ಹುಕ್ಕೇರಿ: ಸಿಡಿಲು ಬಡಿದ ಪರಿಣಾಮ ಬೃಹತ್ ಗಾತ್ರದ ತೆಂಗಿನ ಮರ ಹೊತ್ತಿ ಉರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ
ಬಡಕುಂದ್ರಿ ಗ್ರಾಮದಲ್ಲಿ ನಡೆದಿದೆ.
ಇದನ್ನು ಓದಿ :-ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಮಹೇಶ್ ಭಟ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
ಸಾಯಂಕಾಲ ಸಿಡಿಲು ಸಹಿತ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಹೊಡೆದಿದೆ. ಪರಿಣಾಮ ತೆಂಗಿನ ಮರ ಬೆಂಕಿ ಹೊತ್ತಿ ಉರಿದಿದೆ.ಬಡಕುಂದ್ರಿ ಗ್ರಾಮದ ಬಸವರಾಜ ಚೌಗಲಾ ಎಂಬುವರ ಮನೆ ಹಿಂಬದಿಯಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಹೊಡೆದಿದ್ದು ಕುಟುಂಬಸ್ಥರು ಮನೆ ಒಳಗಡೆ ಇದ್ದ ಕಾರಣ ಭಾರಿ ಅನಾಹುತ ತಪ್ಪಿದೆ.