ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗಸೂಚಿ ಸಿದ್ಧಪಡಿಸಲು| ನಿರಂಜನಾರಾಧ್ಯ.ವಿ.ಪಿ ಒತ್ತಾಯ

ಬೆಂಗಳೂರು: ರಾಜ್ಯ ಸರ್ಕಾರವು ಶಿಕ್ಷಣ ಹಕ್ಕು ಕಾಯಿದೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗಸೂಚಿ ಸಿದ್ಧಪಡಿಸಬೇಕೆಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ) ಪ್ರಧಾನ ಸಂಚಾಲಕ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಮಾರ್ಗಸೂಚಿ 

ಇದನ್ನೂ ಓದಿ:ಶಿಕ್ಷಣ ವ್ಯವಸ್ಥೆ ಕೆಟ್ಟ ಸ್ಥಿತಿಯಿಂದ ಶೋಚನೀಯ ಪರಿಸ್ಥಿತಿಗೆ ಕಾಲಿಡಲಿದೆ: ನಿರಂಜನಾರಾಧ್ಯ

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಶಾಲೆಯ ಸಮಯವನ್ನು ಮರುಪರಿಶೀಲಿಸುವ ಬಗ್ಗೆ ಗೌರವಾನ್ವಿತ ಹೈಕೋರ್ಟ್ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮೂಲಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಟ್ರಾಫಿಕ್ ದಟ್ಟಣೆ ಸಮಸ್ಯೆಗೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯಿದೆ 2009 ರಲ್ಲಿನ ನೆರೆಹೊರೆ ಶಾಲೆಯ ಅವಕಾಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಕಾರಣ ಬೆಳಿಗ್ಗೆ ಮತ್ತು ಸಂಜೆ ಶಾಲಾ ಸಮಯದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಗಳು ಉದ್ಭವಿಸುತ್ತವೆ ಎಂದರು.

ಸಂವಿಧಾನದಲ್ಲಿ ಶಿಕ್ಷಣವು ಮೂಲಭೂತ ಹಕ್ಕಾಗಿದೆ. 2009 ರಲ್ಲಿ ಅದನ್ನು ಜಾರಿಗೆ ತರಲು ಕಾನೂನನ್ನು ಜಾರಿಗೊಳಿಸಲಾಯಿತು. ಆರ್‌ಟಿಇ ಕಾಯಿದೆ ಸೆಕ್ಷನ್ 3(1) ರಲ್ಲಿ ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಪ್ರತಿ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನೆರೆಹೊರೆಯ ಶಾಲೆಯಲ್ಲಿ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇದಲ್ಲದೆ 2012 ರ ರೂಪಿಸಿದ ಕರ್ನಾಟಕದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನಿಯಮಗಳಲ್ಲಿ ನೆರೆಹೊರೆಯ ವ್ಯಾಖ್ಯಾನವನ್ನು ಸೂಚಿಸಲಾಗಿದೆ.

ಆರ್‌ಟಿಇ ಕಾಯ್ದೆಯು , ಮಕ್ಕಳ ಶಾಲಾ ಪ್ರವೇಶಕ್ಕಾಗಿ ನಗರ ಪ್ರದೇಶಗಳಲ್ಲಿ ನೆರೆಹೊರೆಯನ್ನು ವ್ಯಾಖ್ಯಾನಿಸುವ ಉದ್ದೇಶಕ್ಕಾಗಿ , ಸ್ಥಳೀಯ ಪ್ರಾಧಿಕಾರವು ಆಡಳಿತ ಉದ್ದೇಶಕ್ಕಾಗಿ ಅಧಿಸೂಚಿಸುವ ವಾರ್ಡ್‌ನ ಪ್ರದೇಶವನ್ನು ನೆರೆಹೊರೆ ಎಂದು ನಿಯಮ 4 ರಲ್ಲಿ ಸ್ಪಷ್ಟವಾಗಿ ಸೂಚಿಸಿದೆ.

ಇದನ್ನೂ ಓದಿ:ಶಾಲಾ ಶಿಕ್ಷಣ ಸಚಿವರಿಗೆ ಕಲಿಕೆಯ ಸ್ವರೂಪದ ಬಗ್ಗೆ ತಿಳುವಳಿಕೆ ಕೊರತೆ: ನಿರಂಜನಾರಾಧ್ಯ.ವಿ.ಪಿ

ದುರದೃಷ್ಟವೆಂದರೆ , ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯಿದೆ ಹಾಗು ನಿಯಮಗಳ ಅವಕಾಶಗಳನ್ನು ಜಾರಿಗೆ ತರಲು ಶಾಲೆಗಳ ವಿವರವಾದ ಮ್ಯಾಪಿಂಗ್ (ಸ್ಕೂಲ್ ಮ್ಯಾಪಿಂಗ್) ಸಿದ್ಧಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಶಿಕ್ಷಣ ಇಲಾಖೆಯ ಈ ವೈಫಲ್ಯದಿಂದ ನಗರ ಪ್ರದೇಶಗಳಲ್ಲಿ ಶಾಲೆಗಳಿಗೆ ಸುಮಾರು 2 ರಿಂದ 15-20 ಕಿಲೋಮೀಟರ್ ದೂರದವರೆಗೆ ಮಕ್ಕಳು ಪ್ರಯಾಣಿಸಲು ಖಾಸಗಿ ವಾಹನಗಳನ್ನು ಅಪಾರ ಸಂಖ್ಯೆಯಲ್ಲಿ ಬಳಸುವುದರಿಂದ ಟ್ರಾಫಿಕ್ ಜಾಮ್ ಮತ್ತು ದಟ್ಟಣೆ ಉಂಟಾಗಿದೆ ಎಂದು ಹೇಳಿದರು.

ಆದ್ದರಿಂದ, ನಗರ ಪ್ರದೇಶದ ವಾರ್ಡ್‌ನಲ್ಲಿರುವ ನೆರೆಹೊರೆಯ ಶಾಲೆ/ಗಳ ಮ್ಯಾಪಿಂಗ್ ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಿಕೆಯು , ಮಕ್ಕಳು ಯಾವುದೇ ಸಾರಿಗೆಯನ್ನು ಅವಲಂಬಿಸದೆ ಮಕ್ಕಳು ತಮ್ಮ ನೆರೆಹೊರೆಯ ಶಾಲೆಗೆ ಕಾಲ್ನಡಿಗೆಯಲ್ಲಿ ನಡೆಯಲು ಅನುವು ಮಾಡಿಕೊಡುತ್ತದೆ.ಇದು ಸಮಸ್ಯೆಗೆ ನಿಜವಾದ ಮತ್ತು ಶಾಶ್ವತ ಪರಿಹಾರವನ್ನು ಒದಗಿಸುತ್ತದೆ .

ಆದ್ದರಿಂದ, ರಾಜ್ಯದಲ್ಲಿ ಆರ್‌ಟಿಇ ಕಾಯಿದೆಯ ಪರಿಣಾಮಕಾರಿ ಅನುಷ್ಠಾನವು ಶಾಲಾ ಶಿಕ್ಷಣ ಕ್ಷೇತ್ರದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ , ಸಮಸ್ಯೆಗೆ ದೀರ್ಘಾವಧಿಯ ಪರಿಹಾರವನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರವು ಶಿಕ್ಷಣ ಹಕ್ಕು ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗಸೂಚಿಯನ್ನು (Roadmap ) ಸಿದ್ಧಪಡಿಸಲು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿಡಿಯೋ ನೋಡಿ:Karnataka Budget 2023 ರಾಜ್ಯ ಬಜೆಟ್‌ಗೆ ಜನರ ಪ್ರತಿಕ್ರಿಯೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *