ಹೈಕೋರ್ಟ್‌ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯ ಪರಿಷ್ಕರಣೆಗೆ ಆಗ್ರಹಿಸಿ – ಸರ್ಕಾರಿ ನೌಕರರ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿವಿಧ ಇಲಾಖಾ ಮತ್ತು ವೃಂದ ಸಂಘಟನೆಗಳ ಒಕ್ಕೂಟದ ಜಂಟಿ ಕ್ರಿಯಾ ಸಮಿತಿಯಿಂದ ಇಂದು (ಸೆ29) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ದರಣಿ ಕಾರ್ಯಕ್ರಮ ಜರುಗಿತು. ಅಖಲ  ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗ ರಚಿಸಲು ಮತ್ತು ನೌಕರ ವಿರೋಧಿ ಆಡಳಿತ ಸುಧಾರಣೆಗಳ ಶಿಫಾರಸ್ಸುಗಳನ್ನು ಕೈಬಿಡಲು ಒತ್ತಾಯಿಸಿ ಧರಣಿ ನಡೆಯಿತು.

ಅಖೀಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರಾದ ಹೆಚ್.‌ ಎಸ್.‌ ಜೈಕುಮಾರ್‌ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಯೆರಿಕೆ ಹಾಗೂ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಇತ್ಯಾದಿ ಸೌಲಭ್ಯಗಳ ವಚ್ಚ ದಿನೇ ದಿನೇ ಗಗನಕ್ಕೇರುತ್ತಿದ್ದು, ಜನಸಾಮಾನ್ಯರಂತೆಯೇ ಸರ್ಕಾರಿ ನೌಕರರು ಬೆಲೆಯೇರಿಕೆಯ ಪ್ರಹಾರಕ್ಕೆ ಸಿಲುಕಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣದ ಇತರೆ  ರಾಜ್ಯಗಳಲ್ಲಿ 5 ವರ್ಷಕೊಮ್ಮೆ ನಿಯಮಿತವಾಗಿ ವೇತನ ಪರಿಷ್ಕರಣೆ ಮಾಡಲಾಗುತ್ತಿದ್ದು, ಕೇರಳ, ತಮಿಳುನಾಡು, ಅಂಧ್ರಪ್ರದೇಶ, ತೆಲಂಗಾಣ ಇತ್ಯಾದಿ ರಾಜ್ಯಗಳಲ್ಲಿ ವೇತನ ಸೌಲಭ್ಯಗಳು ಕೇಂದ್ರ ಸರ್ಕಾರಿ  ನೌಕರರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿವೆ. ಕರ್ನಾಟಕದಲ್ಲಿ ಪ್ರತೀ  5 ವರ್ಷಕೊಮ್ಮೆ ವೇತನ ಪರಿಷ್ಕರಣೆ ಆಗದಿರುವುದುದರಿಂದ ಈಗಾಗಲೇ ರಾಜ್ಯ ಸರ್ಕಾರಿ ನೌಕರರು 2 ವೇತನ ಪರಿಷ್ಕರಣೆಯನ್ನು ಕಳೆದುಕೊಂಡಿದ್ದಾರೆಂದು ಅಕ್ರೋಶ ಹೊರಹಾಕಿದರು.

ಆಡಳಿತ ಸುಧಾರಣೆಗಳ ಆಯೋಗ-2 ರ ಶಿಫಾರಸ್ಸುಗಳಲ್ಲಿ ರಾಜ್ಯದ ಜನತೆಯ ಹಸಿವಿನ ಸೂಚ್ಯಾಂಕ, ನಿರುದ್ಯೋಗದ ಸೂಚ್ಯಾಂಕ, ಅಪೌಷ್ಟಿಕತೆ ಸೂಚ್ಯಾಂಕ, ಶಿಶುವಿನ ಮರಣ ಸೂಚ್ಯಾಂಕ, ಸಾಕ್ಷರತೆಯ ಪ್ರಮಾಣ, ಜೀವನ ಗುಣಮಟ್ಟ ಸುಧಾರಣೆ ಇತ್ಯಾದಿಗಳನ್ನು ಕೇಂದ್ರೀಕರಿಸುವ ಬದಲಿಗೆ ಇಲಾಖೆಗಳ ಖಾಸಗೀಕರಣ, ಇಲಾಖೆಗಳ ವಿಲೀನಾತಿ ಮೂಲಕ ಹುದ್ದೆಗಳ ರದ್ದತಿ, ಹೊರಗುತ್ತಿಗೆ ಕೇವಲ ತಂತ್ರಜ್ಙಾನ ಆಧಾರಿತ ಯಾಂತ್ರಿಕ ಧೋರಣೆಗಳಿಗೆ ಸೀಮಿತವಾಗಿರುವುದು ಚಿಂತನೆಯ ಪ್ರಮುಖ ದೋಷವಾಗಿದೆ. ವಿದ್ಯಾರ್ಥಿನಿಲಯಗಳ ಅಡುಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದು, ವಿದ್ಯಾರ್ಥಿನಿಲಯಗಳ ಮೂಲಸೌಲಭ್ಯ ಉತ್ತಮಗೊಳಿಸುವ ಗೋಜಿಗೆ ಹೋಗದೇ ಕಡಿಮೆ ವಿದ್ಯಾರ್ಥಿಗಳಿದ್ದಾರೆಂಬ ನೆಪವೊಡ್ಡಿ ವಿದ್ಯಾರ್ಥಿನಿಲಯಗಳ ವಿಲೀನಾತಿ, ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಖಾಲಿಯಿರುವ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿನಿಲಯಗಳ ವಾರ್ಡನ್ ಹುದ್ದೆಯ ಪ್ರೌಭಾರಿ ಕೆಲಸವನ್ನು ಹೆಚ್ಚುವರಿಯಾಗಿ ವಹಿಸುವುದು ಇವೇ ಮುಂತಾದ ಖಾಲಿ ಹುದ್ದೆ ಭರ್ತಿ ಮಾಡದೇ ಕೆಲಸದ ಹೊರೆ ಹೊರಿಸುವ ಕಸರತ್ತುಗಳನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ, SC/ST ಸಮನ್ವಯ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ. ಶಿವಶಂಕರ್‌, ಸಚಿವಾಲಯ ನೌಕರರ ಸಂಘದ ಗೌರವಾಧ್ಯಕ್ಷರಾದ ಮಹದೇವಯ್ಯ ಮಠಪತಿ, ರಾಜ್ಯಾಧ್ಯಕ್ಷ ಪಿ.ಗುರುಸ್ವಾಮಿ, ನೌಕರ ಒಕ್ಕೂಟದ ಕಾರ್ಯಾಧ್ಯಕ್ಷರಾದ ಶೋಭಾ, ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ತೇಜ ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *