ನವದೆಹಲಿ : ಭಾರತದ ಉದ್ಯೋಗ ಸೃಷ್ಟಿ ಸರಿಯಾಗಿ ನಡೆಯದ ಕಾರಣ ಈಗ ಭಾರತ ದೊಡ್ಡ ಸಮಸ್ಯೆಯನ್ನು ಎದುರಿಸುವಂತಾಗಿದೆ. ದುಡಿಯುವ ಸಾಮರ್ಥ್ಯವಿರುವ 90 ಕೋಟಿ ಮಂದಿಯಲ್ಲಿ ಅರ್ಧದಷ್ಟು ಮಂದಿ ಉದ್ಯೋಗ ಹುಡುಕುವುದನ್ನು ನಿಲ್ಲಿಸಿದ್ದಾರೆ ಎಂಬ ಆತಂಕದ ವಿಚಾರ ಈಗ ಹೊರ ಬಿದ್ದಿದೆ.
ಮುಂಬೈನ ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್‌ನ ಹೊಸ ಅಂಕಿಅಂಶಗಳ ಪ್ರಕಾರ ಸರಿಯಾದ ರೀತಿಯ ಉದ್ಯೋಗವನ್ನು ಹುಡುಕಲು ಸಾಧ್ಯವಾಗದೆ ಹತಾಶರಾಗಿರುವ ಕೋಟ್ಯಾಂತರ ಭಾರತೀಯರು ವಿಶೇಷವಾಗಿ ಮಹಿಳೆಯರು ದುಡಿಯುವ ಸಾಮರ್ಥ್ಯವಿರುವ ಜನರ ಗುಂಪಿನಿಂದ ಸಂಪೂರ್ಣವಾಗಿ ನಿರ್ಗಮಿಸುತ್ತಿದ್ದಾರೆ ಎಂಬ ಅಂಶ ಹೊರ ಬಿದ್ದಿದೆ.
ಸಿಎಂಐಇ ಪ್ರಕಾರ, ಕಾನೂನು ಬದ್ಧವಾಗಿ ಕೆಲಸ ಮಾಡುವ ಅರ್ಹತೆಯುಳ್ಳ ವಯಸ್ಸಿನ 90ಕೋಟಿ ಭಾರತೀಯರಲ್ಲಿ, ಅರ್ಧಕ್ಕಿಂತಲೂ ಹೆಚ್ಚಿನ ಮಂದಿಗೆ ಉದ್ಯೋಗ ಬೇಡವಾಗಿದೆ. ಅರ್ಹತೆಗೆ ತಕ್ಕಂತೆ ಉದ್ಯೋಗ ಸೃಷ್ಟಿ ಮಾಡದ ಸರಕಾರದ ನಡೆ ಈ ಅನಾಹುತವನ್ನು ಸೃಷ್ಟಿಸಿದೆ. 15 ರಿಂದ 64 ವರ್ಷ ನಡುವಿನ ವಯಸ್ಸಿನ ಜನಸಂಖ್ಯೆಯ ಸುಮಾರು ಮೂರನೇ ಎರಡಷ್ಟು ಮಂದಿಯಲ್ಲಿ, ಸಣ್ಣ ದುಡಿಮೆಗೂ ಸ್ಪರ್ಧೆಯು ಹೆಚ್ಚಾಗಿರುತ್ತದೆ. ಸರಕಾರದಲ್ಲಿನ ಸ್ಥಿರ ಸ್ಥಾನಗಳಿಗೆ ಎಂದಿನಂತೆ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗುತ್ತವೆ. 1000 ಹುದ್ದೆಗಳ ನೇಮಕಾತಿಗೆ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾದ ದಾಖಲೆಗಳಿವೆ. ಇದು ನಿರುದ್ಯೋಗ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದೆ.
ಮಹಿಳೆಯರ ಸಂಖ್ಯೆಯಲ್ಲಿ ಕುಸಿತ : ಉದ್ಯೋಗ ಕ್ಷೇತ್ರದಿಂದ ಸುಮಾರು 2.1ಕೋಟಿ ಮಹಿಳೆಯರು ಕೆಲಸದಿಂದ ದೂರ ಉಳಿದಿದ್ದಾರೆ. ಕೇವಲ ಶೇಕಡಾ 9ರಷ್ಟು ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸದ ಹುಡುಕಾಟದಲ್ಲಿದ್ದಾರೆ. ಉದ್ಯೋಗದ ಜಾಗದಲ್ಲಿನ ಭದ್ರತೆ, ಸುರಕ್ಷತೆ ಇಲ್ಲದಿರುವುದು. ತಡರಾತ್ರಿವರೆಗೂ ಕೆಲಸ. ಲೈಂಗಿಕ ದೌರ್ಜನ್ಯ. ಮನೆಯಲ್ಲೂ ಕೆಲಸವನ್ನು ನಿರ್ವಹಿಸುವುದು. 24 ಗಂಟೆಗಳಲ್ಲಿ 17 ಗಂಟೆಗಳ ಕಾಲ ಕಚೇರಿ. ಮನೆ ಕೆಲಸಗಳಲ್ಲಿ ಸಮಯ ಕಳೆಯುತ್ತಿರುವುದು ಪ್ರಮುಖ ಕಾರಣವಾಗಿದೆ.
ಸರಕಾರದ ನೀತಿ ಕಾರಣ : ಉದ್ಯೋಗದ ಹುಡುಕಾಟವನ್ನು ಜನ ನಿಲ್ಲಿಸುವುದಕ್ಕೆ ಸರಕಾರದ ನೀತಿಗಳೆ ಕಾರಣವಾಗಿವೆ. ಕೌಶಲ್ಯ ಮೂಲಕ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ವಾಗ್ದಾನ ಮಾಡಿದ್ದ ಪ್ರಧಾನಿ ಮೋದಿ ಯುವಜನರಿಗೆ ದ್ರೋಹ ಬಗೆದಿದ್ದಾರೆ. ಕೌಶಲ್ಯ ಪ್ರೋತ್ಸಾಹ ಕಾಗದದ ಗುರಿಯಾಯಿತೆ ಹೊರತು ಅದಕ್ಕೆ ಪೂರಕವಾದ ಯೋಜನೆಗಳನ್ನು ಸೃಷ್ಟಿ ಮಾಡಲಿಲ್ಲ. ನೋಟು ಅಮಾನ್ಯೀಕರಣ, ಮಾರಾಟ ತೆರಿಗೆಯ ನಿಯಮದಲ್ಲಿ ಬದಲಾವಣೆ ತಂದದ್ದು ಇದು ಆರ್ಥಿಕತೆಯ ಮೇಲೆ ದೊಡ್ಡ ಹೊಡತವನ್ನೆ ಬೀಳಿಸಿದೆ. ಬಜೆಟ್ ನಲ್ಲಿ ಹಣ ಮೀಸಲು ಈಡದಿರುವುದು. ಕಾರ್ಪೋರೇಟ್ ಕಂಪನಿಗಳನ್ನು ಸ್ವಾಗತಿಸುತ್ತಿರುವುದು, ವಿದೇಶಿ ನೇರ ಬಂಡವಾಳ ಹೂಡಿಕೆ. ಅಕ್ಕ ಪಕ್ಕದ ರಾಷ್ಟ್ರಗಳ ಜೊತೆ ಸ್ನೇಹ ಸಂಬಂಧ ಹೊಂದದಿರುವುದು ಈ ಅವಾಂತರವನ್ನು ಸೃಷ್ಟಿಸಿದೆ.
ಪರಿಹಾರ ಹೇಗೆ ?: ಯುವಜನರೆ ಇರುವ ಭಾರತದಲ್ಲಿ ಅವರ ಇಚ್ಚೆಗೆ ತಕ್ಕಂತೆ ಉದ್ಯೋಗವನ್ನು ಸೃಷ್ಟಿಸಬೇಕಿದೆ.
ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ವರದಿಯಂತೆ ಭಾರತವು ತನ್ನ ಯುವಜನರಿಗಾಗಿ 2030ರ ವೇಳೆಗೆ ಕನಿಷ್ಠ 90 ಮಿಲಿಯನ್ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಮತ್ತು ಇದಕ್ಕಾಗಿ ವಾರ್ಷಿಕ ಜಿಡಿಪಿ ಬೆಳವಣಿಗೆಯು ಶೇ.8ರಿಂದ ಶೇ.8.5 ರಷ್ಟಿರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರ ಯೋಜನೆಗಳನ್ನು ರೂಪಿಸಬೇಕು.
ಖಾಸಗೀಕರಣ ನೀತಿಗಳಿಗೆ ಕಡಿವಾಣ ಹಾಕಿ ಸಾರ್ವಜನಿಕ ವ್ಯವಸ್ಥೆಯನ್ನು ಬಲಪಡಿಸಬೇಕು. ಆರೋಗ್ಯ, ಶಿಕ್ಷಣ, ಸಾರಿಗೆ, ಸಾರಿಗೆ ಹೀಗೆ ಪ್ರತಿಯೊಂದು ವಿಭಾಗಗಳು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಬೇಕು. ಆಗ ನಿರುದ್ಯೋಗ ಸಮಸ್ಯೆಗೆ ತಡೆಯೊಡ್ಡಲು ಸಾಧ್ಯವಾಗುತ್ತದೆ. ಯುವಜನರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ಭಾರತ ವೈಫಲ್ಯ ಅನುಭವಿಸಿದರೆ, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವ ಭಾರತದ ಗುರಿ ಕನಸಾಗಿ ಉಳಿಯುವ ಸಾಧ್ಯತೆ ಇದೆ.
Very bad political