ಬಂಗಾರದ ಕುಸ್ತಿಪಟುಗಳು ಬದುಕನ್ನು ಬೀದಿಗೆ ತಂದ ಸಂಸದ

  – ಡಾ.ಕೆ.ಷರೀಫಾ

“ಬೇಟಿ ಬಚಾವೋ ಬೇಟಿ ಪಢಾವೋ” ಎನ್ನುವ ಪ್ರಧಾನಿಗೆ ಇದು ತಿಳಿದೇ ಇಲ್ಲವೇ? ಮಹಿಳೆಯರ ಸುರಕ್ಷತೆ ಅವರ ಕರ್ತವ್ಯವಲ್ಲವೇ? ಅವರ ಪಕ್ಷವೆಂದರೆ, ಬ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಕೊಲೆಗಡುಕರನ್ನು ರಕ್ಷಿಸುವ ಅಡಗುತಾಣವೇ?. ಘಟನಾಸ್ಥಳಕ್ಕೆ ಆರೋಪಿಯಲ್ಲದ ಸಹಾನುಭೂತಿಗಾಗಿ ಬಂದ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹುಡಾ ಅವರನ್ನು ದೆಹಲಿ ಪೋಲೀಸರು ಬಂಧಿಸಿರುವುದು ಯಾವ ನ್ಯಾಯ? ಅವರದೇ ಪಕ್ಷದ ಉತ್ತರ ಪ್ರದೇಶದ ಸಂಸದನಾದ ಆರೋಪಿ ಬ್ರಿಜಭೂಷಣ ಶರಣಸಿಂಗನನ್ನು ಯಾಕೆ ಬಂಧಿಸುತ್ತಿಲ್ಲವೆಂಬುದು ಜನತೆಯ ಪ್ರಶ್ನೆಯಾಗಿದೆ.

 

ಕುಸ್ತಿ ಬಾಕ್ಷಿಂಗ್ ಇವೆರಡೂ ಆಟಗಳು ಮೂಲತ: ದೈಹಿಕ ಶಕ್ತಿಯನ್ನು ಅವಲಂಬಿತ ಕ್ರೀಡೆಗಳು. ಪುರುಷ ಪ್ರಧಾನವಾದ ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ಸಮಾನವಾಗಿ ಈ ಕ್ರೀಡಾಪಟುಗಳು ನಿಂತರೂ ಸಹ, ಆದರೆ ಅದೇ ಮಹಿಳೆಯರು ಇಂದು ತನ್ನ ದೇಹವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಗೆಲ್ಲಲಾಗದೆ ರೋದಿಸುತ್ತಿರುವ ದೃಶ್ಯ ಮನ ಕಲಕುತ್ತದೆ. ಹೆಣ್ಣುಮಕ್ಕಳು ಹೀಗೆ ಹೋರಾಟಕ್ಕಿಳಿದರೂ ಸರ್ಕಾರ ಆರೋಪಿ ಬ್ರಿಜಭೂಷಣನ ವಿರುದ್ಧ ಕ್ರಮ ಕೈಕೊಳ್ಳಲು ಯಾಕೆ ಹಿಂಜರಿಯುತ್ತಿದೆ?. ಅವನ ವಿರುದ್ದ ತನಿಖೆ ನಡೆಸಲು ಯಾಕೆ ಹಿಂಜರಿಯುತ್ತಿದೆ? ಎಂಬುದು ಪ್ರಶ್ನೆ

ದೆಹಲಿಯ ಜಂತರ ಮಂತರ್ ನಲ್ಲಿ ತಿಂಗಳ ಮೇಲೆ ಧರಣಿ ಕೂತು ಕುಸ್ತಿ ಪಟು ಹೆಣ್ಣುಮಕ್ಕಳು ಸಂಸದನಾಗಿರುವ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲುಎಫ್‌ಐ)ನ ಅಧ್ಯಕ್ಷನಾದ ಬ್ರಿಜಭೂಷಣ ಶರಣಸಿಂಗ್ ವಿರುದ್ಧ ಕ್ರಿಡಾಪಟುಗಳು ಆರೋಪ ಮಾಡಿದರೂ ಸಹ ಇಲ್ಲಿಯವರೆಗೂ ಯಾಕೆ ಬಂಧಿಸಿಲ್ಲ ಎಂಬುದು ಜನತೆಯ ಪ್ರಶ್ನೆ. ಬ್ರಿಜ್ ಭೂಷಣ್ ಉತ್ತರ ಪ್ರದೇಶದ ಬಿಜೆಪಿ ಸಂಸದರಾಗಿದ್ದಾರೆ. ಅವರು ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ಒಂದು ಸ್ವಂತ ಹೆಲಿಕ್ಯಾಪ್ಟರ್ ಹೊಂದಿದ್ದಾರೆ. ಅಯೋಧ್ಯದಲ್ಲಿ ರಾಮಮಂದಿರ ವಿವಾದದಲ್ಲಿ ಬಂಧಿತರಾಗಿದ್ದರು. ಅವರ ಬಂಧನಕ್ಕೆ ಅಗ್ರಹಿಸಿ, ಅವರ ವಿರುದ್ಧ್ ಎಫ್.ಐ.ಆರ್ ದಾಖಲಿಸಬೇಕು ಮತ್ತು ತಮಗೆ ಭದ್ರತೆ ಒದಗಿಸಬೇಕೆಂದು ಈ ಕುಸ್ತಿ ಪಟುಗಳು ಎಪ್ರಿಲ್ ೨೩,೨೦೨೩ರಿಂದ ಹೋರಾಟ ನಡೆಸುತ್ತಿದ್ದಾರೆ. ಈ ಕ್ರೀಡಾಪಟುಗಳು ದೂರು ನೀಡಿ ಮೂರು ತಿಂಗಳಾದರೂ ಸಹ ದೆಹಲಿ ಪೋಲೀಸಲು ಎಫ್ ಐ ಆರ್ ದಾಖಲಿಸದಿರುವ ಹಿನ್ನೆಲೆಯಲ್ಲಿ ಈಗ ಸುಪ್ರೀಂ ಕೋರ್ಟ ಮಧ್ಯಪ್ರವೇಶಿಸಿದ ನಂತರ ದೆಹಲಿ ಪೋಲಿಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಈಗ ಬ್ರಿಜ್ ಭೂಷಣ್ ವಿರುಧ್ಧ ದಿನಾಂಕ ೨೮-೪-೨೩ ರಂದು ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ

ಬಿಜೆಪಿಯ ಸಂಸದ ಮತ್ತು ಬ್ರಿಜ್ ಭೂಷಣ್ ರನ್ನು ಬಂಧಿಸಿ ಕ್ರಮ ಕೈಕೊಳ್ಳುವಂತೆ ಕೋರಿ ಧರಣಿ ಕುಳಿತಿದ್ದಾರೆ. ಆ ಹೆಣ್ಣುಮಕ್ಕಳನ್ನು ಮಧ್ಯರಾತ್ರಿ ಹೆದರಿಸಲು ಬಂದ ಪೋಲೀಸರು ಬೀಸಿದ ಲಾಠಿಗಳಿಂದ ಹಲವಾರು ಕುಸ್ತಿ ಪಟುಗಳ ತಲೆಗೆ ಪೆಟ್ಟಾಗಿದೆ. ಈ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ದೇಶದ ಮಹಿಳೆಯರನ್ನು ಯಾವ ಸ್ಥಿತಿಗೆ ದೂಡುತ್ತಿವೆ. ಥೂ ಅಸಹ್ಯ. ಕುಡಿದು ಬಂದ ಪೋಲೀಸರು ಮಹಿಳೆಯರ ಮೇಲೆ ತೋರಿದ ದುರ್ವತನೆ ಮತ್ತು ದೌರ್ಜನ್ಯಗಳನ್ನು ಇಡೀ ದೇಶ ಖಂಡಿಸುತ್ತಿದೆ. ಕೇಂದ್ರ ಸರ್ಕಾರವೂ ಸಹ ಪರಿಸ್ತಿತಿ ಕೈಮೀರುವ ಮುನ್ನ ನ್ಯಾಯದ ಕ್ರಮ ಕೈಕೊಳ್ಳುವ ಜವಾಬ್ದಾರಿಯಿದೆ.

“ಪೋಲೀಸರು ಕುಡಿದು ಬಂದು ನಮ್ಮನ್ನು ನಿಂದಿಸಿದರು. ಇಂತಹ ದಿನ ನೋಡಲು ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ?” ಇದು ದೇಶಕ್ಕೆ ಬಂಗಾರದ ಪದಕ ಗೆದ್ದು ಕೊಟ್ಟು ವಿಶ್ವದ ಮುಂದೆ ಭಾರತ ಎತ್ತರಕ್ಕೆ ಎರುವಂತೆ ಮಾಡಿದ್ದ ವೀನೇಶ್ ಫೋಗಟ್‌ರವರ ಅಂಬೋಣ. ಓಲಂಪಿಕ್ ಮತ್ತು ಕಾಮನ್ವೆಲ್ತ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಫೋಗಟ್‌ರವರು ವಿಶ್ವಮಟ್ಟದಲ್ಲಿ ಹೆಸರು ಮಾಡಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದವರು. ಸುಮಾರು ೨೩ ದಿನಗಳಿಂದಲೂ ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್, ಬಜರಂಗ ಪುನಿಯಾ ಮತ್ತು ಇನ್ನಿತರ ಕುಸ್ತಿ ಪಟುಗಳು ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ದಿಟ್ಟತನದಿಂದ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸುವ ಈ ಆಟಗಾರ್ತಿಯರು ಇಂದು ದೆಹಲಿಯ ಜಂತರ ಮಂತರ್ ನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪ್ರಧಾನ ಮಂತ್ರಿಗಳು ರೋಡ್ ಶೋಗಳನ್ನು ಕರ್ನಾಟಕದ ಗಲ್ಲಿಗಲ್ಲಿಗಳಲ್ಲಿ ಮಾಡುವುದು ಮತ್ತು ತನ್ನ ಮನ್ ಕಿ ಬಾತ್ ಹೇಳುವ ಬದಲು ಸ್ವಲ್ಪ ಬಿಡುವು ಮಾಡಿಕೊಂಡು ಆ ಹೆಂಗೂಸುಗಳ ಮನ್ ಕಿ ಬಾತ್ ಏನೆಂದು ಕೇಳಬಾರದೇ?

ಇದನ್ನೂ ಓದಿಪೊಲೀಸರ ದೌರ್ಜನ್ಯ: ಕುಸ್ತಿಪಟುಗಳಿಂದ ಪದಕ ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸಲು ನಿರ್ಧಾರ

“ಬೇಟಿ ಬಚಾವೋ ಬೇಟಿ ಪಢಾವೋ” ಎನ್ನುವ ಪ್ರಧಾನಿಗೆ ಇದು ತಿಳಿದೇ ಇಲ್ಲವೇ? ಮಹಿಳೆಯರ ಸುರಕ್ಷತೆ ಅವರ ಕರ್ತವ್ಯವಲ್ಲವೇ? ಅವರ ಪಕ್ಷವೆಂದರೆ, ಬ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಕೊಲೆಗಡುಕರನ್ನು ರಕ್ಷಿಸುವ ಅಡಗುತಾಣವೇ?. ಘಟನಾಸ್ಥಳಕ್ಕೆ ಆರೋಪಿಯಲ್ಲದ ಸಹಾನುಭೂತಿಗಾಗಿ ಬಂದ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹುಡಾ ಅವರನ್ನು ದೆಹಲಿ ಪೋಲೀಸರು ಬಂಧಿಸಿರುವುದು ಯಾವ ನ್ಯಾಯ? ಅವರದೇ ಪಕ್ಷದ ಉತ್ತರ ಪ್ರದೇಶದ ಸಂಸದನಾದ ಆರೋಪಿ ಬ್ರಿಜಭೂಷಣ ಶರಣಸಿಂಗನನ್ನು ಯಾಕೆ ಬಂಧಿಸುತ್ತಿಲ್ಲವೆಂಬುದು ಜನತೆಯ ಪ್ರಶ್ನೆಯಾಗಿದೆ.

ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲ್ಲಿ ಪೋಲೀಸರ ಹೊಡೆತ ತಿನ್ನುತ್ತಾರೆಂದರೆ ಇದರ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಅವರನ್ನು ಗೌರವಿಸಿ ಮನೆಗೆ ಕರೆದು ಅವರೊಂದಿಗೆ ಟೀ ಕುಡಿದ ಪ್ರಧಾನಿಗೆ ಆ ಮಕ್ಕಳು ಈಗ ಸಂಕಟದಲ್ಲಿದ್ದಾರೆ ಅವರ ನೆರವಿಗೆ ಹೋಗಬೇಕೆಂಬ ಅರಿವಿಲ್ಲವೇ? ಕುಸ್ತಿ ಬಾಕ್ಷಿಂಗ್ ಇವೆರಡೂ ಆಟಗಳು ಮೂಲತ: ದೈಹಿಕ ಶಕ್ತಿಯನ್ನು ಅವಲಂಬಿತ ಕ್ರೀಡೆಗಳು. ಪುರುಷ ಪ್ರಧಾನವಾದ ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ಸಮಾನವಾಗಿ ಈ ಕ್ರೀಡಾಪಟುಗಳು ನಿಂತರೂ ಸಹ, ಆದರೆ ಅದೇ ಮಹಿಳೆಯರು ಇಂದು ತನ್ನ ದೇಹವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಗೆಲ್ಲಲಾಗದೆ ರೋದಿಸುತ್ತಿರುವ ದೃಶ್ಯ ಮನ ಕಲಕುತ್ತದೆ. ರಾಜಕೀಯ ನಡೆಸುವ ಪ್ರಭುತ್ವಕ್ಕೊಂದಿಷ್ಟು ತಾಯಿ ಕರಳೂ ಸಹ ಇರಬೇಕಾಗುತ್ತದೆ. ಹೆಣ್ಣುಮಕ್ಕಳು ಹೀಗೆ ಹೋರಾಟಕ್ಕಿಳಿದರೂ ಸರ್ಕಾರ ಆರೋಪಿ ಬ್ರಿಜಭೂಷಣನ ವಿರುದ್ಧ ಕ್ರಮ ಕೈಕೊಳ್ಳಲು ಯಾಕೆ ಹಿಂಜರಿಯುತ್ತಿದೆ?. ಅವನ ವಿರುದ್ದ ತನಿಖೆ ನಡೆಸಲು ಯಾಕೆ ಹಿಂಜರಿಯುತ್ತಿದೆ? ಎಂಬುದು ಪ್ರಶ್ನೆ

ಇವರ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. ಜೆ.ಎನ್.ಯು ವಿದ್ಯಾರ್ಥಿಗಳೂ , ವಕೀಲರು, ಕುಸ್ತಿ ಪಟುಗಳ ಬೆಂಬಲಕ್ಕೆ ನಿಂತಿದ್ದಾರೆ, ರೈತರೂ ಬೆಂಬಲ ಸೂಚಿಸಿದ್ದಾರೆ. ಮೊದಲು “ಹೀಗೆ ಪ್ರತಿಭಟಿಸುವುದು ಅಶಿಸ್ತಿನ ವರ್ತನೆ” ಎಂದು ಹೇಳಿದ್ದ ಹಿರಿಯ ಅಥ್ಲೆಟ್ ಹಾಗೂ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಕೆ ಪಿ.ಟಿ.ಉಷಾ ಕೂಡ ಜಂತರ ಮಂತರ್ ಗೆ ಹೋಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. “ನಾನು ಮೊದಲು ಕ್ರೀಡಾಪಟು ಆ ಬಳಿಕ ಆಡಳಿತಾಧಿಕಾರಿ” ಎಂದು ಹೇಳುವ ಮೂಲಕ ಕ್ರೀಡಾಪಟುಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಟೆನ್ನಿಸ್ ಆಟಗಾರ್ತಿಯಾದ ಸಾನಿಯಾ ಮಿರ್ಜಾರವರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ಈ ದೇಶದ ಗೌರವಾನ್ವಿತ ಮಹಿಳೆಯರ ಘನತೆಯ ಪ್ರಶ್ನೆಯಾಗಿದೆ. ಬ್ರಿಜ್ ಭೂಷಣ್ ತನ್ನ ವಿರುದ್ಧ ಆರೋಪ ಮಾಡುವುದಾಗಿ ಒಬ್ಬರಾದರೂ ಮುಂದೆ ಬಂದರೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಈಗ ಏಳು ಮಕ್ಕಳು ಆರೋಪ ಮಾಡಿದ್ದಾರೆ. ಅವನು ಹೇಳಿದಂತೆ ಈಗ ಆತ್ಮಹತ್ಯೆ ಮಾಡಿಕೊಂಡನೇ? ಬ್ರಿಜ್‌ಭೂಷಣ ಶರಣಸಿಂಗ್ ವಿರುಧ್ಧ ಲೈಂಗಿಕ ದೌರ್ಜನ್ಯ ಕುರಿತು ಮನವಿ ಮಾಡಿದ ಏಳು ಜನ ಲೈಂಗಿಕ ಶೋಷಿತ ಮಹಿಳೆಯರಲ್ಲಿ ಒಬ್ಬ ಅಪ್ರಾಪ್ತ ಹುಡುಗಿಯೂ ಇದ್ದಾಳೆ. ಜಂತರ ಮಂತರ ಹೋರಾಟದ ಸ್ಥಳದಲ್ಲಿ ಮಧ್ಯರಾತ್ರಿ ಪೋಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ವೀನೇಶಾ ಫೋಗಟ್ ಹೇಳುತ್ತಾರೆ. “ನಿಜಕ್ಕೂ ಪೋಲಿಸರ ವರ್ತನೆಯಿಂದ ನಮಗೆ ಆಘಾತವಾಗಿದೆ. ಏಕೆಂದರೆ ನಾವು ಅಪರಾಧಿಗಳಲ್ಲ. ನಾವು ಅಂತಹ ಅಗೌರವಕ್ಕೆ ಅರ್ಹರಲ್ಲ” ಎನ್ನುತ್ತಾ ಪುರುಷ ಪೋಲೀಸರು ನಮ್ಮನ್ನು ಹೇಗೆ ಹಿಡಿದು ತಳ್ಳಾಡುತ್ತಾರೆ. ನಾವೇನು ಅಪರಾಧಿಗಳೇ?. ಆರೋಪಿಯನ್ನು ಆರಾಮಾಗಿ ಮನೆಯಲ್ಲಿರಲು ಬಿಟ್ಟು ನಮಗೆ ಈ ಚಿತ್ರ ಹಿಂಸೆ ಏಕೆ? ಫೋಲಿಸರ ಲಾಠಿ ಏಟಿನಿಂದ ನನ್ನ ತಮ್ಮನ ತಲೆ ಒಡೆದಿದೆ. ಕೊಲ್ಲುವದಾದರೆ ನಮ್ಮನ್ನು ಕೊಂದು ಹಾಕಿ” ಎಂದು ಆ ಮಗಳು ಅಳುತ್ತಿದ್ದಾರೆ. ಅವರ ರೋದನ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾರೆ.

ಇದು ಲೋಕತಂತ್ರದ ಹತ್ಯೆಯಾಗಿದೆ ಎಂದು ವಕೀಲರು ಹೇಳುತ್ತಿದ್ದಾರೆ. “ಸಾರೆ ಎಂ.ಪಿ ಗುಂಡೆ ಹೈ” ಎನ್ನುತ್ತಾರೆ. ಪೋಲಿಸರಿಗೆ ಗೃಹಮಂತ್ರಿಯ ಭಯವಿರುವ ಕಾರಣ ಅವರು ನಿಜವಾದ ತನಿಖೆ ನಡೆಸಲು ಬಿಡುವುದಿಲ್ಲ ಎನ್ನುತ್ತಾರೆ. ಭಾರತದಲ್ಲಿಯ ಎಲ್ಲ ಸರ್ಕಾರಿ ಆಡಳಿತಗಳು ಒತ್ತಡದಲ್ಲಿ ಬದುಕುತ್ತಿವೆ. ಇಂತಹ ಗಂಭೀರ ಮಹಿಳಾ ವಿಷಯದ ಕುರಿತು ಪ್ರಭುತ್ವದ ಮೌನವು ಭವಿಷ್ಯದಲ್ಲಿ ಬಹಳ ದೊಡ್ಡ ಬೆಲೆ ತೆರಬೇಕಾಗಬಹುದು. ಆಳುವ ಈಗಿನ ಕೇಂದ್ರ ಸರ್ಕಾರವೆಂದರೆ, ಭ್ರ‍್ರಷ್ಟಾಚಾರಿಗಳು, ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ರಕ್ಷಿಸುವ ತಾಣಗಳಾಗಿ ಬದಲಾಗುತ್ತಿರುವುದು ಶೋಚನೀಯವಾಗಿದೆ. ಈ ಧರಣಿಯು ಜಂತರ ಮಂತರದಿಂದ ಬ್ರಿಜ್ ಭೂಷಣನ ಮನೆಯ ಮುಂದೆಯೇ ಹೋರಾಟ ಆರಂಭವಾಗಿತ್ತು. ಆದರೆ ಅದನ್ನು ಪೋಲೀಸರು ತಡೆದಿದ್ದಾರೆ. ಈಗಲಾದರೂ ಗೃಹಮಂತ್ರಿಗಳು ಅರೋಪಿಗಳನ್ನು ರಕ್ಷಿಸಲು ಮುಂದಾಗಬಾರದು. ನಮಗೆ ನಮ್ಮ ಸಂವಿಧಾನ ಮುಖ್ಯವಾಗುತ್ತದೆ. ಸಂವಿಧಾನ ಪರವಾದ ನಡೆ ಸರ್ಕಾರ ತೋರಿಸದಿದ್ದರೆ, ಜನರು ತಿರುಗಿ ಬೀಳುವ ದಿನಗಳು ದೂರವಿಲ್ಲ. ಈಗಲಾದರೂ ಮೋದಿ ಬಾಯಿ ಬಿಡಬಹುದೆ?

 

Donate Janashakthi Media

Leave a Reply

Your email address will not be published. Required fields are marked *