ನವದೆಹಲಿ : ಸಂಸತ್ತಿನಲ್ಲಿ ಆಳುವ ಪಕ್ಷ ಯಾವುದೇ ರೀತಿಯಲ್ಲಿ ಪ್ರತಿಪಕ್ಷಗಳ ಮಧ್ಯಪ್ರವೇಶಗಳನ್ನು ತಡೆಯುತ್ತಲೇ, ಇನ್ನೊಂದೆಡೆಯಲ್ಲಿ ತನಗೆ ಬೇಕಾದವುಗಳನ್ನು ಚರ್ಚೆಯಿಲ್ಲದೆಯೇ ದಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಎದ್ದು ಕಂಡು ಬಂದಿತ್ತು. ಈ ರೀತಿ ಚರ್ಚೆಯಿಲ್ಲದೆಯೇ ಪಾಸು ಮಾಡಿಸಿಕೊಂಡ ಒಂದು ಮಸೂದೆಯೆಂದರೆ ಅರಣ್ಯ ಸಂರಕ್ಷಣೆ ಕಾಯ್ದೆ, 1980ಕ್ಕೆ ತಿದ್ದುಪಡಿ ತಂದಿರುವ ಮಸೂದೆ- ಇದು ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯ ನಿವಾಸಿಗಳ ಹಕ್ಕುಗಳ ಮೇಲೆ ಮಾಡಿರುವ ಇನ್ನೊಂದು ಪ್ರಹಾರ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಹೇಳಿದ್ದಾರೆ.
ಇದಕ್ಕೆ ಮೊದಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಅರಣ್ಯ ಸಂರಕ್ಷಣಾ ಕಾಯ್ದೆಯ ನಿಯಮಾವಳಿ, 2003ಕ್ಕೆ ತಿದ್ದುಪಡಿಗಳನ್ನು ದಕ್ಕಿಸಿಕೊಂಡಿತ್ತು. ಈ ತಿದ್ದುಪಡಿಗಳು ಬುಡಕಟ್ಟು ಪ್ರದೇಶಗಳ ಗ್ರಾಮಸಭೆಗಳಿಗೆ ತಮ್ಮ ಪ್ರದೇಶದಲ್ಲಿನ ಯಾವುದೇ ಪರಿಯೋಜನೆಗೆ ಒಪ್ಪಿಗೆಯನ್ನು ತಡೆಹಿಡಿಯಲು ಇದ್ದ ಸಂವಿಧಾನಿಕ ಮತ್ತು ಕಾನೂನು ಹಕ್ಕುಗಳನ್ನು ಇಲ್ಲದಂತೆ ಮಾಡುವ ಹಲವು ಅಂಶಗಳನ್ನು ಸೇರಿಸಿತ್ತು. ಈ ಮೂಲಕ ಅರಣ್ಯ ಸಂರಕ್ಷಣೆಯ ಹೆಸರಲ್ಲಿ ಅರಣ್ಯಗಳ ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡಲಾಗಿದೆ, ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳತ್ತ ತಿರುಗಿಸುವ ವಿಧಾನಗಳನ್ನು ಉದಾರೀಕರಿಸಲಾಗಿದೆ ಮತ್ತು ಅರಣ್ಯಗಳ ನಿರ್ವಹಣೆಯಲ್ಲಿ ರಾಜ್ಯ ಸರಕಾರಗಳ ಹಕ್ಕುಗಳನ್ನು ಮೊಟಕುಗೊಳಿಸಿ ಹೆಚ್ಚಿನ ಅಧಿಕಾರಗಳನ್ನು ಕೇಂದ್ರೀಕರಿಸಲಾಗಿದೆ ಎಂದು ಬೃಂದಾ ಕಾರಟ್ ಈ ತಿದ್ದುಪಡಿ ಮಸೂದೆಯನ್ನು ವಿಮರ್ಶೆ ಮಾಡುತ್ತ ಹೇಳುತ್ತಾರೆ.
ವ್ಯಾಪಾರಸ್ಥರ ಅನುಕೂಲಕ್ಕಾಗಿ :
ಈ ತಿದ್ದುಪಡಿಗಳ ವಿರುದ್ಧ ಸಿಪಿಐ(ಎಂ) ರಾಜ್ಯ ಸಭಾ ಸದಸ್ಯ ಎಳಮಾರಂ ಕರೀಮ್ ಇಂತಹ ನಿಯಮಾವಳಿಗಳನ್ನು ರದ್ದುಗೊಳಿಸಬೇಕೆಂಬ ಒಂದು ಶಾಸನಾತ್ಮಕ ನಿಲುವಳಿಯನ್ನು ಮಂಡಿಸಿದರು. ಅದನ್ನು ಚರ್ಚೆಗೆ ಅಂಗೀಕಾರಿಸಲಾದರೂ ಒಂದಲ್ಲ ಒಂದು ನೆಪ ಹೂಡಿ ಅದರ ಮೇಲೆ ಚರ್ಚೆ ನಡೆಯದಂತೆ ನೋಡಿಕೊಳ್ಳಲಾಯಿತು. ಮೋದಿ ಸರಕಾರ ಅರಣ್ಯ ಸಂರಕ್ಷಣೆಯ ಹೆಸರಲ್ಲಿ ತಂದಿರುವ ಎಲ್ಲ ತಿದ್ದುಪಡಿಗಳೂ ಅದು ಜಪಿಸುತ್ತಿರುವ “ಸುಲಭ ವ್ಯವಹಾರ”(ಈಸ್ ಆಫ್ ಬಿಸಿನೆಸ್)ಮಂತ್ರಕ್ಕೆ ಅನುಕೂಲ ಕಲ್ಪಿಸಲಿಕ್ಕಾಗಿಯೇ ತಂದವುಗಳು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ವಾಸ್ತವವಾಗಿ ಈ ತಿದ್ದುಪಡಿ ಈಗಿರುವ ಅರಣ್ಯ ಹಕ್ಕುಗಳ ಕಾಯ್ದೆಯ ನೇರ ಉಲ್ಲಂಘನೆಯಾಗಿದ್ದು ಮಂಡನೆಯ ಹಂತದಲ್ಲೇ ಅದನ್ನು ರದ್ದುಪಡಿಸಬೇಕಾಗಿತ್ತು. ಗದ್ದಲದ ನಡುವೆ ಅದನ್ನು ಪಾಸು ಮಾಡಿಸಿಕೊಳ್ಳಲಾಯಿತು. ಆದರೆ ವಿಚಿತ್ರವೆಂದರೆ ಅದನ್ನು ಎರಡೂ ಸದನಗಳ ಸದಸ್ಯರಿರುವ ಒಂದು ಜಂಟಿ ಸಮಿತಿಗೆ ಪರಾಮರ್ಶೆಗೆ ಒಪ್ಪಿಸಲಾಗಿದೆ. ಪರಿಸರ ,ಅgಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯಕ್ಕೆ ಸಂಬAಧಪಟ್ಟ ಪ್ರಶ್ನೆಗಳನ್ನು ಪರಿಶೀಲಿಸಲು ಒಂದು ಸಂಸದೀಯ ಸ್ಥಾಯೀ ಸಮಿತಿ ಇರುವಾಗ ಸರಕಾರ ಹೀಗೇಕೆ ಮಾಡಬೇಕಾಗಿತ್ತು ಎಂದು ಈ ಬಗ್ಗೆ ಈ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸಿನ ಜೈರಾಂ ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಮೋದಿ ಸರಕಾರದ ಈ ಕ್ರಮ ಅದು ಸಂಸದೀಯ ವಿಧಿ-ವಿಧಾನಗಳನ್ನು ಎಗ್ಗಿಲ್ಲದೆ ಧಿಕ್ಕರಿಸುತ್ತಿರುವುದಕ್ಕೆ ಇನ್ನೊಂದು ಉದಾಹರಣೆ ಎಂದು ಬೃಂದಾ ಕಾರಟ್ ಹೇಳುತ್ತಾರೆ.
ಇದನ್ನೂ ಓದಿ : ಗ್ಯಾನ್ವಾಪಿ ಮಸೀದಿ ಕುರಿತು ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಅಗತ್ಯವಿರಲ್ಲ: ಬೃಂದಾ ಕಾರಟ್
ಈ ಮಸೂದೆಯ ಪೀಠಿಕೆಯಲ್ಲಿ “ಆರ್ಥಿಕ ಅಗತ್ಯಗಳ” ಈಡೇರಿಕೆಗಾಗಿ ಎಂಬ ಪದ ಸಮೂಹವಿದೆ. ಇವು ಯಾರ ಆರ್ಥಿಕ ಅಗತ್ಯಗಳು ಎಂದು ಬೃಂದಾ ಕಾರಟ್ ಪ್ರಶ್ನಿಸುತ್ತಾರೆ. ಅಂದರೆ ಆರ್ಥಿಕ ಅಗತ್ಯಗಳನ್ನು ನೆರವೇರಿಸುವ ಹೆಸರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯ ನಿಯಂತ್ರಣ ಚೌಕಟ್ಟಿನಿಂದ ವಿನಾಯ್ತಿ ಪಡೆಯಬÀಹುದಾದ ಪರಿಯೋಜನೆಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸುವುದೇ ಈ ಸರಕಾರದ ಉದ್ದೇಶ ಎಂಬುದು ಕಾಣ ಬರುತ್ತದೆ. ಈಗಾಗಲೇ ಸರಕಾರವೇ ಕೊಟ್ಟಿರುವ ಅಂಕಿ-ಅAಶಗಳ ಪ್ರಕಾರ 2008ರಿಂದ 2019ರ ನಡುವೆ 2.53ಲಕ್ಷ ಹೆಕ್ಟೇರುಗಳಷ್ಟು ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳತ್ತ ತಿರುಗಿಸಲಾಗಿದೆ. ಈ ಮಸೂದೆ ಅದಕ್ಕೆ ಕಾನೂನಬದ್ಧತೆ ಒದಗಿಸುವ ಪ್ರಯತ್ನ .
ಮೋದಿ ಸರಕಾರದ ಬೂಟಾಟಿಕೆ:
ಈ ರೀತಿ ವಿನಾಯ್ತಿಗಳನ್ನು ವಿಸ್ತರಿಸುವ, ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳತ್ತ ತಿರುಗಿಸುವ ಮತ್ತು ಬುಡಕಟ್ಟು ಜನಗಳ ಹಕ್ಕುಗಳ ಮೇಲೆ ಪ್ರಹಾರ ನಡೆಸುವ ಒಂದು ಮಸೂದೆಯನ್ನು ಹವಾಮಾನ ಬದಲಾವಣೆಯ ಗುರಿಸಾಧನೆಗೆ ನಾವು ಅಂರ್ರಾಷ್ಟಿçÃಯವಾಗಿ ಒಪ್ಪಿಕೊಂಡ ರಾಷ್ಟಿçÃಯ ಕೊಡುಗೆಯ ಅನುಷ್ಠಾನಕ್ಕಾಗಿ ತರಲಾಗುತ್ತಿದೆ ಎಂದು ಹೇಳುತ್ತಿರುವುದು ಸರಕಾರದ ಬೂಟಾಟಿಕೆಯಲ್ಲದೆ ಬೇರೇನೂ ಅಲ್ಲ ಎಂದು ಬಲವಾಗಿ ಖಂಡಿಸಿರುವ ಬೃಂದಾಕಾರಟ್, ಈ ಮಸೂದೆಯ ಪೀಠಿಕೆಯಲ್ಲಿ ಹೇಳಿಕೊಂಡಿರುವುದಕ್ಕೂ, ಮತ್ತು ನಂತರ ಸೂಚಿಸಿರುವ ತಿದ್ದುಪಡಿಗಳಿಗೂ ನೇರ ವೈರುಧ್ಯವಿದೆ ಎಂದು ಹೇಳುತ್ತಾರೆ.
ಒಟ್ಟಾರೆಯಾಗಿ ಈ ಮಸೂದೆ ಒಂದು ದೊಡ್ಡ ಕುತಂತ್ರದ ಭಾಗವಾಗಿದೆ ಎನ್ನುತ್ತಾರೆ ಬೃಂದಾ ಕಾರಟ್. ಅದೆಂದರೆ, 1. ಬಹುಪಾಲು ಅರಣ್ಯ ಪ್ರದೇಶಗಳನ್ನು “ಅರಣ್ಯ” ಎಂಬುದನ್ನು ಮರುವ್ಯಾಖ್ಯಾನಿಸುವ ಮೂಲಕ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ಹಕ್ಕುಗಳ ಕಾಯ್ದೆಯ ವ್ಯಾಪ್ತಿಯಿಂದ ಹೊರತೆಗೆಯುವುದು 2. ಅರಣ್ಯಗಳ ನಿರ್ವಹಣೆಯನ್ನು ಹಿಂದಕೆ ಒಯ್ದು, ಅರಣ್ಯ ಅಧಿಕಾರಶಾಹಿ, ಅರಣ್ಯ ಮಾಫಿಯ ಮತ್ತು ಕಾರ್ಪೊರೇಟ್ಗಳಿಗೆ ಹೆಚ್ಚಿನ ಹತೋಟಿ ಒದಗಿಸುವ ಮೂಲಕ ಅಧಿಕಾರಗಳ ಕೇಂದ್ರೀಕರಣಕ್ಕೆ ಅನುವು ಮಾಡಿಕೊಡುವುದು. 3. ಅರಣ್ಯ ಹಕ್ಕುಗಳ ಕಾಯ್ದೆ, ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತುಗಳ ವಿಸ್ತರಣೆ, ಗ್ರಾಮಸಭೆಗಳ ಅಧಿಕಾರ ವ್ಯಾಪ್ತಿ ಮುಂತಾದವುಗಳನ್ನು ದುರ್ಬಲಗೊಳಿಸಿ ಅರಣ್ಯ ನಿರ್ವಹಣೆಯ ಪ್ರಜಾಸತ್ತಾತ್ಮಕ ನಿರ್ವಹಣೆಯತ್ತ ಇಟ್ಟಿರುವ ಹೆಜ್ಜೆಗಳನ್ನು ಹಿಂದಕ್ಕೆ ತಳ್ಳುವುದು.
ಈ ಮೂಲಕ, ಮೋದಿ ಸರಕಾರ ಆದಿವಾಸಿಗಳ ಹಕ್ಕುಗಳ ಮೇಲೆ ಯುದ್ಧವನ್ನೇ ಸಾರಿದೆ. ಈ ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮಸೂದೆ ಅದರ ಬತ್ತಳಿಕೆಯಲ್ಲಿನ ಇನ್ನೊಂದು ಅಸ್ತ್ರ ಎಂದು ಬೃಂದಾ ಕಾರಟ್ ಹೇಳುತ್ತಾರೆ.