ಬೆಂಗಳೂರು: ಬೀದಿ ಕಾಮುಕರ ಕಾಟ ನಗರದ ಕೊಡಿಗೇಹಳ್ಳಿಯಲ್ಲಿ ಹೆಚ್ಚಾಗಿದ್ದು, ವಯಸ್ಸಾದವರೂ ಸೇರಿದಂತೆ ಮಹಿಳೆಯರು ರಸ್ತೆಗಳಲ್ಲಿ ಓಡಾಡಲು ಹೆದರುವಂತಹ ಪರಿಸ್ಥಿತಿ ಎದುರಾಗಿದೆ.
ಕೊಡಿಗೇಹಳ್ಳಿಯ ರಾಜೀವ್ ಗಾಂಧಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ 50 ವರ್ಷದ ಮಹಿಳೆಗೆ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದಾರೆ. ಬೆಂಗಳೂರು
ಈ ಪ್ರದೇಶದ ಪ್ರತೀ ಮಹಿಳೆಯರಿಗೂ ಲೈಂಗಿಕ ಕಿರುಕುಳದ ಅನುಭವವಾಗಿದೆ. ಹೀಗಾಗಿ ಬೆಳಗಿನ ಜಾವ ಹಾಗೂ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲು ಹೆದರುತ್ತಾರೆಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಆರ್ಥಿಕತೆಯ ಕುಸಿತವೂ ಮಧ್ಯಮವರ್ಗದ ಮೌನವೂ
ನಾಲ್ಕು ಅಪಾರ್ಟ್ಮೆಂಟ್ ಬ್ಲಾಕ್‌ಗಳಲ್ಲಿ ಸೇವಕಿ ಹಾಗೂ ಅಡುಗೆ ಕೆಲಸದವರಾಗಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಮಹಿಳೆ ಮಾತನಾಡಿ, ಕೆಲಸ ಹಿನ್ನೆಲೆಯಲ್ಲಿ ಬೆಳಿಗ್ಗೆ ಅಪಾರ್ಟ್ಮೆಂಟ್ ಗಳಿಗೆ ಹೋಗಬೇಕಾಗುತ್ತದೆ. 12ನೇ ಮುಖ್ಯ ರಸ್ತೆಗೆ ಹೋಗಬೇಕೆಂದರೆ ರೈಲ್ವೇ ಹಳಿ ದಾಟಬೇಕು. ಈ ವೇಳೆ ಹಳಿಗಳ ಮೇಲೆಯೇ ಕಣ್ಣಿಡುವ, ಕಾಮುಕರು ಮೊಬೈಲ್ ಫ್ಲಾಷ್ ಆನ್ ಮಾಡುತ್ತಾರೆಂದು ಹೇಳಿದ್ದಾರೆ,
ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಸಾಕಷ್ಟು ಜನರು ಕೆಲಸ ಬರುತ್ತಾರೆ. ಹೊರ ರಾಜ್ಯದಿಂದ ಬರುವವರಿಗೆ ಬೆಂಬಲ ಕಡಿಮೆ ಇರುತ್ತದೆ. ಹೀಗಾಗಿ ಸ್ಥಳೀಯ ಪೊಲೀಸ ಠಾಣೆಗೆ ಹೋಗಲು ಹಾಗೂ ಕಾನೂನು ಹೋರಾಟ ನಡೆಸಲು ಹಿಂದೇಟು ಹಾಕುತ್ತಾರೆಂದು ಮತ್ತೊಬ್ಬ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಇದನ್ನೂ ನೋಡಿ: ಬ್ಯಾಂಕ್ ರಾಬರಿ ಯಾರು ಹೊಣೆ? Janashakthi Media