ಬೆಂಗಳೂರು:ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ತಾರತಮ್ಯವಿಲ್ಲದೆ ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ
ಜನರ ಆರೋಗ್ಯದ ಪ್ರಶ್ನೆ ಇದೆ. ಶಬ್ದ ಮಾಲಿನ್ಯದ ಸಮಸ್ಯೆ ಇದೆ. ವಯಸ್ಸಾದವರು, ಮಕ್ಕಳು, ಆಸ್ಪತ್ರೆ, ಶಾಲೆ ಇವೆಲ್ಲಾ ನೆಮ್ಮದಿಯಿಂದ ಶಾಂತ ರೀತಿಯಿಂದ ಕೆಲಸ ಮಾಡುವ ಸ್ಥಳಗಳು.ಇಲ್ಲಿ ಶಬ್ಧ ಮಾಲಿನ್ಯ ಆಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಒಂದು ನಿರ್ಧಾರ ಪ್ರಕಟ ಮಾಡುವುದರಲ್ಲಿ ಇದೆ. ಯಾವ ಯಾವ ಜಾಗದಲ್ಲಿ ಯಾವ ತರಹದ ಶಬ್ಧ ಇರಬೇಕು ಹಾಗೂ ಖಾಯಂ ಮೈಕ್ ಆಪರೇಟ್ ಮಾಡೋದಕ್ಕೆ ಹೇಗೆ ಅನುಮತಿ ಪಡೆಯಬೇಕು ಎಂಬುದನ್ನ ಸರ್ಕಾರ ನಿರ್ಧರಿಸುತ್ತದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನ್ಯಾಯಲಯದ ಆದೇಶದಂತೆ ಶಬ್ದ ಮಾಲಿನ್ಯ ನಿಯಂತ್ರಣಗಳ ನಿಯಮಗಳ ಅನುಷ್ಠಾನಕ್ಕೆ ಹೊಸ ನಿಯಮಗಳನ್ನು ತರಲಾಗಿದೆ. ದೇವಸ್ಥಾನ,ಚರ್ಚ್, ಮಸೀದಿ ಸೇರಿದಂತೆ ಯಾವುದೇ ಸ್ಥಳದಲ್ಲಿ ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೂ ಧ್ವನಿವರ್ದಕವನ್ನು ಬಳಕೆ ಮಾಡಬಾರದು ಶಬ್ದ ಮಾಲಿನ್ಯ(ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳು, 2000, ನಿಯಮ 3(1) ಅಡಿಯಲ್ಲಿ. ಹೇಳಿರುವಂತೆ ‘ಹಗಲಿನ ಸಮಯ’ ಎಂದರೆ ಬೆಳಗ್ಗೆ 6.00 ರಿಂದ ಬೆಳಗ್ಗೆ 10.00 ರವರೆಗೆ ಬಳಸಬಹುದು ಮತ್ತು ರಾತ್ರಿಯ ಸಮಯ ಎಂದರೆ ರಾತ್ರಿ 10.00 ರಿಂದ ಬೆಳಗ್ಗಿನ ಜಾವ 6.00 ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.
ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡುತ್ತಿದ್ದೇವೆ. ಖಾಯಂ ಮೈಕ್ ಬೇಕಿದ್ದವರು ಮನವಿ ಸಲ್ಲಿಸಬೇಕು. ಇನ್ನು ಹದಿನೈದು ದಿನಗಳ ಕಾಲ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಸಿಎಂ ಬಸವರಾಜ್ ಬೊಮ್ಮಾಯಿ ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಂಡಿದ್ದಾರೆ. ಹಾಗೂ ಶಬ್ಧ ಎಷ್ಟು ಡೆಸಿಬಲ್ ಇರಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮಾರ್ಗಸೂಚಿ ನೀಡಿದೆ. ಅದರ ವ್ಯಾಪ್ತಿಯಲ್ಲಿ ಸರ್ಕಾರದ ನಿರ್ಣಯ ಪ್ರಕಟವಾಗಲಿದೆ. ಇವೆಲ್ಲವಕ್ಕೂ ಮಂಗಳವಾರ ಜೀವ ಬರಲಿದೆ. ಮೈಕ್ ಸೆಟ್ ನಿರ್ಭಂಧ ಸಂಬಂಧಿಸಿದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.