ಸೀತಾರಾಮ ಯೆಚೂರಿ
ಇಂತಹ ನೈಸಗರ್ಿಕ ವಿಕೋಪಗಳ ಘಟನೆಗಳಲ್ಲಿ ಹಲವು ಮಾನವ-ನಿಮರ್ಿತ ಅಂಶಗಳ ಕೊಡುಗೆಗಳೂ ಇರುತ್ತವೆ. ಉತ್ತರಾಖಂಡ, ತನ್ನ ನೆರೆರಾಜ್ಯಗಳಂತೆ ನದಿ ಹರಿವುಗಳ ಪ್ರಭಾವದ ಒಂದು ಸರಿಯಾದ ವೈಜ್ಞಾನಿಕ ಅಧ್ಯಯನವನ್ನು ನಡೆಸದೆ, ನೂರಾರು ಜಲವಿದ್ಯುತ್ ಯೋಜನೆಗಳನ್ನು ತಯಾರಿಸಿದೆ, ಅವುಗಳಲ್ಲಿ ಕೆಲವನ್ನು ಈಗಾಗಲೇ ನಿಮರ್ಿಸಿದೆ ಕೂಡ. ಈಗಲಾದರೂ ಸರಕಾರಗಳು ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳು ನಮ್ಮ ಪರಿಸರ, ಅರಣ್ಯಗಳು ಇನ್ನಷ್ಟು ನಾಶವಾಗುವುದನ್ನು ತಡೆಯಲು ಕಟಿಬದ್ಧರಾಗಬೇಕು, ನಮ್ಮ ನದಿಗಳ ಕನಿಷ್ಟ ಪಾರಿಸರಿಕ ಪ್ರವಾಹಗಳ ಒಂದು ವೈಜ್ಞಾನಿಕ ವ್ಯವಸ್ಥೆಯನ್ನು ರೂಪಿಸಬೇಕು, ಮತ್ತು ಧಾಮರ್ಿಕ ಪ್ರವಾಸಕ್ಕೆ ಒಂದು ಸುರಕ್ಷಣಾ ನಿಯಂತ್ರಣಗಳ ವ್ಯವಸ್ಥೆಯನ್ನು ಕಲ್ಪಿಸಬೇಕು.
ಒಂದು ದುರ್ಭರ ಪ್ರಮಾಣದ ಮಾನವ ದುರಂತ ಉತ್ತರಾಖಂಡದಲ್ಲಿ ಅನಾವರಣಗೊಂಡಿದೆ. ಅಲ್ಲಿ ಇದ್ದಕ್ಕಿದ್ದಂತೆ ಎರಗಿರುವ ನೆರೆಹಾವಳಿಗೆ ತುತ್ತಾಗಿ ಸತ್ತವರ ಸಂಖ್ಯೆ 5000 ದಷ್ಟಿರಬಹುದು ಎಂದು ಅಲ್ಲಿನ ವಿಪತ್ತು ನಿರ್ವಹಣೆ ಮಂತ್ರಿಗಳ ಊಹೆ. ಹಲವರು ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎನ್ನುತ್ತಾರೆ. ಅಧಿಕೃತವಾಗಿ, ಈಗಲೂ 10 ಸಾವಿರಕ್ಕೂ ಹೆಚ್ಚು ಮಂದಿ ಬದ್ರಿನಾಥ, ಕೇದಾರನಾಥದ ಮಳೆಯ ಪ್ರಕೋಪಕ್ಕೊಳಗಾದ ಯಾತ್ರಾಸ್ಥಳಗಳ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಕೇದಾರನಾಥ ಅತಿ ಹೆಚ್ಚು ಬಾಧೆಗೊಳಗಾಗಿರುವ ಸ್ಥಳ.
ಇಂತಹ ವಿಪತ್ತುಗಳು ಯಾವಾಗ ಎರಗುತ್ತವೆ ಎಂಬುದರ ಕರಾರುವಾಕ್ಕಾದ ಮುನ್ಸೂಚನೆ ಸಾಧ್ಯವಿಲ್ಲ. ಆದರೂ ಹವಾಮಾನ ಇಲಾಖೆ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿತ್ತು. ಆದರೆ ಅರ್ಥಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ಮಧ್ಯ ಯುರೋಪಿನಲ್ಲಿ ತೀವ್ರ ನೆರೆಹಾವಳಿ ಸೃಷ್ಟಿಸಿದ ಪಶ್ಚಿಮದ ಗಾಳಿ ನೈಋತ್ಯ ಮನ್ಸೂನ್ ಗಾಳಿಯೊಂದಿಗೆ ಬೆಸೆದು ಈ ವಿಪತ್ಕಾರಿ ಮಳೆ ಬೀಳುವಂತಾಯಿತು. ಅಧಿಕಾರಿಗಳ ಪ್ರಕಾರ, ಉತ್ತರ ಭಾರತದ ಪರ್ವತಮಯ ರಾಜ್ಯಗಳಲ್ಲಿ ಅದಾಗಲೇ ಮಾನ್ಸೂನ್ ಕಾಲದ ಕಡಿಮೆ ಒತ್ತಡದ ವಾತಾವರಣ ನಿಮರ್ಾಣವಾಗಿತ್ತು. ಇದರೊಳಕ್ಕೆ ಮೆಡಿಟರೇನಿಯನ್ ಮೂಲದಿಂದ ಆ ಉಷ್ಣವಲಯದ ಬಿರುಗಾಳಿಗಳು ಬೀಸಿ ಬಂದವು. ಇದರ ಪರಿಣಾಮವೇ ಭಾರೀ ಮಳೆ ಮತ್ತು ಈ ಪ್ರದೇಶದ ಹಲವಾರು ನದಿಗಳಲ್ಲಿ ಹತೋಟಿ ತಪ್ಪಿದ ಪ್ರವಾಹ.
ನೈಸಗರ್ಿಕ ವಿಪತ್ತು ಮತ್ತು ಮಾನವ-ನಿಮರ್ಿತ ಅಂಶಗಳು
ಇಂತಹ ವಿಪತ್ತುಗಳನ್ನು ‘ನೈಸಗರ್ಿಕ’ ಎನ್ನಲಾಗುತ್ತದೆ. ಏಕೆಂದರೆ ವಿಜ್ಞಾನ ಇನ್ನೂ ನಮ್ಮನ್ನು ಇಂತಹ ಘಟನೆಗಳನ್ನು ನಿಭಾಯಿಸುವಷ್ಟು ಸಜ್ಜುಗೊಳಿಸಿಲ್ಲ. ಆದರೆ ಇಂತಹ ಘಟನೆಗಳಲ್ಲಿ ಹಲವು ಮಾನವ-ನಿಮರ್ಿತ ಅಂಶಗಳ ಕೊಡುಗೆಗಳೂ ಇರುತ್ತವೆ. ಬಿರುಮಳೆಗಳು ಸಂಭವಿಸುವುದು, ಬಿಸಿಯಾದ, ತೇವ ತುಂಬಿದ ಗಾಳಿ ಪರ್ವತಗಳ ಮೇಲಕ್ಕೆ ಒತ್ತಲ್ಪಟ್ಟು ಗುಡುಗು ಮೋಡಗಳು ರಚನೆಗೊಂಡಾಗ. ಇದರ ಒಟ್ಟು ಫಲಿತಾಂಶವೇ ಮೇಘಸ್ಫೋಟ ಅಥವ ಬಿರುಮಳೆ. ಇದಲ್ಲದೆ, ಮನಬಂದಂತೆ ನಡೆಸಿದ ಅರಣ್ಯನಾಶ, ನೆಲದ ಮೇಲೆ ಸಸ್ಯಗಳ ಆವರಣದ ಅಭಾವದಿಂದಾಗಿ ಇಂತಹ ಆಕಸ್ಮಿಕ ಪ್ರವಾಹಗಳು ಉಂಟಾಗುತ್ತವೆ.
ಉತ್ತರಾಖಂಡದಲ್ಲಿ 1998ರಿಂದೀಚೆಗೆ ಇಂತಹ ಆರು ಪ್ರಧಾನ ಮೇಘಸ್ಫೋಟಗಳು ಸಂಭವಿಸಿವೆ. ಅರಣ್ಯಗಳ ನಾಶ, ನದಿಗಳಿಗೆ ಅವೈಜ್ಞಾನಿಕವಾಗಿ ಆಣೆಕಟ್ಟುಗಳ ನಿಮರ್ಾಣ ಮತ್ತು ಮರಳು, ಕಲ್ಲುಗಳ ಲಂಗುಲಗಾಮಿಲ್ಲದ ಗಣಿಗಾರಿಕೆ, ಇವೆಲ್ಲವೂ ಸೇರಿಕೊಂಡು ಉತ್ತರಾಖಂಡದಲ್ಲಿ ಮತ್ತೆ-ಮತ್ತೆ ಇಂತಹ ವಿಪತ್ತುಗಳನ್ನು ತರುವ ಒಂದು ಮಾರಕ ಮಿಶ್ರಣವನ್ನು ಸಿದ್ಧಗೊಳಿಸಿವೆ. ದೇಶದಲ್ಲಿ ವಾತಾವರಣ ಮತ್ತು ಪರಿಸರದ ಸುಭದ್ರತೆ ಹಾಗೂ ಸೂಕ್ಷ್ಮ ಪರಿಸರ ವಲಯಗಳ ಸುರಕ್ಷಿತತೆಯ ಬಗ್ಗೆ ಚಚರ್ೆ ಮುಂದುವರೆಯುತ್ತಿರುವಾಗಲೇ, ಉತ್ತರಾಖಂಡ, ತನ್ನ ನೆರೆರಾಜ್ಯಗಳಂತೆ ತನ್ನ ನದಿಗಳ ಕನಿಷ್ಟ ಪರಿಸರ ಹರಿವುಗಳನ್ನು ಕೂಡ ನಿರೂಪಿಸದೇ, ನದಿ ಹರಿವುಗಳ ಪ್ರಭಾವದ ಒಂದು ಸರಿಯಾದ ವೈಜ್ಞಾನಿಕ ಅಧ್ಯಯನವನ್ನು ನಡೆಸದೆ, ನೂರಾರು ಜಲವಿದ್ಯುತ್ ಯೋಜನೆಗಳನ್ನು ತಯಾರಿಸಿದೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ನಿಮರ್ಿಸಿದೆ ಕೂಡ. ಯುಪಿಎ-1 ಆಳ್ವಿಕೆಯಲ್ಲಿ ರಚಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ(ಎನ್ಡಿಎಂಎ), ಒಂದೋ ತನಗೆ ವಿಧಿಸಿದ ಕೆಲಸವನ್ನು ಮಾಡ ಹೊರಟಿಲ್ಲ, ಅಥವ ಅದು ಏನಾದರೂ ಸಲಹೆಗಳನ್ನು ನೀಡಿದ್ದರೆ ಅವುಗಳನ್ನು ಜಾರಿ ಮಾಡಲಾಗಿಲ್ಲ. ಇದು ಸ್ವಯಂವೇದ್ಯ.
ಈ ಸಮಸ್ತ ದುರಂತದಲ್ಲಿ ಇನ್ನೊಂದು ಮಾನವ-ನಿಮರ್ಿತ ಅಂಶವೂ ಇದೆ. ಕಳೆದ ಒಂದು ದಶಕದಲ್ಲಿ ಈ ಎರಡು ಯಾತ್ರಾಸ್ಥಳಗಳಿಗೆ ಭೇಟಿ ಕೊಡುವವರ ಸಂಖ್ಯೆ ನಾಲ್ಕು ಪಟ್ಟಾಗಿದೆ. 2003ರಿಂದ 2012ರ ನಡುವೆ ಕೇದಾರನಾಥಕ್ಕೆ ಭೇಟಿ ನೀಡಿದವರ ಸಂಖ್ಯೆ 1.7ಲಕ್ಷದಿಂದ 5.75 ಲಕ್ಷಕ್ಕೇರಿದೆ. ಬದ್ರಿನಾಥದಲ್ಲಿ ಅದು 1.34 ಲಕ್ಷದಿಂದ ಸುಮಾರು 6 ಲಕ್ಷ ಆಗಿದೆ. ಇದೇ ಅವಧಿಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ 10ನೇ ಒಂದಂಶಕ್ಕೆ ಇಳಿದಿದೆ ಎಂಬುದನ್ನು ಗಮನಿಸಬೇಕು. ಇನ್ನೊಂದೆಡೆ ಈ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ನೋಂದಾವಣಿ ಪ್ರಮಾಣ ಐದು ಪಟ್ಟು ಹೆಚ್ಚಿದೆ. ಇವುಗಳಲ್ಲಿ 70ಶೇ.ದಷ್ಟು ಯಾತ್ರಾಥರ್ಿಗಳನ್ನು ದಡ ದಾಟಿಸುವ ಕೆಲಸದಲ್ಲಿ ತೊಡಗಿರುವಂತವು. ಸಂಸದೀಯ ಸ್ಥಾಯೀ ಸಮಿತಿ ಮತ್ತು ಯೋಜನಾ ಆಯೋಗ ಕೂಡ ಸರಕಾರದ ಗಮನವನ್ನು ಧಾಮರ್ಿಕ ಪ್ರವಾಸದ ನಿಯಂತ್ರಣದತ್ತ ಸೆಳೆದಿದ್ದವು. ಆದರೂ, ಅಮರನಾಥ ಕ್ಷೇತ್ರಕ್ಕೆ ಯಾತ್ರಾಥರ್ಿಗಳನ್ನು ಒಂದು ಸಮ್ಮಿಳಿತ ವಿಪತ್ತು ಉಪಶಮನ ಯೋಜನೆಯೊಂದಿಗೆ ನಿಯಂತ್ರಿಸಿರುವಂತೆ, ಇಲ್ಲಿ ಅಂತಹ ಒಂದು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿಯೇ ಇಲ್ಲ; ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ. ಇಂತಹ ನಿಯಂತ್ರಣಗಳನ್ನು ದೇಶದ ಎಲ್ಲ ಯಾತ್ರಾಸ್ಥಳಗಳಲ್ಲಿ ರೂಪಿಸಬೇಕು ಮತ್ತು ಜಾರಿಗೊಳಿಸಬೇಕು.
‘ರಾಂಬೋ’ ಮಾದರಿ ಬೇಡ
ಕೆಲವು ರಾಜಕಾರಣಿಗಳು ವಿಪತ್ತು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಅದರ ಪ್ರಯೋಜನ ಗಿಟ್ಟಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ನರೇಂದ್ರ ಮೋದಿಯ ಮಾಧ್ಯಮ ನಿರ್ವಹಣಾ ಯಂತ್ರ ಅವರು ಹಾಲಿವುಡ್ನ ‘ರಾಂಬೋ’ ಮಾದರಿಯಲ್ಲಿ 15,000 ಮಂದಿಯನ್ನು ಕಾಪಾಡಿರುವುದಾಗಿ ಬಿಂಬಿಸಿದೆ. ಈ ಮಹಾವಿಪತ್ತಿಗೆ ತುತ್ತಾದ ಜನಗಳನ್ನು ಉಳಿಸಲು ಮತ್ತು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಅಪಾರ ಪ್ರಯತ್ನಗಳು ಮತ್ತು ಶಕ್ತಿ ಅಗತ್ಯವಿರುವಾಗ ಅವರಿಗೆ ಸಾಂತ್ವನ ಮತ್ತು ಸೌಹಾರ್ದ ವ್ಯಕ್ತಪಡಿಸುವ ಹೆಸರಿನಲ್ಲಿ ವಿಐಪಿಗಳ ಭೇಟಿ ಅಂತಹ ಕೆಲಸಗಳಿಗೆ ಅಡ್ಡಿಯುಂಟು ಮಾಡುತ್ತವಷ್ಟೇ.
ಈ ವಿಷಯದಲ್ಲಿ ದೇಶದ ವಿಮಾನ ಪಡೆ ಬೃಹತ್ ಪ್ರಮಾಣದಲ್ಲಿ ರಕ್ಷಣಾ ಕಾಯರ್ಾಚರಣೆಗಳನ್ನು ನಡೆಸಿದೆ. ಅದು ಕಳೆದ ವಾರ 45 ವಿಮಾನಗಳನ್ನು ಕೆಲಸಕ್ಕಿಳಿಸಿ ಒಂದು ಸಾವಿರಕ್ಕೂ ಹೆಚ್ಚು ಗಂಟೆಗಳ ಹಾರಾಟದಲ್ಲಿ 12,000 ಯಾತ್ರಾಥರ್ಿಗಳನ್ನು ಕಾಪಾಡಿದೆ. “ನಮ್ಮ ಹೆಲಿಕಾಪ್ಟರುಗಳ ತಿರುಗುಚಕ್ರಗಳು ನಿಮ್ಮಲ್ಲಿ(ಸಿಲುಕಿಕೊಂಡ ಯಾತ್ರಾಥರ್ಿಗಳು ಮತ್ತು ಸ್ಥಳೀಯರಲ್ಲಿ) ಪ್ರತಿಯೊಬ್ಬರನ್ನೂ ಸಾಗಿಸುವವರೆಗೆ ನಿಲ್ಲುವುದಿಲ್ಲ, ಆಸೆ ಕಳಕೊಳ್ಳಬೇಡಿ, ಅಲ್ಲೇ ಇರಿ” ಎಂದು ವಿಮಾನ ಪಡೆಯ ಸೇನಾಪತಿಗಳು ಸೋಮವಾರ ಹೇಳಿದ್ದಾರೆ. ಅದೇ ರೀತಿ, ಸೇನಾಪಡೆಗಳು ಮತ್ತು ಇಂಡೋ-ಟಿಬೇಟನ್ ಗಡಿ ಪೋಲೀಸ್ ಪಡೆಗಳವರು ಅಷ್ಟೇ ಅಸಾಮಾನ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಲಿಪ್ಯಾಡುಗಳು ಇಂತಹ ವಿಪತ್ತುಗಳ ಸಮಯದಲ್ಲಿ ಜನಗಳನ್ನು ಸುರಕ್ಷಿತ ಸ್ಥಳಗಳಿಗೆ ತ್ವರಿತವಾಗಿ ಸಾಗಿಸುವಲ್ಲಿ ಬಹಳ ಮಹತ್ವದ್ದಾಗುತ್ತವೆ. ಇಂತಹ ಹೆಲಿಪ್ಯಾಡ್ಗಳನ್ನು ನಿಮರ್ಿಸಬೇಕೆಂಬ ಸಂಸದೀಯ ಸ್ಥಾಯೀ ಸಮಿತಿಯ ಶಿಫಾರಸುಗಳ ಜಾರಿಯಾಗಿದ್ದಿದ್ದರೆ ಈ ರಕ್ಷಣಾ ಕೆಲಸ ಸುಲಭವಾಗುತ್ತಿತ್ತು.
ನಮ್ಮ ಸೋದರ ಸೋದರಿಯರ ಸಾವಿಗೆ ಮರುಗುತ್ತಲೇ, ಅವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತಲೇ, ಬದುಕುಳಿಯುವ ಹೋರಾಟದಲ್ಲಿರುವವರಿಗೆ ಹಾದರ್ಿಕ ಸೌಹಾರ್ದವನ್ನು ವ್ಯಕ್ತಪಡಿಸುತ್ತಲೇ ಮತ್ತು ಎಲ್ಲ ರೀತಿಯ ನೆರವುಗಳನ್ನು ಒದಗಿಸಲು ಮುಂದೆ ಬರುತ್ತಿರುವಾಗಲೇ, ದೇಶ ಅಮೂಲ್ಯ ಜೀವಗಳನ್ನು ಉಳಿಸಲು ಮತ್ತು ಅಪಾಯದಲ್ಲಿ ಸಿಲುಕಿಕೊಂಡಿರುವ ಜನಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ತನ್ನೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕಾಗಿದೆ. ಇದಕ್ಕೆ ಧನ ಸಹಾಯ, ಇತರ ಸಾಮಗ್ರಿಗಳ ಸಹಾಯವಲ್ಲದೆ, ಸರಕಾರಗಳು ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳು ನಮ್ಮ ಪರಿಸರ, ಅರಣ್ಯಗಳು ಇನ್ನಷ್ಟು ನಾಶವಾಗುವುದನ್ನು ತಡೆಯಲು ಕಟಿಬದ್ಧರಾಗಬೇಕು, ನಮ್ಮ ನದಿಗಳ ಕನಿಷ್ಟ ಪರಿಸರ ಪ್ರವಾಹಗಳ ಒಂದು ವೈಜ್ಞಾನಿಕ ವ್ಯವಸ್ಥೆಯನ್ನು ರೂಪಿಸಬೇಕು, ಮತ್ತು ಧಾಮರ್ಿಕ ಪ್ರವಾಸಕ್ಕೆ ಒಂದು ಸುರಕ್ಷಣಾ ನಿಯಂತ್ರಣಗಳ ವ್ಯವಸ್ಥೆಯನ್ನು ಕಲ್ಪಿಸಬೇಕು.
ಈ ನೈಸಗರ್ಿಕ ವಿಪತ್ತಿಗೆ ತುತ್ತಾದವರ ನೆರವಿಗೆ ಹಣ ಮತ್ತು ಸಾಮಗ್ರಿಗಳ ಸಂಗ್ರಹಕ್ಕೆ ಸಿಪಿಐ(ಎಂ) ನೀಡಿರುವ ಕರೆಗೆ ಸ್ಪಂದಿಸಬೇಕು ಎಂದು ನಮ್ಮೆಲ್ಲ ಓದುಗರನ್ನು ನಾವು ವಿನಂತಿಸಿಕೊಳ್ಳುತ್ತೇವೆ.
0