ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಳ್ಳಿಪಾಳ್ಯದಲ್ಲಿ ಟ್ರಾನ್ಸ್ ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟವನನ್ನು ತಾಲೂಕಿನ ಮುದ್ದೆ ಬಿಹಾಳ ಗ್ರಾಮದ ನಿವಾಸಿ ಶರಣ ಬಸಪ್ಪ (30) ಎಂದು ಗುರುತಿಸಲಾಗಿದೆ.
ಕಳೆದ 9 ವರ್ಷಗಳಿಂದ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶರಣ ಬಸಪ್ಪ, ನಿನ್ನೆ(ಮಾರ್ಚ್ 23) ಕೆಟ್ಟು ಹೋಗಿದ್ದ ಟ್ರಾನ್ಸ್ ಫಾರ್ಮರ್ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಇದನ್ನು ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಲೈನ್ ಮ್ಯಾನ್ ಸಾವು
ಶರಣಬಸಪ್ಪ ಕಳೆದ 7 ತಿಂಗಳಷ್ಟೇ ಮದುವೆಯಾಗಿದ್ದು, ಯುಗಾದಿ ಹಬ್ಬದ ದಿನ ಈ ದುರ್ಘಟನೆ ಸಂಭವಿಸಿರುವುದು ಕುಟುಂಬದವರು ಆತಂಕಕ್ಕೆ ಈಡಾಗಿದ್ದಾರೆ. ಘಟನೆ ಹಿನ್ನೆಲೆ ಮೃತನ ಪೋಷಕರು, ಸಂಬಂಧಿಕರು ಬೆಸ್ಕಾಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಘಟನೆಗೆ ಕುದೂರು ಬೆಸ್ಕಾಂ ಜೆಇ ನವೀನ್ ಕುಮಾರ್ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪ ಕೇಳಿ ಬಂದಿದ್ದು, ಫೀಜ್ ಅಳವಡಿಸುವ ಮುನ್ನಾ ಎಲ್ಸಿ ತೆಗೆಯುವಂತೆ ನವೀನ್ ಕುಮಾರ್ ಗಮನಕ್ಕೆ ತಂದರೂ ಅವರ ನಿರ್ಲಕ್ಷ್ಯದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತಪಟ್ಟ ಒಂದು ಗಂಟೆ ಕಳೆದರೂ ಮೃತದೇಹವನ್ನು ಕೊಂಡೊಯ್ಯಲು ಅಂಬುಲೆನ್ಸ್ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ