ರೇಖಾ ಹಾಸನ
2005ರಂದು ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಆಶಾ ಕಾರ್ಯಕರ್ತೆಯನ್ನು ಸಮುದಾಯದಿಂದ ಗುರುತಿಸಿ ಆಯ್ಕೆ ಮಾಡಲಾಗಿದೆ. ಇವರು ಆರೋಗ್ಯ ವ್ಯವಸ್ಥೆಯ ಸೇವೆಗಳ ಸೇವಾ ಪೂರೈಕೆದಾರರಾಗಿಯೂ, ಆರೋಗ್ಯ ವ್ಯವಸ್ಥೆಯ ಉತ್ತಮೀಕರಣಕ್ಕೆ ಸಮುದಾಯಕ್ಕೆ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 1೦೦೦ ಮತ್ತು ನಗರ ಪ್ರದೇಶದ ಕೊಳಗೇರಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ 25೦೦ ಜನಸಂಖ್ಯೆಗೆ ಒಬ್ಬರಂತೆ ಆಶಾಕಾರ್ಯಕರ್ತೆಯರನ್ನು ಗುರುತಿಸಲಾಗಿದೆ.
ಒಟ್ಟು ಆಶಾ ಕಾರ್ಯಕರ್ತೆಯರ ಸಂಖ್ಯೆ – 42524
ಗ್ರಾಮೀಣ ಆಶಾ ಕಾರ್ಯಕರ್ತೆಯರ ಸಂಖ್ಯೆ – 39195
ನಗರ ಆಶಾ ಕಾರ್ಯಕರ್ತೆಯರ ಸಂಖ್ಯೆ – 329
ಆಶಾ ಕಾರ್ಯಕರ್ತೆಯರ ಹುದ್ದೆಗಳು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಂಜುರಾಗಿದ್ದು, ಪ್ರಸ್ತುತ 41785 ಆಶಾಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 2018 ರಲ್ಲಿ 9,39,978 ಆಶಾಕಾರ್ಯಕರ್ತೆಯರಿದ್ದರು.
ಆಶಾ ಕಾರ್ಯಕರ್ತೆ ಮಾಡುತ್ತಿರುವ ಕೆಲಸಗಳು : ಆಶಾಕರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಬೇಕು. ಗ್ರಾಮ/ನಗರ ಆರೋಗ್ಯ ಮತ್ತು ಪೌಷ್ಟಿಕ ದಿನಾಚರಣೆಗೆ ಹಾಜಾರಾಗುವುದು. ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬೇಕು. ತಾನು ಕೆಲಸ ಮಾಡುವ ಪ್ರದೇಶದ ವ್ಯಾಪ್ತಿಯಲ್ಲಿ ಜಾಗೃತಿ ಸಭೆಗಳನ್ನು ಏರ್ಪಡಿಸಬೇಕು ಮತ್ತು ಸಂಘಟಿಸಬೇಕು. ಆರೋಗ್ಯ ದಾಖಲೆಗಳನ್ನು ನಿರ್ವಹಿಸಬೇಕು. ಜೊತೆಗೆ ಸಮುದಾಯಕ್ಕೆ ಆರೋಗ್ಯ ನೈರ್ಮಲ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು.
ಪೌಷ್ಠಿಕಾಂಶ, ಮೂಲಭೂತ ನೈರ್ಮಲ್ಯ ಮತ್ತು ಆರೋಗ್ಯಕರ ಪದ್ದತಿಗಳು, ಆರೋಗ್ಯಕರ ಜೀವನ, ಪ್ರಸ್ತುತ ಲಭ್ಯವಿರುವ ಆರೋಗ್ಯ ಸೇವೆಗಳು ಮತ್ತು ಇವುಗಳ ಸದುಪಯೋಗ ಮಹಿಳೆಯರು ಮತ್ತು ಕುಟುಂಬದವರಿಗೆ ಆಪ್ತಸಮಲೋಚನೆ ಹೆರಿಗೆ ಸಿದ್ದತೆ. ಸುರಕ್ಷಿತ ಹೆರಿಗೆಯಾಗುವಂತೆ ಗರ್ಭಿಣಿ ಮಹಿಳೆಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಮತ್ತು ಮನೆಯಲ್ಲಿ ಹೆರಿಗೆಯಾಗಿ ತಾಯಿ ಮತ್ತು ಮಗುವಿನ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಮುಖ್ಯವಾದ ಜವಬ್ದಾರಿಯಾಗಿದೆ.
ಸ್ತನ್ಯ ಪಾನದ ಪ್ರಾಮುಖ್ಯತೆಯನ್ನು ತಿಳಿಸಬೇಕು. ಲಸಿಕೆಯ ಬಗ್ಗೆ ಮಾಹಿತಿ ನೀಡುವುದು ಮತ್ತು ಮಗುವಿಗೆ ಲಸಿಕೆ ಹಾಕಿಸುವುದು. ಗರ್ಭ ನಿರೋಧಕಗಳ ಮಹತ್ವಗಳನ್ನು ತಿಳಿಸುವುದು. ಲೈಂಗಿಕ ಸೋಂಕುಗಳನ್ನು ತಡೆಗಟ್ಟುವಿಕೆ. ಹೀಗೆ ಆರೋಗ್ಯ ಜಾಗೃತಿಯ ಕೆಲಸ ನಿರ್ವಹಿಸಬೇಕು. ಕೋವಿಡ್ ಸಮಯದಲ್ಲಿ ಆಶಾಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಸೋಂಕು ಹಬ್ಬುತ್ತಿದ್ದ ಸಂದರ್ಭದಲ್ಲಿ ಜನರಿಗೆ ಭರವಸೆಯ ಅತ್ಮವಿಶ್ವಾಸ, ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದರು.
ಅಂತಹ ಸಂದರ್ಭದಲ್ಲಿಯು ಆಶಾಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಂಬಳ ಮತ್ತು ಪ್ರೋತ್ಸಾಹ ಧನವನ್ನು ನೀಡಿಲ್ಲ. ಸಮಯಕ್ಕೆ ಸರಿಯಾಗಿ ಇವತ್ತಿಗೂ ಸಂಬಳ ಸಿಗುತ್ತಿಲ್ಲ. ಯಾವುದೇ ಪ್ರೋತ್ಸಾಹ ಧನ ಸಿಗುತ್ತಿಲ್ಲ. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ಉದ್ಯೋಗಿ ಎಂದು ಕೂಡ ಪರಿಗಣಿಸಿಲ್ಲ.
ರಾಜ್ಯ ಸರ್ಕಾರದಿಂದ ಅವರಿಗೆ ತಿಂಗಳಿಗೆ 4000 ರೂ. ಗೌರವಧನ, ಮತ್ತು 37 ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಇದುವರೆಗೆ ಅಷ್ಟು ಚಟುವಟಿಕೆಗಳಿಗೆ ಯಾವುದೇ ಪ್ರೋತ್ಸಾಹ ಧನ ನೀಡಿಲ್ಲ.
ಒಂದು ಹೆರಿಗೆ ಕೇಸ್ ಗೆ ನೀಡುವ ಪ್ರೋತ್ಸಾಹ ಧನ
ಆರಂಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರೆ – 250 ರೂ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರೆ – 300 ರೂ.
ಖಾಸಗೀ ಆಸ್ಪತ್ರೆಯಲ್ಲಾದರೆ ಯಾವುದೇ ಹಣ ಇಲ್ಲ —
Ambulence ವ್ಯವಸ್ಥೆ ಇದೆ —
ಗರ್ಭಿಣಿ ಯನ್ನು ಆಟೋ ದಲ್ಲಿ ಕರೆದುಕೊಂಡು ಹೋದರೆ – 200 ರೂ.
ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋದರೆ – 100 ರೂ.
ಮೇಲ್ಕಂಡ ಪ್ರೋತ್ಸಾಹ ಧನವನ್ನು ಆರಂಭಿಕ ದಿನದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿತ್ತು.
ಪ್ರಸ್ತುತ ದಿನದಲ್ಲಿನ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು ನೀಡುತ್ತಿಲ್ಲ. ಅದರ ವಿವರಗಳು ಈ ಕೆಳಗಿನಂತಿವೆ.
ಗರ್ಭೀಣಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರೆ – 300 ರೂ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರೆ – 400 ರೂ.
ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಯಾವುದೇ ಹಣ ಇಲ್ಲ –
Ambuience ವ್ಯವಸ್ತೆ ಇದೆ –
ಆಟೋದಲ್ಲಿ ಕರೆದುಕೊಂಡು ಹೋದರೆ ಯಾವುದೇ ಹಣ ಇಲ್ಲ –
ಕುಟುಂಬ ಯೋಜನೆಗೆ ಕರೆದುಕೊಂಡು ಹೋದರೆ – 150 ರೂ.
Book maintenance – 200 ರೂ.
ಪ್ರತಿ ತಿಂಗಳಿಗೆ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ – 1500 ರೂ.
ಇಷ್ಟು, ಪ್ರಸ್ತುತ ದಿನದಲ್ಲಿ ಆಶಾ ಕಾರ್ಯಕರ್ತೆಯರು ಪಡೆಯುತ್ತಿರುವ ಪ್ರೋತ್ಸಾಹ ಧನ. ಅದು ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.
ಆದರೆ ಸರ್ಕಾರಿ ಅಂಕಿ ಅಂಶದ ಪ್ರಕಾರ ಪ್ರತಿ ತಿಂಗಳಿಗೆ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ 2000 ರೂ, ಮತ್ತು ಒಂದು ಹೆರಿಗೆ ಕೇಸ್ ಗೆ 600 ರೂ ಪ್ರೋತ್ಸಾಹ ಧನ ಕೊಡಲಾಗುತ್ತಿದೆ ಎಂದು ಸರ್ಕಾರದ ಅಂಕಿ ಅಂಶದಲ್ಲಿ ದಾಖಲಾಗಿದೆ. ಒಟ್ಟಾರೆಯಾಗಿ, ಬದುಕಿಗಾಗಿ ಈ ಕೆಲಸವನ್ನೆ ನಂಬಿಕೊಂಡಿದ್ದೇವೆ. ಸರಿಯಾದ ವೇತನ ಸಿಗದ ಕಾರಣ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ, ಹಿರಿಯರಿಗೆ ಕೊಡಿಸಬೇಕಾದ ಔಷಧಿಗಳನ್ನು ಸರಿಯಾದ ಸಮಯಕ್ಕೆ ಕೊಡಿಸಲಾಗಿದೆ, ಬೇರೆಯವರ ಬಳಿ ಬಡ್ಡಿಗೆ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂಬುದು ಆಶಾ ಕಾರ್ಯಕರ್ತೆಯರ ಮನದಾಳದ ಮಾತಾಗಿದೆ.