ಶಾಲಾ ಶಿಕ್ಷಣ ರಂಗದಲ್ಲಿ ಗುತ್ತಿಗೆ : ಹೊರಗುತ್ತಿಗೆ ರಂಗೋಲೆ ಕೆಳಗೆ ತೂರಿರುವ ಶೋಷಣಾ ವ್ಯವಸ್ಥೆ

ಕೆ. ಮಹಾಂತೇಶ್

ಎಪ್ಪತ್ತು ಎಂಬತ್ತರ ದಶಕದವರೆಗೂ ದೇಶದಲ್ಲಿ ‘ಅತ್ಯಂತ ಶೋಷಕರು’ ಎಂದರೆ ಖಾಸಗಿ ಕೈಗಾರಿಕೆಗಳ ಮಾಲೀಕರು ಎಂಬ ಮಾತು ಚಾಲ್ತಿಯಲ್ಲಿತ್ತು. ಮತ್ತು ಅದು ಅಕ್ಷರಶಃ ನಿಜವಾಗಿತ್ತು. ಆದರೆ ಎಂಬತ್ತರ ದಶಕದ ಕೊನೆಗೆ ಹಾಗೂ ತೊಂಬತ್ತರ ದಶಕದಲ್ಲಿ ದೇಶದಲ್ಲಿ ಆರಂಭಗೊಂಡ ಉದಾರೀಕರಣದ ನೀತಿಗಳು ಲಕ್ಷಾಂತರ ಕೈಗಾರಿಕೆಗಳು ಮುಚ್ಚಲು ಕಾರಣವಾಗಿ ಕೆಲವೇ ಮಾಲಿಕರನ್ನು ಗುತ್ತೆ ದಾರಿ ಕುಟುಂಬಗಳನ್ನಾಗಿ ಬೆಳೆಸಿದವು. ಸಾಲದೆಂಬಂತೆ ಸ್ವತಃ ಆಳುವ ಸಕರ್ಾರಗಳೇ ದೊಡ್ಡ ಶೋಷಕರೆಂಬ ಹಣೆಪಟ್ಟಿಕಟ್ಟಿಕೊಳ್ಳಲು ಕಾರಣೀಭೂತವಾದವು.

karnataka-teachers-b-3-8-20

ಖಾಸಗೀ ಕಂಪೆನಿ ಅಥವಾ ಮಾಲೀಕರು ನಡೆಸುತ್ತಿದ್ದ ನಿರಂತರ ಶೋಷಣೆಯನ್ನು ಆರಂಭದಲ್ಲಿ ಹಲವಾರು ಕಾನೂನುಗಳನ್ನು ಜಾರಿ ಮಾಡುವುದರ ಮೂಲಕ ನಿಯಂತ್ರಣ ಮಾಡಲು ಮುಂದಾದ ಸಕರ್ಾರಗಳು ನಂತರದಲ್ಲಿ ವಿದೇಶಿ ಸಾಲದ ಶೂಲಕ್ಕೆ ಸಿಲುಕಿದವು. ಇದಕ್ಕೆ ಪರಿಹಾರವಾಗಿ ಮುಂದುವರೆದ ಬಂಡವಾಳಶಾಹಿ ದೇಶಗಳು ಹುಟ್ಟು ಹಾಕಿದ ವಿಶ್ವಬ್ಯಾಂಕ್ ಹಾಗೂ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಅಭಿವೃದ್ದಿ ಹೊಂದುತ್ತಿರುವ ದೇಶಗಳ ಮೇಲೆ ಸಾಲಗಳನ್ನು ನೀಡುವುದರ ಮೂಲಕ ಹಿಡಿತ ಸಾಧಿಸಲು ಆರಂಭಿಸಿದವು. ಪರಿಣಾಮವಾಗಿ ಬಿಳಿಯರನ್ನು ಓಡಿಸಿ ಸ್ವಾವಲಂಬನೆಯತ್ತ ಮುಖ ಮಾಡಿದ್ದ ಭಾರತದಂತಹ ದೇಶಗಳು ಪುನಃ ವಿದೇಶಿ ಒತ್ತಡಗಳಿಗೆ ಮಣಿಯಬೇಕಾಯಿತು. ಪರಿಣಾಮವಾಗಿ ಶೋಷಣೆಯನ್ನು ತಡೆಗಟ್ಟಬೇಕಾದ ಸಕರ್ಾರಗಳೇ ಶೋಷಣೆ ಎಂಬ ಅಸ್ತ್ರವನ್ನು ತಮ್ಮ ದಾಳವಾಗಿಸಿಕೊಂಡವು. ಇದರಿಂದಾಗಿ ಸ್ವತಃ ಸಕರ್ಾರದ ಕೆಲಸದಲ್ಲಿಯೇ ಗುತ್ತಿಗೆ, ಹೂರಗುತ್ತಿಗೆ, ಗೌರವಧನ, ವಿಶ್ವಾಸಾರ್ಹ ಸೇವೆ ಹೆಸರಿನಲ್ಲಿ ಲಕ್ಷಾಂತರ ಯುವಜನರನ್ನು ಮನಬಂದಂತೆ ದುಡಿಸುವ ಹೊಸ ಶೋಷಣಾ ವ್ಯವಸ್ಥೆಯೊಂದನ್ನ ಹುಟ್ಟು ಹಾಕಲಾಯಿತು.

ತೊಂಬತ್ತರ ದಶಕದಲ್ಲಿ ಈಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹಣಕಾಸು ಸಚಿವರಾಗಿದ್ದ ಕಾಲದಲ್ಲೇ ದೇಶದಲ್ಲಿ ಜಾರಿಯಾದ ಈ ನೀತಿಗಳಿಂದಾಗಿ ನಮ್ಮ ಕೃಷಿ, ಕೈಗಾರಿಕೆಗಳಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಯಿತು. ಅದರ ಭಾಗವಾಗಿಯೇ ರಾಜ್ಯದಲ್ಲೂ ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಭಜನೆಗಳನ್ನು ಜಪಿಸಲಾರಂಭಿಸಲಾಯಿತು. ಅಷ್ಟೋತ್ತಿಗಾಗಲೇ ರಾಜ್ಯ ಸಕರ್ಾರದ ಅಧೀನದಲ್ಲಿರುವ ಕಂದಾಯ, ನೀರಾವರಿ, ಸಮಾಜಕಲ್ಯಾಣ, ಅರಣ್ಯ, ಲೋಕೋಪಯೋಗಿ, ಸಾರಿಗೆ ಸೇರಿದಂತೆ ಇನ್ನೂ ಇತರೆ ರಂಗಗಳಲ್ಲಿ ಈ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಲಾಗಿತ್ತು. 1999 ರ ನಂತರ ಅಧಿಕಾರ ನಡೆಸಿದ ಎಸ್.ಎಂ. ಕೃಷ್ಣ ಸಕರ್ಾರ ನೇಮಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ದಿವಂಗತ ಹಾರ್ನಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸು ಧಾರಣಾ ಆಯೋಗವು ರಾಜ್ಯದಲ್ಲಿ 2000 ಇಸ್ವಿ ಸುಮಾರಿನಲ್ಲಿ ಖಾಲಿ ಇದ್ದ ಸುಮಾರು ಒಂದು ಲಕ್ಷ ಸಕರ್ಾರಿ ಹುದ್ದೆಗಳನ್ನು ರದ್ದುಪಡಿಸಲು, ಎಲ್ಲಾ ಸಕರ್ಾರಿ ಇಲಾಖೆಯಲ್ಲಿ ಡಿ, ದಜರ್ೆ ನೌಕರರ ಹುದ್ದೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲು ಇನ್ನೂ ಇತರೆ ನೌಕರ ವಿರೋಧಿ ಶಿಫಾರಸ್ಸುಗಳನ್ನು ಸಕರ್ಾರಕ್ಕೆ ಸುಧಾರಣೆಯ ಹೆಸರಲ್ಲಿ ನೀಡಿತ್ತು. ಆದರೆ ವಿಪಯರ್ಾಸದ ಸಂಗತಿ ಎಂದರೆ ಮುಂದೆ ಅಧಿಕಾರಕ್ಕೆ ಬಂದ ಎಲ್ಲಾ ರಾಜ್ಯ ಸಕರ್ಾರಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿ ಹಾಗೂ ಬಿ ಹುದ್ದೆಗಳಿಗೂ ನೇರ ನೇಮಕಾತಿ ಮಾಡದೇ ಕ್ಲರಿಕಲ್ ಹಾಗೂ ಕಂಪ್ಯೂಟರ್ ಆಪರೇಟರ್ ಹಾಗೂ ಬೆರಳಚ್ಚು ಹುದ್ದೆಗಳಲ್ಲಿ ದಿನಗೂಲಿ, ಗುತ್ತಿಗೆ ಪದ್ದತಿ ಜಾರಿ ಮಾಡಿದವು. ಅಲ್ಲಿಂದ ಸಕರ್ಾರಿ ಉದ್ಯೋಗಗಳ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಯುವಜನರ ಕನಸುಗಳಿಗೆ ಎಳ್ಳು ನೀರು ಬಿಡಲಾಯಿತು. ಆದರೆ ದಿನಗೂಲಿಗಳಾಗಿ ದುಡಿದ ಸಾವಿರಾರು ನೌಕರರು ಸಂಘಟಿತರಾಗಿ ನ್ಯಾಯಲದ ಬಾಗಿಲು ತಟ್ಟಿದ್ದರಿಂದ ಅವರಿಗೆ ನ್ಯಾಯದ ಬಾಗಿಲು ತೆರೆಯಿತು. ಇದರಿಂದ ಎಚ್ಚೆತ್ತುಕೊಂಡ ಆಳುವವರು ಅಲ್ಲಿ ಪುನಃ ಹೊರಗುತ್ತಿಗೆ ಎಂಬ ಭೂತವನ್ನು ತಂದುಬಿಟ್ಟರು.

ಕಾನೂನಿನ ಭಯವಿಲ್ಲ.
ಈ ಹಿಂದೆ ದಿನಗೂಲಿ ನೌಕರನಾ/ಳಾಗಿ ಯಾವುದೇ ಸಕರ್ಾರಿ ಕಚೇರಿ ಅಥವಾ ಕಂಪನಿಯಲ್ಲಿ ಕನಿಷ್ಟ 240 ದಿನಗಳ ಕಾಲ ಕೆಲಸ ಮಾಡಿದ ದಾಖಲೆ ಹೊಂದಿದ್ದರೆ ಅಂತಹವನು/ಳು ಖಾಯಂಗೊಳ್ಳಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದಿತ್ತು. ಇಲ್ಲವೇ ನ್ಯಾಯಾಲದ ಮೊರೆ ಹೋಗಲು ಅವಕಾಶವಿತ್ತು. ಇದೇ ರೀತಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾಮರ್ಿಕರ ರಕ್ಷಣೆಗಾಗಿ ಹಲವಾರು ನಿಯಮಾವಳಿಗಳು 1970 ರ ಗುತ್ತಿಗೆ ಕಾಮರ್ಿಕ ಕಾನೂನಿನ ಅಡಿಯಲ್ಲಿ ದೊರಕುತ್ತವೆ. ಅಲ್ಲದೆ ನಾಗರೀಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸ್ವಾಯತ್ತ ನಿಗಮಗಳಲ್ಲಿ ಇದರ ಲಾಭವನ್ನು ಕಾಮರ್ಿಕರು ಪಡೆಯಬಹುದಾಗಿತ್ತು. ಅಲ್ಲದೆ ನಿರಂತರ 240 ದಿನಗಳ ಕಾಲ ಕೆಲಸ ಮಾಡಿದ್ದರೆ ಮತ್ತು ಕಾಮರ್ಿಕರು ಹಾಗೂ ನೌಕರರು ಮಾಡುತ್ತಿರುವ ನೌಕರರನ್ನು ಖಾಯಂ ಸ್ವರೂಪದ ಕೆಲಸದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸಾಭೀತುಪಡಿಸಲು ಸಾಧ್ಯವಾದರೆ ಅಂತಹವರು ಖಾಯಂಗೊಳ್ಳುವ ಅವಕಾಶಗಳು ಇರುತ್ತಿದ್ದವು.

ಈ ಕುರಿತಂತೆ ದೇಶದ ಸವರ್ೋಚ್ಚ ನ್ಯಾಯಲಯದ ಹೆಸರಾಂತ ‘ಏರ್ಇಂಡಿಯಾ’ ಪ್ರಕರಣವನ್ನು ಬಳಸಿ ಸಾವಿರಾರು ನೌಕರರು ಕಾಯಂ ನೌಕರಿಗಳಿಸಿದ್ದಾರೆ. ಆದರೆ ತದನಂತರ ‘ಉಮಾದೇವಿ ವರ್ಸಸ್ ಕನರ್ಾಟಕ ಹಾಗೂ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ’ ಪ್ರಕರಣದಲ್ಲಿ ಇಂತಹ ಅವಕಾಶಗಳನ್ನು ನಿರಾಕರಿಸಿ ಕೇವಲ ಒಂದು ಬಾರಿ ನೇಮಕಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗ ಇಡೀ ದೇಶ ಮಟ್ಟದಲ್ಲಿ ಅಧಿಕಾರಶಾಹಿ ಈ ಪ್ರಕರಣವನ್ನೇ ಮುಂದು ಮಾಡಿ ಹತ್ತಾರು ವರ್ಷ ದುಡಿದವರಿಗೆ ಸ್ವಾಭಾವಿಕ ನ್ಯಾಯವನ್ನು ನಿರಾಕರಿಸುತ್ತಿದ್ದಾರೆ. ಇತ್ತೀಚಿಗೆ ಗ್ರಾಮ ಪಂಚಾಯ್ತಿಗಳಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಾವಿರಾರು ನೌಕರರ ನೇಮಕಾತಿಯನ್ನು ಅನುಮೋದಿಸಲು ನಿರಾಕರಿಸಲಾಗಿದೆ. ಹಾಗೇ ಇನ್ನೂ ಹೊರಗುತ್ತಿಗೆ, ಗೌರವಧನ ಮತ್ತು ವಿಶ್ವಾಸಾರ್ಹ ಹಾಗೂ ಸ್ವಯಂ ಸೇವೆ ಹೆಸರಲ್ಲಿ ದುಡಿಯುತ್ತಿರುವ ನೌಕರರರಿಗೆ ಅಂತಹ ಯಾವ ಅವಕಾಶಗಳು ಲಭ್ಯವಿಲ್ಲದಂತಾಗಿವೆ.

ಬಿಜೆಪಿ ಸಕರ್ಾರದ ಹೊಸ ವರಸೆ
ಕನರ್ಾಟಕ ರಾಜ್ಯದ ಜನತೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಬಿಜೆಪಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ ಉಮೇದಿಯಲ್ಲಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಜಾರಿಗೆ ತಂದ ನೌಕರ ವಿರೋಧಿ ಕಾಮರ್ಿಕ ವಿರೋಧಿ ನೀತಿಗಳನ್ನು ಬದಲಿಸಲು ಬೇಕಾದ ಹೋರಾಟಗಳನ್ನು ನಡೆಸಿ ಕಾಂಗ್ರೆಸ್ ಸಕರ್ಾರದ ಮೇಲೆ ಒತ್ತಡ ಹಾಕದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ. ಜಗತ್ತಿನಲ್ಲೆಡೆ ದುಡಿಯುವ ವರ್ಗ ವಾರಕ್ಕೆ 35 ಗಂಟೆಗಳಿಗೆ ಕೆಲಸದ ಅವಧಿ ಸೀಮಿತಗೊಳಿಸಬೇಕೆಂಬ ಬೇಡಿಕೆ ಇಟ್ಟು ಹೋರಾಡುತ್ತಿರುವಾಗಲೇ ರಾಜ್ಯದಲ್ಲಿದ್ದ ಬಿಜೆಪಿ ಸಕರ್ಾರ ದಿನದ 8 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಿತು. ಅಲ್ಲದೆ ಗುತ್ತಿಗೆ ಕಾಮರ್ಿಕ ಕಾನೂನಿನ ನಿಯಮಾವಳಿಗಳನ್ನು ಮಾಲೀಕರ ಪರವಾಗಿ ರೂಪಿಸಿತು. ಇನ್ನೂ ಶಿಕ್ಷಣರಂಗದಲ್ಲಂತೂ ವ್ಯಾಪಕವಾದ ಹೊರಗುತ್ತಿಗೆಯನ್ನು ಜಾರಿಗೆ ತಂದಿತು.

ಮೂರೇ ತಿಂಗಳಲ್ಲಿ ನೇಮಕಾತಿ ಮತ್ತು ನಿವೃತ್ತಿ !
ಹೊರ ಗುತ್ತಿಗೆಯನ್ನು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಜನತಾದಳ ಸಕರ್ಾರಗಳು ಕೂಡ ಜಾರಿಗೆತಂದಿವೆ ಎಂಬುದೇನೋ ಸತ್ಯ. ಆದರೆ, ಬಿಜೆಪಿ ಮತ್ತು ಆ ಸಕರ್ಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯಂತೂ ಒಂದು ಹೆಜ್ಜೆ ಮುಂದೆ ಇಟ್ಟು ಶಿಕ್ಷಣ ಕ್ಷೇತ್ರದಲ್ಲಿ ಮೂರೇ ತಿಂಗಳಲ್ಲಿ ನೇಮಕಾತಿ ಹಾಗೂ ಕೆಲಸದಿಂದ ನಿವೃತ್ತಿಗೊಳಿಸುವ ಹೊಸ ಪರಂಪರೆಯನ್ನೇ ಆರಂಭಿಸಿದರು. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಪ್ರಾಥಮಿಕ ಫ್ರೌಡ ಶಿಕ್ಷಣ ಹಂತದಲ್ಲಿ ಗುತ್ತಿಗೆ ಶಿಕ್ಷಕರನ್ನು ಬಳಸಿ ನೀಡುವ ಕೆಲಸ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಬಿಜೆಪಿ ಸಕರ್ಾರದ ಅವಧಿಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಖಒಖಂ) ಅಡಿಯಲ್ಲಿ ರಾಜ್ಯದಲ್ಲಿ ಆರಂಭಿಸಲಾದ ಆದರ್ಶ ವಿದ್ಯಾಲಯಗಳು ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ ಸುಮಾರು 3000 ಶಿಕ್ಷಕರು ಹಾಗೂ ಶಿಕ್ಷಕೇತರರು ಕಳೆದ 2011 ಆಗಸ್ಟ್ನಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ಆದರೆ ಆ ಸಂಸ್ಥೆಯು ಪ್ರತಿ ಮೂರು ತಿಂಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಬಿಎ.ಬಿಎಡ್ನಲ್ಲಿ ಅತ್ಯುತ್ತಮ ಅಂಕಗಳಿಸಿದ ಶಿಕ್ಷಕರನ್ನು ನಿಯೋಜಿಸಿಕೊಳ್ಳುತ್ತದೆ.

ಉದಾಹರಣೆಗೆ ಜನವರಿ 1 ರಂದು ನೇಮಕಾತಿ ಪತ್ರವನ್ನು ಆಯ್ಕೆಯಾದ ಆಭ್ಯಥರ್ಿಗೆ ನೀಡುವ ಸಂಸ್ಥೆಯು ಮಾಚರ್್ 31 ರಂದು ಅವರನ್ನು ಬಿಡುಗಡೆಗೊಳಿಸುವ ಆದೇಶವನ್ನು ಅದರಲ್ಲೇ ನೀಡಿರುತ್ತದೆ.! ನೇಮಕವಾದ ಎಲ್ಲಾ ಶಿಕ್ಷಕರು ಸಕರ್ಾರಿ ಶಾಲಾ-ಕಾಲೇಜುಗಳಲ್ಲೇ ಅದೂ ನೇರವಾಗಿ ಪ್ರಿನ್ಸಿಪಾಲ್ ಹಾಗೂ ಹೆಡ್ಮಾಸ್ಟರ್ ಅಡಿಯಲ್ಲೇ ಕೆಲಸ ಮಾಡುತ್ತಿದ್ದರೂ ಆ ಶಾಲೆಗಳಿಗೂ ಕೆಲಸ ಮಾಡುವ ಶಿಕ್ಷಕರಿಗೂ ಯಾವುದೊಂದು ಸಂಬಂಧ ಏರ್ಪಡದಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅದೂ ಅಲ್ಲದೆ ಹರಾಜು ನಿಯಾವಳಿಗಳಲ್ಲಿ ಅವಕಾಶವಿಲ್ಲದಿದ್ದರೂ ಆ ಖಾಸಗಿ ಸಂಸ್ಥೆಯು 3000 ಶಿಕ್ಷಕ ಹಾಗೂ ಶಿಕ್ಷಕೇತರರಿಂದ ನೇಮಕಾತಿ ಸಮಯದಲ್ಲಿ ಒಂದು ತಿಂಗಳ ಸಂಬಳವನ್ನು ತಲಾ 14,000, 12,000, 7,000 ರೂಪಾಯಿಗಳನ್ನು ಭದ್ರತಾಠೇವಣಿ ಎಂದು ಅಕ್ರಮವಾಗಿ ಪಡೆದಿದೆ. ಇದರ ಒಟ್ಟು ಮೊತ್ತವೇ ಸುಮಾರು 3 ಕೋಟಿಗಿಂತ ಅಧಿಕ ! ಅಲ್ಲದೇ ಅದನ್ನು ಹಿಂತಿರುಗಿಸಲು ಕೇಳಿದ ನೌಕರರಿಗೆ ಕೆಲಸದಿಂದ ಕಿತ್ತು ಹಾಕುವ ಬೆದರಿಕೆ ಹಾಗೂ ಎರಡು ತಿಂಗಳ ಸಂಬಳವನ್ನು ನೀಡದೇ ಸತಾಯಿಸಿ ಕೊನೆಯಲ್ಲಿ ಭದ್ರತಾ ಠೇವಣಿ ಸೇರಿದಂತೆ ಎಲ್ಲಾ ಬಾಕಿ ಹಣವನ್ನು ಪಡೆಯಲಾಗಿದೆ ಎಂಬ ಓ.ಔ.ಅ ಪತ್ರವನ್ನು ಶಿಕ್ಷಕರಿಂದ ಒತ್ತಾಯಪೂರ್ವಕವಾಗಿ ಕಂಪನಿಯವರು ಪಡೆದಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆ ಪೋಲೀಸ್ ಠಾಣೆಯಲ್ಲಿ ಸುಳ್ಳು ಕೇಸು ದಾಖಲಿಸಿದ್ದಾರೆ. ಇದೆಲ್ಲಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಖಒಖಂ) ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರ ಮೂಗಿನಡಿಯಲ್ಲೇ ನಡೆಯುತ್ತಿರುವುದು ವಿಪಯರ್ಾಸ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ತಾನು ಜನ ಮೆಚ್ಚುವ ಆಡಳಿತ ನೀಡುವ ಭರವಸೆ ನೀಡಿದೆ. ಆದರೆ ವಾಸ್ತವದಲ್ಲಿ ಬಿಜೆಪಿ ಸಾಗಿದ ದಾರಿಯಲ್ಲೇ ಅದು ಸಾಗುತ್ತಿರುವುದು ಗೋಚರಿಸುತ್ತಿದೆ. ಅಪಾಯಕಾರಿಯಾದುದೆಂದರೆ, ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪ್ರಾಥಮಿಕ ಶಾಲೆಗೆ ಅವಶ್ಯಕವಿರುವ 15 ಸಾವಿರ ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ಭತರ್ಿ ಮಾಡುವ ಮತ್ತೊಂದು ಕೆಲಸಕ್ಕೆ ಪ್ರಾಥಮಿಕ ಹಾಗೂ ಫ್ರೌಡಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಕೈಹಾಕಿದ್ದಾರೆ. ಅಲ್ಲದೆ ಉನ್ನತ ಶಿಕ್ಷಣದಲ್ಲೂ ಹೂರಗುತ್ತಿಗೆ ಆಧಾರದ ನೇಮಕಾತಿಗಳನ್ನು ಪ್ರಕಟಿಸಲಾಗಿದೆ. ಹಾಗಾದರೆ ಬಿಜೆಪಿ ಆಡಳಿತಕ್ಕಿಂತ ಸಿದ್ದರಾಮಯ್ಯ

ಸಕರ್ಾರದ ಆಡಳಿತ ಭಿನ್ನ ಹೇಗೆ?
ಮಕ್ಕಳ ಮನೋವಿಕಾಸವನ್ನು ರೂಪಿಸಬೇಕಾದ ಪ್ರಾಥಮಿಕ ಹಂತ ಹಾಗೂ ಶಿಕ್ಷಣದ ಎಲ್ಲಾ ಹಂತಗಳಲ್ಲೂ ನೀಡಬೇಕಾದ ಗುಣಮಟ್ಟದ ಶಿಕ್ಷಣದ ಬಗ್ಗೆ 1964 ರಲ್ಲೇ ಕೇಂದ್ರ ಸಕರ್ಾರ ನೇಮಿಸಿದ್ದ ಕೊಠಾರಿ ಆಯೋಗವು ಅತ್ಯುತ್ತಮ ತರಬೇತಿ ಹೊಂದಿದ ಮತ್ತು ಕಾಲಕಾಲಕ್ಕೆ ಅವರ ಭೋಧನಾ ಕ್ರಮವನ್ನು ಪುನರ್ಮನನ ಮಾಡಿಕೊಂಡಿರುವ ಶಿಕ್ಷಕ ವರ್ಗದಿಂದ ಮಾತ್ರ ಉತ್ತಮ ವಿದ್ಯಾಥರ್ಿಗಳು ತಯಾರಾಗುತ್ತಾರೆ ಮತ್ತು ಅಂತಹವರಿಂದ ಉತ್ತಮವಾದ ದೇಶ ನಿಮರ್ಾಣ ಸಾಧ್ಯವೆಂದು ಪ್ರತಿಪಾದಿಸಿದೆ. ಇದನ್ನೇ 1950 ರಲ್ಲಿ ದೇಶದಲ್ಲಿ ರಚನೆಯಾದ ಭಾರತದ ಸಂವಿಧಾನ ಮತ್ತು 2006 ರ ತಿದ್ದುಪಡಿ(2002 ನೇ 86 ನೇ ಕಾನೂನು ತಿದ್ದುಪಡಿ) ಅನ್ವಯಿಸಿ ಸಂವಿಧಾನದ ಪರಿಚ್ಚೇಧ 21 ಎ ದಲ್ಲಿ 6 ನೇ ವಯಸ್ಸಿನಿಂದ 14 ನೇ ವರ್ಷದವರೆಗೆ ದೇಶದ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲು ಸಕರ್ಾರಗಳು ಮುಂದಾಗಬೇಕು ಎಂದು ಸ್ಟಷ್ಟವಾಗಿ ಹೇಳಲಾಗಿದೆ. ಆದರೆ ಸಂವಿಧಾನವನ್ನು ಎತ್ತಿಹಿಡಿಯುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬರುವ ಸಕರ್ಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಜನತೆಯನ್ನು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಗಳಿಂದ ವಂಚಿಸುವ ಹುನ್ನಾರಗಳನ್ನು ನಡೆಸುತ್ತಿವೆ. ಇವುಗಳನ್ನು ಜನತೆಯ ಪ್ರಬಲ ಪ್ರತಿರೋಧದಿಂದ ಮಾತ್ರವೇ ಬದಲಿಸಲು ಸಾಧ್ಯ.

0

Donate Janashakthi Media

One thought on “ಶಾಲಾ ಶಿಕ್ಷಣ ರಂಗದಲ್ಲಿ ಗುತ್ತಿಗೆ : ಹೊರಗುತ್ತಿಗೆ ರಂಗೋಲೆ ಕೆಳಗೆ ತೂರಿರುವ ಶೋಷಣಾ ವ್ಯವಸ್ಥೆ

  1. I’m also a contract outsource based Vocational Trainer working under R.M.S.A-SSA-KAR N.S.Q.F Project. The hiring agency doesn’t paying salary on time…. they haven’t paid our last 4 month’s salary yet…in this pandemic period.
    Article is very informative…

Leave a Reply

Your email address will not be published. Required fields are marked *