ಕರ್ನಾಟಕ ಚುನಾವಣೆ 2023 ಸ್ಟೋರಿ : ವ್ಯಂಗ್ಯಚಿತ್ರಕಾರರ ರೇಖೆಗಳಲ್ಲಿ
ನಾಲ್ಕು ತಿಂಗಳ ಹಿಂದೆ ಕರ್ನಾಟಕದ ಆಳುವ ಪಕ್ಷದ ಅಧ್ಯಕ್ಷರು ಈ ಬಾರಿಯ ವಿಧಾನಸಭಾ ಚುನಾವಣೆಗಳ ಪ್ರಚಾರದ ವೇಳೆಯಲ್ಲಿ ರಸ್ತೆಗುಂಡಿಗಳು, ಚರಂಡಿಗಳು, ಅಭಿವೃದ್ಧಿ ಮುಂತಾದ ವಿಷಯಗಳ ಬದಲು ಲವ್ ಜಿಹಾದ್ ಮೇಲೆ ಜನರ ಗಮನ ತಿರುಗಿಸಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದುದಾಗಿ ವರದಿಯಾಗಿತ್ತು. ಕೆಲವು ದಿನಗಳ ನಂತರ ಈ ಚುನಾವಣೆ ಸಾವರ್ಕರ್ ವರ್ಸಸ್ ಟಿಪ್ಪ್ಪು ಎಂದೂ ಹೇಳಿದರು. ಚುನಾವಣಾ ಪ್ರಕಟಣೆಯ ಎರಡು ದಿನಗಳ ಮೊದಲು, ಮುಸ್ಲಿಮ್ ಸಮುದಾಯಕ್ಕೆ ಇದ್ದ 4% ಒಬಿಸಿ ಮೀಸಲಾತಿಯನ್ನು ರದ್ದು ಮಾಡುವ ಆದೇಶವನ್ನು ಹೊರಡಿಸಲಾಯಿತು. ಆದರೆ ನಂತರ ರಾಜ್ಯದಲ್ಲಿ ಆಳುವ ಪಕ್ಷದ ಚುನಾವಣಾ ಪ್ರಚಾರದ ಮುಖ್ಯಸ್ಥರೆನಿಸಿದ ಮಾಜಿ ಮುಖ್ಯ ಮಂತ್ರಿಗಳು ಹಿಜಬ್, ಹಲಾಲ್ ವಿವಾದಗಳು ಅನಗತ್ಯ ಎಂದರು.ಪ್ರಚಾರ ಮುಂದುವರೆದಂತೆ, ವಂಶಾಡಳಿತ/‘ಪರಿವಾರ’ವಾದ, ಡಬಲ್ ಎಂಜಿನ್, 40 ಪರ್ಸಂಟ್ 100ಪರ್ಸಂಟ್, ಟ್ರಬಲ್ ಎಂಜಿನ್, ವಿಷದ ಹಾವು, ವಿಷಕನ್ಯೆ ಇತ್ಯಾದಿಗಳ ಜೊತೆಗೆ ‘ಜೈ ಭಜರಂಗ್ ಬಲಿ’ಯೂ ಬಂದು ಹೋಯಿತು,ಕೊನೆಗೆ ‘ಕೇರಳ ಸ್ಟೋರಿ’ಯನ್ನೂ ಎಳೆದು ತಂದರು.
ಇವನ್ನೆಲ್ಲ, ಅಂದರೆ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಇಡೀ ದೇಶದ ಗಮನ ಸೆಳೆದಿರುವ ಈ ಬಾರಿಯ, ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ವೈಖರಿಯನ್ನು ರಾಜ್ಯದ ಮತ್ತು ದೇಶದ ವ್ಯಂಗ್ಯಚಿತ್ರಕಾರರು ಹೇಗೆ ದಾಖಲಿಸಿದ್ದಾರೆ ಎಂಬುದರ ಒಂದು ನೋಟ ಇಲ್ಲಿದೆ:
(ಪಿ.ಮಹಮ್ಮದ್,ಜನವರಿ 4, 2013)
***
ನಲ್ವತ್ತುಪರ್ಸೆಂಟ್
ಕರ್ನಾಟಕವನ್ನು100% ಭ್ರಷ್ಟಾಚಾರ-ಮುಕ್ತಗೊಳಿಸಿ ದಕ್ಷಿಣ ಭಾರತದ ನಂಬರ್ ರಾಜ್ಯವಾಗಿಮಾಡುತ್ತೇವೆ- ಸಂಡೂರಿನಲ್ಲಿಅಮಿತ್ಷಾ,
– ಇದುಫೆಬ್ರುವರಿ 23 ರ ಸುದ್ದ
“ಆಗಲೇ 40% ತೆಗೆದಿದ್ದೇವೆ!”
(ಸತೀಶಆಚಾರ್ಯ,ಮೊಲಿಟಿಕ್ಸ್.ಇನ್, ಫೆ,25)
***
ಮಾರ್ಚ್ 3ರ ಸುದ್ದಿ: ಬಿಜೆಪಿ ಶಾಸಕ ಮತ್ತು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಅಧ್ಯಕ್ಷರ ಪುತ್ರನ ನಿವಾಸದ ಮೇಲೆ ಲೋಕಾಯುಕ್ತ ದಾಳಿಯಲ್ಲಿ 7.62 ಕೋಟಿ ರೂ. ವಶ
.
ವಂಶಾಡಳಿತ/ ‘ಪರಿವಾರ’ವಾದ
ಎಪ್ರಿಲ್ 7 : ಕಾಂಗ್ರೆಸಿನ ವಂಶಾಡಳಿತದ / ಪರಿವಾರವಾದದ ವಿರುದ್ಧವೂ ಹೋರಾಡಲು ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನಿಗಳು ಪುನರುಚ್ಚರಿಸಿದರು.
ಎಪ್ರಿಲ್ 11: ಅದು ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರನೂ ಸೇರಿದಂತೆ ಹತ್ತು-ಹಲವು ಮುಖಂಡರುಗಳ ಪರಿವಾರದವರ ಹೆಸರುಗಳು ಕಂಡು ಬಂದಿವೆ. .. .. ಅವರದ್ದು ವಂಶಾಡಳಿತದ ರಾಜಕೀಯ-.. .. .. .. ಇವರದ್ದು?
(ಸತೀಶಆಚಾರ್ಯ, ಪೇಸ್ಬುಕ್, ಎಪ್ರಿಲ್ 13)
***
“ಬಂಡಾಯ”
ಮಾರ್ಚ್ 25 ರಿಂದ ಕಾಂಗ್ರೆಸಿನ ಮತ್ತು ಎಪ್ರಿಲ್ 11 ರಿಂದ ಅಭ್ಯರ್ಥಿಗಳ ಪಟ್ಟಿಗಳ ಬಿಡುಗಡೆಯೊಂದಿಗೆ ಬಂಡಾಯದ ಸುದ್ದಿಗಳು- ಮುಖ್ಯವಾಗಿ ಆಳುವ ಪಕ್ಷದಲ್ಲಿ ಗಮನಾರ್ಹ ಅಸಂತುಷ್ಟಿ, ಆಕ್ರೋಶದ ಪ್ರದರ್ಶನ
(ಪಿ.ಮಹಮ್ಮದ್,ವಾರ್ತಾಭಾರತಿ, ಎಪ್ರಿಲ್ 12)
ಎಪ್ರಿಲ್ 14– ಸೀಟು ನಿರಾಕರಣೆಯ ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಅಭ್ಯರ್ಥಿ
ಎಪ್ರಿಲ್ 17-ಮಾಜಿ ಮುಖ್ಯಮಂತ್ರಿ ಶೆಟ್ಟರ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಅಭ್ಯರ್ಥಿ
(ಪಿ.ಮಹಮ್ಮದ್,ಫೇಸ್ ಬುಕ್, ಎಪ್ರಿಲ್ 15)
***
“ನೀವು ನನ್ನನ್ನು ರೆಸಾರ್ಟ್ ನಿಂದ ಕರೆದುಕೊಂಡು ಹೋಗಬಹುದು.
ನಾನು ಲೊಕೇಷನ್ ಶೇರ್ ಮಾಡ್ತೇನೆ”
(ಆರ್.ಪ್ರಸಾದ್,ಫೇಸ್ಬುಕ್, ಎಪ್ರಿಲ್ 17)
***
ಹಿಜಬ್.. ಹಲಾಲ್.. 4% ಮೀಸಲಾತಿ
ಎಪ್ರಿಲ್ 23 : ಹಲಾಲ್, ಹಿಜಬ್ ಈಗ ಚುನಾವಣಾ ವಿಷಯವೇ ಅಲ್ಲ, ಈಗ ಎಲ್ಲವೂ ಮುಗಿದು ಹೋಗಿದೆ. ರಾಜ್ಯದ ಜನರೇ ಅದನ್ನು ಮರೆತಿದ್ದಾರೆ. ಕರ್ನಾಟಕದಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಇವೆ ಎಂದು ಮುಖ್ಯಮಂತ್ರಿಗಳು ‘ಇಂಡಿಯಾ ಟುಡೇ ಸಂವಾದದಲ್ಲಿ ಹೇಳಿದರು.
(ಪಿ.ಮಹಮ್ಮದ್,ಫೇಸ್ ಬುಕ್, ಎಪ್ರಿಲ್ 25)
***
ಎಪ್ರಿಲ್ 25 : “ಮುಸ್ಲಿಮ್ ಸಮುದಾಯಕ್ಕೆ ಶೇ 4ರ ಒಬಿಸಿ ಕೋಟಾವನ್ನು ರದ್ದುಪಡಿಸಿ, ಒಕ್ಕಲಿಗರು ಹಾಗೂ ಲಿಂಗಾಯತರ ಮೀಸಲಾತಿಯನ್ನು ತಲಾ ಶೇ 2ರಷ್ಟು ಹೆಚ್ಚಿಸುವ ನಿರ್ಧಾರವು ಮೇಲ್ನೋಟಕ್ಕೆ ದೋಷಪೂರಿತವಾಗಿ ಕಾಣುತ್ತದೆ ಎಂದಿದ್ದ ಸುಪ್ರಿಂ ಕೋರ್ಟ್ ರಾಜ್ಯಸರಕಾರದ ಆದೇಶಕ್ಕೆ ಮುಂದಿನ ವಿಚಾರಣೆ ನಡೆಯುವ ಮೇ 9ರ ವರೆಗೆ ತಡೆ ನೀಡಿದೆ. “
( ಇರ್ಫಾನ್,ನ್ಯೂಸ್ಕ್ಲಿಕ್ ಎಪ್ರಿಲ್25)
ಎಪ್ತಿಲ್ 23: ಬಿಜೆಪಿ ಗೆದ್ದರೆ ತೆಲಂಗಾಣದಲ್ಲಿ ಮುಸ್ಲಿಂ ಮೀಸಲಾತಿ ಕೊನೆಗೊಳಿಸುತ್ತೇವೆ-ಅಮಿತ್ ಷಾ
(ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ)
(ಪಿ.ಮಹಮ್ಮದ್,ಫೇಸ್ ಬುಕ್, ಎಪ್ರಿಲ್ 25)
***
ಹೊತ್ತಿ ಉರಿಯು(ಸು)ವ ಎಚ್ಚರಿಕೆ ಮತ್ತು ವಾಸ್ತವ
ಎಪ್ರಿಲ್ 25: ಕರ್ನಾಟಕದಲ್ಲಿ ಕಾಂಗ್ರೆಸನ್ನು ಚುನಾಯಿಸಿದರೆ, ವಂಶಾಡಳಿತ ತುತ್ತತುದಿಗೇರುತ್ತದೆ, ರಾಜ್ಯದಲ್ಲಿ ಗಲಭೆಗಳು ನಡೆಯುತ್ತವೆ -ಬಾಗಲಕೋಟೆಯ ತೇರದಾಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿಗಳು
(ಸತೀಶಆಚಾರ್ಯ,ಮೊಲಿಟಿಕ್ಸ್.ಇನ್, ಎಪ್ರಿಲ್ 27)
ಆರು ದಿನಗಳ ನಂತರ ಮಣಿಪುರ ಹೊತ್ತು ಉರಿಯಲಾರಂಭಿಸಿದಾಗ
(ಪಂಜು ಗಂಗೊಳ್ಳಿ,ದಿಸ್ಟೇಟ್ಮೀಡಿಯ, ಮೇ 5)
***
“91 ಬಾರಿ ಬೈದರು…”
ಎಪ್ರಿಲ್ 27: ‘ಮೋದಿ ವಿಷದ ಹಾವು ಇದ್ಹಂಗೆ… …….” ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಕಲ್ಬುರ್ಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು ಬಿಜೆಪಿಯ ಮುಖಂಡರುಗಳಿಂದ ತೀವ್ರ ಟೀಕೆಗೆ ಒಳಗಾಯಿತು. ಬಿಜೆಪಿ ಶಾಸಕ ಬಸನಗೌಡ ಪಾಟೀಳ್ ಯತ್ನಾಳ್ ಸೋನಿಯಾ ಗಾಂಧಿಯವರನ್ನು ‘ವಿಷಕನ್ಯೆ’ ಎಂದರು.
ಎಪ್ರಿಲ್ 29: ಸ್ವತಃ ಪ್ರಧಾನಿಗಳು ‘ಕಾಂಗ್ರೆಸ್ ಪಕ್ಷ ನನ್ನನ್ನು 91 ಬಾರಿ ಬೈದಿದೆ..” ಎಂದು ಬೀದರ್ ಜಿಲ್ಲೆಯ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.
(ಅದರಲ್ಲಿ ಈಗ ಬಿಜೆಪಿ ಸೇರಿರುವ ಒಬ್ಬ ಮುಖಂಡನ ಬೈಗುಳೂ ಸೇರಿದೆಯಂತೆ!)
“ಅದು 100 ತಲುಪಿದಾಗ ,ನಾವು‘ಉನ್ಕೀ ಬಾತ್-100 ಇವೆಂಟ್ ಮಾಡ್ತೇವೆ
(ಮನ್ ಕೀ ಬಾತ್-100 ತರಹ)
(ಸತೀಶಆಚಾರ್ಯ,ಫೇಸ್ಬುಕ್, ಎಪ್ರಿಲ್ 30)
ಎಪ್ರಿಲ್ 30: ‘ಹಾವು ಭಗವಾನ್ ಶಿವನ ಕೊರಳಿನ ಹಾರ. ನನಗೆ ದೇಶದ ಜನತೆ ಭಗವಾನ್ ಶಿವನ ಹಾಗೆ’ ಎಂದು ಪ್ರಧಾನ ಮಂತ್ರಿಗಳು ಇನ್ನೊಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು. ನಮ್ಮ ಮುಖ್ಯಮಂತ್ರಿಗಳು ಅದಕ್ಕೆ ದನಿಗೂಡಿಸಿದರು.
(ದಿನೇಶ್ ಕುಕ್ಕುಜಡ್ಕ, ಫೇಸ್ಬುಕ್, ಮೇ 1)
***
“ಭಾರತೀಯ ರಾಜಕಾರಣಕ್ಕೆ ಎಳೆಯಲ್ಪಟ್ಟದ್ದಕ್ಕೆ ಹಾವಿಗೆ ನೋವಾಗಿದೆ.
ತಾನೇನೂ ತಮಾಷೆಗೆ ವಿಷ ಕಾರುವುದಿಲ್ಲ ಎಂದು ಅದು ಹೇಳುತ್ತದೆ”
(ಸಜಿತ್ ಕುಮಾರ್,ಡೆಕ್ಕನ್ ಹೆರಾಲ್ಡ್, ಎಪ್ರಿಲ್ 23)
***
“ನಿರುದ್ಯೋಗ ಹೆಚ್ಚಿಲ್ಲ”!?
ಎಪ್ರಿಲ್ 7: ಕೇಂದ್ರ ಮಂತ್ರಿಗಳೂ, ಬಿಜೆಪಿ ಚುನಾವಣಾ ಸಮಿತಿಯ ಮುಖ್ಯಸ್ಥರೂ ಆದ ಶೋಭಾ ಕರಂದ್ಲಾಜೆ ಶಿವಮೊಗ್ಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ನಿರುದ್ಯೋಗ ಹೆಚ್ಚಿರುವ ಬಗ್ಗೆ ಕೇಳಿದಾಗ ನಿರುದ್ಯೋಗ ಹೆಚ್ಚಿಲ್ಲ, ಪದವೀಧರರ ಪ್ರಮಾಣ ಹೆಚ್ಚಿದೆ ಎಂದು ಹೇಳಿದರು
(ಪಂಜುಗಂಗೊಳ್ಳಿ, ದಿಸ್ಟೇಟ್ಮೀಡಿಯ, ಎಪ್ರಿಲ್ 30)
***
ಪ್ರಣಾಳಿಕೆಗಳು …
ಮೇ1 ರಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಮೇ 2ರಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಆದರೆ ಇದರ ಮೊದಲೇ ಅದು ಐದು ಚುನಾವಣಾ ಗ್ಯಾರಂಟಿಗಳನ್ನು ಪ್ರಕಟಿಸಿತ್ತು. ಇವೆರಡಕ್ಕೂ ಮೊದಲೇ ಜೆಡಿ(ಎಸ್) ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ನಿರೀಕ್ಷಿಸಿದಂತೆ’ ಮತ್ತೊಮ್ಮೆ ಕರ್ನಾಟಕದ ಮತದಾರರಿಗೆ ‘ಭರಪೂರ ಭರವಸೆಗಳು’
ಹಾಗೆಯೇ, ಮೇಲ್ವರ್ಗಗಳವರು ಸಾಮಾನ್ಯವಾಗಿ ಇಷ್ಟಪಡದ, ಕೆಲವು ತಿಂಗಳ ಹಿಂದೆ ಸ್ವತಃ ಪ್ರಧಾನಿಗಳೇ ‘ರೇವ್ಡಿ’(ಬಿಟ್ಟಿ ಸವಲತ್ತು)ಗಳು ಎಂದು ಲೇವಡಿ ಮಾಡಿದ ಆಶ್ವಾಸನೆಗಳು ಈ ಪ್ರಣಾಳಿಕೆಗಳಲ್ಲಿ ಇವೆ.
(ದಿನೇಶ್ ಕುಕ್ಕುಜಡ್ಕ, ಫೇಸ್ ಬುಕ್, ಮೇ 2)
***
(ಪಂಜುಗಂಗೊಳ್ಳಿ,ದಿಸ್ಟೇಟ್ಸ್ಮೀಡಿಯ, ಮೇ 4)
***
ವಿಶೇಷವೆಂದರೆ ಬಿಜೆಪಿಯ ಪ್ರಣಾಳಿಕೆಯೂ 5 ಕೆಜಿ ಅಕ್ಕಿ, ಅರ್ಧ ಲೀಟರ್ ನಂದಿನಿ ಹಾಲು ಇತ್ಯಾದಿ ‘ರೇವ್ಡಿ’ಗಳ ಭರವಸೆ ನೀಡಿದೆ!
“ಆ ರೇವ್ಡಿಯನ್ನುಮುಟ್ಟಲೂಬೇಡ!”
(ಸತೀಶಆಚಾರ್ಯ,ಫೇಸ್ ಬುಕ್, ಮೇ2)
***
ಜತೆಗೆ, ಬಿಜೆಪಿ ಪ್ರಣಾಳಿಕೆ ಬೇರೆ ಯಾವ ಪಕ್ಷವೂ ಕೊಡದ, ಬಹುಶ: ಕರ್ನಾಟಕದ ಜನತೆಗೆ ಬೇಕಾಗಿಯೂ ಇರದ
ರಾಷ್ಟ್ರೀಯ ನಾಗರಿಕ ರಿಜಿಸ್ಟರ್(ಎನ್ಆರ್ ಸಿ) ಎಂಬುದರ ಆಶ್ವಾಸನೆಯನ್ನೂ ಕೊಟ್ಟಿದೆ
“ನಾವು ಕರ್ನಾಟಕದ ಜನತೆಯನ್ನು ಎಷ್ಟು ಪ್ರೀತಿಸುತ್ತೇವೆ ಯೆಂದರೆ.. ..
ನೀವು ನಮ್ಮನ್ನು ಚುನಾಯಿಸಿದರೆ, ನೀವೇಲ್ಲರೂ ನಿಮ್ಮ ಪೌರತ್ವವನ್ನು
ಸಾಬೀತು ಮಾಡುವಂತೆ ಬಲವಂತ ಮಾಡುತ್ತೇವೆ”
(ಪೆನ್ಪೆನ್ಸಿಲ್ಡ್ರಾ,ಫೇಸ್ ಬುಕ್, ಮೇ2)
***
ಏಕರೂಪದ ನಾಗರಿಕ ಸಂಹಿತೆ(ಯುಸಿಸಿ)ಯ ಆಶ್ವಾಸನೆಯನ್ನೂ ಕೊಟ್ಟಿದೆ.
“ಏಕರೂಪ ನಾಗರಿಕ ಸಂಹಿತೆ’ಯನ್ನು ಬಿಟ್ಟು ಕೊಟ್ಟರೆ,
ನನಗೆ 10 ಕೆಜಿ ಅಕ್ಕಿ ಮತ್ತು 6 ಅನಿಲ ಸಿಲಿಂಡರ್ ಸಿಗಬಹುದೇ?
(ಆರ್.ಪ್ರಸಾದ್,ಫೇಸ್ ಬುಕ್, ಮೇ 2)
***
“ಇವುಗಳ ಬದಲು ನನಗೊಂದು ಉದ್ಯೋಗ ಮತ್ತು ಒಪ್ಪುವ ಮೂಲ ರಚನೆ ಸಿಗಬಹುದಾದರೆ..”
“ಸ್ವಲ್ಪತಡೆ! ನೀನೊಬ್ಬ ಕಾನೂನು ಬಾಹಿರ ವಲಸೆಗಾರನ ಹಾಗೆ ಮಾತಾಡುತ್ತಿದ್ದೀಯ..ನಿನ್ನ ಹೆಸರೇನು?”
“ವಿಕಾಸ್”
( ಸಂದೀಪಅಧ್ವರ್ಯು, ಟೈಮ್ಸ್ಆಫ್ ಇಂಡಿಯ, ಮೇ 3)
***
“ಭಜರಂಗ್ ಬಲೀ ಕೀ ಜೈ!”
ಮೇ 2: ನಾನು ಹನುಮಂತ ದೇವರ ನಾಡಿಗೆ ಗೌರವ ಸಲ್ಲಿಸಲು ಬಂದಿರುವಾಗ ಕಾಂಗ್ರೆಸಿನವರು ತಮ್ಮ ಪ್ರಣಾಳಿಕೆಯಲ್ಲಿ ಭಜರಂಗ ಬಲಿಗೆ ಬೀಗ ಹಾಕಲು ನಿರ್ಧರಿಸಿದ್ದಾರೆ” – ಎಂದರು ಒಂದು ಚುನಾವಣಾ ಸಭೆಯಲ್ಲಿ ಪ್ರಧಾನ ಮಂತ್ರಿಗಳು.
ಇದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಹುಸಂಖ್ಯಾಕರು ಮತ್ತು ಅಲ್ಸಸಂಖ್ಯಾಕರ ನಡುವೆ ದ್ವೇಷವನ್ನು ಹರಡಿಸುವ ಭಜರಂಗ ದಳ, ಪಿಎಫ್ಐ ಮುಂತಾದ ಸಂಘಟನೆಗಳ ಬಗ್ಗೆ ನಿರ್ಣಾಯಕ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವುದಕ್ಕೆ ದೇಶದ ಪ್ರಧಾನಿಗಳ ಪ್ರತಿಕ್ರಿಯೆಯಾಗಿತ್ತು.
“ದಯವಿಟ್ಟು ನನ್ನನ್ನು ರಾಜಕೀಯದಿಂದ ಬಿಡುಗಡೆಗೊಳಿಸಿ!
ನನಗೂ ಭಜರಂಗದಳಕ್ಕೂ ಏನೇನೂ ಸಂಬಂಧವಿಲ್ಲ, ಮೋದೀಜೀ!”
( ಸತೀಶ ಆಚಾರ್ಯ, ಫೇಸ್ ಬುಕ್, ಮೇ 3)
ಇದು ಅಲ್ಲಿಗೇ ನಿಂತಿಲ್ಲ….
“ ನೀವು ಮತಹಾಕಲು ಹೋಗುವಾಗ ಬಟನ್ ಒತ್ತುವ ಮೊದಲು ಜೈ ಭಜರಂಗ ಬಲಿ ಎನ್ನಿ, ಕಾಂಗ್ರೆಸನ್ನು ಶಿಕ್ಷಿಸಿ” ಇದು ಪ್ರಧಾನ ಮಂತ್ರಿಗಳ ಉಕ್ತಿ ಎಂದಿದೆ ಬಿಜೆಪಿ ಟ್ವೀಟ್- ಮೇ 3ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವನಿಕ ಸಭೆಯಲ್ಲಿ ಪ್ರಧಾನಿಗಳು ಈ ಕರೆ ನೀಡಿದರು.
(ಪಂಜುಗಂಗೊಳ್ಳಿ,ದಿಸ್ಟೇಟ್ಸ್ಮೀಡಿಯ, ಮೇ 7)
***
ಈ ಹಿಂದೆ ಭಜರಂಗ ದಳದವರೆನ್ನಲಾದವರ ಕೃತ್ಯಗಳು ಖಂಡನೆಗೆ ಗುರಿಯಾದಾಗ ಬಿಜೆಪಿ ಮುಖಂಡರು ಅಂತವರು ‘ಫ್ರಿಂಜ್ ಎಲಿಮೆಂಟ್ಸ್’ ಅಂದರೆ ಎಲ್ಲೋ ಅಲ್ಲಿ-ಇಲ್ಲಿ ಕೆಲವರು ಇದ್ದಾರೆ ಎಂದು ಬದಿಗೊತ್ತಲು ಪ್ರಯತ್ನಿಸಿದ್ದನ್ನು ಈ ವ್ಯಂಗ್ಯಚಿತ್ರಕಾರರು ಇಲ್ಲಿ ನೆನಪಿಸಿದ್ದಾರೆ, ಇದು ಇನ್ನೊಂದು ತರದ ಡಬಲ್ ಇಂಜಿನ್ ಎನ್ನುತ್ತಾರೆ: ಕೇಸರಿಯ ಮುಖ್ಯಧಾರೆ+ ಅಂಚು
(ಸಜಿತ್ ಕುಮಾರ್,ಡೆಕ್ಕನ್ಹೆರಾಲ್ಡ್, ಮೇ 4)
***
ದ್ವೇಷ ಭಾಷೆಗೆ ಉತ್ತೇಜನೆ ?
ಮೇ 4: ಬಿಜೆಪಿ ಎಲ್ಲ ಭಾರತೀಯ ಭಾಷೆಗಳಿಗೆ ಉತ್ತೇಜನೆ ನೀಡಬೇಕು ಎನ್ನುತ್ತದೆ. ಅದು ಪ್ರಾದೇಶಿಕ ಭಾಷೆಗಳ ಹಿತವನ್ನು ಬಲಿಗೊಟ್ಟು ಹಿಂದಿಯನ್ನು ಪ್ರೋತ್ಸಾಹಿಸುತ್ತದೆ ಎಂಬ ಆಪಾದನೆ “ ರಾಜಕೀಯ ಪ್ರೇರಿತ’ ಎಂದು ಗೃಹಮಂತ್ರಿಗಳು ಹೇಳಿದರು
(ಕೆಲವೇ ದಿನಗಳ ಹಿಂದೆ, ಮಾರ್ಚ್ 30ರಂದು, ನಮ್ಮ ‘ನಂದಿನಿ’ ಸೇರಿದಂತೆ ರಾಜ್ಯಗಳ ಹಾಲು ಸಹಕಾರಿಗಳು ತಮ್ಮ ಮೊಸರು ಉತ್ಪನ್ನಗಳ ಪ್ಯಾಕೇಟುಗಳ ಮೇಲೆ ಕಡ್ಡಾಯವಾಗಿ ‘ದಹಿ’ ಎಂಬ ಹಿಂದಿ ಪದವನ್ನು ಬಳಸಬೇಕೆಂಬ FSSAI (ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ) ನಿರ್ದೇಶನಗಳನ್ನು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಬಲವಾಗಿ ವಿರೋಧಿಸಿದ ಮೇಲೆ ಹಿಂತೆಗೆದುಕೊಂಡ ಘಟನೆ ಈ ಆಪಾದನೆಯನ್ನು ಗಟ್ಟಿಗೊಳಿಸತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು)
“ ನಾನುಯಾವುದೇಭಾಷೆಯಲ್ಲಿದ್ವೇಷಹರಡಬಲ್ಲೆ!”
( ಇರ್ಫಾನ್,ನ್ಯೂಸ್ ಕ್ಲಿಕ್, ಮೇ 5)
***
ಮೇ 4: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಮೇ 6ರಂದು ನಡೆಯಬೇಕಿದ್ದ ಪ್ರಧಾನಿಯವರ ಬೃಹತ್ ಚುನಾವಣಾ ಪ್ರಚಾರ ರದ್ದಾಗಿದೆ. ಇಲ್ಲಿ 40ಕ್ಕೂ ಹೆಚ್ಚು ಕೇಸುಗಳನ್ನು ಹೊತ್ತಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಮೇಲಿನ ಕಳಂಕ ಋಜುವಾತಾದ ಕಾರಣ ಪ್ರಧಾನಿ ಕಾರ್ಯಕ್ರಮವನ್ನು ಬಿಜೆಪಿ ರದ್ದುಗೊಳಿಸಿತೆಂದು ಹೇಳಲಾಗುತ್ತಿದೆ.
91 ಬೈಗುಳಗಳು! 40 ಕೇಸುಗಳು!
“ಚಿತ್ತಾಪುರದಲ್ಲಿಇದುನಮಗೆತಪ್ಪಿಹೋಯಿತು..”
( ಸತೀಶಆಚಾರ್ಯ,ಫೇಸ್ ಬುಕ್, ಮೇ4)
***
“ ರೋಡ್ಶೋ”ಮತ್ತು ವಿವಿಧ “ಸಂದೇಶ”ಗಳು
ಮೇ 6 ಮತ್ತು7 : ಬೆಂಗಳೂರಿನಲ್ಲಿ ಪ್ರಧಾನಿಗಳ 36 ಕಿ.ಮೀ. ರೋಡ್ ಶೋ…
(ದಿನೇಶ್ಕುಕ್ಕುಜಡ್ಕ, ಫೇಸ್ ಬುಕ್, ಮೇ6)
***
ಡಬಲ್ ಇಂಜಿನ್ ರೋಡ್ ಶೋ…40%+
(ಪಂಜುಗಂಗೊಳ್ಳಿ,ದಿಸ್ಟೇಟ್ಸ್ಮೀಡಿಯ, ಮೇ 8)
***
ಕರ್ನಾಟಕರೋಡ್ ಶೋ
( ಸತೀಶ ಆಚಾರ್ಯ,ಫೇಸ್ ಬುಕ್, ಮೇ 9)
***
ಮತ್ತೊಂದು ತೆರನ ರೋಡ್ ಶೋ…
(ಪಿ.ಮಹಮ್ಮದ್,ವಾರ್ತಾಭಾರತಿ, ಮೇ 4)
***
ಇದಕ್ಕೆಲ್ಲ ಖರ್ಚು ಎಲ್ಲಿಂದ.. ಮತ್ತೊಂದು ಆರ್.ಟಿ.ಐ. ಗೆ ಕಾಯಬೇಕು?
“ನನ್ನಪ್ರಧಾನಿ” ಮತ್ತು “ನನ್ನಹಣ”
( ಸತೀಶ ಆಚಾರ್ಯ,ಫೇಸ್ ಬುಕ್, ಮೇ 9)
***
ಸಹಜವಾಗಿ ನೆನಪಾಗುವುದು 2020ರಲ್ಲಿ ಸ್ವಂತ ಖರ್ಚಿನಲ್ಲಿ ನಗರಗಳಿಂದ ಹಳ್ಳಿಗಳಿಗೆ ಮರಳುವ ವಲಸೆ ಕಾರ್ಮಿಕರ ಆ ‘ರೋಡ್ ಶೋ”ಗಳು… …
(ಪಿ.ಮಹಮ್ಮದ್,ಫೇಸ್ಬುಕ್, ಮೇ 4)
***
“ಆಶೀರ್ವಾದ ಪಡೆಯದಿದ್ದರೆ .. ..?”
ಮೇ 7: “ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದಿಂದ ಬರುವ ಎಲ್ಲ ಪ್ರಾಜೆಕ್ಟ್ ಗಳು ನಿಂತು ಹೋಗಬಹುದು”- ಇದು ಹರಪನಹಳ್ಳಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಮಾತು ಚುನಾವಣಾ ಪ್ರಚಾರ ಕೊನೆಗೊಳ್ಳುತ್ತಿರುವಂತೆ ಇದು …….ಮನವಿಯೋ, ಬೆದರಿಕೆಯೋ .. ..?
“ ದಯವಿಟ್ಟು ಕರ್ನಾಟಕದಲ್ಲಿ ಒಂದು ಡಬಲ್ ಇಂಜಿನ್ ಸರಕಾರಕ್ಕೆ ಮತ ನೀಡಿ”
“ ಅಂದರೆ ಏನರ್ಥ?”
“ ನೀವು ನಮ್ಮನ್ನು ಚುನಾಯಿಸಿದರೆ ಕೇಂದ್ರ ರಾಜ್ಯ ಸರಕಾರದೊಂದಿಗೆ
ಉತ್ತಮವಾಗಿ ಕೆಲಸ ಮಾಡುತ್ತದೆ. ಇಲ್ಲವಾದರೆ, ಕೇಂದ್ರವು
ರಾಜ್ಯ ಸರಕಾರ ನಿಮಗೆ ಮಾಡುವ ಪ್ರತಿಯೊಂದನ್ನೂ ತಡೆಹಿಡಿಯುತ್ತದೆ.”
“ಇದು ಕೋರಿಕೆಯೋ ಅಥವ ಬೆದರಿಕೆಯೋ?”
“ ನೀವು ನಮ್ಮ ಆಶೀರ್ವಾದ ಪಡೆಯದಿದ್ದರೆ ನಾಚಿಕೆಗೇಡು”
(ಪೆನ್ಪೆನ್ಸಿಲ್ಡ್ರಾ, ಫೇಸ್ಬುಕ್, ಮೇ 9)
ಇದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಎಪ್ರಿಲ್ 19ರ ಚುನಾವಣಾ ರ್ಯಾಲಿಯಲ್ಲಿ ಕೂಡ “ ಮೋದೀಜೀ ಆಶೀರ್ವಾದದಿಂದ ಕರ್ನಾಟಕ ವಂಚಿತಗೊಳ್ಳದಿರಬೇಕಾದರೆ ಕಮಲವನ್ನು ಗೆಲ್ಲಿಸಬೇಕೆಂದು ತಮ್ಮಲ್ಲಿ ನನ್ನ ನಿವೇದನೆ..” ಎಂದಿದ್ದರು.
.***
“ಕೇರಳ ಸ್ಟೋರಿ” ಮತ್ತು ಕರ್ನಾಟಕ ಸ್ಟೋರಿ
ಚುನಾವಣಾ ಪ್ರಚಾರದ ಅಂತ್ಯದ ವೇಳೆಗೆ ಬಿಡುಗಡೆಗೊಂಡ ಹಿಂದಿ ಚಿತ್ರ ‘ಕೇರಳ ಸ್ಟೋರಿ’ಯನ್ನು ಕರ್ನಾಟಕದ ಚುನಾವಣೆಯೊಂದಿಗೆ ಜೋಡಿಸುವ ವಿಲಕ್ಷಣ ಪ್ರಯತ್ನ ಬಹುಶಃ ಎಲ್ಲಾ ವ್ಯಂಗ್ಯಚಿತ್ರಕಾರರ ಗಮನ ಸೆಳೆಯದೇ ಇರಲು ಸಾಧ್ಯವಿರಲಿಲ್ಲ. ಇಲ್ಲಿ ಅಂತಹ ಎರಡು ವ್ಯಂಗ್ಯಚಿತ್ರಗಳನ್ನು ಮಾತ್ರ ನೋಡೋಣ:
ಡಿಂಗ್..ಡಿಂಗ್..ಡಿಂಗ್
ಕರ್ನಾಟಕ ರೋಡ್ ಶೋನಲ್ಲಿ ‘ಕೇರಳಸ್ಟೋರಿ’
(ಪೊನ್ನಪ್ಪ,ದಿಫೆಡರಲ್.ಕಾಂ, ಮೇ 5)
***
“ನೀವುಕೇರಳಸ್ಟೋರಿನೋಡಿ”
“ ನೀವು‘ರೇಟ್ ಲಿಸ್ಟ್’ನಕರ್ನಾಟಕಸ್ಟೋರಿನೋಡಿ”
(ಇರ್ಫಾನ್, ಫೇಸ್ ಬುಕ್, ಮೇ 6)
***
2023ರ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರವನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ.. ..
“ನಾನು ನಿಮ್ಮ ಅತ್ಯುತ್ತಮ ಲೋಕಲ್ ಎಂಎಲ್ಎ ಆಗಿರುತ್ತೇನೆ, ನನಗೆ ವೋಟು ಕೊಡಿ”
(ಪೆನ್ಪೆನ್ಸಿಲ್ಡ್ರಾ, ಫೇಸ್ ಬುಕ್, ಮೇ1)
***
ಫಲಿತಾಂಶ…?
ಕೊನೆಯದಾಗಿ.. ..ಮೇ 13ರ ಫಲಿತಾಂಶಗಳ ಬಗ್ಗೆ…
“ನಿಮ್ಮಭವಿಷ್ಯನುಡಿಯೇನು?”
“ ಪೆಟ್ರೋಲ್-ಡೀಸೆಲ್ ಬೆಲೆಗಳುಏರುತ್ತವೆ!!”
(ಅಲೋಕ್ ನಿರಂತರ್,ಮೇ 9)