ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರಾಕ್ಷೇಪಣಾ ಪತ್ರ (ಎನ್ಓಸಿ) ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಪತ್ರ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಸೋಮವಾರ ಅಕ್ಟೋಬರ್-16 ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಸಿರು ಪ್ರವರ್ಗದ ಕೈಗಾರಿಕಾ ಘಟಕಗಳಿಗೆ ಅನುಮತಿ ಕೋರಿ ಸಲ್ಲಿಸುವ ಅರ್ಜಿಗಳು ನಿಯಮಾನುಸಾರ ಇದ್ದಲ್ಲಿ 30 ದಿನಗಳೊಳಗೆ, ಆರೆಂಜ್ ಪ್ರವರ್ಗದ ಅರ್ಜಿಗಳನ್ನು 45 ದಿನಗಳ ಒಳಗೆ ಮತ್ತು ಕೆಂಪು ಪ್ರವರ್ಗದ ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು 90 ದಿನಗಳೊಳಗೆ ಇತ್ಯರ್ಥಪಡಿಸಬೇಕು,” ಎಂದು ಆದೇಶ ನೀಡಿದರು.
ಇದನ್ನೂ ಓದಿ:ತ್ಯಾಜ್ಯ ನಿರ್ವಹಣೆ ಶುಲ್ಕ ಪಾವತಿ: ಬಿಬಿಎಂಪಿ ಪ್ರಸ್ತಾಪಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ
“ಮಂಡಳಿಯಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಈ ರೀತಿ ವಿಳಂಬ ಮಾಡುವುದು ಸರಿಯಲ್ಲ. ಹೀಗಾಗಿ, ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿಯಾಗಬೇಕು. ಅನಗತ್ಯವಾಗಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು,” ಎಂದು ಎಚ್ಚರಿಕೆ ನೀಡಿದರು.
ದಂಡ ವಸೂಲಿಗೆ ಕ್ರಮ:
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ) 2,900 ಕೋಟಿ ರೂಪಾಯಿ ದಂಡದ ಹಣವನ್ನು ಮಾಲಿನ್ಯಕಾರರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ದಂಡದ ಹಣವನ್ನು ಸೂಕ್ತ ರೀತಿಯಲ್ಲಿ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಿನ್ನೆಲೆಯಲ್ಲಿ 2022 ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ರಾಜ್ಯ ಸರ್ಕಾರಕ್ಕೆ 2,900 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಈ ಹಣವನ್ನು ಮಾಲಿನ್ಯಕಾರರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಇದೂವರೆಗೆ ಕೇವಲ 4 ಕೋಟಿ ರೂಪಾಯಿಗಳನ್ನಷ್ಟೇ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆ ತ್ಯಾಜ್ಯ ನೀರನ್ನು ಹರಿಸುತ್ತಿರುವ 58 ವಸತಿ ಸಮುಚ್ಚಯಗಳಿಗೆ ತಲಾ ರೂ.3 ಕೋಟಿ ದಂಡ ವಿಧಿಸಿ, ಪ್ರತಿ ವಸತಿ ಸಮುಚ್ಚಯದಲ್ಲೂ ಎಸ್ಟಿಪಿ ನಿರ್ಮಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶಿಸಿದೆ. 2024ರ ಡಿಸೆಂಬರ್ ಒಳಗಾಗಿ ಎಸ್’ಟಿಪಿ ಕಾರ್ಯ ಪೂರ್ಣಗೊಳಿಸುವಂತೆಯೂ ಗಡುವು ನೀಡಲಾಗಿದೆ. ಆದರೆ, ಈ ವರೆಗೆ ರೂ.4 ಕೋಟಿ ಮಾತ್ರ ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ದಂಡ ವಸೂಲಿ ಜೊತೆಗೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಎಂದು ತಿಳಿಸಿದರು.
ಇದನ್ನೂ ಓದಿ:ಅರಣ್ಯದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಮನೆ,ಕಟ್ಟಡ ನಿರ್ಮಿಸಲು ಅವಕಾಶ| ಸಚಿವ ಮಧು ಬಂಗಾರಪ್ಪ
ಎಸ್ಟಿಪಿ ಸ್ಥಾಪನೆ ಮತ್ತು ಚಂದಾಪುರ ಕೆರೆಯ ಸುಧಾರಣೆಗೆ ಕೆಎಸ್ಪಿಸಿಬಿಯಿಂದ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಸರ್ಕಾರವು ನ್ಯಾಯಾಲಯಗಳಿಗೆ ತಿಳಿಸಿದೆ. ಆದರೆ, ಅದಕ್ಕಾಗಿ ಭೂಮಿ ಲಭ್ಯವಿಲ್ಲ ಎಂದು ಮಾಹಿತಿ ನೀಡಿದರು. ಪತ್ರ
ವರ್ತೂರು ಕೆರೆಗೆ ಮತ್ತೆ ಕೊಳಚೆ ನೀರು ಸೇರುತ್ತಿರುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ. ತಾತ್ಕಾಲಿಕ ಪರಿಹಾರಗಳು ಕೆಲಸ ಮಾಡುವುದಿಲ್ಲ ಎಂದರು.
ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗಾಗಿ ನಗರದ ಹೊರವಲಯದಲ್ಲಿ ಹೂಳು ತುಂಬುವ ಸ್ಥಳಗಳನ್ನು ಸ್ಥಾಪಿಸುವ ಕುರಿತು ವ್ಯಕ್ತವಾಗುತ್ತಿರುವ ಕಳವಳ ಕುರಿತು ಮಾತನಾಡಿ ಇದು ಕೇವಲ ಪ್ರಸ್ತಾವನೆಯಾಗಿದೆ. ಯಾವುದು ಅಂತಿಮಗೊಂಡಿಲ್ಲ. ಅರಣ್ಯ ಭೂಮಿ ಮತ್ತು ಹಸಿರುಯುಕ್ತ ಸ್ಥಳವನ್ನು ರಕ್ಷಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ವಿಡಿಯೋ ನೋಡಿ:ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್ ಕಂಪನಿವಿರುದ್ಧ ಗುಡುಗಿದ ರೈತರು Janashakthi Media