ಮೈಸೂರು| ಹೃದಯಾಘಾತದಿಂದ 15 ವರ್ಷದ ಬಾಲಕಿ ಮೃತ

ಮೈಸೂರು: ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ಹೃದಯಾಘಾತ ಹೆಚ್ಚುತ್ತಿದ್ದು, ಅದರಲ್ಲೂ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೃದಯಾಘಾತದಿಂದ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು

ಮೃತಪಟ್ಟಿರುವ ಬಾಲಕಿ  ನಗರದ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಾಗರಾಜ್ – ವಸಂತ ದಂಪತಿ ಪುತ್ರಿ ದೀಪಿಕಾ (15) ಎಂದು ಗುರುತಿಸಲಾಗಿದೆ.

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ದೀಪಿಕಾಳನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದೂ, ಆದರೆ ಮಾರ್ಗ ಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ.

ಇದನ್ನೂ ಓದಿ: ಹಿಂದೂ ರಾಷ್ಟ್ರಕ್ಕೆ ‘ಸಂವಿಧಾನ’ ಸಿದ್ಧವಾಗಿದೆಯಂತೆ..! ಈಗಿರುವ ಸಂವಿಧಾನ ಭಾರತ ಅಥವಾ ಇಂಡಿಯಾ ರಾಷ್ಟ್ರಕ್ಕೆ ಮಾಡಿರುವ – ಮಾಡುತ್ತಿರುವ ತಪ್ಪಾದರೂ ಏನು..?

ತುಮಕೂರಿನಲ್ಲೂ ವಿದ್ಯಾರ್ಥಿನಿ ಸಾವು

ಹೃದಯಾಘಾತದಿಂದ ಕುಸಿದುಬಿದ್ದು ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರಿನಲ್ಲಿ ಇತ್ತೀಚೆಗೆ ನಡೆದಿತ್ತು.. ಪಾವಗಡದ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಮೈಥಿಲಿ(19) ಮೃತಪಟ್ಟವರು.

ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ ಶನಿವಾರ ತರಗತಿ ಮುಗಿಸಿ ಪಟ್ಟಣದ ನಿಲ್ದಾಣಕ್ಕೆ ಬರುವಾಗ ಚಳ್ಳಕೆರೆ ಕ್ರಾಸ್ ಬಳಿ ಏಕಾಏಕಿ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಪಾವಗಡದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಆದರೆಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಇದನೂ ನೋಡಿ: ಬ್ಯಾಂಕ್‌ ರಾಬರಿ ಯಾರು ಹೊಣೆ? Janashakthi Media

Donate Janashakthi Media

Leave a Reply

Your email address will not be published. Required fields are marked *