ಐಪಿಇಎಫ್‌ ಒಪ್ಪಂದಕ್ಕೆ ಭಾರತ-ಅಮೆರಿಕ ಸೇರಿದಂತೆ 13 ದೇಶಗಳು ಸಹಿ

ಟೋಕಿಯೋ : ಇಂಡೋ-ಪೆಸಿಫಿಕ್‌ ವಲಯದಲ್ಲಿ ಡಿಜಿಟಲ್‌ ವಹಿವಾಟು, ಸ್ವಚ್ಛ ಇಂಧನ, ಭ್ರಷ್ಟಾಚಾರ ನಿಗ್ರಹ ಮತ್ತು ಪೂರೈಕೆ ವ್ಯವಸ್ಥೆಗೆ ಪರಸ್ಪರರಿಗೆ ನೆರವಾಗುವ ‘ಇಂಡೋ-ಪೆಸಿಫಿಕ್‌ ಎಕನಾಮಿಕ್‌ ಫ್ರೇಮ್‌ವರ್ಕ್’(ಐಪಿಇಎಫ್‌) ಒಪ್ಪಂದಕ್ಕೆ ಅಮೆರಿಕ ಹಾಗೂ ಭಾರತ ಸೇರಿದಂತೆ 13 ದೇಶಗಳು ಸಹಿ ಹಾಕಿವೆ. ವಿಶ್ವದ ಆರ್ಥಿಕತೆ ಮೇಲೆ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಬೀರುತ್ತಿದ್ದು, ಇದನ್ನು ತಡೆಗಟ್ಟಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ವಿಶ್ವದ ಒಟ್ಟು ಜಿಡಿಪಿಯಲ್ಲಿ ಶೇ 40ರಷ್ಟು ಪಾಲು ಹೊಂದಿರುವ ಅಮೆರಿಕ, ಆಸ್ಪ್ರೇಲಿಯಾ, ಭಾರತ, ಬ್ರುನೈ, ಇಂಡೋನೇಷ್ಯಾ, ಜಪಾನ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌, ವಿಯೆಟ್ನಾಂ ಒಪ್ಪಂದಕ್ಕೆ ಸಹಿಹಾಕಿರುವ ದೇಶಗಳಾಗಿವೆ.

ಆರಂಭಿಕ ಹಂತದಲ್ಲೇ 12ಕ್ಕೂ ಹೆಚ್ಚು ರಾಷ್ಟ್ರಗಳು ಇದರ ಪಾಲುದಾರರಾಗಿ ಸೇರಿಕೊಂಡವು. ಈ ಪಟ್ಟಿಯಲ್ಲಿ ಭಾರತವೂ ಸಹ ಸೇರಿದೆ. ಏಷ್ಯಾದ ರಾಷ್ಟ್ರಗಳ ಸಹಭಾಗಿತ್ವವು ಈ ಪ್ರದೇಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಜಪಾನ್‌ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಕ್ಕೆ ವಿಶ್ವ ನಾಯಕರು ಆಗಮಿಸಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಐಪಿಇಎಫ್‌ ಘೋಷಣೆಯಾಗಿವೆ.  ಕ್ವಾಡ್ ನಾಯಕರ ಶೃಂಗಸಭೆಯ ಒಂದು ದಿನ ಮುಂಚಿತವಾಗಿ ಐಪಿಇಎಫ್‌ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಐಪಿಇಎಫ್ ಎನ್ನುವುದು ಈ ಪ್ರದೇಶದಲ್ಲಿ ಯುನೈಟೆಡ್ ಸ್ಟೇಟ್ಸ್ ಹೊಂದಿರುವ ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಆರ್ಥಿಕ ಕಾರ್ಯಕ್ರಮ. ಇದರ ಚಾಲನೆಯಿಂದಾಗಿ ಸಂಯುಕ್ತ ಅಮೇರಿಕಾ ಆರ್ಥಿಕ ನಾಯಕತ್ವವನ್ನು ಮರುಸ್ಥಾಪಿಸುವಲ್ಲಿ ಮತ್ತು ಇಂಡೋ-ಪೆಸಿಫಿಕ್ ದೇಶಗಳನ್ನು ಪ್ರಸ್ತುತಪಡಿಸುವಲ್ಲಿ ಸಾಧ್ಯವಾಗಲಿದೆ. ಈ ನಿರ್ಣಾಯಕ ವಿಷಯಗಳಿಗೆ ಚೀನಾದ ವಿಧಾನಕ್ಕೆ ಪರ್ಯಾಯವಾಗಿದೆ” ಎಂದು ಯುಎಸ್ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಪ್ಪಂದದ ಮಹತ್ವ

ಈ ಒಪ್ಪಂದವು, ಕೊರೋನಾ ಸಾಂಕ್ರಾಮಿಕ ಮತ್ತು ರಷ್ಯಾ ಹಾಗೂ ಉಕ್ರೇನ್‌ ಯುದ್ಧದಿಂದ ಆರ್ಥಿಕತೆ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ಬದಿಗೆ ಸರಿಸಿ ಭವಿಷ್ಯದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವುದು. ಅಂತಹ ಸಾಮೂಹಿಕ ಯತ್ನಕ್ಕೆ ಅವಕಾಶವಾಗಲಿದೆ.

ಸಂಯುಕ್ತ ಅಮೇರಿಕಾವು ವಿವಿಧ ವಲಯಗಳಲ್ಲಿ ಏಷ್ಯಾ ದೇಶಗಳ ಜೊತೆ ಇನ್ನಷ್ಟು ನಿಕಟವಾಗಿ ವ್ಯವಹರಿಸಲು ಈ ಒಪ್ಪಂದ ಅನುವು ಮಾಡಿಕೊಡಲಿದೆ ಎಂದು ಒಪ್ಪಂದದ ನೇತೃತ್ವ ವಹಿಸಿ ಹೇಳಿದೆ.

ಸಹಕಾರಕ್ಕೆ ಮೋದಿ ಕರೆ

ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂಡೋ-ಪೆಸಿಫಿಕ್‌ ವಲಯದಲ್ಲಿ ಮುಕ್ತ, ಸ್ವತಂತ್ರ ಮತ್ತು ಸಮಗ್ರ ಒಳಗೊಳ್ಳುವಿಕೆಗೆ ಭಾರತ ಬದ್ಧ ಎಂದು ಘೋಷಿಸಿದರಲ್ಲದೆ, ಆರ್ಥಿಕ ಪ್ರಗತಿ, ಶಾಂತಿ ಮತ್ತು ಸಮೃದ್ಧಿಯ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ಇನ್ನಷ್ಟು ಆಳವಾದ ಸಹಕಾರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಪ್ರಾದೇಶಿಕ ಆರ್ಥಿಕ ಸಂಪರ್ಕ, ಏಕೀಕರಣ ಮತ್ತು ಈ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧವಾಗಿದೆ. ಇಂದಿನ ಒಪ್ಪಂದಗಳು, ಪಾಲುದಾರ ರಾಷ್ಟ್ರಗಳು ಆರ್ಥಿಕ ಸಹಕಾರವನ್ನು ಬಲಪಡಿಸುವ ಮತ್ತು ಹಂಚಿಕೆಯ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸುವ ಚರ್ಚೆಗಳನ್ನು ಪ್ರಾರಂಭಿಸುತ್ತವೆ ಎಂದರು.

Donate Janashakthi Media

Leave a Reply

Your email address will not be published. Required fields are marked *