ನವದೆಹಲಿ: 2022ರಲ್ಲಿಬ ದೇಶದಾದ್ಯಂತ ಮಹಿಳೆಯರ ವಿರುದ್ಧದ ಅಪರಾಧಗಳು 4% ರಷ್ಟು ಏರಿಕೆಯಾಗಿದೆ ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಸೋಮವಾರ ಪ್ರಕಟಿಸಿದ ಅಂಕಿ ಅಂಶಗಳು ಹೇಳಿವೆ. ಮಹಿಳೆಯರ ವಿರುದ್ಧದ ಒಟ್ಟು ಅಪರಾಧ ಪ್ರಮಾಣವು 65.4% ರಷ್ಟಿದ್ದು, ಅದರಲ್ಲಿ 75.9% ಚಾರ್ಜ್ಶೀಟ್ ಆಗಿದೆ ಎಂದು ಅಂಕಿ ಅಂಶ ಉಲ್ಲೇಖಿಸಿದೆ. ದೇಶದಲ್ಲಿ ಅತೀ ಹೆಚ್ಚು ಮಹಿಳಾ ದೌರ್ಜನ್ಯ ನಡೆದ ರಾಜ್ಯವಾಗಿ ಉತ್ತರ ಪ್ರದೇಶವಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
ಅತ್ಯಾಚಾರ, ಅತ್ಯಾಚಾರ ಯತ್ನ, ವರದಕ್ಷಿಣೆ ಸಾವು, ಆಸಿಡ್ ದಾಳಿ, ಆಸಿಡ್ ದಾಳಿ ಯತ್ನ, ಪತಿ ಮತ್ತು/ಅಥವಾ ಆತನ ಕುಟುಂಬದವರ ಕ್ರೌರ್ಯ, ಅಪಹರಣ, ಕಳ್ಳಸಾಗಾಣಿಕೆ, ಘನತೆಗೆ ಚ್ಯುತಿ, ಹಲ್ಲೆ, ಸೈಬರ್ ಅಪರಾಧ, ಮಹಿಳೆಯರ ವಿರುದ್ಧ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಅಪರಾಧಗಳು ಸೇರಿದಂತೆ ಮಹಿಳೆಯರ ವಿರುದ್ಧ ದಾಖಲಾದ ಇತರೆ ಅಪರಾಧಗಳನ್ನು ಇವುಗಳಲ್ಲಿ ಸೇರಿಸಲಾಗಿದೆ.ಉತ್ತರ ಪ್ರದೇಶಉತ್ತರ ಪ್ರದೇಶ
ಇದನ್ನೂ ಓದಿ: Belagavi Winter Session| ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು
2022 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ ಒಟ್ಟು 4,26,433 ದಾಖಲಾಗಿದೆ. 2021 ರಲ್ಲಿ ಇದು 4,09,273 ಆಗಿತ್ತು. ಉತ್ತರ ಪ್ರದೇಶವು 65,743 ಪ್ರಕರಣಗಳೊಂದಿಗೆ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು ದಾಖಲಿಸಿದೆ. ಈ ಮಧ್ಯೆ, ನಾಗಾಲ್ಯಾಂಡ್ 49 ಪ್ರಕರಣಗಳೊಂದಿಗೆ ಮಹಿಳೆಯರ ವಿರುದ್ಧ ಕಡಿಮೆ ಸಂಖ್ಯೆಯ ಅಪರಾಧಗಳನ್ನು ದಾಖಲಿಸಿದ್ದು, ಮಿಜೋರಾಂ (147) ಮತ್ತು ಸಿಕ್ಕಿಂ (179) ನಂತರದ ಸ್ಥಾನದಲ್ಲಿದೆ.
ದಕ್ಷಿಣದ ಐದು ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧದ ಒಟ್ಟು ಅಪರಾಧಗಳ ಸಂಖ್ಯೆ 89,802 ಆಗಿದೆ. ಆಂಧ್ರಪ್ರದೇಶವು 25,503 ಪ್ರಕರಣಗಳೊಂದಿಗೆ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು ದಾಖಲಿಸಿದೆ, ನಂತರದ ಸ್ಥಾನದಲ್ಲಿ ತೆಲಂಗಾಣ (22,066), ಕರ್ನಾಟಕ (17,813), ಕೇರಳ (15,213), ಮತ್ತು ತಮಿಳುನಾಡು (9,207) ರಾಜ್ಯಗಳಿವೆ. 2020 ಮತ್ತು 2021 ಕ್ಕೆ ಹೋಲಿಸಿದರೆ ಎಲ್ಲಾ ಐದು ದಕ್ಷಿಣ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ವರದಕ್ಷಿಣೆ ಸಾವಿನ ಘಟನೆಗಳು ಆತಂಕಕಾರಿಯಾಗಿದ್ದು 6,450 ರಷ್ಟು ಪ್ರಕರಣಗಳು ದಾಖಲಾಗಿವೆ. 2022 ರಲ್ಲಿ 6,516 ಮಹಿಳೆಯರು ಈ ಅಪರಾಧಕ್ಕೆ ಬಲಿಯಾಗಿದ್ದಾರೆ ಎಂದು ವರದಿ ಸೂಚಿಸಿದೆ. 2022 ರಲ್ಲಿ 31,516 ಅತ್ಯಾಚಾರ ಘಟನೆಗಳು ವರದಿಯಾಗಿದೆ ಎಂದು ಎನ್ಸಿಆರ್ಬಿ ಹೇಳಿದ್ದು, ರಾಜಸ್ಥಾನದಲ್ಲಿ (5,339) ಅತಿ ಹೆಚ್ಚು ಅತ್ಯಾಚಾರ ಘಟನೆಗಳು ವರದಿಯಾಗಿದೆ. ಉತ್ತರ ಪ್ರದೇಶ (3,690) ಮತ್ತು ಮಧ್ಯಪ್ರದೇಶ (3,029) ನಂತರದ ಸ್ಥಾನದಲ್ಲಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ 1,004 ರಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶವು ಅರ್ಧದಷ್ಟು ಪ್ರಕರಣಗಳನ್ನು ಹೊಂದಿದೆ (458).
ಇದನ್ನೂ ಓದಿ: ಭಾರತದ 50ಕ್ಕೂ ಹೆಚ್ಚು ಸಂಸ್ಥೆಯ ಕೆಮ್ಮು ಸಿರಪ್ ಕಳಪೆ ಗುಣಮಟ್ಟದ್ದು: ಕೇಂದ್ರ ಸರ್ಕಾರ ವರದಿ
2021 ಕ್ಕೆ ಹೋಲಿಸಿದರೆ 2022 ರಲ್ಲಿ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು ಗಣನೀಯವಾಗಿ ಏರಿಕೆ ಕಂಡಿವೆ. 2022 ರಲ್ಲಿ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ 11% ಏರಿಕೆಯಾಗಿದೆ. ಅದೇ ಸಮಯದಲ್ಲಿ, ಬ್ಲ್ಯಾಕ್ಮೇಲ್, ಮಾನನಷ್ಟ, ಮಾರ್ಫಿಂಗ್, ನಕಲಿ ಪ್ರೊಫೈಲ್ಗಳನ್ನು ರಚಿಸುವುದು ಸೇರಿದಂತೆ ಮಹಿಳೆಯರನ್ನು ಗುರಿಯಾಗಿಸುವ ಇತರ ಸೈಬರ್ ಅಪರಾಧಗಳು 2022 ರಲ್ಲಿ 689 ಮತ್ತು 2021 ರಲ್ಲಿ 701 ರಷ್ಟಿದೆ.
2021 ಕ್ಕೆ ಹೋಲಿಸಿದರೆ POCSO (ಕೇವಲ ಮಹಿಳಾ ಸಂತ್ರಸ್ತರು) ಅಡಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆಯು ತೀವ್ರ ಏರಿಕೆ ಕಂಡಿದೆ. POCSO ಅಡಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ 14% ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ 7,995 POCSO ಅಡಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ (7,467) ಮತ್ತು ಮಧ್ಯಪ್ರದೇಶ (5,935) ನಂತರದ ಸ್ಥಾನದಲ್ಲಿದೆ.
2022 ರಲ್ಲಿ, ಅಪ್ರಾಪ್ತ ಬಾಲಕಿಯ ಅತ್ಯಾಚಾರದ 37,511 ಘಟನೆಗಳು ವರದಿಯಾಗಿದ್ದು, 2021 ರಲ್ಲಿ 33,036 ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಮಕ್ಕಳ ಮೇಲಿನ ಒಟ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2021 ರಲ್ಲಿ 16,401 ಇದ್ದು, ಇದು 2022 ರಲ್ಲಿ 20,049ಕ್ಕೆ ಏರಿಕೆ ಆಗಿದೆ. ಮಕ್ಕಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳು ಸಹ ಹೆಚ್ಚಿದ್ದು, 2021 ರಲ್ಲಿ 2,032ರಷ್ಟು ಇದ್ದ ಪ್ರಕರಣಗಳು, 2022 ರಲ್ಲಿ 2,661 ಕ್ಕೆ ಏರಿಕೆಯಾಗಿದೆ.
ವಿಡಿಯೊ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media