ನವದೆಹಲಿ : ಬೀದಿನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಬೀದಿ ನಾಯಿಗಳಿಗೆ ವಾಡಿಕೆಯಂತೆ ಆಹಾರ ನೀಡುವ ಜನರನ್ನು ಅವುಗಳ ಲಸಿಕೆಗೆ ಜವಾಬ್ದಾರರನ್ನಾಗಿ ಮಾಡಬಹುದು, ಆ ಪ್ರಾಣಿಗಳು ಜನರ ಮೇಲೆ ದಾಳಿ ಮಾಡಿದರೆ ವೆಚ್ಚವನ್ನು ಆಹಾರ ನೀಡುವವರೇ ಭರಿಸಬೇಕಾಗುತ್ತದೆ ಎಂದು ಸೂಚಿಸಿದೆ.
2019ರಿಂದ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ (27,52,218), ತಮಿಳುನಾಡು (20,70,921), ಮಹಾರಾಷ್ಟ್ರ (15,75,606) ಮತ್ತು ಪಶ್ಚಿಮ ಬಂಗಾಳ(12,09,232)ದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ, ಲಕ್ಷದ್ವೀಪದಲ್ಲಿ ಇದುವರೆಗೂ ಯಾವುದೇ ನಾಯಿ ಕಡಿತದ ಪ್ರಕರಣಗಳು ವರದಿಯಾಗಿಲ್ಲ.2019ರಲ್ಲಿ 72,77,523 ನಾಯಿ ಕಡಿತವಾಗಿವೆ. 2020ರಲ್ಲಿ 46,33,493 ಮತ್ತು ಒಂದು ವರ್ಷದ ನಂತರ 17,01,133ಕ್ಕೆ ಇಳಿದಿದೆ. ಆದರೆ, 2022ರ ಮೊದಲ 7 ತಿಂಗಳು ಕೇವಲ 14.5 ಲಕ್ಷ ಪ್ರಕರಣಗಳನ್ನು ದಾಖಲಿಸಿವೆ. ಈ ವರ್ಷ ಅತಿ ಹೆಚ್ಚು ಪ್ರಕರಣಗಳು ತಮಿಳುನಾಡು (251,510) ಮತ್ತು ಮಹಾರಾಷ್ಟ್ರ (231,531)ದಲ್ಲಿ ದಾಖಲಾಗಿವೆ. ಭಾರತವು ಪ್ರತಿ ವರ್ಷ 100ಕ್ಕೂ ಹೆಚ್ಚು ರೇಬೀಸ್ ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತದೆ.
ಕೇರಳದಲ್ಲಿ ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಅವರು ಬೀದಿನಾಯಿಗಳಿಗೆ ಆಹಾರ ನೀಡುವವರು ನಾಯಿಯ ಮೇಲೆ ಸಂಖ್ಯೆಗಳನ್ನು ಅಚ್ಚಾಕಬಹುದು ಅಥವಾ ಗುರುತು ಹಾಕಬಹುದು ಎಂದು ಸಲಹೆ ನೀಡಿದ್ದು, ಒಬ್ಬ ವ್ಯಕ್ತಿಯ ಮೇಲೆ ಆ ನಾಯಿಯಿಂದ ದಾಳಿಯಾದಲ್ಲಿ ಅವರಿಗೆ ಲಸಿಕೆ ಹಾಕಿಸುವ ವೆಚ್ಚವನ್ನು ಭರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ನಮ್ಮ ದೇಶದಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ಕೂಡ ನಾಯಿಗಳಿಗೆ ಆಹಾರ ನೀಡುತ್ತೇನೆ. ಆದರೆ, ಜನರು ನಾಯಿಗಳಿಗೆ ಆಹಾರ ಹಾಕುವುದರ ಜೊತೆಗೆ ಅವುಗಳ ಕಾಳಜಿ, ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ. ಬೀದಿನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯ ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡುವ ಜನರ ನಡುವೆ ಸಮತೋಲನವನ್ನು ಸೃಷ್ಟಿಸುವುದು,ಬೀದಿ ನಾಯಿಗಳ ದಾಳಿಯಿಂದ ಅಮಾಯಕ ಜನರನ್ನು ರಕ್ಷಿಸುವ ಅಗತ್ಯವಿದೆ ಎಂದು ಹೊತ್ತಿ ಹೇಳೀದ್ದಾರೆ.
ಆಹಾರದ ಕೊರತೆಯಿಂದಾಗಿ ನಾಯಿಗಳು ಸೋಂಕಿಗೆ ಒಳಗಾಗುವ ಸಾದ್ಯತೆಯಿದೆ, ರೇಬೀಸ್ ಸೋಂಕಿತ ನಾಯಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆರೈಕೆ ಕೇಂದ್ರದಲ್ಲಿ ಇರಿಸಬಹುದು ಎಂದು ಹೇಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ಮಕ್ಕಳು ಮತ್ತು ಮಹಿಳೆಯರ ಮೇಲೆ ನಾಯಿಗಳು ದಾಳಿ ಮಾಡುತ್ತಿರುವುದರಿಂದ ಜನರು ಸಾವನ್ನಪ್ಪಿದ್ದಾರೆ ಎಂದು ವಕೀಲ ವಿ.ಕೆ. ಹೇಳಿದ್ದಾರೆ. ಬಿಜು ಅವರು ಇತ್ತೀಚೆಗೆ ಉನ್ನತ ನ್ಯಾಯಾಲಯದ ಮುಂದೆ ಬೀದಿ ನಾಯಿಗಳ ದಾಳಿಯ ವಿಷಯವನ್ನು ಪ್ರಸ್ತಾಪಿಸಿದರು.
ಕೇರಳ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು, ಸ್ಥಳೀಯ ಸಂಸ್ಥೆಗಳ ಕಾನೂನಿನ ಪ್ರಕಾರ ಬೀದಿನಾಯಿಗಳನ್ನು ಕೊಲ್ಲಲು 2015 ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು.ಕೇರಳದಲ್ಲಿ ನಾಯಿಗಳ ದಾಳಿಗೊಳಗಾದ ಸಂತ್ರಸ್ತರಿಗೆ ಪರಿಹಾರ ವಿತರಣೆ ಕುರಿತ ದೂರುಗಳ ಬಗ್ಗೆ ವಿಚಾರಣೆ ನಡೆಸಲು 2016ರಲ್ಲಿ ಸುಪ್ರೀಂ ಕೋರ್ಟ್ ರಚಿಸಿದ್ದ ಶ್ರೀ ಜಗನ್ ಆಯೋಗಕ್ಕೆ ವರದಿ ಸಲ್ಲಿಸುವಂತೆ ನ್ಯಾಯಾಲಯ ತಿಳಿಸಿದೆ. ವಾದಗಳನ್ನು ಆಲಿಸಿದ ನಂತರ, ಉನ್ನತ ನ್ಯಾಯಾಲಯವು ಸೆಪ್ಟೆಂಬರ್ 28 ರಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ನಿಗದಿಪಡಿಸಿದ್ದು, ಪ್ರಾಣಿ ಹಕ್ಕುಗಳ ಸಂಘಟನೆಗಳಿಗೆ ಮಧ್ಯಪ್ರವೇಶಿಸಲು ಅನುಮತಿ ನೀಡಿದೆ.
ವಿಶೇಷವಾಗಿ ಕೇರಳ ಮತ್ತು ಮುಂಬೈನಲ್ಲಿ ಬೀದಿ ನಾಯಿಗಳನ್ನು ಕೊಲ್ಲುವ ಕುರಿತು ವಿವಿಧ ನಾಗರಿಕ ಸಂಸ್ಥೆಗಳು ಹೊರಡಿಸಿದ ಆದೇಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಅರ್ಜಿಗಳ ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಕೆಲವು ಎನ್‌ಜಿಒಗಳು ಮತ್ತು ವೈಯಕ್ತಿಕ ಅರ್ಜಿದಾರರು ಬಾಂಬೆ ಹೈಕೋರ್ಟ್ ಮತ್ತು ಕೇರಳ ಹೈಕೋರ್ಟ್ ಸೇರಿದಂತೆ ಕೆಲವು ಹೈಕೋರ್ಟ್‌ಗಳ ತೀರ್ಪುಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನಿಯಮಗಳ ಪ್ರಕಾರ ಬೀದಿ ನಾಯಿಗಳ ಕಾಟವನ್ನು ಎದುರಿಸಲು ಪುರಸಭೆಯ ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿದೆ. ಈ ವಿಷಯದಲ್ಲಿ ಉತ್ತರಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ತಿಳಿಸಿದೆ.