ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ : ಆಪ್​-ಬಿಜೆಪಿ ಸಮಬಲದ ಪೈಪೋಟಿ

ನವದೆಹಲಿ : ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಪ್​ ಮಧ್ಯೆ ತುರುಸಿನ ಸ್ಪರ್ಧೆ ನಡೆಯುತ್ತಿದೆ. 11.30 ರ ಸುಮಾರಿಗೆ ಮತಎಣಿಕೆಯಲ್ಲಿ ಎರಡೂ ಪಕ್ಷಗಳು ​ 36 ಸ್ಥಾನಗಳಲ್ಲಿ ಜಯಗಳಿಸಿವೆ.  ಆಪ್  102 ವಾರ್ಡ್​ಗಳಲ್ಲಿ ಮುನ್ನಡೆಯಲ್ಲಿದ್ದರೆ.  ಬಿಜೆಪಿ 79 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.  ಕಾಂಗ್ರೆಸ್​ 2 ವಾರ್ಡ್​ ಗೆದ್ದು 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸಿಪಿಐಎಂ, ಬಿಎಸ್‌ಪಿ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಪಾಲಿಕೆಯ 250 ವಾರ್ಡ್​ಗಳಿಗೆ ಡಿಸೆಂಬರ್​ 4 ರಂದು ಚುನಾವಣೆ ನಡೆದಿತ್ತು. ಶೇ.50 ರಷ್ಟು ಮತದಾನವಾಗಿತ್ತು.  250 ವಾರ್ಡ್ ಗಳಿಗೆ ಸುಮಾರು 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಂತರದ ಮತಗಟ್ಟೆ ಸಮೀಕ್ಷೆ ಪ್ರಕಾರ, ಆಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಗಳಿಸಲಿದೆ ಎಂದು ತಿಳಿಸಿತ್ತು. ಇದರೊಂದಿಗೆ ಕಳೆದ 15 ವರ್ಷಗಳಿಂದ ಮಹಾನಗರ ಪಾಲಿಕೆಯ 15 ವರ್ಷಗಳ ಬಿಜೆಪಿ ಆಡಳಿತ ಕೊನೆಗೊಳ್ಳಲಿದೆ ಎಂದು ವರದಿ ತಿಳಿಸಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 149ರಿಂದ 171 ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಬಿಜೆಪಿ 69-71 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಕಾಂಗ್ರೆಸ್ ಕೇವಲ 5ರಿಂದ 9 ವಾರ್ಡ್ ಗಳಲ್ಲಿ ಜಯ ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿತ್ತು.

ದ್ವಾರಕಾ, ಓಕ್ಲಾ, ಮಂಗಲ್ಪುರಿ, ಪಿತಾಂಪುರ, ಅಲಿಪುರ್, ಮೊಡೆಲ್ ಟೌನ್, ಶಾಸ್ತ್ರಿ ಪಾರ್ಕ್, ಯಮುನಾ ವಿಹಾರ್, ಮಯೂರ್ ವಿಹಾರ್ ಮತ್ತು ನಂದ ನಗರಿಯಲ್ಲಿ ಮತಎಣಿಕೆ ನಡೆಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ದೆಹಲಿ ಮಹಾನಗರ ಪಾಲಿಕೆ ಆಡಳಿತ ಈ ಸಲ ಪಕ್ಕಾ ನಮಗೆ ಎಂದು ಬಿಜೆಪಿ ಮತ್ತು ಆಪ್​ ಪಕ್ಷಗಳವರು ಹೇಳಿಕೊಳ್ಳುತ್ತಿದ್ದಾರೆ. ಈ ಸಲವೂ ನಾವೇ ಗೆದ್ದು ಆಡಳಿತ ಹಿಡಿಯುತ್ತೇವೆ ಎಂದು ಬಿಜೆಪಿ ನಾಯಕ ಹರೀಶ್ ಖುರಾನಾ ಹೇಳಿದ್ದರೆ, ಇನ್ನೊಂದು ಕಡೆ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರು ಹೂವುಗಳನ್ನು ಹಿಡಿದು ಸಿಎಂ ಅರವಿಂದ್ ಕೇಜ್ರಿವಾಲ್​ ನಿವಾಸಕ್ಕೆ ತೆರಳಿದ್ದಾರೆ. ಆಪ್​ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *