ಬೆಂಗಳೂರು : ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಯು , ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಗೋಕಲ್‍ದಾಸ್ ಎಕ್ಸ್‍ಪೋಟ್ಸ್ ಲಿಮಿಟೆಡ್/ಯುರೋ ಕ್ಲಾಥಿಂಗ್ ಕಂಪನಿ-2 ನಲ್ಲಿ ನಡೆದ ಕಾನೂನು ಬಾಹಿರ ಲೇ-ಆಫ್ ಬಗ್ಗೆ ಅಧ್ಯಯನ ನಡೆಸಿ, ವರದಿಯೊಂದನ್ನು ಬಿಡುಗಡೆ ಮಾಡಿದೆ. ಲೇಡ್ ಆಫ್ ಡ್ಯುರಿಂಗ್ ದಿ ಪಾಂಡೆಮಿಕ್ : ಎ ಕೇಸ್ ಸ್ಟಡಿ ಆಫ್ ದಿ ಕ್ಲೋಶರ್ ಆಫ್ ಎ ಗಾರ್ಮೆಂಟ್ ಫ್ಯಾಕ್ಟರಿ ‘ ಎಂಬ 60 ಪುಟದ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗೋಕುಲದಾಸ್ ಎಕ್ಸ್ಪೋಟ್ಸ್ / ಯುರೋ ಕ್ಲಾಥಿಂಗ್ ಕಂಪನಿ-2 ರ ಮುಚ್ಚುವಿಕೆಯ ಸತ್ಯಾಸತ್ಯೆತಯನ್ನು ತೆರೆದಿಟ್ಟಿವೆ.
ಕರ್ನಾಟಕದ ಕೈಗಾರಿಕೋದ್ಯಮದಲ್ಲಿ ಇಂದು ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಕಂಪನಿಗಳು ಕಾರ್ಮಿಕರ ಹಕ್ಕುಗಳನ್ನು ಹತ್ತಿಕುತಿದ್ದಾರೆ ಹಾಗು ರಾಜ್ಯ ಸರ್ಕಾರ ತನ್ನ ಜಾವಾಬ್ದಾರಿಯನ್ನು ಕೈ ಬಿಟ್ಟು ಇದನ್ನು ನೋಡಿದರು, ನೊಡದಂತೆ ವರ್ತಿಸುತ್ತಿದೆ. ಟಯೋಟಾ ಉದ್ಯಮದಲ್ಲಿ ಮುಷ್ಕರ, ಕೋಲಾರದ ವಿಸ್ಟ್ರಾನ್ ನಲ್ಲಿ ನಡದ ಘಟನೆ ಇವು ಉದಾಹರಣೆಗಳಷ್ಟೆ. ಪ್ರಬಲ ಕಾರ್ಮಿಕ ಕಾನುನುಗಳಿದ್ದು ಸಹ ಈ ಪರಿಸ್ಥಿತಿ ಇತ್ತು, ಇನ್ನು ಕೇಂದ್ರ ಸರ್ಕಾರ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳಿಂದ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ಇದೇ ಸಮಯದಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾನೂನುಗಳಿಂದ ಸಣ್ಣ-ಅತಿ ಸಣ್ಣ ರೈತರು ಹಾಗು ಕೂಲಿ ಕಾರ್ಮಿಕರ ಪರಿಸ್ಥಿತಿ ಸಹ ಗಂಭೀರವಾಗಲಿದೆ. ಇವೆರಡು ಬೆಳವಣಿಗೆಗಳಿಂದ ಹಿಂದುಳಿದ ಜಿಲ್ಲೆಗಳಿಗೆ ತೀವ್ರ ಬಿಕ್ಕಟ್ಟು ಉಂಟಾಗಲಿದೆ.
ಏನದು ಘಟನೆ? ಈ ಕಂಪನಿಯು ಜೂನ್ 6 ರಂದು ಕಂಪನಿಗೆ ಇದ್ದಕ್ಕಿದ್ದಂತೆ ಲೇ ಆಫ್ ಘೋಷಿಸಿದ ಘಟನೆಯು, ಇತ್ತೀಚಿನ ದಿನಗಳಲ್ಲಿ ಎಲ್ಲೂ ಕಾಣಸಿಗಂತಹ ಬಹುದೊಡ್ಡ ಗಾರ್ಮೆಂಟ್ ಮಹಿಳೆಯರ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತು. ಆಡಳಿತ ವರ್ಗದ ಈ ಕ್ರಮವು ಕೈಗಾರಿಕಾ ವ್ಯಾಜ್ಯ ಕಾಯಿದೆಯ ಅನ್ವಯ ಕಾನೂನು ಬಾಹಿರವಾಗಿರುತ್ತದೆ. ಕಾರ್ಮಿಕರು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಕಂಪನಿಯು ಲೇ ಆಫ್‍ವನ್ನು ಪ್ರಕಟಿಸಿತ್ತು. ಕಂಪನಿಯ ಎಲ್ಲಾ 1200 ಕಾರ್ಮಿಕರು ತಕ್ಷಣವೇ ಪ್ರತಿಭಟನೆ ಶುರು ಮಾಡಿದರು. ಆಡಳಿತವರ್ಗವು ಬೇರೆ ಬೇರೆ ತಂತ್ರಗಾರಿಕೆಯ ಮೊರೆಹೋಗಿ ಪ್ರತಿಭಟನೆಯ ನಡುವೆಯೇ ಸುಮಾರು 50% ನಷ್ಟು ಕಾರ್ಮಿಕರಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಪ್ರತಿಭಟನೆಯ ಕೊನೆಯ ಹಂತದಲ್ಲಿಯೂ (50 ದಿನಗಳ ನಂತರವೂ) ಸುಮಾರು 600 ಕಾರ್ಮಿಕರು ತಮ್ಮ ನಿಲುವನ್ನು ಬದಾಲಾಯಿಸದೆ, ಕಂಪನಿಯು ಪುನ: ತೆರೆಯಬೇಕೆಂದು ಪಟ್ಟು ಹಿಡಿದಿದ್ದರು. 2014 ರಿಂದಲೂ ಇಸಿಸಿ-2 ಕಂಪನಿಯ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಗಾರ್ಮೆಂಟ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್ ((GATWU)) ಈ ಪ್ರತಿಭಟನೆಯ ಮುಂದಾಳತ್ವವನ್ನು ವಹಿಸಿತ್ತು. ಗಾರ್ಮೆಂಟ್ಸ್ ಉದ್ಯಮದಲ್ಲಿ 50 ದಿನಗಳಷ್ಟು ದೀರ್ಘಕಾಲ ನಡೆದ ಪ್ರತಿಭಟನೆಯು ಕಾಣಸಿಗುವುದು ಅಪರೂಪ. ಯಾಕೆಂದರೆ ಬಹಳಷ್ಟು ಕಾರ್ಮಿಕರು ಕಂಪನಿಯ ಆಡಳಿತ ವರ್ಗವು ಒಡ್ಡುವ ಒತ್ತಡ ಬೆದರಿಕೆಗಳಿಗೆ ಮಣಿದು ಹಾಗೂ ತಮಗೆ ಬರಬೇಕಾದ ಬಾಕಿ ಹಣ ಕಳೆದುಕೊಳ್ಳುವ ಭಯದಲ್ಲಿ ರಾಜೀನಾಮೆಯನ್ನು ನೀಡುತ್ತಾರೆ. ಕೋವಿಡ್-19 ಸಂದರ್ಭದಲ್ಲಿಅಂತರರಾಷ್ಟ್ರೀಯ ಮಾರುಕಟ್ಟೆಗೆ ಗಾರ್ಮೆಂಟ್ಸ್ ರಫ್ತು ಮಾಡುವ ಕಂಪನಿಯ ಆಡಳಿತ ವರ್ಗದ ವಿರುದ್ಧ ಶೋಷಿತ ಕಾರ್ಮಿಕರು ಪ್ರತಿಭಟನೆ ಮಾಡಿದ್ದು ಗಮನಾರ್ಹ ವಿಷಯವಾಗಿದೆ.
ಇದನ್ನು ವೀಕ್ಷಿಸಿ : https://fb.watch/2zZ5ifTjwk/
ಈ ವರದಿಯಲ್ಲಿ ಮಂಡ್ಯದಂತಹ ಜಿಲ್ಲೆಯಲ್ಲಿ ಈ ತರಹದ ಒಂದು ದೊಡ್ಡ ಕಾರ್ಖಾನೆ ಕಾನೂನು ಬಾಹಿರವಾಗಿ ಮುಚ್ಚಿದಾಗ ಆಗಬಹುದಾದ ಪರಿಣಾಮ ; ಕಂಪನಿ ಮಾಲಿಕರಿಂದ ಕಾರ್ಮಿಕರು ರಾಜಿನಾಮೆ ನೀಡುವಂತೆ ಹಾಕಿದ ಬೆದರಿಕೆಗಳು, ಒತ್ತಾಯಗಳು ; ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಗಾರ್ಮೆಂಟ್ಸ್ ಆಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್ (GATWU) ನಡೆಸಿದ ಹೋರಾಟ ಹಾಗು ಅದಕ್ಕೆ ಸಿಕ್ಕ ಫಲ ಇವೆಲ್ಲವನ್ನು ವಿವರಿಸುತ್ತದೆ. ಜೊತೆಗೆ ಕಂಪನಿ ಮಾಲೀಕರಿಂದ ನಡೆದ ಕಾನೂನು ಉಲ್ಲಂಘನೆ ವಿವರಿಸುತ್ತದೆ. ಹಾಗೆಯೆ ಅಲ್ಲಿ ನಡೆದ ಬಿಕ್ಕಟ್ಟನ್ನು ಸರಿಪಡಿಸುವ ಹೊಣೆಗಾರಿಕೆಯನ್ನು ಹೊರದೆ, ತಾವೇ ಸ್ವಇಚ್ಚೆಯಿಂದ ಸಹಿ ಹಾಕಿರುವ ಒಪ್ಪಂದಕ್ಕೆ ಬೆಲೆ ಕೊಡದೆ, ತನಗಾಗಿ ಇಷ್ಟು ವರ್ಷ ದುಡಿದ ಕಾರ್ಮಿಕರ ಪರವಾಗಿ ನಿಲ್ಲದೆ ಇರುವ H&M ನಂತಹ ಅಂತರರಾಷ್ಟ್ರೀಯ ಬ್ರಾಂಡ್‍ಗಳ ನಡವಳಿಕೆಗಳನ್ನು ಪ್ರಶ್ನಿಸಲಾಗಿದೆ .
ಅಲ್ಲದೆ , ಅತಿ ಕಡಿಮೆ ವೇತನ ಹಾಗು ತೀವ್ರ ಒತ್ತಡಗಳು ಇರುವ ನೌಕರಿಯಾಗಿದ್ದರು , ಈ ಒಂದು ನೌಕರಿಯಿಂದ ಅಲ್ಲಿನ ಮಹಿಳಾ ಕಾರ್ಮಿಕರಿಗೆ ಆದ ಅನುಕೂಲಗಳ ಬಗ್ಗೆ, ಅವರಿಗೆ ಸಿಕ್ಕ ಸ್ವಾತಂತ್ರ್ಯದ ಬಗ್ಗೆ ಸಹ ವಿವರಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಕ್ಕಟ್ಟಿನಲ್ಲಿರುವ ಕೃಷಿ ಕ್ಷೇತ್ರ ಹಾಗು ಮಹಿಳೆಯರ ಉದ್ಯೋಗವಕಾಷಗಳ ಮೇಲೆ ಬೀರುವ ಪರಿಣಾಮ ಸಹ ವಿವರಿಸಲಾಗಿದೆ. ಈ ಸಂಶೋಧನೆಯ ಆಧಾರದ ಮೇಲೆ ರಾಜ್ಯ ಹಾಗು ಕೆಂದ್ರ ಸರ್ಕಾರಗಳಿಗೆ , ಹಾಗು ಅಂತರರಾಷ್ಟ್ರೀಯ ಕಂಪನಿಗಳಿಗೆ ನೀಡುವುದಕ್ಕಾಗಿ ವಿವರವಾದ 12 ಶಿಫಾರಸ್ಸುಗಳನ್ನು ಸಹ ಪಟ್ಟಿಮಾಡಲಾಗಿದ್ದು ಅದನ್ನು ಸರಕಾರಕ್ಕೆ ಕಳುಹಿಸಿಕೊಡುವುದಾಗಿ ಮತ್ತು ಆ ಕುರಿತಾಗಿ ಒಂದು ವೆಬಿನಾರ್ ಆಯೋಜಿಸಲಾಗುವುದು ಎಂದು ಎ.ಎಲ್.ಎಫ್ ನ ಸ್ವಾಥಿ ಶಿವಾನಂದ್, ಲೇಖಾ ಕೆ.ಜಿ ತಿಳಿಸಿದ್ದರೆ.