ಕಿಲ್ಲರ್ ಅಂಡರ್‌ಪಾಸ್‌ : ಬೆಂಗಳೂರಿನಲ್ಲಿವೆ 28 ಡೇಂಜರ್ ಅಂಡರ್‌ಪಾಸ್‌ಗಳು

ಗುರುರಾಜ ದೇಸಾಯಿ

ಕೆ.ಆರ್​.ಸರ್ಕಲ್‌ನ ಕೆಳಸೇತುವೆಯ ನೀರಿನಲ್ಲಿ ಕಾರು ಸಿಲುಕಿಕೊಂಡು ಮೃತಪಟ್ಟ ಭಾನುರೇಖಾ ಘಟನಾವಳಿ ಜನರ ಕಣ್ಣಲ್ಲಿ ನೀರು ಬರಿಸುತ್ತು, ಆ ದೃಶ್ಯ ನೆನಪಿಸಿಕೊಂಡು ಅದೆಷ್ಟೋ ಜನ ನಿದ್ದೆ ಮಾಡದೆ ಕೊರಗಿದ್ದು ಇದೆ. ಎಲ್ಲಾದಾರು ನಾವು ಓಡಾಡುವಾಗ ಅಂಡರ್‌ಪಾಸ್‌ ಕಂಡರೆ ಹೃದಯ ಹಿಂಡಿದಂತಾಗುತ್ತದೆ, ಅದಕ್ಕೆಲ್ಲಾ ಕಾರಣ ಬೆಂಗಳೂರಿನ ಡೇಂಜರಸ್‌ ಅಂಡರ್‌ಪಾಸ್‌ಗಳು….

ಹೌದು ವೀಕ್ಷಕರೆ,  ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 53 ಅಂಡರ್​ಪಾಸ್​ಗಳಿವೆ. ಅದರಲ್ಲಿ 18 ರೈಲ್ವೇ ಬ್ರಿಡ್ಜ್ ಅಂಡರ್​ಪಾಸ್ ಹಾಗೂ 35 ರಸ್ತೆ ಅಂಡರ್​ಪಾಸ್​ಗಳಾಗಿವೆ. ಈ 53 ಅಂಡರ್‌ಪಾಸ್‌ಗಳ ದುರಸ್ತಿಗೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಇನ್ನೂ ನಮ್ಮ ಬಿಬಿಎಂಪಿ ಅಧಿಕಾರಿಗಳ ಕಥೆ ಬಿಡಿ ಹೆಣ ಬೀಳೋವೆರೆಗೂ ಅವರು ಎಚ್ಚೆತ್ತುಕೊಳ್ಳಲ್ಲ ಅಂತಾ ಕಾಣ್ಸುತ್ತೆ. ಬಾನುರೇಖಾ ಸಾವಿನ ನಂತರ ಬಿಬಿಎಂಪಿ ಅಂಡರ್​ಪಾಸ್​ ಅಡಿಟ್​​​ನಲ್ಲಿ ಬೆಚ್ಚಿಬೀಳುವ ಮಾಹಿತಿ ಬಹಿರಂಗಗೊಂಡಿದೆ. 53 ಅಂಡರ್‌ಪಾಸ್‌ನಲ್ಲಿ ಮಳೆಗಾಳದಲ್ಲಿ ಓಡಾಡಲು ಯೋಗ್ಯವಲ್ಲದ 38 ಅಂಡರ್‌ಪಾಸ್‌ಗಳು ಇವೆ ಎಂಬ ಮಾಹಿತಿ ಜನರನ್ನು ಬೆಚ್ಚಿ ಬೀಳಿಸಿದೆ.

ಬೆಂಗಳೂರು ನಗರದ ಡೆಡ್ಲಿ ಅಂಡರ್​​ಪಾಸ್​​ಗಳು ಯಾವವು? ಎಲ್ಲಿವೆ ಎಂಬುದರ ಮಾಹಿತಿಗೆ ಜನಶಕ್ತಿ ಮೀಡಿಯಾ ತಂಡ ಹೊರಟಾಗ ಸಿಕ್ಕ ಮಾಹಿತಿಗಳು ಜೀವವನ್ನು ಕೈಯಲ್ಲಿಡುದುಕೊಳ್ಳುವಂತೆ ಮಾಡಿದೆ.  ಮಳೆ ಬಂತು ಅಂದ್ರೆ ಓಕಳಿಪುರಂ ಅಂಡರ್‌ಪಾಸ್‌ ಕೆರೆಯಂತಾಗಿಬಿಡುತ್ತೆ. 300 ಮೀಟರ್‌ಗೂ ಹೆಚ್ಚು ದೊಡ್ಡದಿರುವ ಈ ಅಂಡರ್‌ಪಾಸ್‌ನಲ್ಲಿ 50 ಮೀಟರ್‌ನಷ್ಟು ಜಾಗದಲ್ಲಿ 5 ಅಡಿಗೂ ಹೆಚ್ಚು ನೀರು ನಿಲ್ಲುತ್ತದೆ. ಗೊತ್ತಿಲ್ಲದೆ ಅಂಡರ್‌ಪಾಸ್‌ನೊಳಗೆ ನುಗ್ಗಿ ಬಿಟ್ಟರೆ ವಾಪಸ್‌ ಬರೋದೀಕ್ಕೆ ಚಾನ್ಸ್‌ ಇಲ್ಲವೇ ಇಲ್ಲ.

ಕೆಆರ್‌ ಸರ್ಕಲ್‌ನ ಅಂಡರ್‌ಪಾಸ್‌ ಕಥೆಯೂ ಇದೆ ಆಗಿದೆ. ಅವೈಜ್ಞಾನಿಕವಾಗಿ ಇದನ್ನೂ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಸುತ್ತಲು ಐದಾರು ರಸ್ತೆಗಳಿರುವ  ಕಾರಣ, ಆ ರಸ್ತೆಯ ನೀರು ಈ ಅಂಡರ್‌ಪಾಸ್‌ನೊಳಗೆ ನುಗ್ಗಿ ಹೋಗಲು ದಾರಿ ಇಲ್ಲದೆ, ಮಳೆ ನಿಂತ ಮೇಲೂ ಗಂಟೆಗಳವೆರೆಗೆ ನೀರು ನಿಂತುಕೊಂಡೆ ಇರುತ್ತೆ. ವಿಧಾನಸೌಧ ಹತ್ತಿರ ಇರುವ ಈ ಅಂಡರ್‌ಪಾಸ್‌ ಕಥೆಯೇ ಹೀಗಾದರೆ ಉಳಿದ ಅಂಡರ್‌ಪಾಸ್‌ಗಳ ಬಗ್ಗೆ ಸರಕಾರದ ಕಾಳಜಿ ಎಂತದ್ದು ಎಂದು ಯೋಚಿಸಿ.

ಅರಮನೆ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಕೆಳಸೇತುವೆಯಲ್ಲಿ ಕಂಡುಬಂದ ಗುಹೆ

ಇನ್ನೂ ಅರಮನೆ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಕೆಳಸೇತುವೆ ಕಿಲ್ಲರ್‌ ಅಂಡರ್‌ ಪಾಸ್‌ ಎಂದು ಕರೆಯಿಸಿ ಕೊಳ್ಳುತ್ತಿದೆ. ಹಲವು ಅಪಘಾತಗಳು ಸಂಭವಿಸಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಅಂಡರ್‌ಪಾಸ್‌ನಲ್ಲಿರುವ ದೊಡ್ಡದಾದ ಗುಹೆ ನೀರನ್ನು ಇಲ್ಲಿಯೇ ನಿಲ್ಲುವಂತೆ, ಈ ಗುಹೆ ಬಿಬಿಎಂಪಿ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಬರೋಬ್ಬರಿ 6 ಅಡಿ ಎತ್ತರ ಇರುವ ಈ ಗುಹೆ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುವಂತೆ ಮಾಡುತ್ತಿದೆ ಎಂಬ ಮಾಹಿತಿ ಬಿಬಿಎಂಪಿಗೆ ಇದೆಯೋ ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.

ಇನ್ನೂ ಬಸವನಗುಡಿಯ ಟ್ಯಾಗೋರ್ ಸರ್ಕಲ್ ಅಂಡರ್ ಪಾಸ್ ಕೂಡಾ ಡೆಡ್ಲಿ ಅಂಡರ್‌ ಪಾಸ್‌ ಆಗುತ್ತಿದೆ. ಪಕ್ಕದ ಗಾಂಧಿ ಬಜಾರ್‌ನಲ್ಲಿ ನಡೆದ ರಸ್ತೆ ಅಗಲೀಕರಣ, ಹಾಗೂ ಸುತ್ತಮುತ್ತಲಿನಲ್ಲಿ ಚರಂಡಿ ಸರಿಯಾಗಿ ದುರಸ್ತಿ ಕಾಣದ ಪರಿಣಾಮ ಮಳೆ ಬಂದರೆ ಹೆಚ್ಚು ನೀರು ತುಂಬಿಕೊಳ್ಳುತ್ತಿದೆ ಎಂಬ ಅರೋಪ ಕೇಳಿ ಬಂದಿದೆ. ಜಾಗ ಒತ್ತುವರಿ, ಭೈ ಮಾಫೀಯಾ ಹಾವಳಿಯೂ ಇದಕ್ಕೆ ಕಾರಣವಾಗಿದೆ. ಅವೈಜ್ಞಾನಿಕ ನಿರ್ವಹಣೆ, ಬಿಬಿಎಂಪಿ ನಿರ್ಲಕ್ಷ್ಯ , ಸರಕಾರಕ್ಕೆ ಕಾಳಜಿ ಇಲ್ಲದಿರುವುದು ಅನುಹುತ ನಡೆಯುವುದಕ್ಕೆ ಕಾರಣವಾಗುತ್ತಿವೆ.

ಡೇಂಜರ್ ಅಂಡರ್​ಪಾಸ್​​ಗಳು ಯಾವವು :2023-24ನೇ ಸಾಲಿನಲ್ಲಿ ಬಿಬಿಎಂಪಿ ಮಂಡನೆ ಮಾಡಿರುವ ಬಜೆಟ್​​ನಲ್ಲಿ ಉಲ್ಲೇಖಿಸಿರುವ ಪ್ರಕಾರ ನಗರದಾದ್ಯಂತ 42 ಫ್ಲೈಓವರ್​ಗಳು, 53 ಅಂಡರ್​ಪಾಸ್​​ಗಳು ಇವೆ. ಅದರಲ್ಲಿ 28 ಡೇಂಜರ್‌ ಅಂಡರ್‌ ಪಾಸ್‌ಗಳು.  ಅವುಗಳ ವಿವರ ಇಲ್ಲಿದೆ.

ಗುಟ್ಟಹಳ್ಳಿ – ಕಾವೇರಿ ಜಂಕ್ಷನ್ ಅಂಡರ್​​ಪಾಸ್ (2013)

ಸಿವಿ ರಾಮನ್ ರಸ್ತೆ – ಸಿಎನ್‌ಆರ್ ರಾವ್ ಅಂಡರ್ ಪಾಸ್ (2014)

ಹೊಸಕೆರೆಹಳ್ಳಿ – ಮುತ್ತುರಾಜ್ ಜಂಕ್ಷನ್ ಅಂಡರ್ ಪಾಸ್ (2019)

ಬನ್ನೇರುಘಟ್ಟ ರಸ್ತೆ – ಡೈರಿ ಸರ್ಕಲ್ ಅಂಡರ್ ಪಾಸ್ (2004)

ರಾಜಾಜಿನಗರ – ಡಾ. ರಾಜ್‌ಕುಮಾರ್ ರಸ್ತೆ ಕೆಳಸೇತುವೆ (2017)

ಜೆಪಿ ನಗರ – ಜಿಆರ್ ವಿಶ್ವನಾಥ್ ಅಂಡರ್ ಪಾಸ್ (2011)
ಹಳೆಯ ವಿಮಾನ ನಿಲ್ದಾಣ ರಸ್ತೆ – ಎಚ್​ಎಎಲ್ (2023)

ಹೆಣ್ಣೂರು – ಹೆಣ್ಣೂರು ಅಂಡರ್ ಪಾಸ್

ಹೊರಮಾವು – ಹೊರಮಾವು ಅಂಡರ್ ಪಾಸ್

ಬನ್ನೇರುಘಟ್ಟ ರಸ್ತೆ – ಜಯದೇವ ಆಸ್ಪತ್ರೆ ಕೆಳಸೇತುವೆ (2006)

ಉತ್ತರಹಳ್ಳಿ – ಕಡೇರನಹಳ್ಳಿ ಅಂಡರ್ ಪಾಸ್ (2012)

ಕಾಡುಬೀಸನಹಳ್ಳಿ – ಕಾಡುಬೀಸನಹಳ್ಳಿ ಅಂಡರ್ ಪಾಸ್ (2012)

ಬಸವೇಶ್ವರನಗರ – ಕೆಎಚ್​ಬಿ ಜಂಕ್ಷನ್ ಅಂಡರ್‌ಪಾಸ್ (2017)

ಕೆಆರ್ ಸರ್ಕಲ್ – ಕೆಆರ್ ಸರ್ಕಲ್ ಅಂಡರ್ ಪಾಸ್ (2009)
ಕುಂದಲಹಳ್ಳಿ – ಕುಂದಲಹಳ್ಳಿ ಅಂಡರ್ ಪಾಸ್ (2022)

ಹೊರ ವರ್ತುಲ ರಸ್ತೆ – ಕುವೆಂಪು ವೃತ್ತದ ಕೆಳಸೇತುವೆ

ಲಗ್ಗೆರೆ – ಲಗ್ಗೆರೆ ಅಂಡರ್ ಪಾಸ್ (2020)

ಮಡಿವಾಳ – ಮಡಿವಾಳ ಅಂಡರ್ ಪಾಸ್ (2010)

ವಿಜಯನಗರ – ಮಾಗಡಿ ರಸ್ತೆ ಟೋಲ್‌ಗೇಟ್ ಅಂಡರ್‌ಪಾಸ್ (2009)

ಅರಮನೆ ರಸ್ತೆ – ಮಹಾರಾಣಿ ಕಾಲೇಜು ಕೆಳಸೇತುವೆ (2009)

ಮಲ್ಲೇಶ್ವರಂ – ಮಲ್ಲೇಶ್ವರಂ ಅಂಡರ್ ಪಾಸ್ (2008)

ಬಳ್ಳಾರಿ ರಸ್ತೆ – ಮೇಖ್ರಿ ವೃತ್ತ (2001)

ನಾಗರಭಾವಿ – ನಾಗರಭಾವಿ ಅಂಡರ್ ಪಾಸ್ (2009)

ನಾಯಂಡಹಳ್ಳಿ – ನಾಯಂಡಹಳ್ಳಿ ಅಂಡರ್ ಪಾಸ್ (2010)

ರಾಜಾಜಿನಗರ – ರಾಜಾಜಿನಗರ ಪ್ರವೇಶ ಅಂಡರ್‌ಪಾಸ್ (2004)

ರಾಜಾಜಿನಗರ – ಸ್ಟಾರ್ ಸರ್ಕಲ್ ಅಂಡರ್ ಪಾಸ್ (2004)

ರಾಮಮೂರ್ತಿ ನಗರ – ರಾಮಮೂರ್ತಿ ನಗರ ಕೆಳಸೇತುವೆ

ವಸಂತ ನಗರ – ಸ್ಯಾಂಕಿ ರಸ್ತೆ ಅಂಡರ್‌ಪಾಸ್ (2008)

ಬಸವನಗುಡಿ – ಟ್ಯಾಗೋರ್ ಸರ್ಕಲ್ ಅಂಡರ್ ಪಾಸ್ (2012)

ಈಗಲಾದರೂ ಬಿಬಿಎಂಪಿ ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಂದು ಅನಾಹುತ ನಡೆಯುವ ಮುನ್ನ ಶಾಶ್ವತ ಪರಿಹಾರಕ್ಕೆ ಯೋಜನೆಯನ್ನು ರೂಪಿಸಬೇಕಿದೆ. ಪಕ್ಷಬೇಧವನ್ನು ಮರೆತು ರಾಜಕೀಯ ನಾಯಕರು ಇತರೆ ರಾಜ್ಯಗಳಲ್ಲಿರುವ ಮಾದರಿಗಳನ್ನು ಅಧ್ಯಯನ ನಡೆಸಿ, ಸಾವಿನ ದವಡೆಯಲ್ಲಿರುವ ಜನರನ್ನು ರಕ್ಷಿಸಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *