ಡಾ: ಎನ್.ಬಿ.ಶ್ರೀಧರ
ಇದು ತಾಯಿ ಗರ್ಭದಲ್ಲಿ ಮಗು ಹೇಗೆ ಬೆಳವಣಿಗೆ ಹೊಂದುತ್ತದೆ ಎಂಬುದನ್ನು ವಿವರಿಸುವ ಪ್ರಯತ್ನ, ಈ ವಿಚಾರ ನಮಗಂತೂ ತುಂಬಾ ಇಂಟರೆಸ್ಟಿಂಗ್ ಮತ್ತು ಅದ್ಭುತ ಅನಿಸಿತು ಪ್ರಕೃತಿಯ ವಿಸ್ಮಯ
ಫೇಸ್ಬುಕ್ನಲ್ಲಿ ಟೈಪಿಸುವ ನಾವೆಲ್ಲರೂ ಮತ್ತು ಪ್ರತಿಯೊಬ್ಬರು ತಾಯಿಯ ಗರ್ಭದಲ್ಲಿ ಇದ್ದು ಬಂದಿದ್ದಿವಿ. ಪ್ರತಿಯೊಬ್ಬರು 9 ತಿಂಗಳು ಗರ್ಭದಲ್ಲಿ ಬೆಳೆದು ರೂಪವನ್ನು ಪಡೆದು ಈ ಭೂಮಿಗೆ ಬಂದಿದ್ದೇವೆ. ಆದರೆ ಗರ್ಭದಲ್ಲಿ ಒಂದು ಮಗುವಿನ ಬೆಳವಣಿಗೆ ಹೇಗಾಗುತ್ತದೆ, ಯಾವ ಹಂತದಲ್ಲಿ ಯಾವ ಬೆಳವಣಿಗೆ ನಡೆಯುತ್ತೆ, ಕೈಕಾಲು ಆಡಿಸೋಕೆ ಶುರು ಮಾಡೋದು ಯಾವಾಗ ಅನ್ನೋ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ, ಈ ರೋಚಕ ಮತ್ತು ಎಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರ ತಿಳಿಸೋಣ ಅಂತಾನೆ ಈ ಲೇಖನ ಬರೆಯುತ್ತಿದ್ದೇನೆ. ಗರ್ಭದೊಳಗೆ
ಹುಟ್ಟುವ ಮೊದಲೇ ನಾವು ನೀವು ಎಲ್ಲಾ ಸಾಗಿ ಬಂದ ಆ ಭಯ ಆಶ್ಚರ್ಯ ಎಲ್ಲವನ್ನು ಒಟ್ಟಿಗೆ ಉಂಟು ಮಾಡುವ ರೋಚಕ ಜರ್ನಿಯ ರೋಚಕ ವರದಿ ದಯವಿಟ್ಟು ಗಮನವಿಟ್ಟು ಓದಿ. ನೀವು ಓದಿದ ಬಳಿಕ ಪ್ರತಿಯೊಬ್ಬರಿಗೂ ತಿಳಿಸಿ.
ಮೊದಲ ವಾರ:
ಮೊದಲ ವಾರ ಮಹಿಳೆಯರ ಪಿರಿಯಡ್ ಮುಗಿದ ಬಳಿಕ ಗರ್ಭಧಾರಣೆ ಪ್ರಕ್ರಿಯೆ ಶುರುವಾಗುತ್ತದೆ. ಮೊದಲ ಒಂದು ವಾರ ಅಂತ ಏನು ಬೆಳವಣಿಗೆ ನಡೆಯುವುದಿಲ್ಲ, ಆದರೆ ಅಂಡಾಶಯದಿಂದ ಅಂಡಾಣು ಅಥವಾ ಎಗ್ ಹೊರ ಬಂದಿರುವುದಿಲ್ಲ.
2 ನೇ ವಾರ:
ಎರಡನೇ ವಾರ ಗರ್ಭಧಾರಣೆಯ 2ನೇ ವಾರದಲ್ಲಿ ಅಂಡಾಶಯದಿಂದ ಅಂಡಾಣು ಹೊರಬಂದು ಫೆಲೋಪಿಯನ್ ಟ್ಯೂಬ್ ಅಂದರೆ ಡಿಂಬನಾಳಕ್ಕೆ ಬರುತ್ತದೆ, ಅಲ್ಲಿ ಬಂದು ವೀರ್ಯಕ್ಕಾಗಿ ಕಾಯುತ್ತದೆ, ಕೋಟಿಗಟ್ಟಲೆ ವೀರ್ಯಗಳಲ್ಲಿ ಒಂದು ಶಕ್ತಿಶಾಲಿ ವೀರ್ಯ ಈ ಮೊಟ್ಟೆಯಂತಿರುವ ಅಂಡಾಣುವನ್ನು ಪ್ರವೇಶಿಸುತ್ತದೆ ಅದರಲ್ಲಿ ಭ್ರೂಣದ ಬೆಳವಣಿಗೆಗೆ ಕಾರಣವಾಗುತ್ತದೆ.
3 ನೇ ವಾರ:
ಮೂರನೇ ವಾರ ಫೆಲೋಪಿಯನ್ ಟ್ಯೂಬ್ ಅಂದರೆ ಟಿಮ್ಮನಾಳದಲ್ಲಿದ ಅಂಡಾಣು ಅಂದರೆ ಒಳಗೆ ವೀರ್ಯವನ್ನು ಅಬ್ಸರ್ವ್ ಮಾಡಿಕೊಂಡಿರುವ ಅಂಡಾಣು ಅಥವಾ ಫರ್ಟೈಲ್ ಎಗ್ ಅಲ್ಲಿಂದ ಜಾರಿ ಗರ್ಭಾಶಯ ಅಥವಾ ಗರ್ಭಕೋಶಕ್ಕೆ ಬರುತ್ತೆ ಗರ್ಭಕೋಶದೊಂದಿಗೆ ಅಂಟಿಕೊಳ್ಳೋಕೆ ಅಲ್ಲೊಂದು ಇಂಟಿಗ್ರೇಶನ್ ಪ್ರಕ್ರಿಯೆ ಶುರುವಾಗುತ್ತೆ, ಈ ಪ್ರಕ್ರಿಯೆಯನ್ನು ಇಂಪ್ಲಾಂಟೇಷನ್ ಎಂದು ಕರೆಯುತ್ತಾರೆ. ನಂತರ ಗರ್ಭಕೋಶದಲ್ಲಿ ಮಗು ಬೆಳೆಯೋಕೆ ಶುರುವಾಗುತ್ತದೆ ಇದನ್ನು ಜೈಗೋಟ್ ಎಂದು ಕರೆಯಲಾಗುತ್ತದೆ. ಇದನ್ನು ಕನ್ನಡದಲ್ಲಿ ಯುಗ್ ವಜಾನ ಎಂದು ಕರೀಬಹುದು. ಮಗುವಿನ ಲಿಂಗ, ಕೂದಲು, ಕಣ್ಣಿನ ಬಣ್ಣ ಎಲ್ಲವೂ ಮೂರನೇ ವಾರದಲ್ಲಿ ನಿರ್ಧಾರವಾಗುತ್ತದೆ.
4 ನೇ ವಾರ:
ನಾಲ್ಕನೇ ವಾರದಲ್ಲಿ ವೀರ್ಯದೊಂದಿಗೆ ಮರ್ಜ್ ಆಗಿರುವ ಅಂಡಾಣು ಅಂದರೆ ಫರ್ಟೈಲ್ ಎಗ್ ಭ್ರೂಣವಾಗಿ ಬದಲಾಗುತ್ತದೆ, ಎರಡು ಭಾಗವಿರುತ್ತದೆ ಒಂದು ಮುಂದೆ ಮಗುವಾಗಿ ಬೆಳವಣಿಗೆ ಹೊಂದುವ ಭ್ರೂಣ ಮತ್ತೊಂದು ಪ್ಲೇಸೆಂಟಾ, ಈ ಪ್ಲೇಸೆಂಟಾದ ಮೂಲಕವೇ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶ ಆಕ್ಸಿಜನ್ ಹೀಗೆ ಎಲ್ಲಾ ಅಂಶಗಳು ಸಿಗುತ್ತವೆ. ಈ ವಾರದಲ್ಲೇ ಮೆದುಳು ನರಗಳು ಮತ್ತು ಸ್ಪೈನಲ್ ಕಾರ್ಡ್ ಗಳ ಬೆಳವಣಿಗೆ ಶುರುವಾಗುತ್ತದೆ.
5 ನೇ ವಾರ:
ಈ ಹಂತದಲ್ಲಿ ಬ್ರೂಣ ತುಂಬಾ ಚಿಕ್ಕದಾಗಿರುತ್ತದೆ ಆಗ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮೂಲಕ ಮಾತ್ರವೇ ಇದನ್ನ ನೋಡಬಹುದು.
6 ನೇ ವಾರ:
ಇಲ್ಲಿ ಮಗು ಮೂರು ಹಂತದಲ್ಲಿ ಮಡಚಿದ ರೂಪದಲ್ಲಿ ಇರುತ್ತೆ, ಮಗುವಿನ ಹೃದಯ ಬಡಿತ ಸುಲಭವಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ, ಈ ಹಂತದಲ್ಲಿ ಹೃದಯ ಬಡಿತ ತುಂಬಾ ಜಾಸ್ತಿ ಅಂದ್ರೆ ಓರ್ವ ವಯಸ್ಕನ ಎದೆ ಬಡಿತದ ಡಬಲ್ ಇರುತ್ತದೆ ಪ್ರತಿ ನಿಮಿಷಕ್ಕೆ 150 ರಿಂದ 155 ಸಲ ಬ್ರೂಣದ ಹೃದಯ ಬಡಿದುಕೊಳ್ಳುತ್ತಿರುತ್ತದೆ.
7ನೇ ವಾರ:
ಮಗುವಿನ ಮುಖದ ಕೆಲವು ಅಂಗಾಗಳು ಬೆಳವಣಿಗೆ ಹೊಂದಲು ಶುರುವಾಗುತ್ತದೆ, ಕಣ್ಣು ಕಿವಿ ಬಾಯಿ ಅಂತಹ ಅಂಗಗಳ ರಚನೆಯಾಗುತ್ತದೆ ಇದೇ ವೇಳೆ ಮಗುವಿನ ಮೆದುಳು ಕೂಡ ಬೆಳವಣಿಗೆ ಹೊಂದುತ್ತಾ ಇರುತ್ತದೆ ಅಂದರೆ ಪ್ರತಿ ನಿಮಿಷಕ್ಕೆ ಒಂದು ಲಕ್ಷ ಜೀವಕೋಶಗಳು ಬೆಳವಣಿಗೆ ಆಗುತ್ತಿರುತ್ತದೆ.
8 ನೇ ವಾರ:
ಇಲ್ಲಿ ಬ್ರೂಣ ಅಂದರೆ ಮಗು ನಾಲ್ಕು ಮಡಿಚಿದ ಆಕಾರದಲ್ಲಿ ಬೆಳವಣಿಗೆ ಹೊಂದುತ್ತದೆ, ಮೂಗು ಕಿವಿ ಕಣ್ಣು ಆಕಾರ ಪಡೆದುಕೊಳ್ಳಲು ಶುರುವಾಗುತ್ತದೆ, ಮಗುವಿನ ಹೃದಯ ಕೂಡ ದಿನೇ ದಿನೇ ಗಟ್ಟಿಯಾಗುತ್ತಾ ಸಾಗುತ್ತದೆ. ಮಗುವಿನ ಜನನಾಂಗದ ರಚನೆ ಮತ್ತು ಬೆಳವಣಿಗೆ ಶುರುವಾಗುತ್ತೆ, ಪಿತ್ತಕೋಶ ಮೆದು ಜೀರತಾ ಗ್ರಂಥಿಯ ರಚನೆ ಶುರುವಾಗುತ್ತದೆ, ಮಗುವಿನ ತಲೆ ದೇಹಕ್ಕಿಂತ ಎರಡು ಪಟ್ಟು ದೊಡ್ಡವಿರುತ್ತದೆ ಅಲ್ಲದೆ ಎದೆಗೆ ಬಾಗಿರುತ್ತೆ ಇದೆ ಹಂತದಲ್ಲಿ ಹಸ್ತ ಮತ್ತು ಬೆರಳುಗಳು ಸರಿಯಾದ ರೂಪವನ್ನು ಪಡೆದುಕೊಳ್ಳಲು ಶುರುವಾಗುತ್ತೆ.
10 ನೇ ವಾರ:
ಈ ಹಂತದಲ್ಲಿ ಬ್ರೂಣ ಹೆಚ್ಚು ಕಮ್ಮಿ ಮನುಷ್ಯನ ಮಗುವಿನ ಆಕಾರವನ ಪಡೆದುಕೊಳ್ಳೋಕೆ ಶುರು ಮಾಡಿರುತ್ತೆ, ಬೆರಳುಗಳ ರಚನೆ ಕೂಡ ಗುರುತಿಸೋಕೆ ಸಾಧ್ಯ ಆಗುತ್ತೆ, ಈ ಹಂತದಲ್ಲಿ ಮಗುವಿನ ಮೂಳೆಗಳು ಗಟ್ಟಿಯಾಗಲು ಶುರುವಾಗುತ್ತದೆ ಮಗುವಿನ ಕಿಡ್ನಿ ಅಂದ್ರೆ ಮೂತ್ರ ಜನಕಾಂಗ ಕೂಡ ಕೆಲಸ ಮಾಡೋಕೆ ಶುರು ಮಾಡುತ್ತೆ, ಗರ್ಭದಲ್ಲಿ ಮಗು ಮೂತ್ರ ವಿಸರ್ಜನ ಕೂಡ ಶುರು ಮಾಡುತದೆ, ಮೆದುಳು ಕೂಡ ತುಂಬಾ ವೇಗವಾಗಿ ಬೆಳವಣಿಗೆ ಹೊಂದುತ್ತಿರುತ್ತದೆ. ಈಗ ಜೀವಕೋಶಗಳ ರಚನೆಯ ಪ್ರಮಾಣ ಅದರ ವೇಗ ಡಬಲ್ ಆಗಿ ನಿಮಿಷಕ್ಕೆ ಎರಡು ವಾರೆ ಲಕ್ಷಕ್ಕೆ ಏರಿಕೆಯಾಗಿರುತ್ತಾರೆ.
ಇದನ್ನೂ ಓದಿ: ಖಾಸಗಿ ಮೆಡಿಕಲ್ ಲಾಬಿ ಆಟಕ್ಕೆ ವಿದ್ಯಾರ್ಥಿ ಬಲಿ
11 ನೇ ವಾರ:
ಮಗು ಅಮಿಯೋಟಿಕ್ ಸ್ಯಾಂಕ್ ಒಳಗೆ ಇರುತ್ತೆ, ಅಮಿಯೋಟಿಕ್ ಸ್ಯಾಂಕ್ ಎಂದರೆ ಒಂದು ಪಾರದರ್ಶಕ ಚೀಲ ಅಂತ ಅಂದುಕೊಳ್ಳಿ ಆದರ ಒಳಗೆ ಅಮಿಯೋಟಿಕ್ ಫ್ಲೂಯಿಡ್ ಇರುತ್ತೆ ಅಂದರೆ ದ್ರವ ಇರುತೆ, ಈ ದ್ರವ ಮಗುವಿಗೆ ಕೋಶನ್ ರೀತಿಯಲ್ಲಿ ಹಾಗೂ ರಕ್ಷಕನ ರೀತಿಯಲ್ಲಿ ಸಹ ಕೆಲಸ ಮಾಡುತ್ತದೆ. ಹಾಗೆ ಮಗು ಮತ್ತು ತಾಯಿಯ ಮಧ್ಯೆ ಪೌಷ್ಟಿಕಾಂಶಗಳ ವಿನಿಮಯಕ್ಕು ಸಹಾಯ ಮಾಡುತ್ತದೆ, ಹನ್ನೊಂದನೇ ವಾರದ ವೇಳೆಗೆ ಮಗು ಅಮಿಯೋಟಿಕ್ ಫ್ಲೂಯಿಡ್ ಜೊತೆ ಇಂಟರಾಕ್ಷನ್ ಶುರು ಮಾಡುತ್ತೆ, ಅಮಿಯೋಟಿಕ್ ಫ್ಲೂಯಿಡ್ ಅನ್ನು ಎಳೆದುಕೊಳ್ಳುವುದು ಮತ್ತು ಯೂರಿನ್ ಮೂಲಕ ಹೊರ ಹಾಕುವುದು ಮಾಡುತ್ತೆ, ಈ ಮೂಲಕ ಮಗು ತನ್ನ ಸುತ್ತಮುತ್ತ ಇರು ದ್ರವೀಯ ಪ್ರಮಾಣದಲ್ಲಿ ನಿಯಂತ್ರಣ ಸಾಧಿಸುತ್ತದೆ ಈ ಪ್ರಕ್ರಿಯೆ ಬ್ಯಾಲೆನ್ಸ್ ಆಗಿ ಇರೋದು ಅನಿವಾರ್ಯ ಕೂಡ ಹೌದು, ಈ ಪ್ರಕ್ರಿಯೆ ಸರಿಯಾಗಿದೆ ಅಂದ್ರೆ ಎಲ್ಲವೂ ಸರಿಯಾಗಿವೆ ಅಂತನೆ ಅರ್ಥ, ಈ ಹಂತದಲ್ಲಿ ಮಗುವಿನ ಶ್ವಾಸಕೋಶ ಕೂಡ ಬೆಳವಣಿಗೆ ಹೊಂದಲು ಶುರುವಾಗುತ್ತದೆ.
12 ನೇ ವಾರ:
ಇಲ್ಲಿ ಮಗುವಿನ ತೂಕ ಹೆಚ್ಚಾಗೋಕೆ ಶುರುವಾಗುತ್ತೆ, ಹೀಗಾಗಿ 12ನೇ ವಾರದಲ್ಲಿ ಮಹಿಳೆಯರ ಹೊಟ್ಟೆ ದಪ್ಪ ಆಗುವುದಕ್ಕೆ ಶುರುವಾಗುತ್ತದೆ, ಆದರೆ ಮಗುವಿನ ಚಲನೆ ಗೊತ್ತಾಗುವುದಿಲ್ಲ ಈ ಹಂತದಲ್ಲಿ ಮಗು ಕೈ ಕಾಲು ಬೆರಳುಗಳನ್ನು ಬಿಚ್ಚೋದು ಮುಚ್ಚೋದು ಮಾಡೋಕೆ ಶುರು ಮಾಡುತ್ತದೆ, ತಲೆಯ ಬದಿಗೆ ಏಲಿಯಾನ್ ತರ ಇದ್ದ ಮಗುವಿನ ಕಣ್ಣುಗಳು ಈಗ ಮನುಷ್ಯರ ರೀತಿಯ ಮುಖದ ಮೇಲೆ ಸರಿಯಾದ ಜಾಗಕ್ಕೆ ಬರುತ್ತೆ ಮಗು ಈಗ ಕಂಪ್ಲೀಟ್ ಆಗಿ ಮನುಷ್ಯರ ಮಗುವಿನ ರೀತಿಯಲ್ಲಿ ಕಾಣಿಸೋಕೆ ಶುರುವಾಗುತ್ತದೆ. ಈ ಹಂತದಲ್ಲಿ ಕೈ ಮತ್ತು ಕಾಲುಗಳು ಬೆಳೆಯುತ್ತಾನೆ ಇರುತ್ತವೆ,
14 ನೇ ವಾರ:
ಈ ಹಂತದಲ್ಲಿ ಮಗುವಿನ ಬಹುತೇಕ ಎಲ್ಲಾ ಅಂಗಗಳು ರಚಿಸಲು ಪಟ್ಟಿರುತ್ತವೆ, ಮಗು ಹೆಣ್ಣಾಗಿದ್ರೆ ಅದರ ಅಂಡಾಶಯ ರಚನೆಯಾಗಿ ಸೊಂಟದ ಕಡೆಗೆ ಚಲಿಸುತೆ.
15 ನೇ ವಾರ:
ಒಂದು ರೀತಿಯ ಕೂದಲಿನಂತಹ ವಸ್ತು ಬೆಳೆಯುತ್ತೆ, ಅದು ಮಗುವಿನ ದೇಹಕ್ಕೆ ಅಗತ್ಯವಾದ ತಾಪಮಾನವನ್ನ ಕೊಡುವ ಕೆಲಸ ಮಾಡುತ್ತೆ. ಅದು ಮಗು ಹುಟ್ಟು ಸಮಯದಲ್ಲಿ ತನ್ನಂತಾನೆ ಮಾಯವಾಗುತ್ತದೆ.
16 ನೇ ವಾರ:
ಇಲ್ಲಿ ಮಗುವಿನ ಮೂಳೆಗಳು ಗಟ್ಟಿಯಾಗಕ್ಕೆ ಶುರುವಾಗುತೆ ಸ್ಟ್ರಾಂಗ್ ಆಗುತ್ತೆ, ಆದರೆ ತಲೆಯ ಮೂಳೆ ಮಾತ್ರ ಫ್ಲೆಕ್ಸಿಬಲ್ ಹಾಗೆ ಇರುತ್ತದೆ ಇದರಿಂದ ಡೆಲಿವರಿ ಟೈಮಲ್ಲಿ ಮಗು ಹೊರಬರಲು ಸುಲಭವಾಗಲಿ ಅಂತ, ಅದೇ ಮಗು ಹೆಣ್ಣಾಗಿದ್ದರೆ ಅದರ ಅಂಡಾಶಯದಲ್ಲೇ ಲಕ್ಷಾಂತರ ಅಂಡಾಣುಗಳ ರಚನೆ ಕೂಡ ಶುರುವಾಗುತೆ.
17 ನೇ ವಾರ:
ಈ ಹಂತದಲ್ಲಿ ಮಗುವಿನ ಕೈ ಕಾಲುಗಳು ಸರಿಯಾದ ಅನುಪಾತದಲ್ಲಿ ಬೆಳವಣಿಗೆ ಹೊಂದುತ್ತವೆ, ಈ ವೇಳೆ ಪ್ಲೇಸೆಂಟಾ ಅಂದರೆ ಜರಾಯು ಮತ್ತು ಮಗುವಿನ ಗಾತ್ರ ಹೆಚ್ಚು ಕಮ್ಮಿ ಒಂದೇ ಆಗಿರುತ್ತದೆ, ಅಂಬಳಿಕಲ್ ಕಾರ್ಡ್ ಅಂದರೆ ಪ್ಲೆಸೆಂಟವನ್ನ ಮಗುವಿಗೆ ಜೋಡಿಸುವ ಕರುಳ ಬಳ್ಳಿ ಈಗ ಅಭಿವೃದ್ಧಿ ಹೊಂದಿರುತ್ತದೆ, ಪ್ಲೇಸೆಂಟಾದಿಂದ ಮಗುವಿಗೆ ಪೌಷ್ಟಿಕಾಂಶ ಆಮ್ಲಜನಕ ಹೋಗುವ ಫಿಲ್ಟರ್ ರೀತಿ ಅಂಬಳಿಕಲ್ ಕಾಲ್ಡ್ ಕೆಲಸ ಮಾಡುತ್ತೆ.
18 ನೇ ವಾರ:
ಈ ಹಂತದಲ್ಲಿ ಕಿವಿ ಚೆನ್ನಾಗಿ ಬೆಳವಣಿಗೆ ಆಗಿರುತ್ತದೆ, ಮಗು ಎಲ್ಲವನ್ನು ಕೇಳೋಕೆ ಶುರು ಮಾಡುತ್ತೆ, ಇಲಿಂದ ಹಂತ ಹಂತವಾಗಿ ಆಲಿಸುವ ಶಕ್ತಿ ಅಭಿವೃದ್ಧಿ ಆಗುತ್ತಾ ಸಾಗುತ್ತದೆ, ಕರುಳ ಬಳ್ಳಿಯಿಂದ ರಕ್ತ ಸಂಚಾರ ತಾಯಿಯ ಉಸಿರಾಟ ಮತ್ತು ಗರ್ಭದಿಂದ ಹೊರಗೆ ಬರುವ ಶಬ್ದಗಳನ್ನು ಕೂಡ ಆಲಿಸುತೆ ಅಂದರೆ ತಾಯಿಯು ಬೇರೆಯವರೊಂದಿಗೆ ಮಾತನಾಡುತ್ತಿದ್ದರೆ ಅಥವಾ ತಂದೆಯು ತಾಯಿಯೊಂದಿಗೆ ಮಾತನಾಡುತ್ತಿದ್ದರೆ ಅದನ್ನ ಮಗುವು ಕೇಳಿಸಿಕೊಳ್ಳುತ್ತದೆ.
19 ನೇ ವಾರ:
ಈ ಹಂತದಲ್ಲಿ ಮಗುವಿನ ಸುತ್ತಮುತ್ತ ಗ್ರೀಸಿ ಪದರ ರಚನೆಯಾಗುತ್ತದೆ, ಇದನ್ನು ವರ್ಣಿಕ್ಸ್ ಕೆಸವೋಸವ ಅಂತ ಕರೆಯಲಾಗುತ್ತದೆ ಇದು ಗರ್ಭಕೋಶದಲ್ಲಿರುವ ಅಮಿಯೋಟಿಕ್ ಫ್ಲೂಯಿಡ್ ಇಂದ ಮಗುವಿನ ಚರ್ಮವನ್ನು ರಕ್ಷಿಸುವ ದೇಹದ ತಾಪಮಾನ ಸ್ಥಿರವಾಗಿರುವಂತೆ ನೋಡಿಕೊಳ್ಳುವ ಕೆಲಸ ಮಾಡುತ್ತದೆ, ಮಗು ಜನಿಸಿದ ಬಳಿಕ ಈ ಗ್ರೀಸಿ ಆಗಿರುವ ಪದರವನ್ನು ಕ್ಲೀನ್ ಮಾಡಲಾಗುತ್ತದೆ.
20 ನೇ ವಾರ:
ಇಲ್ಲಿಂದ ಮಗು ತುಂಬಾ ಶಕ್ತಿಶಾಲಿ ಯಾಗುತ್ತಾ ಸಾಗುತ್ತದೆ ಮಗುವಿನ ಚಲನೆ ಹೆಚ್ಚಾಗುತ್ತಾ ಹೋಗುತ್ತದೆ, ಇದೇ ಹಂತದಲ್ಲಿ ಮಗು ವಧಿಯೋಕೆಲ್ಲ ಶುರುಮಾಡುತ್ತದೆ, ತಲೆ ಉಬ್ಬು ಸೇರಿದಂತೆ ಹಲವು ಕಡೆ ಕೂದಲು ಹುಟ್ಟೋಕೆ ಶುರುವಾಗುತ್ತೆ. ಜೊತೆಗೆ ಮಗು ಒಂದು ಹಂತಕ್ಕೆ ಕಂಪ್ಲೀಟ್ ಆಗಿ ಪ್ರಾಪರ್ ಮಗುವಿನ ಶೇಪ್ ನಲ್ಲಿ ಕಾಣುತ್ತೆ, ಅಂದರೆ ಪೂರ್ತಿ ಬೆಳೆದುಬಿಟ್ಟಿದೆ ಅಂತಲ್ಲ, ಅಂದರೆ ನೋಡೋಕೆ ಪರಿಪೂರ್ಣವಾಗಿ ಮಾನವರ ಮಗುವಿನ ರೂಪದಲ್ಲೇ ಕಾಣುತೆ.
21 ನೇ ವಾರ:
ಈ ಹಂತದಲ್ಲಿ ಮಗು ಮತ್ತಷ್ಟು ಸ್ಟ್ರಾಂಗ್ ಆಗುತ್ತಾ ಹೋಗುತ್ತದೆ ಇದರ ಜೀರ್ಣ ಕ್ರಿಯೆ ಕೂಡ ಸರಕವಾಗಿ ನಡೆಯುತ್ತೆ, ಅಗತ್ಯ ಪೌಷ್ಟಿಕಾಂಶಗಳನ್ನು ಪಡೆದು ಮಗು ಬೇಗ ವಾಗಿ ಬೆಳವಣಿಗೆ ಹೊಂದುತ್ತದೆ.
22 ನೇ ವಾರ:
ಇಲ್ಲಿ ಮಗುವಿನ ಚರ್ಮ ದಪ್ಪ ಆಗುತ್ತೆ ಮತ್ತು ಸ್ಪರ್ಶ ಜ್ಞಾನ ಬರುತ್ತದೆ ಕೈಗೆ ಸಿಕ್ಕಿದ್ದಲ್ಲ ಮುಟ್ಟೋಕೆ ಶುರು ಮಾಡುತ್ತೆ, ಕರುಳ ಬಳ್ಳಿ ಮುಖವನ್ನು ಮುಟ್ಟುಕೊಳ್ಳುತೆ ತಲೆ ಕೂದಲು ಬೆಳವಣಿಗೆಯಾಗುತ್ತದೆ, ಅದೇ ಕೆಲ ಮಕ್ಕಳಿಗೆ ಕೂದ್ಲು ಬರೋದು ಹುಟ್ಟಿದ ಮೇಲೆನೆ ಇದು ಯಾಕ್ ಹೀಗೆ ಇನ್ನೂ ಕೂಡ ಇದಕ್ಕೆ ಉತ್ತರ ಇಲ್ಲ.
23 ನೇ ವಾರ:
ಮಗುವಿನ ಮೆದುಳು ಮತ್ತು ಶ್ವಾಸಕೋಶ ಈ ವಾರ ವೇಗವಾಗಿ ಬೆಳವಣಿಗೆಯಾಗುತ್ತೆ.
24 ನೇ ವಾರ:
ಮಗು ತುಂಬಾ ಸ್ಟ್ರಾಂಗ್ ಆಗುತ್ತಾ ಹೋಗುತ್ತೆ, ಮಗು ಒಳಗಿನ ಮತ್ತು ಹೊರಗಿನ ಎಲ್ಲಾ ಶಬ್ದಗಳನ್ನು ಆಲಿಸುತ್ತೆ, ಹೊರಗೆನಾದ್ರು ಶಬ್ದವಾದರೆ ಮಗು ರಿಯಾಕ್ಟ್ ಮಾಡುತ್ತದೆ ಧ್ವನಿ ಮೂಲಕ ಅಲ್ಲ ಕಾಲಿನ ಮೂಲಕ ಹುಟ್ಟಿದ ಕೂಡಲೇ ಮಗು ತಾಯಂದಿರಿಗೆ ಹೆಚ್ಚಿನ ಬಾಂಧವ್ಯ ಹೊಂದಿರುತ್ತದೆ, ಅದಕ್ಕೆ ಕಾರಣ ಮಗು ತಾಯಿಯ ಮಾತುಗಳನ್ನು ಹೊಟ್ಟೆಯಲ್ಲಿದ್ದಾಗ ಹೆಚ್ಚಾಗಿ ಕೇಳಿಸಿಕೊಂಡಿರುತ್ತದೆ, ಹೀಗಾಗಿ ಹುಟ್ಟಿದ ಬಳಿಕ ತಾಯಿಯ ಧ್ವನಿಯನ್ನು ಸುಲಭವಾಗಿ ಗುರುತಿಸುತ್ತದೆ.
25 ನೇ ವಾರ:
ಈ ಹಂತದಲ್ಲಿ ದೊಡ್ಡ ಮತ್ತು ಸಣ್ಣ ಕರುಳಿನಲ್ಲಿ ಜೀರ್ಣಕ್ರಿಯೆಯ ಭೋವೆಲ್ ಮೂವ್ಮೆಂಟ್ಸ್ ಶುರುವಾಗುತ್ತೆ.
26 ನೇ ವಾರ:
ಮಗುವಿನ ಮಲಗುವ ಸಮಯ ಬದಲಾಗುತ್ತದೆ ಒಂದು ವೇಳೆ ತಾಯಿ ಮಲಗುವ ಟೈಮ್ ಮತ್ತು ಮಗು ಮಲಗೋ ಟೈಮ್ ಮ್ಯಾಚ್ ಆಗದೆ ಹೋದರೆ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯಬೇಕು ಎಂದು ಅರ್ಥ.
27 ನೇ ವಾರ:
ಮಗು ಕೈ ಕಾಲುಗಳನ್ನು ಆಡಿಸುವುದನ್ನು ಹೆಚ್ಚಿಸುತ್ತದೆ ಅದು ಕೈಕಾಲು ಆಡಿಸ್ದಾಗ ಹೊಟ್ಟೆಯಲ್ಲಿ ಒಂದು ತರಹ ವೈಬ್ರೇಶನ್ ಆಗಿದ್ದ ಹಾಗೆ ಫೀಲ್ ಆಗುತ್ತದೆ.
28 ನೇ ವಾರ:
ಮಗು ಕಣ್ಣು ಬಿಡಲು ಶುರುಮಾಡುತ್ತದೆ ಅಂದರೆ ಫುಲ್ ಕಣ್ಣು ಬಿಟ್ಟು ಗರ್ಭದಲ್ಲಿ ಏನೇನಿದೆ ಅಂತ ನೋಡುತ್ತದೆ ಎಂದು ಅರ್ಥ ಅಲ್ಲ, ನಿಧಾನವಾಗಿ ಕಣ್ಣೊರಪ್ಪೆ ತೆಗೆದು ಮುಚ್ಚುತ್ತದೆ ಎಂದರ್ಥ.
29 ನೇ ವಾರ:
ಮಗು ಹೆಚ್ಚಿನ ಶಕ್ತಿಯೊಂದಿಗೆ ವಧಿಯೋಕೆ ಶುರು ಮಾಡುತ್ತೆ ಜ್ಞಾನೇಂದ್ರಿಯಗಳು ಸರಿಯಾಗಿ ಕೆಲಸ ಮಾಡೋಕೆ ಶುರು ಮಾಡಿರುತ್ತೆ, ತಾಯಿ ಸೇವಿಸುವ ಆಹಾರವನ್ನು ಇಷ್ಟಪಡುವುದು ಅಥವಾ ಇಷ್ಟಪಡದೇ ಇರುವುದು, ಶಬ್ದಗಳನ್ನು ತುಂಬಾ ಕ್ಲಿಯರ್ ಆಗಿ ಕೇಳಿ ಅದಕ್ಕೆ ರಿಯಾಕ್ಟ್ ಮಾಡುವುದು ಬೆಳಕು ಬಿದ್ದಾಗ ಅಥವಾ ಬೆಳಕು ಇಲ್ಲದೆ ಇರುವಾಗ ಬೇರೆ ಬೇರೆ ರೀತಿ ಅದಕ್ಕೆ ಪ್ರತಿಕ್ರಿಯೆ ಕೊಡೋದು ಎಲ್ಲವನ್ನ ಶುರು ಮಾಡುತ್ತೆ ಈ ವಾರ.
30 ನೇ ವಾರ:
ಈ ಹಂತದಲ್ಲಿ ಮಗು ತುಂಬಾ ವೇಗವಾಗಿ ಬೆಳವಣಿಗೆ ಹೊಂದಲು ಶುರುವಾಗುತ್ತದೆ. ಈ ಹಂತದಲ್ಲಿ ಮಗು ಒಂದು ವಾರಕ್ಕೆ ಒಂದು ಪೌಂಡ್ ನಷ್ಟು ಹತ್ತತ್ತಿರಾ 450 ಗ್ರಾಂ ನಷ್ಟು ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ ಹೆಚ್ಚುವಾರಿ ಆಗಿ ಗಳಿಸಿಕೊಂಡ ಅಂಶಗಳು ಕೆನ್ನೆಯ ರಚನೆಗೆ ಕಾರಣವಾಗುತ್ತದೆ. ಈ ವೇಳೆ ಮಗು ವೇಗವಾಗಿ ಬೆಳೆಯೋದ್ರಿಂದ ಚಲನೆ ಕಮ್ಮಿಯಾದರೂ ಆಗಬಹುದು ಯಾಕಂದರೆ ಗರ್ಭಕೋಶದಲ್ಲಿ ಅದು ಅಲ್ಲಾಡೋಕ್ಕೆ ಜಾಗದ ಕೊರತೆಯಿಂದ ಚಲನೆ ಕಷ್ಟ ಆಗಬಹುದು ಹಾಗಂತ ಹೆದರಿಕೊಳ್ಳುವ ಅಗತ್ಯವಿಲ್ಲ ಆದರೆ ಪ್ರತಿ ಗಂಟೆಗೊಮ್ಮೆ ಎಚ್ಚರಿಕೆಯಿಂದ ಮಗು ಚಲನೆಯನ್ನು ಗಮನಿಸುತ್ತಿರಬೇಕು. ಒಂದು ವೇಳೆ ಒಂದು ಚೂರು ಚಲನೆ ಇಲ್ಲವಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: ಒಂದು ಸೆಮಿನಾರಿನ ಅನುಭವ ಕಥನ
31 ನೇ ವಾರ:
ಇಲ್ಲೂ ಅಷ್ಟೇ ಮಗುವಿನ ಎತ್ತರ ಮತ್ತು ತೂಕ ಹೆಚ್ಚಾಗುತ್ತಾ ಸಾಗುತ್ತದೆ, ಇದರ ನಡುವೆ ಜನನಾಂಗದ ವ್ಯವಸ್ಥೆ ಸಂಪೂರ್ಣವಾಗಿ ರೂಪುಗೊಳ್ಳುತ್ತದೆ.
32 ನೇ ವಾರ:
ಮಗು ಸಂಪೂರ್ಣವಾಗಿ ಬೆಳವಣಿಗೆ ಹೊಂದಿರುತ್ತದೆ, ಶ್ವಾಸಕೋಶ ಹೊರೆತು ಉಳಿದ ಎಲ್ಲಾ ಅಂಗಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ, ಈ ಹಂತದಲ್ಲಿ ಎಷ್ಟು ಬೇಗ ಡೆಲಿವರಿ ಆದರೂ ಕೂಡ ಮಗು ಹೆಚ್ಚಿನ ಸಂದರ್ಭಗಳಲ್ಲಿ ಆರೋಗ್ಯವಂತವಾಗಿ ಇರುತೆ.
33 ನೇ ವಾರ:
ಮಗು ಬೆಳಿತಾನೆ ಇರುತ್ತೆ ಆದರೆ ಮಗುವಿನ ಚಲನವಲನ ಕಡಿಮೆಯಾಗಿರುತ್ತೆ, ಒಂದು ವೇಳೆ ಚಲನೆ ತುಂಬಾ ಕಡಿಮೆ ಇದ್ದರೆ ಅದನ್ನ ಸರಿಪಡಿಸಲು ತಾಯಿಯಾದವರು ಏನಾದರೂ ಮಾಡಬೇಕು, ಅಂದರೆ ತುಂಬಾ ಸಿಹಿಯಾದ ಅಥವಾ ಹುಳಿಯಾದ ಪದಾರ್ಥಗಳನ್ನು ಸೇವಿಸುವುದು ಹೊರಗಡೆ ಜೋರಾಗಿ ಶಬ್ದ ಮಾಡುವುದು ಹೊಟ್ಟೆಗೆ ಪ್ರಕಾಶಮಾನವಾದ ಲೈಟ್ ಬಿಡುವುದು ಮಾಡಿದಾಗ ಮಗು ಎಚ್ಚರಗೊಂಡು ರಿಯಾಕ್ಟ್ ಮಾಡುತ್ತದೆ.
34 ನೇ ವಾರ:
ಈ ಹಂತದಲ್ಲಿ ಮಗು ಹೊರ ಜಗತ್ತಿಗೆ ಬರುವುದಕ್ಕೆ ಅಂದರೆ ಡೆಲಿವರಿಗೆ ರೆಡಿಯಾಗಿರುತ್ತದೆ, ನಾವು ಆಗ್ಲೇ ಹೇಳಿದ ಗ್ರೀಸಿ ಪದರ ಅಂದರೆ ವರ್ಣಿಕ್ಸ್ ಕೆಸೋ ವಸ ಈಗ ಮತ್ತಷ್ಟು ದಪ್ಪವಾಗಿರುತ್ತದೆ, ಇದು ಮಗುವಿನ ಚರ್ಮಕ್ಕೆ ಮಾಸ್ಚರೈಸರ್ ರೀತಿ ಕೆಲಸ ಮಾಡುತ್ತಿರುತ್ತದೆ, ಜೊತೆಗೆ ಮಗು ಜನಿಸುವಾಗ ನಯವಾಗಿ ಜಾರುವಂತೆ ನೋಡಿಕೊಳ್ಳುತ್ತದೆ.
35 ನೇ ವಾರ:
ಈ ಹಂತದಲ್ಲಿ ಮಗು ಡೆಲಿವರಿಗೆ ರೆಡಿಯಾಗಿ ಅಂದರೆ ಪೊಜಿಶನಿಗೆ ಬರುತ್ತದೆ, ಸರಿಯಾದ ಪೊಸಿಷನ್ ಅಂದರೆ ಮಗುವಿನ ತಲೆ ಕೆಳಗೆ ಆಗಿರಬೇಕು, ಮಗುವಿನ ಮುಖ ತಾಯಿಯ ಬೆನ್ನಿನ ಕಡೆಗೆ ವಾಲಿರಬೇಕು ಅದೇ ರೀತಿ ಮಗುವಿನ ಬೆನ್ನು ತಾಯಿಯ ಹೊಟ್ಟೆಕಡೆಗೆ ಅಥವಾ ಮಗುವಿನ ಮುಖ ತಾಯಿಯ ಹೊಟ್ಟೆ ಕಡೆಗೆ ಹಾಗೂ ಮಗುವಿನ ಬೆನ್ನು ತಾಯಿಯ ಬೆನ್ನಿನ ಕಡೆಗೆ ಇರಬೇಕು, ಆಗ ನಾರ್ಮಲ್ ಡೆಲಿವರಿ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ, ಈ ಮೇಲಿನ ಎರಡು ಸ್ಥಿತಿ ಇಲ್ಲವಾದರೆ ಸಿಸೇರಿಯನ್ ಸಾಧ್ಯತೆ ತುಂಬಾ ಹೆಚ್ಚಾಗಿ ಬಿಡುತ್ತೆ.
36 ನೇ ವಾರ:
ಈ ವಾರ ಮಗು ಮತ್ತಷ್ಟು ಬೆಳೆಯುತ್ತೆ.
37 ನೇ ವಾರ:
ಈ ವಾರದಲ್ಲಿ ಮಗುವಿಗೆ ಕರುಳ ಬಳ್ಳಿಯ ಮೂಲಕ ತಾಯಿಯಿಂದ ರೋಗನಿರೋಧಕ ಶಕ್ತಿ ವರ್ಗಾವಣೆ ಆಗುತ್ತದೆ, ಮಗು ಕೂಡ ಡೆಲಿವರಿಗೆ ರೆಡಿಯಾಗುತ್ತದೆ, ಈ ರೋಗನಿರೋಧಕ ಶಕ್ತಿ ಮಗು ಹೊರ ಪ್ರಪಂಚಕ್ಕೆ ಬಂದಾಗ ಕಾಯಿಲೆಗಳ ವಿರುದ್ಧ ಸೋಂಕುಗಳ ವಿರುದ್ಧ ಹೋರಾಡಕ್ಕೆ ಸಹಕರಿಸುತ್ತೆ.
38 ನೇ ವಾರ:
ಮಗುವಿನ ಪ್ರತಿಯೊಂದು ಅಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡೋಕೆ ಶುರು ಆಗುತ್ತೆ, ಎಲ್ಲ ಜ್ಞಾನೇಂದ್ರಿಯಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡ್ತಾ ಇರುತ್ತೆ ಶ್ವಾಸಕೋಶ ಮೆದುಳು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಆಗಿರುತ್ತೆ, ಜೀರ್ಣಕ್ರಿಯ ಕೂಡಾ ಸರಿಯಾಗಿ ನಡೆಯುತ್ತೆ ಈ ಹಂತದಲ್ಲಿ ಯಾವುದೇ ಸಮಯದಲ್ಲಿ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ.
39 ನೇ ವಾರ:
ಈ ಹಂತದಲ್ಲಿ ಮಗುವಿನ ತೂಕ 2 ½ ಕೆಜಿ ಇಂದ ನಾಲ್ಕು ಕೆಜಿ ವರೆಗೂ ಇರಬೇಕು, ಅದೇ ರೀತಿ ಎತ್ತರ 18ರಿಂದ 22 ಇಂಚುಗಳವರೆಗೆ ಇರಬೇಕು.
40 ನೇ ವಾರ:
ಈ ವಾರ ತಾಂತ್ರಿಕವಾಗಿ ಪ್ರೆಗ್ನೆನ್ಸಿ ಯ ಕೊನೆಯ ವಾರ ಯಾವುದೇ ಕ್ಷಣದಲ್ಲಿ ಹೆರಿಗೆ ನೋವು ಶುರುವಾಗಬಹುದು ಈ ವಿಚಾರದಲ್ಲಿ ಎಷ್ಟೋ ಮಹಿಳೆಯರಿಗೆ ಹೆರಿಗೆ ನೋವು ಯಾವುದು ಎನ್ನುವುದೇ ಐಡೆಂಟಿಫೈ ಮಾಡುವುದು ಕಷ್ಟ ಆಗಬಹುದು, ನಿಜವಾದ ಹೆರಿಗೆ ನೋವು ಯಾವುದು ಅಥವಾ ಬೇರೆ ನೋವು ಯಾವುದು ಅನ್ನೋದನ್ನ, ಹೀಗಾಗಿ ಸಾಧ್ಯವಾದಷ್ಟು ಎಚ್ಚರವಾಗಿರಬೇಕು ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಹೀಗೆ ಒಂಬತ್ತು ತಿಂಗಳ ಬೆಳವಣಿಗೆಯ ನಂತರ ಮಗು ಹೊಸ ಪ್ರಪಂಚಕ್ಕೆ ಬಂದು ಕಣ್ಣು ತೆರೆಯುತ್ತದೆ,
ಸ್ನೇಹಿತರೆ 40 ವಾರ ಅಂದರೆ ಅಷ್ಟು ವಾರಗಳ ಬಳಿಕವೆ ಆಗಬೇಕು ಅಂತ ಏನಿಲ್ಲ ಅದರ ಒಳಗೆ ಕೂಡ ಡೆಲಿವರಿ ಆದರೂ ಆಗಬಹುದು ಆದರೆ ಹೆಚ್ಚು ಅಂದ್ರೆ 40 ವಾರ ಅಂತ ಅರ್ಥ ಡೆಲಿವರಿಯ ಸಮಯ ಮಗುವಿನ ಬೆಳವಣಿಗೆ ಮೇಲೆ ನಿರ್ಧರಿತವಾಗಿರುತ್ತದೆ.
ಇದು ತಾಯಿ ಗರ್ಭದಲ್ಲಿ ಮಗು ಹೇಗೆ ಬೆಳವಣಿಗೆ ಹೊಂದುತ್ತದೆ ಎಂಬುದನ್ನು ವಿವರಿಸುವ ಪ್ರಯತ್ನ, ಈ ವಿಚಾರ ನಮಗಂತೂ ತುಂಬಾ ಇಂಟರೆಸ್ಟಿಂಗ್ ಮತ್ತು ಅದ್ಭುತ ಅನಿಸಿತು ಪ್ರಕೃತಿಯ ವಿಸ್ಮಯ ಅನಿಸಿತು, ಅದಕ್ಕೆ ಈ ಸೃಷ್ಟಿಯ ಚಮತ್ಕಾರವನ ನಿಮಗೂ ವಿವರವಾಗಿ ತಿಳಿಸೋಣ ಅಂತ ಈ ಲೇಖನ…
ವಿಡಿಯೋ ನೋಡಿ: ವಿಸ್ಮಯಕಾರಿ ಗೆದ್ದಲು ಪ್ರಪಂಚ !! ಪ್ರಕ್ರತಿಗೆ ಸಾಕಷ್ಟು ಉಪಕಾರ ಮಾಡುವ ಗೆದ್ದಲು ಹುಳು Janashakthi Media