ಹಾಡುತ್ತಲೇ ಜೀವ ತೊರೆದ ಮಲೆಯಾಳಂ ಗಾಯಕ:ಎಡವ ಬಶೀರ್

ಅಲಪ್ಪುಳ: ವೇದಿಕೆ ಮೇಲೆ ಹಾಡು ಹೇಳುವ ವೇಳೆ ಕುಸಿದು ಬಿದ್ದು ಮಲಯಾಳಂ ಗಾಯಕ ಎಡವ ಬಶೀರ್(87) ಶನಿವಾರ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುವ ಮೂಲಕ ಎಡವ ಬಶೀರ್ ಹೆಚ್ಚು ಜನಪ್ರಿಯರಾಗಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್‍ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ ಅವರ ಮಾನ ಹೋ ತುಮ್ ಬೇಹದ್ ಹಸೀನ್… ಹಾಡನ್ನು ಹಾಡುವಾಗ ಎಡವ ಬಶೀರ್ ಕುಸಿದುಬಿದ್ದಿದ್ದಾರೆ.

ಹಾಡು ಹಾಡುತ್ತಾ ವೇದಿಕೆ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ ಅವರು ಇದ್ದಕ್ಕಿದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರ ಕೈಯಲ್ಲಿದ್ದ ಮೈಕ್ ಕೂಡ ಕೆಳಗೆ ಬಿದ್ದ ತಕ್ಷಣವೇ ವೇದಿಕೆಯತ್ತ ಜನರು ಆಗಮಿಸಿ, ಬಶೀರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬಶೀರ್​ ಅವರು ಸ್ವಾತಿ ತಿರುನಾಳ್ ಮ್ಯೂಸಿಕ್ ಅಕಾಡೆಮಿಯಿಂದ ಗಾನಬೂಷಣಂ (ಸಂಗೀತದಲ್ಲಿ ಶೈಕ್ಷಣಿಕ ಪದವಿ) ಪೂರ್ಣಗೊಳಿಸಿದರು. 1972 ರಲ್ಲಿ ಅವರು ಕೊಲ್ಲಂ ಸಂಗೀತಾಲಯ ಗಾನಮೇಳ ತಂಡವನ್ನು ರಚಿಸಿದ್ದರು. ಅಲ್ಲಿಂದ ಅವರ ವೇದಿಕೆ ಕಾರ್ಯಕ್ರಮಗಳು ಪ್ರಾರಂಭವಾಗಿ ತಮ್ಮ 78ನೇ ವಯಸ್ಸಿನವರೆಗೂ ಹಾಡುತ್ತಾ ಬಂದಿದ್ದರು.

ಯೇಸುದಾಸ್ ಮತ್ತು ಮುಹಮ್ಮದ್ ರಫಿ ಅವರ ಹಾಡುಗಳನ್ನು ಹೇಳುತ್ತಲೇ ಗಾಯಕ ಎಡವ ಬಶೀರ್ ಜನರ ಮನ ಗೆದ್ದಿದ್ದರು. ಅವರು ವೇದಿಕೆಯ ಮೇಲೆ ಹಾಡು ಹೇಳುತ್ತಿರುವಾಗಲೇ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್‌ ಆಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *