಿ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿರುವುದು ಆತಂಕದ ವಿಷಯವಾಗಿದೆ. ನಿಜ, ರೂಪಾಯಿ ಮೌಲ್ಯ ಮಾತ್ರ ಕುಸಿಯುತ್ತಿಲ್ಲ, ಹಲವಾರು ದೇಶಗಳ ನಾಣ್ಯಗಳ ಮೌಲ್ಯವು ಕುಸಿಯುತ್ತಿದೆ. ಕೆಲವುದೇಶದ ಕರೆನ್ಸಿಗಳುರೂಪಾಯಿಗಿಂತ ವೇಗವಾಗಿ ಕುಸಿಯುತ್ತಿವೆ, ಕೆಲವು ನಿಧಾನವಾಗಿ ಕುಸಿಯುತ್ತಿವೆ. ಕೆಲವು ನಾಣ್ಯಗಳ ಮೌಲ್ಯ ಹೆಚ್ಚುತ್ತಲೂ ಇವೆ.

ರೂಪಾಯಿ ಅಥವಾ ಯಾವುದೇ ನಾಣ್ಯದ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ? ನಾವು ಪೆನ್ನೊ, ದೋಸೆಯೂ, ತರಕಾರಿಯೋ ಇನ್ಯಾವುದೇ ಸರಕನ್ನೋ ಸೇವೆಯನ್ನೋ ಕೊಳ್ಳುವುದಕ್ಕೆ ನಮ್ಮಲ್ಲಿರುವ ರೂಪಾಯಿಯನ್ನು ಬಳಸಿಕೊಳ್ಳುತ್ತೇವೆ. ಆದರೆ ಹೊರದೇಶದಿಂದ ಪೆಟ್ರೋಲೊ ಅಥವಾ ಇನ್ಯಾವುದೋ ವಸ್ತುವನ್ನು ಕೊಳ್ಳುವುದಕ್ಕೆ ಡಾಲರೋ ಅಥವಾ ಇನ್ಯಾವು ದೋಕರೆನ್ಸಿಯನ್ನು ಕೊಡಬೇಕಾಗುತ್ತದೆ. ಅದಕ್ಕೆ ನಮ್ಮ ಬಳಿ ಇರುವರೂಪಾಯಿಯನ್ನು ಕೊಟ್ಟು ನಾವು ನಮಗೆ ಬೇಕಾದಡಾಲರ್, ಯೋರೊ ಅಥವಾ ಇನ್ಯಾವುದೋ ಕರೆನ್ಸಿಯನ್ನು ಕೊಳ್ಳುತ್ತೇವೆ. ನಾವು ಒಂದು ಡಾಲರ್‌ ಅಥವಾ ಯೂರೋವನ್ನು ಕೊಳ್ಳುವುದಕ್ಕೆ ನೀಡುವ ರೂಪಾಯಿಯ ಪ್ರಮಾಣ ವಿನಿಮಯದರ ಎನಿಸಿಕೊಳ್ಳುತ್ತದೆ. ಹಾಗೆ ಹಣ ಬದಲಿಸಿಕೊಳ್ಳುವ ಮಾರುಕಟ್ಟೆಯನ್ನುಕರೆನ್ಸಿ ಮಾರುಕಟ್ಟೆಎನ್ನಲಾಗುತ್ತದೆ. ವಿನಿಮಯದರ ಬದಲಾಗುತ್ತಿರುತ್ತದೆ.

ವಿದೇಶಿ ವಿನಿಮಯದ ಮಾರುಕಟ್ಟೆಯಲ್ಲಿ ಯಾವುದೇ ಸರಕಿನ ವಿಷಯದಲ್ಲಾಗುವಂತೆ ಕರೆನ್ಸಿಯ ಮೌಲ್ಯವೂ ಅದರ ಬೇಡಿಕೆ ಹಾಗೂ ಪೂರೈಕೆಯನ್ನು ಆಧರಿಸಿ ನಿರ್ಧಾರವಾಗುತ್ತದೆ. ಪೂರೈಕೆಯನ್ನು ಮೀರಿ ಒಂದು ಕರೆನ್ಸಿಯ ಬೇಡಿಕೆ ಹೆಚ್ಚಿದರೆ ಅದರ ಬೆಲೆ ಏರುತ್ತದೆ. ಬೇಡಿಕೆ ಕಡಿಮೆಯಾದರೆ ಬೆಲೆ ಇಳಿಯುತ್ತದೆ. ಒಂದೇ ವ್ಯತ್ಯಾಸ ಅಂದರೆ ಇಲ್ಲಿ ಕರೆನ್ಸಿಯನ್ನು ಸರಕಿನ ಬದಲು ಮತ್ತೊಂದು ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಡಾಲರ್‌ಎದುರು ರೂಪಾಯಿಗೆ ಬೇಡಿಕೆ ಕಡಿಮೆಯಾದರೆ ರೂಪಾಯಿ ಮೌಲ್ಯ ಕುಸಿಯುತ್ತದೆ. ರೂಪಾಯಿ

ಕರೆನ್ಸಿಯ ಬೇಡಿಕೆ ಹಾಗೂ ಪೂರೈಕೆಯನ್ನು ಹಲವು ಅಂಶಗಳು ಪ್ರಭಾವಿಸುತ್ತವೆ. ಕೇಂದ್ರ ಬ್ಯಾಂಕ್‌ ಅನುಸರಿಸುವ ಹಣಕಾಸು ನೀತಿ ಅಂತಹ ಒಂದು ಅಂಶ. ಉದಾಹರಣೆಗೆ ಆರ್‌ಬಿಐ ಬಡ್ಡಿದರವನ್ನು ಇಳಿಸಿದರೆ ರೂಪಾಯಿ ಅಗ್ಗವಾಗುತ್ತದೆ. ಆಗ ಬ್ಯಾಂಕಿನಿಂದ ಸಾಲ ಪಡೆದು ಹೂಡಿಕೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ಮಾರುಕಟ್ಟೆಯಲ್ಲಿ ರೂಪಾಯಿ ಪೂರೈಕೆ ಹೆಚ್ಚುತ್ತದೆ. ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿಯುತ್ತದೆ. ಬದಲಿಗೆ ಬಡ್ಡಿದರವನ್ನು ಹೆಚ್ಚಿಸಿದರೆ ಸಾಲ ದುಬಾರಿಯಾಗುತ್ತದೆ. ಸಾಲ ಪಡೆದು ಹೂಡಿಕೆ ಮಾಡುವುದು ಕಡಿಮೆಯಾಗುತ್ತದೆ. ಮಾರುಕಟ್ಟೆಯಲ್ಲಿ ರೂಪಾಯಿಯ ಪೂರೈಕೆ ಕಮ್ಮಿಯಾಗುತ್ತದೆ. ರೂಪಾಯಿ ಮೌಲ್ಯ ಹೆಚ್ಚುತ್ತದೆ.

ಒಂದು ದೇಶದ ಸರಕಿಗೆ, ಸೇವೆಗೆ ಹಾಗೂ ಸ್ವತ್ತಿಗೆ ವಿದೇಶಿಯರಿಂದ ಬೇಡಿಕೆ ಹೆಚ್ಚಿದರೂ ಆ ದೇಶದ ಕರೆನ್ಸಿಗೆ ಬೇಡಿಕೆ ಹೆಚ್ಚುತ್ತದೆ. ಯಾಕೆಂದರೆ ಆ ವಸ್ತುಗಳನ್ನು ಕೊಳ್ಳುವುದಕ್ಕೆ ವಿದೇಶಿಗರು ಆ ದೇಶದ ಕರೆನ್ಸಿಯನ್ನು ಕೊಳ್ಳುತ್ತಾರೆ. ಹಾಗಾಗಿ ರಫ್ತು ಹೆಚ್ಚಾದಾಗರಫ್ತು ಮಾಡುವ ದೇಶದ ಕರೆನ್ಸಿಯ ಮೌಲ್ಯ ಹೆಚ್ಚುತ್ತದೆ. ರಫ್ತುಕಡಿಮೆಯಾದರೆ ಆ ಮಟ್ಟಿಗೆ ಆ ದೇಶದ ಮೌಲ್ಯ ಕುಸಿಯುತ್ತದೆ. ಆಮದಿನ ಸಂದರ್ಭದಲ್ಲಿ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿರುತ್ತದೆ. ಒಂದು ದೇಶದ ಆಮದು ಹೆಚ್ಚಾದರೆ ಆ ದೇಶದ ಕರೆನ್ಸಿಯ ಮೌಲ್ಯ ಕುಸಿಯುತ್ತದೆ. ಭಾರತದ ಸಮಸ್ಯೆಯೆಂದರೆ ಹಲವು ವರ್ಷಗಳಿಂದ ನಮ್ಮಲ್ಲಿ ರಫ್ತಿಗಿಂತ ಆಮದಿನ ಪ್ರಮಾಣ ಹೆಚ್ಚುತ್ತಿದೆ.ಇದರಿಂದ ವ್ಯಾಪಾರದ ಕೊರತೆ ಅಂದರೆ ಆಮದು ಹಾಗೂ ರಫ್ತಿನ ನಡುವಿನ ಅಂತರ ಹೆಚ್ಚುತ್ತಿದೆ. ಇದರಿಂದ ಚಾಲ್ತಿ ಖಾತೆಯಲ್ಲಿನ ಕೊರತೆ, ಅಂದರೆ ಸರಕು ಹಾಗೂ ಸೇವೆಗಳ ಆಮದು ಮತ್ತು ರಫ್ತಿನ ಮೌಲ್ಯದ ನಡುವಿನ ಅಂತರ ಹೆಚ್ಚುತ್ತಿದೆ. ಹಾಗಾಗಿ ಡಾಲರಿನ ಬೇಡಿಕೆ ಏರುತ್ತಿದೆ.

ಇದನ್ನೂ ಓದಿ :ಮನಸ್ಸಿನ ಬಂಧನವನ್ನು ಕಳಚಿಕೊಳ್ಳಬೇಕಾಗಿದೆ ರೂಪಾಯಿ

ವಿದೇಶಿ ಬಂಡವಾಳ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದ್ದರೆ ಚಾಲ್ತಿ ಖಾತೆಯ ಕೊರತೆಯನ್ನು ನಿಭಾಯಿಸಬಹುದಿತ್ತು. ಇತ್ತೀಚಿನವರೆಗೂ ವಿದೇಶಿ ಬಂಡವಾಳಿಗರು ನಮ್ಮಲ್ಲಿ ಬಂಡವಾಳ ಹೂಡುತ್ತಿದ್ದರು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟುಇದಕ್ಕೆ ಮುಖ್ಯಕಾರಣ. ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ಆರ್ಥಿಕತೆಯಲ್ಲಿ ಡಾಲರ್‌ ಯಥೇಚ್ಛವಾಗಿ ದೊರಕುವಂತೆ ಮಾಡಬೇಕಿತ್ತು. ಅದಕ್ಕಾಗಿ ಅಮೇರಿಕೆಯಂತಹ  ದೇಶಗಳು ಬಡ್ಡಿದರವನ್ನು ಗಣನೀಯವಾಗಿ ಇಳಿಸಿದರು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬಾಂಡುಗಳನ್ನು ಕೊಂಡುಡಾಲರನ್ನು ಮಾರುಕಟ್ಟೆಗೆ ಸೇರುವಂತೆ ಮಾಡಿದರು. ಇದರಿಂದ ಆರ್ಥಿಕತೆಯಲ್ಲಿ ಡಾಲರ್ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಕ್ಕೆ ಪ್ರಾರಂಭವಾಯಿತು. ಡಾಲರ್ ಮಾರುಕಟ್ಟೆಯಲ್ಲಿಅಗ್ಗದ ದರದಲ್ಲಿ ಸಿಗುವುದಕ್ಕೆ ಪ್ರಾರಂಭವಾಯಿತು. ಬಂಡವಾಳಿಗರು ಅಗ್ಗದದರದಲ್ಲಿ ಸಿಗುತ್ತಿದ್ದ ಡಾಲರನ್ನು ಭಾರತದಂತಹ ದೇಶಗಳಲ್ಲಿ ಹೆಚ್ಚಿನ ಲಾಭಕ್ಕೆ ಹೂಡತೊಡಗಿದ್ದರು. ನಮ್ಮಲ್ಲಿಗೆ ವಿದೇಶಿ ಬಂಡವಾಳ ಯಥೇಚ್ಛವಾಗಿ ಹರಿದು ಬಂತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಮೇರಿಕೆ ಹಣದುಬ್ಬರವನ್ನು ತಡೆಯುವುದಕ್ಕೆ ಬಡ್ಡಿದರವನ್ನು ತೀವ್ರವಾಗಿ ಹೆಚ್ಚಿಸುತ್ತಿದೆ. ಹಾಗಾಗಿ ಭಾರತದಂತಹ ದೇಶಗಳಲ್ಲಿನ ಹೂಡಿಕೆ ಈಗ ಲಾಭದಾಯಕ ಹೂಡಿಕೆಯಾಗಿಲ್ಲ. ವಿದೇಶಿ ಬಂಡವಾಳದ ಹೊರಹರಿವಿಗೆ ಇದೂ ಒಂದುಕಾರಣ. ವಿದೇಶಿ ಬಂಡವಾಳ ಮತ್ತೆಅಮೇರಿಕ ಕಡೆ ಹರಿಯತೊಡಗಿದೆ. ಹಾಗಾಗಿ ವಿದೇಶಿ ಬಂಡವಾಳಿಗರು ಹೆಚ್ಚೆಚ್ಚು ಪ್ರಮಾಣದಲ್ಲಿ ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳದ ಹೊರ ಹರಿವು ರೂಪಾಯಿಯ ಮೌಲ್ಯದ ಕುಸಿತವನ್ನು ತೀವ್ರಗೊಳಿಸಿದೆ.

ಭಾರತದಲ್ಲಿ ನಿವ್ವಳ ವಿದೇಶಿ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಅಂದರೆ ಭಾರತದೊಳಕ್ಕೆ ಹರಿದು ಬರುತ್ತಿರುವ ವಿದೇಶಿ ಬಂಡವಾಳಕ್ಕಿಂತ ಹೊರಗೆ ಹರಿದು ಹೋಗುತ್ತಿರುವ ಬಂಡವಾಳದ ಪ್ರಮಾಣ ಹೆಚ್ಚಿದೆ. ಕೇವಲ ವಿದೇಶಿ ಹೂಡಿಕೆದಾರರು ಮಾತ್ರವಲ್ಲ ಭಾರತೀಯ ಬಂಡವಾಳಿಗರೂ ಭಾರತದಲ್ಲಿ ಬಂಡವಾಳ ಹೂಡುವುದಕ್ಕಿಂತ ವಿದೇಶಗಳಲ್ಲಿ ಹೆಚ್ಚೆಚ್ಚು ಬಂಡವಾಳ ತೊಡಗಿಸುತ್ತಿದ್ದಾರೆ. ಭಾರತದಲ್ಲಿನ ಬೇಡಿಕೆಯ ಕೊರತೆ ಅದಕ್ಕೆ ಕಾರಣ. ಬೇಡಿಕೆ ಇದ್ದರೆ ಬಂಡವಾಳಿಗರು ಬಂಡವಾಳ ಹೂಡುತ್ತಾರೆ. ಬಂಡವಾಳಿಗರು ಲಾಭವನ್ನು ನೋಡಿ ಬಂಡವಾಳ ತೊಡಗಿಸುತ್ತಾರೆಯೇ ಹೊರತು ದೇಶಪ್ರೇಮ ಇತ್ಯಾದಿ ಕಾರಣಕ್ಕಲ್ಲ.

ಹಣದುಬ್ಬರದ ದರವೂ ರೂಪಾಯಿ ಮೌಲ್ಯವನ್ನು ಪ್ರಭಾವಿಸುತ್ತದೆ. ಭಾರತದಲ್ಲಿ ಹಣದುಬ್ಬರದ ಪ್ರಮಾಣ ಅಮೇರಿಕೆಯಲ್ಲಿನ ಹಣದುಬ್ಬರಕ್ಕಿಂತ ಹೆಚ್ಚಿದ್ದರೆ ಅಮೇರಿಕೆಯ ಬಂಡವಾಳಿಗರಿಗೆ ಭಾರತದಲ್ಲಿ ಬಂಡವಾಳ ಹೂಡುವುದು ಲಾಭದಾಯಕವಾಗುವುದಿಲ್ಲ. ಹಣದುಬ್ಬರದ ದರದ ಹೆಚ್ಚಿದಷ್ಟೂ ಲಾಭದ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ ಶೇಕಡ 10ರಷ್ಟು ಲಾಭ ಬರುತ್ತದೆ ಅನ್ನುವ ನಿರೀಕ್ಷೆಯಿಂದ ಅಮೇರಿಕೆಯ ಬಂಡವಾಳಿಗರು ಭಾರತದಲ್ಲಿ ಹೂಡಿರುತ್ತಾರೆಅಂತ ಭಾವಿಸಿಕೊಳ್ಳಿ. ಇಲ್ಲಿ ಹಣದುಬ್ಬರ ಶೇಕಡ 8ರಷ್ಟು ಇದ್ದರೆ, ನಿಜವಾಗಿ ಸಿಗುವ ಲಾಭ ಕೇವಲ 2%. ಅಮೇರಿಕೆಯಲ್ಲಿಕಡಿಮೆ ಹಣದುಬ್ಬರ ಇದ್ದರೆ ಅಲ್ಲಿ ಲಾಭ ಹೆಚ್ಚಿರುತ್ತದೆ. ಹಾಗಾಗಿ ಇಲ್ಲಿ ಹೂಡುವುದರಲ್ಲಿಅರ್ಥವಿಲ್ಲ. ಅಷ್ಟೇ ಅಲ್ಲ ಹೂಡಿರುವ ಬಂಡವಾಳವನ್ನೂ ಹಿಂತೆಗೆದುಕೊಂಡು ಅಮೇರಿಕೆಯಲ್ಲಿ ಹೂಡುತ್ತಾರೆ. ಆಗ ಸ್ವಾಭಾವಿಕವಾಗಿಯೇ ರೂಪಾಯಿ ಡಾಲರ್‌ ಎದುರು ಕುಸಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಹೂಡಿಕೆಯನ್ನು ಹಿಂದೆಗೆದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಿದೆ.

ಸರ್ಕಾರದ ನೀತಿಗಳೂ ಕೂಡ ಬೇಡಿಕೆಯನ್ನು ಬಹುವಾಗಿ ಪ್ರಭಾವಿಸುತ್ತವೆ. ಈಗ ಟ್ರಂಪ್ ಭಾರತದಿಂದ ಆಮದಿಗೆ ಅವಕಾಶ ಕೊಡುವುದಿಲ್ಲವೆಂದು ನಿರ್ಧರಿಸಿದರೆ ಭಾರತದ ರಫ್ತುಕಮ್ಮಿಯಾಗುತ್ತದೆ. ರೂಪಾಯಿ ಮೌಲ್ಯ ಕುಸಿಯುತ್ತದೆ. ಅಮೇರಿಕನ್ನರು ನಮ್ಮ ಸರಕನ್ನು ಕೊಳ್ಳುವುದಿಲ್ಲವೆಂದಾದ ಮೇಲೆ ಅವರಿಗೆರೂಪಾಯಿಅವಶ್ಯಕತೆ ಇರುವುದಿಲ್ಲ. ಟ್ರಂಪ್ ಭಾರತದ ಸರಕುಗಳ ಮೇಲೆ ಸುಂಕವನ್ನು ಹೇರಿದರೂಇದೇ ಪರಿಣಾಮವಾಗುತ್ತದೆ. ಆಮದಿಗೆ ಸಂಬಂಧಿಸಿದಂತೆ ಇನ್ನೂಒಂದು ಸಮಸ್ಯೆಇದೆ. ನಾವು ಪೆಟ್ರೋಲ್‌ಮಾತ್ರವಲ್ಲ, ಕಲ್ಲಿದ್ದಲಿನಿಂದ ಚಿನ್ನದವರೆಗೆ ಹಲವು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಕಲ್ಲಿದ್ದಲನ್ನು ಆಪಾರ ಬೆಲೆ ಕೊಟ್ಟು ಕೊಳ್ಳುತ್ತಿದ್ದೇವೆ. ನಮಗೆ ಬೇಕಾದಷ್ಟು ಕಲ್ಲಿದ್ದಲ್ಲನ್ನು ನಮ್ಮಲ್ಲೇ ಉತ್ಪಾದಿಸುವ ಸಾಮರ್ಥ್ಯವಿದ್ದಾಗಲೂ ನಮ್ಮ ಆರ್ಥಿಕ ನೀತಿಯ ಸಮಸ್ಯೆಯಿಂದ ವಿಪರೀತ ಬೆಲೆ ಕೊಟ್ಟು ಅದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ನಮ್ಮಆಮದುತಗ್ಗುವ ಸ್ಥಿತಿಯಲ್ಲಿಲ್ಲ. ಜೊತೆಗೆ ಇಂದು ಜಾಗತಿಕವಾಗಿ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ. ಅಷ್ಟೇ ಅಲ್ಲ ಬಹುತೇಕ ದೇಶಗಳು ತಮ್ಮ ದೇಶಗಳ ವ್ಯಾಪಾರದ ಕೊರತೆಯನ್ನು ಸರಿತೂಗಿಸಿಕೊಳ್ಳುವುದಕ್ಕೆ ಆಮದನ್ನು ನಿಯಂತ್ರಿಸುತ್ತಿವೆ. ಹಾಗಾಗಿ ರಫ್ತು ಹೆಚ್ಚುವ ಸಾಧ್ಯತೆಯೂ ಇಲ್ಲ.

ಹೀಗೆ ಹಲವು ಕಾರಣಗಳಿಂದಾಗಿ ಇಂದು ಭಾರತದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಮೌಲ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೇಂದ್ರ  ಬ್ಯಾಂಕ್‌ ಆಪತ್ಕಾಲಕ್ಕೆ ಅಂತ ಶೇಖರಿಸಿಟ್ಟುರುವ ತನ್ನ ವಿದೇಶಿ ವಿನಿಮಯದ ಮೀಸಲು ನಿಧಿಯಿಂದ ಡಾಲರನ್ನು ಮಾರುಕಟ್ಟೆಯಲ್ಲಿ ಮಾರಿ ರೂಪಾಯಿಯನ್ನು ಕೊಂಡುಕೊಳ್ಳುತ್ತದೆ. ಇದರಿಂದ ಚಲಾವಣೆಯಲ್ಲಿರುವ ರೂಪಾಯಿ ಪ್ರಮಾಣ ಕಡಿಮೆಯಾಗುತ್ತದೆ. ಡಾಲರಿನ ಪ್ರಮಾಣ ಹೆಚ್ಚುತ್ತದೆ. ಅದರಿಂದ ಡಾಲರಿನ ಮೌಲ್ಯ ಕುಸಿಯುತ್ತದೆ ಅನ್ನುವುದು ಈ ಹಣಕಾಸು ನೀತಿಯ ಹಿಂದಿನ ತರ್ಕ. ಆದರೆ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾದ ಅಂಶಗಳು ಹಾಗೆಯೇ ಇರುವುದರಿಂದ ಇಂತಹ ಕ್ರಮಗಳಿಂದ ರೂಪಾಯಿ ಮೌಲ್ಯ ಕುಸಿಯುವುದನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದೇ ಹೊರತು ನಿಲ್ಲಿಸುವುದಕ್ಕಾಗುವುದಿಲ್ಲ. ಹಾಗಂತ ‘ರೂಪಾಯಿ ತನ್ನ ಸ್ವಾಭಾವಿಕ ಮಟ್ಟವನ್ನು ಕಂಡುಕೊಳ್ಳಲಿ’ ಅಂತ ಸುಮ್ಮನಿರುವುದಕ್ಕೂ ಸಾಧ್ಯವಿಲ್ಲ. ಕೇಂದ್ರ ಬ್ಯಾಂಕುಇತ್ತೀಚೆಗೆ 70 ಬಿಲಿಯನ್‌ ಡಾಲರ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.ಆದರೆ ಇತ್ತೀಚೆಗೆ ಅದು ತನ್ನ ನಿಲುವನ್ನು ಬದಲಿಸಿಕೊಂಡಿದೆ ಎಂದು ತೋರುತ್ತದೆ. ಬಹುಶಃ ರೂಪಾಯಿ ತನ್ನ ನಿಜವಾದ ಮೌಲ್ಯವನ್ನು ಕಂಡುಕೊಳ್ಳಲಿ ಅನ್ನುವ ಯೋಚನೆಯಲ್ಲಿರಬಹುದು. ಅಥವಾ ರೂಪಾಯಿ ಮೌಲ್ಯ ಕುಸಿದರೆ ರಫ್ತು ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ. ರಫ್ತಿನ ಪ್ರಮಾಣ ಹೆಚ್ಚುತ್ತದೆ.ಆಮದುದು ಬಾರಿಯಾಗುವುದರಿಂದ ಆಮದಿನ ಪ್ರಮಾಣ ಕಮ್ಮಿಯಾಗುತ್ತದೆ. ಇದರಿಂದ ವ್ಯಾಪಾರದ ಕೊರತೆ ತಗ್ಗುತ್ತದೆ ಎನ್ನುವ ಅಂದಾಜೂ ಇರಬಹುದು. ಆದರೆ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದ್ದರೂ ವ್ಯಾಪಾರದ ಕೊರತೆ ಹಾಗೇ ಉಳಿದಿದೆ. ನಾವು ಆಮದು ಮಾಡಿಕೊಳ್ಳುತ್ತಿರುವ ಪೆಟ್ರೋಲ್‌ ಇತ್ಯಾದಿ ಪದಾರ್ಥಗಳು ಅನಿವಾರ್ಯವಾಗಿರುವುದರಿಂದ ಬೆಲೆ ಹೆಚ್ಚಿದ್ದರೂ ಆಮದು ಮಾಡಿಕೊಳ್ಳುತ್ತೇವೆ. ಹಾಗಾಗಿ ರಫ್ತು ಸ್ವಲ್ಪ ಹೆಚ್ಚಿದ್ದರೂ ಆಮದು ದುಬಾರಿಯಾಗಿರುವುದರಿಂದ ಕೊರತೆ ಹೆಚ್ಚೇ ಆಗುತ್ತಿದೆ. ಜೊತೆಗೆ ರೂಪಾಯಿ ಮೌಲ್ಯದ ಕುಸಿತದಿಂದ ಹಣದುಬ್ಬರದ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ.

ಅದರಿಂದಾಗಿ ನಾವು ರೂಪಾಯಿ ಮೌಲ್ಯ ಕುಸಿಯುವುದಕ್ಕೆ ಬಿಡುವುದಕ್ಕಾಗುವುದಿಲ್ಲ. ನಾಣ್ಯಗಳ ಮೌಲ್ಯದ ಕುಸಿತ ಹಲವು ಸಮಸ್ಯೆಗಳನ್ನು ತೀವ್ರವಾಗಿಸುತ್ತದೆ. ಆಮದುದುಬಾರಿಯಾಗುತ್ತದೆ.ಅದನ್ನು ಭರಿಸಲು ಹೆಚ್ಚು ವಿದೇಶಿ ವಿನಿಮಯಖರ್ಚಾಗುತ್ತದೆ. ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ರೂಪಾಯಿ ಮೌಲ್ಯದ ಕುಸಿತದಿಂದ ಹಣದುಬ್ಬರದದರ ಹೆಚ್ಚುತ್ತದೆ. ಹಣದುಬ್ಬರರೂಪಾಯಿ ಮೌಲ್ಯವನ್ನು ಮತ್ತಷ್ಟುಕುಗ್ಗಿಸುತ್ತದೆ. ಇದೊಂದು ವಿಷವರ್ತುಲ.ರೂಪಾಯಿ ಮೌಲ್ಯದ ಇಳಿತದಿಂದ ವಿದೇಶಿ ವಿನಿಮಯದ ಸಂಗ್ರಹವೂ ಇಳಿಯುತ್ತದೆ. ಯಾಕೆಂದರೆಡಾಲರ್‌ಎದುರುಇತರ ದೇಶಗಳ ನಗದಿನ ಮೌಲ್ಯ ಕುಸಿದಾಗ, ಒಟ್ಟಾರೆ ವಿದೇಶಿ ವಿನಿಮಯದ ಮೀಸಲಿನ ಮೌಲ್ಯಕಮ್ಮಿಯಾಗುತ್ತದೆ. ಉದಾಹರಣೆಗೆಯೂರೋ ಬೆಲೆ ಕುಸಿದರೆ, ಸಂಗ್ರಹದಲ್ಲಿರುವಯೂರೋವಿನ ಮೌಲ್ಯಕಡಿಮೆಯಾಗುತ್ತದೆ. ಹಾಗಾಗಿ ಒಟ್ಟಾರೆ ಮೀಸಲಿನ ಮೌಲ್ಯಕಡಿಮೆಯಾಗುತ್ತದೆ.

ಮೊದಲಿಗೆ ಇದೊಂದು ತಾತ್ಕಾಲಿಕ ಸಮಸ್ಯೆ ಎಂದಾಗಲಿ, ಎಷ್ಟೋ ದೇಶಗಳಿಗೆ ಹೋಲಿಸಿದರೆ ನಾವು ಸುಸ್ಥಿತಿಯಲ್ಲಿದ್ದೇವೆ ಎಂದು ನೆಮ್ಮದಿಪಟ್ಟುಕೊಳ್ಳುವುದನ್ನು ಬಿಡಬೇಕು. ಇದು ಗಂಭೀರವಾದ ಸ್ಥಿತಿ ಅನ್ನುವುದನ್ನು ಒಪ್ಪಿಕೊಳ್ಳಬೇಕು. ಆರ್ಥಿಕ ಪ್ರಗತಿಗೆ ಬೇಕಾದ ಸಂಪನ್ಮೂಲವನ್ನು ಕಾರ್ಪೋರೇಟ್‌ ತೆರಿಗೆ, ಸಂಪತ್ತಿನ ಮೇಲಿನ ತೆರಿಗೆ, ಇತ್ಯಾದಿ ಕ್ರಮಗಳಿಂದ ಕ್ರೋಡೀಕರಿಸಬೇಕು. ಆ ಮೂಲಕ ಪೆಟ್ರೋಲ್ ಮೇಲಿನ ಸುಂಕವನ್ನುಕಡಿಮೆ ಮಾಡಿದರೆ ಹಣದುಬ್ಬರದ ನಿಯಂತ್ರಣಕ್ಕೂ ಅನುಕೂಲವಾಗುತ್ತದೆ. ಇಂದಿನ ಆರ್ಥಿಕ ಸಂಕಷ್ಟದ ಸಮಯದಲ್ಲಿಅತಿಯಾಗಿ ಲಾಭ ಮಾಡಿಕೊಳ್ಳುತ್ತಿರುವ ಕಾರ್ಪೋರೇಟ್‌ ಜಗತ್ತಿಗೂ ಒಂದು ಜವಾಬ್ದಾರಿಯಿದೆ. ಅವರ ಮಿಲಿಯನ್‌ಗಟ್ಟಲೇ ಸಾಲವನ್ನು ಮನ್ನಾ ಮಾಡುವ ಅವಶ್ಯಕತೆಯೂ ಇಲ್ಲ. ಅನವಶ್ಯಕ ಆಮದಿಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು. 2013ರಲ್ಲಿ ಚಿನ್ನದ ಆಮದಿಗೆ ನಿಯಂತ್ರಣ ಹೇರಲಾಗಿತ್ತು. ಹಾಗೆಯೇ ವಿದೇಶಿ ಬಂಡವಾಳ ಹೊರಹರಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು. ರಷ್ಯಾದಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳಿಗೆ ರೂಪಾಯಿಯಲ್ಲಿ ಹಣ ಪಾವತಿಸುವ ಪ್ರಯತ್ನವನ್ನುಇನ್ನಷ್ಟುಗಂಭೀರವಾಗಿಮಾಡಬೇಕು. ಬಹುರಾಷ್ಟ್ರೀಯ ಒಪ್ಪಂದಗಳಿಗಿಂತ ದ್ವಿಪಕ್ಷೀಯ ಒಪ್ಪಂದಗಳ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು. ಒಟ್ಟಿನಲ್ಲಿ ರೂಪಾಯಿ ಮೌಲ್ಯದ ಕುಸಿತವನ್ನು ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಎಚ್ಚರಿದಿಂದ ನಿರ್ವಹಿಸುವುದು ನಮ್ಮಆದ್ಯತೆಯಾಗಬೇಕು. ರೂಪಾಯಿ

 

Donate Janashakthi Media

Leave a Reply

Your email address will not be published. Required fields are marked *