ಬೆಂಗಳೂರು: ಎಲ್ ಕೆ ಜಿ ಯಿಂದ ಉನ್ನತ ಶಿಕ್ಷಣ ವರೆಗೆ ಎಲ್ಲಾ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ನೀಡಲು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ರಾಜ್ಯ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ.
ಭಾರತ ವಿದ್ಯಾರ್ಥೀ ಫೆಡರೇಷನ್ (SFI) ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ರಾಜ್ಯದ್ಯಾಂತ ಉಚಿತ ಬಸ್ ಪಾಸ್ ಹಾಗೂ ಉಚಿತ ಶೀಕ್ಷಣಕ್ಕಾಗಿ ಪ್ರತಿಭಟನೆಯನ್ನು ನಡೆಸುತ್ತಾ ಬಂದಿದೆ ಆದರೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದನೆ ನೀಡುತ್ತಿಲ್ಲ. ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಶಾಲಾ-ಕಾಲೇಜುಗಳಲ್ಲಿ ಅನಧಿಕೃತ ಶುಲ್ಕ ಏರಿಕೆಗಳಿಂದ ರೈತ, ಕೃಷಿ-ಕೂಲಿಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವುದರ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಮೂಟಕುಗೊಳಿಸಿ ಕೂಲಿ ಕೆಲಸ ಅರಸಿ ದೊಡ್ಡ ದೊಡ್ಡ ನಗರ ಪ್ರದೇಶಗಳತ್ತ ಹೋಗುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆ ಕರೆದು ಡೊನೇಷನ್ ಹಾವಳಿ ತಡೆಯಬೇಕು ಮತ್ತು ಪ್ರವೇಶ ಶುಲ್ಕ ಕಡಿತ ಗೊಳಿಸುವುದು ಹಾಗೂ ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ಕೊಡಲು ಮುಂದಾಗಬೇಕು.
ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ನ್ನು ನೀಡಬೇಕೆಂದು ಬಾರತ ವಿದ್ಯಾರ್ಥಿ ಫೆಡರೇಷನ್ (SFI) ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಇದರ ಭಾಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಎಸ್ಸಿ\ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್ನ್ನು ಮತ್ತು ಇತರರಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ ನೀಡುವ ತಿರ್ಮಾನವನ್ನು ಮಾಡಿ ನೀಡುತ್ತಿದೆ ಆದರೆ ಇತರೆ ವಿದ್ಯಾರ್ಥಿಗಳನ್ನು ಪ್ರತ್ಯೆಕಿಸುವಂತಹ ಕೆಲಸವನ್ನು ಈಗೀನ ರಾಜ್ಯ ಸರ್ಕಾರ ಮಾಡಬಾರದು. ಯಾವುದೇ ಸರ್ಕಾರ ಆದರೂ ಕೂಡಾ ವಿದ್ಯಾರ್ಥಿ ಸಮುದಾಯದ ಮಧ್ಯೆ ತಾರತಮ್ಯ ಹುಟ್ಟು ಹಾಕುವ ಪ್ರವೃತ್ತಿಯನ್ನು ತಡೆಯಬೇಕು ವಿದ್ಯಾರ್ಥಿ ಸಮುದಾಯಕ್ಕೆ ದೂರಕಬೇಕಾದ ಎಲ್ಲ ಸೌಲಭ್ಯ ಸವಲತ್ತುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ದೂರಕುವಂತೆ ಮಾಡಬೇಕು ಆದ್ದರಿಂದ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಎಸ್ಎಫ್ಐ ಆಗ್ರಹಿಸುತ್ತದೆ.
ರಾಜ್ಯದಲ್ಲಿ ಕೋವಿಡ್ ಕಾಲದಿಂದಲೂ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಬಸ್ ಪಾಸ್ ಪ್ರಯಾಣದರ ಇತರೆ ರಾಜ್ಯಗಳಿಗಿಂತ ದುಬಾರಿಯಾಗಿದೆ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಹಾಗಾಗಿ ಬಡವಿದ್ಯಾರ್ಥಿಗಳ ಎಲ್ಲಾ ಹಂತದ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು, ಉಚಿತ ಶಿಕ್ಷಣವನ್ನು ನೀಡಬೇಕು ಮತ್ತು ಕೇರಳ, ತಮಿಳುನಾಡು ಮಾದರಿಯಲ್ಲಿ ಉನ್ನತ ಶಿಕ್ಷಣದವರೆಗೂ ಉಚಿತ ಪಾಸ್ನ್ನು ನೀಡಬೇಕು, ಬಸ್ ಪಾಸ್ ದೂರದ ಮಿತಿಯನ್ನು 60ಕೀ ಮೀ ಗೆ ಬದಲಾಗಿ 100 ಕೀ ಮಿ ಗೆ ಹೆಚ್ಚಿಸಬೇಕು, ಅಹಿಂದ ಪರ ಸರ್ಕಾರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ – ಉಚಿತ ಪ್ರಯಾಣ ಬೇಡಿಕೆಯನ್ನು ಈಡೇರಿಸಿ ಬಡ ವಿದ್ಯಾರ್ಥಿಗಳ ಪರ ನಿಲ್ಲಬೇಕಾಗಿದೆ.
ರಾಜ್ಯ ಸರಕಾರ ಉಚಿತ ಬಸ್ ಬೇಡಿಕೆಯನ್ನು ಈಡೇರಿಸದೆ ಇದ್ದರೆ ರಾಜ್ಯಾದ್ಯಂತ ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡಿ ಸಾಮೂಹಿಕವಾಗಿ ಬಸ್ ಹತ್ತಿ ಟಿಕೆಟ್ ಪಡೆಯದೇ ಪ್ರಯಾಣ ಮಾಡುವ ವಿನೂತನ ಹೋರಾಟವನ್ನು ಮಾಡತ್ತೆವೆ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕುವುದಾಗಿ SFI ರಾಜ್ಯಾದ್ಯಕ್ಷ ಅಮರೇಶ ಕಡಗದ, ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ, ಪದಾಧಿಕಾರಿಗಳಾದ ದಿಲೀಪ್ ಶೇಟ್ಟಿ, ಬಸವರಾಜ ಬೋವಿ, ಗಣೇಶ ರಾಠೋಡ್ ಪ್ರಕಟಣೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.