ಡಾ.ಕೆ.ಷರೀಫಾ
ಸಾವಿರಾರು ಜನ ಬೀದಿಗಿಳಿದು ಹಿಜಾಬಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿ ಸುಡುವಂತಹ ಪ್ರತಿಭಟನೆಯನ್ನು ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಅಮಿನಿಯ ಸಾವನ್ನು ಪ್ರತಿಭಟಿಸಿ ಪರ್ಶಿಯನ್ ಭಾಷೆ ಹ್ಯಾಷ್ ಟ್ಯಾಗ್ ನಲ್ಲಿ “ಮಹ್ಸಾ ಅಮಿನಿ” ಎಂದು ಮಾಡಿರುವ ಟ್ವೀಟ್ ಗಳು 20 ಲಕ್ಷದಷ್ಟು ದಾಟಿರುವುದು ಗಮನ ಸೆಳೆಯುತ್ತದೆ. ಸರ್ಕಾರದ ವಿರುದ್ದ ಕಲ್ಲು ತೂರುತ್ತಿರುವ ಮಹಿಳೆಯರು “ಸರ್ವಾಧಿಕಾರಕ್ಕೆ ಸಾವು ಖಚಿತ” ಎಂದು ಘೋಷಣೆ ಕೂಗುತ್ತಿದ್ದಾರೆ. ತೆಹರಾನಿನ ಮಹಿಳೆಯರು ಇಸ್ಲಾಮಿಕ ಕಪಿಮುಷ್ಟಿಯಿಂದ ಹೊರಬರಲು ತಮ್ಮ ಹಿಜಾಬುಗಳನ್ನು ಬೆಂಕಿಗೆ ಹಾಕಿ “ಸರ್ವಾಧಿಕಾರಿಗಳಿಗೆ ಮರಣದಂಡನೆ ಕೊಡಿ” ಎಂದು ಕೂಗುತ್ತಿದ್ದಾರೆ. 2014ರಲ್ಲಿ ಇರಾನಿನ ಮಹಿಳೆಯರು ಆನ್ ಲೈನ್ ಮೂಲಕ ಹಿಜಾಬಿನ ವಿರುದ್ಧ ಫೋಟೋ, ವಿಡಿಯೋ ಅಭಿಯಾನ ನಡೆಸಿದರು. ಇದರ ಮುಂದುವರಿಕೆಯಾಗಿ ಅಲ್ಲಿ White Wednesday ಮತ್ತು The Girls of Revolution Street ನಂತಹ ಚಳುವಳಿಗಳನ್ನು ಮಹಿಳೆಯರು ರೂಪಿಸಿದರು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಜಾಬ್ ಧರಿಸಿ ಬಂದ ಕಾರಣಕ್ಕೆನೆ ಆರು ಮಂದಿ ಹುಡುಗಿಯರನ್ನು ತರಗತಿಗಳಿಂದ ನಿಷೇಧಿಸಿತು. ಇದರ ಬೆನ್ನ ಹಿಂದೆಯೇ ಅನೇಕ ಕಡೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಇದೇ ರೀತಿಯ ನಿರ್ಭಂಧಗಳನ್ನು ಹಾಕಲು ಆರಂಭಿಸಿದವು. ಹಿಜಾಬ್ ಧರಿಸುವ ಹಕ್ಕು ಮತ್ತು ಶಿಕ್ಷಣದ ಹಕ್ಕಿನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿತು. ಕರ್ನಾಟಕದಲ್ಲಿ ಹಿಜಾಬ್ ಹಾಕಿಕೊಳ್ಳದಂತೆ ಇಲ್ಲಿಯ ಹಿಂದುತ್ವದ ಸರ್ಕಾರ ನಿರ್ಭಂಧಿಸಿದರೆ. ಇರಾನಿನ ಇಸ್ಲಾಮಿಕ ಸರ್ಕಾರ ಅವರಿಗೆ ಹಿಜಾಬ್ ಹಾಕಿಕೊಳ್ಳಲೇಬೇಕೆಂದು ನಿರ್ಭಂಧಿಸುತ್ತದೆ. ಇವೆರಡೂ ಮಹಿಳೆಯ ವಸ್ತ್ರ ಮತ್ತು ಕೋಮು ರಾಜಕಾರಣದ ನೆಲೆಗಳನ್ನು ಸೂಚಿಸುವುದಿಲ್ಲವೆ? ಇವರಿಬ್ಬರ ಧರ್ಮರಾಜಕಾರಣದಲ್ಲಿ ನಲುಗುತ್ತಿರುವವಳು ಮಹಿಳೆಯಾಗಿದ್ದಾಳೆ.
ಈ ಹಿಂದೆ ಖುಮೇನಿಯ ಆಡಳಿತಾವಧಿಯಲ್ಲಿ ಇರಾನಿನಲ್ಲಿ ಟಿ.ವಿಯಲ್ಲಿ ಸುದ್ದಿವಾಚಕಿಯರ ಧ್ವನಿ ಕೇಳಿ, ಆ ಧ್ವನಿಗೆ ಪುರುಷರಿಗೆ ಉದ್ರೇಕವಾಗುತ್ತದೆ. ಆದ್ದರಿಂದ ಟಿ.ವಿಯಲ್ಲಿ ಮಹಿಳೆಯರನ್ನು ನೇಮಿಸಕೂಡದು ಎಂದು ಆದೇಶ ಹೋರಡಿಸಿದಾಗ ಸುಮಾರು 50,000 ಮಹಿಳೆಯರು ತೆಹೆರಾನಿನ ಬೀದಿಬೀದಿಗಳಲ್ಲಿ ಘೋಷಣೆ ಕೂಗಿ “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೇಕೆ?” ಎಂದು ಪ್ರಶ್ನಿಸಿ ಹೋರಾಟಕ್ಕಿಳಿದಾಗ ಖೂಮೇನಿ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿರುವುದು ಈಗ ಇತಿಹಾಸ. ಇರಾನಿನಲ್ಲಿ 1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಅಲ್ಲಿ “ಹಿಜಾಬ್ ನ್ನು ಮಹಿಳೆಯರು ಕಂಪಲ್ಸರಿ ಧರಿಸಲೇಬೇಕೆಂಬ” ಡ್ರೇಸ್ ಕೋಡ್ ಜಾರಿಯಾಯಿತು.
ಹಿಜಾಬ್ ಸರಿಯಾಗಿ ಧರಿಸದ ಕಾರಣಕ್ಕೆ ಇರಾನಿನ ಕುರ್ದಿಸ್ ಪ್ರದೇಶದ ಸಾಕ್ವಜ್ ನಗರದ 22 ವರ್ಷದ ಮಹ್ಸಾ ಅಮೀನಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಕಸ್ಟಡಿಯ್ಲಲಿಯೇ ಅವರ ಹೊಡೆತದ ಕಾರಣ ಮೂರು ದಿನ ಕೋಮಾನಲ್ಲಿದ್ದು ದಿನಾಂಕ: 13-09-2022ರಂದು ಅವಳ ಸಾವಾಗುತ್ತದೆ. ಶತಶತಮಾನಗಳಿಂದ ನೊಂದಿರುವ ಇರಾನಿನ ಮಹಿಳೆಯರು ಈಗ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಹೋರಾಟಕ್ಕಿಳಿದಿದ್ದಾರೆ. ಕೇವಲ ಮಹಿಳೆಯರೇ ಅಲ್ಲ, ಬದಲಾಗಿ ಪುರುಷರೂ ಈ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಜನ ಬೀದಿಗಿಳಿದು ಹಿಜಾಬಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿ ಸುಡುವಂತಹ ಪ್ರತಿಭಟನೆಯನ್ನು ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಅಮಿನಿಯ ಸಾವನ್ನು ಪ್ರತಿಭಟಿಸಿ ಪರ್ಶಿಯನ್ ಭಾಷೆ ಹ್ಯಾಷ್ ಟ್ಯಾಗ್ ನಲ್ಲಿ “ಮಹ್ಸಾ ಅಮಿನಿ” ಎಂದು ಮಾಡಿರುವ ಟ್ವೀಟ್ ಗಳು 20 ಲಕ್ಷದಷ್ಟು ದಾಟಿರುವುದು ಗಮನ ಸೆಳೆಯುತ್ತದೆ. ಸರ್ಕಾರದ ವಿರುದ್ದ ಕಲ್ಲು ತೂರುತ್ತಿರುವ ಮಹಿಳೆಯರು “ಸರ್ವಾಧಿಕಾರಕ್ಕೆ ಸಾವು ಖಚಿತ” ಎಂದು ಘೋಷಣೆ ಕೂಗುತ್ತಿದ್ದಾರೆ. ಪ್ರತಿಭಟನಕಾರರ ಮೇಲೇ ಪೊಲೀಸರ ಗುಂಡಿನಿಂದ ಇಲ್ಲಿಯವರೆಗೆ 15 ಜನ ನಾಗರಿಕರ ಸಾವಾಗಿದೆ. 75 ಜನ ಪ್ರತಿಭಟಕಾರರು ಪೊಲೀಸರ ದಾಳಿಯಿಂದ ಗಾಯಗೊಂಡಿದ್ದಾರೆ. ಅಮಿನಿಯ ಊರಾದ ಕುರ್ದಿಸ್, ಸಾಕ್ವೇಜ್ ನಲ್ಲಿ ಹೋರಾಟ ತೀವ್ರವಾಗುತ್ತಿದೆ. ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇದು ಕರ್ನಾಟಕ ಸರ್ಕಾರದ ಸರ್ವಾಧಿಕಾರೀ ಮನೋವೃತ್ತಿಗೂ ಅನ್ವಯಿಸುವುದಿಲ್ಲವೇ? ಕರ್ನಾಟಕ ಸರ್ಕಾರ ಈಗೀಗ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವಂತಹ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಲಿಲ್ಲವೇ? ಇಲ್ಲಿ ಹೀಗಾದರೆ ಇರಾನಿನಲ್ಲಿ ಮಹಿಳೆಯರು ಕೂದಲು ಕಾಣದಂತೆ ಹಿಜಾಬ್ ಧರಿಸಬೇಕು. ಇತ್ತೀಚೆಗೆ ಅಲ್ಲಿ ಕೇವಲ 13 ವರ್ಷದ ಹೆಣ್ಣು ಮಗುವಿಗೆ ಮದುವೆ ಮಾಡಲಾಗುತ್ತಿದೆ. ಖುರಾನಿನ ಪ್ರಕಾರವೇ ಮಹಿಳೆಗೆ ತನಗೆ ಬೇಡವಾದ ಗಂಡನನ್ನು ಬಿಡುವ ಖುಲಾ ಎಂಬ ಅಧಿಕಾರವನ್ನೂ ಕಿತ್ತುಕೊಳ್ಳಲಾಗಿದೆ. ಇದು ಗಂಡಸಿನ ಪುರುಷಾಧಿಪತ್ಯದ ಅತಿರೇಕವಲ್ಲವೇ? ನಮ್ಮ ಆಹಾರ, ಬಟ್ಟೆ, ಸಂಗಾತಿಗಳ ಆಯ್ಕೆ ಎಲ್ಲದರ ಮೇಲೆಯೂ ನಿರ್ಬಂಧ. ಮೋದಿಯ ಶಹಭಾಶಗಿರಿಗಾಗಿ ತರಾತುರಿಯಲ್ಲಿ ಕರ್ನಾಟಕ ಸರ್ಕಾರ ಹಿಜಾಬ್ ಕಾರಣ ನೀಡಿ ನಿರ್ಬಂಧ ಹೇರುತ್ತದೆ. ಕೋರ್ಟಿಗೆ ಹೋಗುತ್ತದೆ. ಗೋಹತ್ಯಾ ನಿಷೇಧ, ಮತಾಂತರ ನಿಷೇಧ, ಹಿಜಾಬ್, ಯು.ಎ.ಪಿ.ಎ. ಕಾಯ್ದೆ ಜಾರಿ. ಈ ಮೂಲಕ ನಿರಪರಾಧಿಗಳನ್ನು, ಅದರಲ್ಲೂ ಮುಸ್ಲಿಮರನ್ನು, ಸಾಹಿತಿ, ಬುದ್ಧಿಜೀವಿ, ಹೋರಾಟಗಾರರನ್ನು ಜೈಲಿಗೆ ತಳ್ಳುವ ಕುತಂತ್ರ ಮಾಡುತ್ತದೆ. ದುಷ್ಯಂತ ದುಬೆಯಂತಹ ವಕೀಲರು “ಹುಡುಗಿಯರು ಹಿಜಾಬ್ ಹಾಕುವುದರಿಂದ ಅವರ ಘನತೆ ಹೆಚ್ಚುತ್ತದೆ” ಎಂದು ಹೇಳುತ್ತಾರೆ.
ತೆಹರಾನಿನ ಮಹಿಳೆಯರು ಇಸ್ಲಾಮಿಕ್ ಕಪಿಮುಷ್ಟಿಯಿಂದ ಹೊರಬರಲು ತಮ್ಮ ಹಿಜಾಬುಗಳನ್ನು ಬೆಂಕಿಗೆ ಹಾಕಿ “ಸರ್ವಾಧಿಕಾರಿಗಳಿಗೆ ಮರಣದಂಡನೆ ಕೊಡಿ” ಎಂದು ಕೂಗುತ್ತಿದ್ದಾರೆ. 2014ರಲ್ಲಿ ಇರಾನಿನ ಮಹಿಳೆಯರು ಆನ್ ಲೈನ್ ಮೂಲಕ ಹಿಜಾಬಿನ ವಿರುದ್ಧ ಫೋಟೋ, ವಿಡಿಯೋ ಅಭಿಯಾನ ನಡೆಸಿದರು. ಇದರ ಮುಂದುವರಿಕೆಯಾಗಿ ಅಲ್ಲಿ White Wednesday ಮತ್ತು The Girls of Revolution Street ನಂತಹ ಚಳುವಳಿಗಳನ್ನು ಮಹಿಳೆಯರು ರೂಪಿಸಿದರು. ಇರಾನಿನ ಸಂಸದ ಜಲಾಲ್ ರಶೀದಿ “ಇದು ಇರಾನಿಗೆ ಬಹಳಷ್ಟು ನಷ್ಟವನ್ನುಂಟು ಮಾಡುತ್ತದೆ” ಎಂದು ಹೇಳುತ್ತಾರೆ. ಪ್ರಾನ್ಸ್ ನ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರಮ್‌ರವರು ಹೇಳುತ್ತಾರೆ. “ನಾವು ಮಹಿಳೆಯರ ಮಾನವೀಯ ಹಕ್ಕುಗಳನ್ನು ಬೆಂಬಲಿಸುತ್ತೇವೆ. ನಾವು ಮಹಿಳೆಯರ ಹಕ್ಕಿನ ಹೋರಾಟದ ಜೋತೆಗಿದ್ದೇವೆ. ಇದರಿಂದ ಇರಾನಿನ ವಿಶ್ವಾಸಾರ್ಹತೆಯೂ ಆತಂಕದಲ್ಲಿದೆ” ಎಂದು. ಇದೇ ಹಿಜಾಬಿನ ಕಾರಣಕ್ಕೆ ಕರ್ನಾಟಕ ಹಾಗೂ ಭಾರತದ ಗೌರವವೂ ಕುಸಿಯುತ್ತಲಿತ್ತು ಎಂಬುದನ್ನು ಗಮನಿಸಬೇಕಾಗಿದೆ.
ಅದು ಇರಾನೇ ಆಗಲಿ, ಭಾರತವೇ ಆಗಲಿ ಅದಕ್ಕೀಗ ವಸ್ತ್ರ ಸಂಹಿತೆ ಬೇಕಿಲ್ಲ. ಬದಲಾಗಿ ಬದಲಾಗುತ್ತಿರುವ ಪರಿಸರ, ಅತೀವೃಷ್ಟಿ ಅನಾವೃಷ್ಟಿ, ರೈತ ಸಮಸ್ಯೆ, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಜಿ.ಡಿ.ಪಿ, ಕುಸಿತ, ದಿನೇ ದಿನೇ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಶಿಕ್ಷಣ, ಆಹಾರ, ಖಾಸಗಿಯವರಿಗೆ ಮಾರಿಕೊಳ್ಳುತ್ತಿರುವ ಒಂದೋಂದೇ ಆಸ್ತಿಗಳ ಕುರಿತು ಚಿಂತಿಸಬೇಕಿದೆ. ಮಾರುತ್ತಿರುವ ಮೋದಿಯಿಂದ ನಮ್ಮ ಸ್ವತ್ತುಗಳ ರಕ್ಷಣೆ, ಮತ್ತು ಯುವಜನರ ನಿರುದ್ಯೋಗ, ಬೆಲೆಯೇರಿಕೆಯನ್ನು ನಿಯಂತ್ರಿಸುವುದು ತುರ್ತು ಅಗತ್ಯವಾಗಿದೆ.