ನಿರಂಜನರ ಶತಮಾನೋತ್ಸವ ಸಂದರ್ಭದಲ್ಲಿ ಕ್ರಿಯಾ ಮಾಧ್ಯಮ ಅವರ ಆಯ್ದ ಬರಹಗಳ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದೆ. ‘ಬದುಕು-ಬರಹಗಳ ಕತೆ’, ‘ಆಯ್ದ ಕತೆಗಳು’ – ಈ ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ತೇಜಸ್ವಿನಿ ನಿರಂಜನ ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಓದು
– ಗುರುರಾಜ ದೇಸಾಯಿ
‘ಬದುಕು-ಬರಹಗಳ ಕತೆ’
(ಸಂಪಾದಕರು : ತೇಜಸ್ವಿನಿ ನಿರಂಜನ, ಪುಟ : 120, ಬೆಲೆ: ರೂ. 140)

ನಿರಂಜನರ ಬದುಕು, ಬರಹಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನ ‘ನಿರಂಜನರ ಬದುಕು-ಬರಹಗಳ ಕತೆ’ ಮಾಲಿಕೆಯ ಮೊದಲ ಪುಸ್ತಕ. ಈ ಪುಸ್ತಕವನ್ನು ತೇಜಸ್ವಿನಿ ನಿರಂಜನ ಸ್ವತಃ ಸಂಪಾದಿಸಿದ್ದಾರೆ. ನಿರಂಜನ ಅವರ ಬದುಕು-ಬರಹಗಳ ಒಂದು ಸ್ಥೂಲ ಪರಿಚಯ ಕೊಡುವುದು ಕಷ್ಟದ ಕೆಲಸ. ನಿರಂಜನರ ಬದುಕು ಬರಹಗಳೆರಡೂ ಅಗಾಧ, ಹಲವು ಆಯಾಮಗಳಿಂದ ಕೂಡಿದ್ದು, ವೈವಿಧ್ಯಮಯವೂ ಆಗಿವೆ. ಅವರ ಪ್ರಕಟಿತ ಕೃತಿಗಳ ಸಂಖ್ಯೆ62 (25 ಕಾದಂಬರಿಗಳು, 9 ಕಥಾ ಸಂಕಲನಗಳು, 4 ನಾಟಕ ಸಂಗ್ರಹಗಳು, 2 ಜೀವನವೃತ್ತ, 2 ಲೇಖನ ಸಂಗ್ರಹ, 7 ಅಂಕಣ ಬರಹಗಳ ಸಂಗ್ರಹ, 10 ಭಾಷಾಂತರ ಕೃತಿಗಳು, 3 ರಾಜಕೀಯ ಬರಹಗಳ ಸಂಕಲನ) ಮತ್ತು 65 ಸಂಪಾದಿತ ಕೃತಿಗಳ 4 ಸರಣಿ (ಜ್ಞಾನಗಂಗೋತ್ರಿ 7 ಸಂಪುಟಗಳು, ವಿಶ್ವಕಥಾಕೋಶದ 25 ಸಂಪುಟಗಳು, ಪುರೋಗಾಮಿ 8 ಕೃತಿಗಳು, ಜನತಾ ಸಾಹಿತ್ಯದ 25 ಪುಸ್ತಕಗಳು). ಓದು
ಇವಲ್ಲದೆ 2500 ಪುಟಗಳಷ್ಟು ಅಪ್ರಕಟಿತ ಬಿಡಿಬರಹಗಳು, ಪ್ರಸಾರ ಭಾಷಣಗಳು, ರೇಡಿಯೊ ರೂಪಕಗಳು ಇವೆಯಂತೆ. ಅವರ ಬಡತನ ಸಂಕಷ್ಟಗಳ ಬಾಲ್ಯ; ಜೀವನದುದ್ದಕ್ಕೂ ಬರಹಗಳಿಂದಲೇ ಬದುಕಿದ ಅದ್ವೀತಿಯ ಲೇಖಕ; ಭೂಗತ ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ರಾಜಕೀಯ ಕಾರ್ಯಕರ್ತ, ನಾಯಕ; ಸಾಹಿತ್ಯ ಚಳುವಳಿಯೊಂದರ ಹರಿಕಾರ; ಅಂಕಣ ಬರಹಗಳನ್ನು ಸಾಹಿತ್ಯದ ಪ್ರಕಾರಕ್ಕೇರಿಸಿದ ಪತ್ರಕರ್ತ; ಸಾಹಿತಿ, ಪತ್ರಕರ್ತರ ಸಂಘಟಕ; ಪುಸ್ತಕ ಪ್ರಕಾಶಕ; ಹಲವು ಕೃತಿಗಳ ಬೃಹತ್ ಸರಣಿಗಳ ಸಂಪಾದಕ – ಹೀಗೆ ಅವರ ಬದುಕಿಗೆ ಹಲವು ಆಯಾಮಗಳಿವೆ. ಓದು
ಈ ಮೊದಲ ಪುಸ್ತಕದಲ್ಲಿ ಅವರ ಬದುಕು ಮತ್ತು ಬರಹಗಳ ಕತೆಯನ್ನು ಅವರ ಬರಹಗಳ ಆಯ್ದ ಭಾಗಗಳಿಂದಲೇ ಕಟ್ಟಿ ಕೊಡುವ ಪ್ರಯತ್ನ ಮಾಡಲಾಗಿದೆ. ಪುಸ್ತಕದಲ್ಲಿ ಎರಡು ಭಾಗಗಳಿವೆ. ಭಾಗ 1 ರಲ್ಲಿ ಅವರ ಬರಹಗಳಿಂದ ಆಯ್ದ ಆತ್ಕಕಥಾತ್ಮಕ ಭಾಗಗಳು (‘ಸಾಹಿತ್ಯ ಪ್ರೇರಣೆಯ ಮೊದಲ ಹೆಜ್ಜೆಗಳು’ ಎಂಬ ರೇಡಿಯೊ ಭಾಷಣ, ‘ಕುಳಕಂದ ಶಿವರಾಯ-ನಿರಂಜನ ಸಂವಾದ’ ಎಂಬ ವಿಶಿಷ್ಟ ಸಂದರ್ಶನ, ‘ನಿರಂಜನ ವಾಚಿಕೆ – ಪ್ರತಿಧ್ವನಿ’ ಯಲ್ಲಿನ ‘ಪಯಣ’, ‘ಬುದ್ಧಿ ಭಾವ ಬದುಕು’ ನಲ್ಲಿನ ‘ಬಂಧ-ಅನುಬಂಧ’, ಅನುಪಮಾ ಬರೆದ ‘ನಿರಂಜನ-ಅನುಪಮಾ’) ಇವೆ. ಭಾಗ-2 ರಲ್ಲಿ ಅವರ ಬರಹಗಳ ಚಿತ್ರಣವನ್ನು ಸಹ ಅವರ ಬರಹಗಳಿಂದ ಆಯ್ದ ಭಾಗಗಳಿಂದ (ಪ್ರಕಟಿತ ಪುಸ್ತಕಗಳ ಪಟ್ಟಿ, ‘ಪ್ರತಿಧ್ವನಿ’ ವಾಚಿಕೆಯಲ್ಲಿ ವಿವಿಧ ಪ್ರಕಾರಗಳಿಂದ ಆಯ್ದ ಬರಹಗಳ ಮೇಲಿನ ಟಿಪ್ಪಣಿ, ‘ಧ್ವನಿ-1’ ಮತ್ತು ‘ಧ್ವನಿ-2’ರಲ್ಲಿರುವ ‘ಕತೆಗಳು ಹುಟ್ಟಿದ ಬಗೆ’, ಪ್ರಮುಖ ಕೃತಿಗಳಿಗೆ ಬರೆದ ಮುನ್ನುಡಿಗಳು) ಕೊಡಲಾಗಿದೆ. ಓದು
‘ಆಯ್ದ ಕತೆಗಳು’
(ಸಂಪಾದಕರು: ಎಂ.ಜಿ.ಹೆಗಡೆ, ಪುಟ: 120, ಬೆಲೆ: ರೂ. 140)

ನಿರಂಜನರ ಬರಹದ ಪ್ರಕಾರಗಳಲ್ಲಿ ಮೊದಲನೆಯದೂ ಪ್ರಮುಖವೂ ಆದ ಕತೆಗಳ ಪ್ರಾತಿನಿಧಿಕ ಸಂಕಲನವಿದು.ನಿರಂಜನದ ಸಮಗ್ರ ಕಥಾ ಸಮುಚ್ಛಯ ʻಧ್ವನಿʼಯ ಎರಡು ಸಂಪುಟಗಳಲ್ಲಿ ಒಟ್ಟು ನೂರಾ ಐವತ್ತಾರು ಕಥೆಗಳಿವೆ. ಅವರು 1937 ರಲ್ಲಿ ತಮ್ಮ ಮೊದಲ ಕಥೆಯನ್ನುಪ್ರಕಟಿಸಿದಾಗ ಅವರಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಿಶೋರ. 1984 ರಲ್ಲಿತೀರಾ ಇತ್ತೀಚಿನ ಕಥೆ ಪ್ರಕಟವಾದಾಗ ಅವರು ತಮ್ಮ ಸಮಗ್ರ ಕಥಾ ಸಂಪುಟಗಳಪ್ರಕಟಣೆಯ ಸಿದ್ಧತೆಯಲ್ಲಿ ತೊಡಗಿದ್ದರು. ನಿರಂಜನರು ಕಥೆಬರೆಯುತ್ತಿದ್ದ ಕಾಲದಲ್ಲೇ ಪ್ರವರ್ಧಮಾನಕ್ಕೆ ಬಂದ ನವ್ಯ ಕಥೆ ಮತ್ತು ನವ್ಯ ವಿಮರ್ಶಾಕ್ರಮದ ಪರಿಣಾಮವಾಗಿ ಅ ಕಥಾ ಮಾರ್ಗಕ್ಕೆ ಸಮ್ಮತವಾದ ನಿರಂಜನರ ʻಕೊನೆಯಗಿರಾಕಿʼ ಮಾತ್ರವೇ ಎಲ್ಲಾ ಪ್ರಾತಿನಿಧಿಕ ಸಂಕಲನಗಳಲ್ಲೂ ಸ್ಥಾನ ಪಡೆದು ನಿರಂಜನರಕಥಾ ಸಾಹಿತ್ಯದ ಸಮೃದ್ಧಿ ಅವಗಣನೆಗೆ ಒಳಗಾಗುವಂತಾಯಿತು.
ನಿರಂಜನರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಸಂಕಲನ ಅವರ ಕಥಾಸಾಹಿತ್ಯದ ವೈವಿಧ್ಯದ ಕಡೆ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿವೆ. ಕರುಳಿನ ಕೂಗು, ಆ ಜೀವನ!, ಬೆಳಕು ಹರಿಯಿತು, ಕಾತ್ಯಾಯಿನಿ, ಕೋದಂಡ ಮತ್ತು ಕರಗ, ಒಂದೇ ನಾಣ್ಯದ ಎರಡು ಮೈ, ಡಿಲಕ್ಸ್, ಧ್ವನಿ, ಒಂಟಿ ನಕ್ಷತ್ರ ನಕ್ಕಿತು, ನಾಸ್ತಿಕ ಕೊಟ್ಟ ದೇವರು – ಇವು ಆ ಹತ್ತು ಕತೆಗಳು. ಅವನ್ನು ಅವು ಪ್ರಕಟವಾದ ಕಾಲಾನುಕ್ರಮದಲ್ಲಿ ಕೊಡಲಾಗಿದೆ. ನೂರಾ ಐವತ್ತಾರು ಕಥೆಗಳಲ್ಲಿ ಪ್ರಾತಿನಿಧಿಕ ಹತ್ತು ಕತೆಗಳನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಈ ಹತ್ತು ಕತೆಗಳನ್ನು ಯಾಕೆ ಆಯ್ಕೆ ಮಾಡಲಾಗಿದೆ? ಆ ಕತೆಗಳು ನಿರಂಜನರ ಕತೆಗಳ ವಿನ್ಯಾಸದ, ಆವರಣಗಳ ವೈವಿಧ್ಯತೆ ಮತ್ತು ವಿಸ್ತಾರಗಳನ್ನು ಹೇಗೆ ಪ್ರತಿನಿಧಿಸುತ್ತವೆ? ಅವರ ವಾಸ್ತವವಾದಿ ಕಥನ ಕ್ರಮವು ಪ್ರಬುದ್ಧ ರಾಜಕೀಯ ಪ್ರಜ್ಞೆ ಹಾಗೂಸೈದ್ಧಾಂತಿಕ ಸ್ಪಷ್ಟತೆಯಿಂದ ಹೇಗೆ ನಿರ್ದೇಶಿತವಾಗಿದೆ? ಸಮಾಜದನಿರ್ಲಕ್ಷಿತ ಲೋಕಗಳ ವಾಸ್ತವವಾದಿ ಗ್ರಹಿಕೆ ಹಾಗೂ ಈ ಲೋಕಗಳ ಪಾಡನ್ನು ಓದುಗರ ಅಂತಃಕರಣಕ್ಕೆ ಮುಟ್ಟಿಸುವ ಬದ್ಧತೆ.
ದುರ್ಬಲರಿಗೆ, ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗೆ, ಧ್ವನಿ ಇಲ್ಲದೆ ಅಸಹಾಯಕರಾದವರಿಗೆ ಸಮಾಜದಲ್ಲಿ ಆಗುತ್ತಿರುವಕ್ರೂರ ಅನ್ಯಾಯವನ್ನು ಬಿಡಿಸಿ ತೋರಿಸುವ, ಆ ಮೂಲಕ ಓದುಗರ ಸಹಾನುಭೂತಿಯವಲಯವನ್ನು ಹೇಗೆ ವಿಸ್ತರಿಸುತ್ತವೆ? ಕಥಾ ಸಾಹಿತ್ಯದ ಉದ್ದೇಶವನ್ನು ಕುರಿತು ಹೇಗೆ ಚಿಂತಿಸುತ್ತದೆÀ?- ಇವೆಲ್ಲದರ ಕುರಿತುಆಯ್ಕೆಯಾದ ಕತೆಗಳ ನಿರ್ದಿಷ್ಟ ಉದಾಹರಣೆಯೊಂದಿಗೆ ಈ ಸಂಗ್ರಹದ ಸಂಪಾದಕರಾದ ಎಂ.ಜಿ.ಹೆಗಡೆತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ.
ಇದನ್ನೂ ನೋಡಿ: ಆರೆಸ್ಸೆಸ್ ನೂರು: ಅಹ್ಮದಾಬಾದ್ ಗಲಭೆಯಿಂದ ನವ ನಾಜೀವಾದದವರೆಗೆJanashakthi Media
