ಒಂದು ತಲೆಮಾರನ್ನು ಉಳಿಸಲು ಹೋರಾಟ

ಮಯೂಖ್ ಬಿಸ್ವಾಸ್, ಪ್ರಧಾನ ಕಾರ್ಯದರ್ಶಿ, ಎಸ್‍.ಎಫ್‍.ಐ.

ಸುಮಾರು ಎರಡು ವರ್ಷಗಳಿಂದ ಶಾಲಾಕಾಲೇಜುಗಳನ್ನು ಮುಚ್ಚಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.  ಆದರೂ ಕೇಂದ್ರ ಸರ್ಕಾರವು ಎನ್ಇಪಿ ಅಥವರಾಷ್ಟ್ರೀಯ ಶಿಕ್ಷಣ ನೀತಿಎಂಬುದನ್ನು ಕೇಂದ್ರೀಕರಣ ಮತ್ತು ಖಾಸಗೀಕರಣ ಎರಡನ್ನೂ ಶಿಕ್ಷಣದ ಆಧಾರ ಸ್ತಂಭಗಳಾಗುಳ್ಳ ಒಂದು ನಿರ್ದೇಶನಾ ಚೌಕಟ್ಟಾಗಿ  ತರುತ್ತಿದೆಶಿಕ್ಷಣವು ಈಗ ನಾಗರಿಕರ ಹಕ್ಕಿಗಿಂತ ಹೆಚ್ಚಾಗಿ ಮಾರಾಟದ ಸರಕು ಎನ್ನುವುದು  ಮುಖ್ಯ ಧೋರಣೆ ಎಂಬುದು ಸ್ಪಷ್ಟ. ಇದಕ್ಕಾಗಿ ಒಂದುಸಮ್ಮಿಶ್ರಿತ ಶಿಕ್ಷಣ ಮಾದರಿ ಯನ್ನು ಅನುಸರಿಸಲು .  ಸಾಂಕ್ರಾಮಿಕ ಮತ್ತು ಲಾಕ್ಡೌನ್ಗಳು ಆಳುವ ಮಂದಿಗೆ ಸಹಾಯ ಮಾಡಿದವು ; ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಲು ಒಂದು ಚಂದಾದಾರರ ಶುಲ್ಕಇರುತ್ತದೆ ಮತ್ತು ಪ್ರತಿ ಹಂತದಲ್ಲೂ ಶಿಕ್ಷಣವನ್ನು ಹೊಂದಲು ಹೆಚ್ಚಿನ ಹಣವನ್ನು ಪಾವತಿಸಬೇಕು.   ಆದರೆ, ಪೋಷಕರ ದಿನಗೂಲಿಯನ್ನು ಅವಲಂಬಿಸಿರುವ  ಕೆಳಸ್ತರದ ಕುಟುಂಬಗಳ ಹೆಚ್ಚಿನ ವಿದ್ಯಾರ್ಥಿಗಳು ಕಲಿಕೆಯ ಏಕೈಕ ಸಾಧನವಾಗಿ ತರಗತಿಯ ಮೇಲೆಯೇ ಅವಲಂಬಿತರಾಗಿದ್ದಾರೆಗಾಯದ ಮೇಲೆ ಬರೆ ಎಳೆದಂತೆ, ಪ್ರಸ್ತುತ ಬಜೆಟ್ ಆನ್ಲೈನ್ ವಿಧಗಳಿಗೆ ಒತ್ತು ನೀಡುವ ಮೂಲಕ ಎನ್..ಪಿ ಸಮ್ಮಿಶ್ರಿತ  ವಿಧಾನವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.

ಜೀವಹಾನಿ, ಲೇ-ಆಫ್‍ ಗಳು ಮತ್ತು ನಿರುದ್ಯೋಗದ ಜೊತೆಗೆ, ಕೋವಿಡ್ 19 ಸಾಂಕ್ರಾಮಿಕವು ಶಿಕ್ಷಣ ಕ್ಷೇತ್ರದ ಮೇಲೂ ಭಾರಿ ಪರಿಣಾಮ ಬೀರಿದೆ.  ಸುಮಾರು ಎರಡು ವರ್ಷಗಳಿಂದ ಶಾಲಾ-ಕಾಲೇಜುಗಳನ್ನು ಮುಚ್ಚಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.  ಸಾಂಕ್ರಾಮಿಕದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಭಾರೀ ಆರ್ಥಿಕ ಅಡಚಣೆಗಳನ್ನು ಎದುರಿಸುತ್ತಿದ್ದಾರೆ.  ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹದಗೆಡುತ್ತಿದೆ.  ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿಯನ್ನು ಕಳೆದುಕೊಳ್ಳುತ್ತಿದ್ದೇವೆ.  ವಿದ್ಯಾರ್ಥಿಗಳ ಕಲಿಕೆ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯಗಳ ಮೇಲೆ ಅತಿ ಹೆಚ್ಚು ದುಷ್ಪರಿಣಾಮವಾಗುತ್ತಿದೆ.  ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣವು ಅರೆಕಾಲಿಕವಾಗಿ ಬದಲಾಗುತ್ತಿದೆ.

ಈ ‘ಹೊಸ ಸಾಮಾನ್ಯ’ ವಾತಾವರಣದ ನಡುವೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍.ಇ.ಪಿ) 2020 ಅನ್ನು ತಂದಿತು, ಇದು ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ನವ-ಉದಾರವಾದಿ ಕಾರ್ಯಸೂಚಿಯಲ್ಲದೆ ಬೇರೇನೂ ಅಲ್ಲ.  ಇದರ ಪರಿಣಾಮವಾಗಿ ತ್ರಿಪುರಾದ ಬಿಜೆಪಿ ಸರಕಾರ ತನ್ನ ಶಾಲೆಗಳನ್ನು ಖಾಸಗೀಕರಣಗೊಳಿಸಲು ಹೊರಟಿದೆ.  ತ್ರಿಪುರಾದಲ್ಲಿ ಸುಮಾರು 100 ಶಾಲೆಗಳನ್ನು ಹಲವಾರು ಎನ್‌ಜಿಒಗಳು ಸ್ವಾಧೀನಪಡಿಸಿಕೊಳ್ಳಲಿವೆ.  ಕರ್ನಾಟಕ, ತ್ರಿಪುರಾ ಮತ್ತು ಆಂಧ್ರಪ್ರದೇಶದಲ್ಲಿ ಮಧ್ಯಾಹ್ನದ ಊಟದ ಸೇವೆಯನ್ನು ರಾಜ್ಯ ಸರ್ಕಾರಗಳು ಖಾಸಗೀಕರಣಗೊಳಿಸುತ್ತಿವೆ.  ಎಡಪಕ್ಷಗಳ ಆಡಳಿತವಿರುವ ಕೇರಳ ಹೊರತುಪಡಿಸಿ ಬಹುತೇಕ ರಾಜ್ಯಗಳು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನಿಲ್ಲಿಸಿವೆ.  ಹಿಮಾಚಲ ಪ್ರದೇಶದಲ್ಲಿ ಪಿಎಚ್‌ಡಿ-ಎಂಫಿಲ್ ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ವಿಪರೀತ ಭ್ರಷ್ಟಾಚಾರವನ್ನು ಎದುರಿಸುತ್ತಿದ್ದಾರೆ ಮತ್ತು ದೇಶದ ಮೂಲೆ- ಮೂಲೆಗಳಲ್ಲೂ  ಶುಲ್ಕ ಹೆಚ್ಚಳವನ್ನು ಎದುರಿಸುತ್ತಿದ್ದಾರೆ.

ಅರೆಕಾಲಿಕ ಶಿಕ್ಷಣ!

ಸಾಂಕ್ರಾಮಿಕ ರೋಗದಿಂದಾಗಿ ಶಾಲೆ ಬಿಡುವವರ ಪ್ರಮಾಣ ತೀವ್ರವಾಗಿ ಹೆಚ್ಚಿದೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‍ಎಫ್‍ಐ) ದ  ಒತ್ತಡದ ನಂತರ ಹಲವಾರು ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳನ್ನು ಭಾಗಶಃ ಪುನಃ ತೆರೆದವು.  ಆದರೆ ಮೂರನೇ ಅಲೆಯು  ಈ ಸಂಸ್ಥೆಗಳನ್ನು ಮತ್ತೆ ಮುಚ್ಚಲು ಮತ್ತೊಂದು ಅವಕಾಶವನ್ನು ನೀಡಿತು.  ಆನ್‌ಲೈನ್ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.  ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ಆಟಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆ ಗಣನೀಯವಾಗಿ ಹೆಚ್ಚಿದೆ.  ಯುನಿಸೆಫ್ ಪ್ರಕಾರ, ಸರಿಪಡಿಸಲಾಗದ “ಕಲಿಕೆ ನಷ್ಟ” ನಡೆಯುತ್ತಿದೆ, ಇದು ಬಹಳ ಸಮಯದವರೆಗೆ ಮುಂದುವರಿಯುತ್ತದೆ.  ವಿದ್ಯಾರ್ಥಿಗಳು ಕಲಿಯಲು ಮತ್ತು ಆರೋಗ್ಯಕರ ಮಾನಸಿಕ ಸ್ಥಿತಿಯನ್ನು ಸಾಧಿಸಲು ಕಷ್ಟಪಡುತ್ತಾರೆ,ಹಾಗೂ ಲಸಿಕೆ ಕಾರ್ಯಕ್ರಮಗಳು ಅಥವಾ ಮಧ್ಯಾಹ್ನದ ಊಟದಂತಹ ಸಂಬಂಧಿತ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಷ್ಟಪಡುತ್ತಾರೆ.

ಜೀವನೋಪಾಯದ ನಷ್ಟದಿಂದ ಬಳಲುತ್ತಿರುವ ತಮ್ಮ ಕುಟುಂಬಗಳಿಗೆ ಸಹಾಯ ಮಾಡಲು ಬಹಳಷ್ಟು ವಿದ್ಯಾರ್ಥಿಗಳು ಕ್ಯಾಶುಅಲ್ ದಿನಗೂಲಿ ಕೆಲಸಕ್ಕೆ ಸೇರಬೇಕಾಗಿತ್ತು.  ಹಣಕಾಸಿನ ಹೊರೆಯನ್ನು ಇಳಿಸುವ  ಸಲುವಾಗಿ ಹಲವಾರು ವಿದ್ಯಾರ್ಥಿನಿಯರನ್ನು ಮದುವೆಗೆ ತಳ್ಳಲಾಗಿದೆ.

ಡಿಜಿಟಲ್ ಜುಮ್ಲಾ

ಕೇಂದ್ರ ಸರ್ಕಾರವು ಎನ್‍ಇಪಿ ಅನ್ನು ಕೇಂದ್ರೀಕರಣ ಮತ್ತು ಖಾಸಗೀಕರಣ ಎರಡನ್ನೂ ಶಿಕ್ಷಣದ ಆಧಾರ ಸ್ತಂಭಗಳಾಗುಳ್ಳ ಒಂದು ನಿರ್ದೇಶನಾ ಚೌಕಟ್ಟಾಗಿ  ತಂದಿದೆ.  ಶಿಕ್ಷಣವು ಈಗ ನಾಗರಿಕರ ಹಕ್ಕಿಗಿಂತ ಹೆಚ್ಚಾಗಿ ಮಾರಾಟದ ಸರಕು ಎನ್ನುವುದು  ಮುಖ್ಯ ಧೋರಣೆ ಎಂಬುದು ಸ್ಪಷ್ಟ.  ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳು ಆಳುವ ಮಂದಿಗೆ ಒಂದು ‘ಸಮ್ಮಿಶ್ರಿತ ಶಿಕ್ಷಣ ಮಾದರಿ’ ಯನ್ನು ಅನುಸರಿಸಲು ಸಹಾಯ ಮಾಡಿತು; ಅಂದರೆ,  ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಲು ಒಂದು ‘ಚಂದಾದಾರರ ಶುಲ್ಕ’ ಇರುತ್ತದೆ ಮತ್ತು ಪ್ರತಿ ಹಂತದಲ್ಲೂ ಶಿಕ್ಷಣವನ್ನು ಹೊಂದಲು ಹೆಚ್ಚಿನ ಹಣವನ್ನು ಪಾವತಿಸಬೇಕು.   ಆದರೆ, ಪೋಷಕರ ದಿನಗೂಲಿಯನ್ನು ಅವಲಂಬಿಸಿರುವ  ಕೆಳಸ್ತರದ ಕುಟುಂಬಗಳ ಹೆಚ್ಚಿನ ವಿದ್ಯಾರ್ಥಿಗಳು ಕಲಿಕೆಯ ಏಕೈಕ ಸಾಧನವಾಗಿ ತರಗತಿಯ ಮೇಲೆಯೇ ಅವಲಂಬಿತರಾಗಿದ್ದಾರೆ.  ಗಾಯದ ಮೇಲೆ ಬರೆ ಎಳೆದಂತೆ, ಪ್ರಸ್ತುತ ಬಜೆಟ್ ಆನ್‌ಲೈನ್ ವಿಧಗಳಿಗೆ ಒತ್ತು ನೀಡುವ ಮೂಲಕ ಎನ್‍.ಇ.ಪಿ ಯ ಸಮ್ಮಿಶ್ರಿತ  ವಿಧಾನವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.

ಬಜೆಟ್ “ಡಿಜಿಟಲ್ ವಿಶ್ವವಿದ್ಯಾನಿಲಯ” ದ ಭರವಸೆ ಯನ್ನೂ ನೀಡುತ್ತದೆ, ಇದರ ಪರಿಭಾಷೆಯಲ್ಲಿ, ಭಾರತೀಯ ವಿದ್ಯಾರ್ಥಿಗಳಿಗೆ ಅವರ ಮನೆ ಬಾಗಿಲಲ್ಲಿ ವೈಯಕ್ತಿಕಗೊಳಿಸಿದ ಕಲಿಕೆಯ ಅನುಭವದೊಂದಿಗೆ ವಿಶ್ವದರ್ಜೆಯ ಸಾರ್ವತ್ರಿಕ ಶಿಕ್ಷಣಕ್ಕೆ ಪ್ರವೇಶಾವಕಾಶ ನೀಡುತ್ತದೆ.  ಡಿಜಿಟಲ್ ಕಲಿಕೆಯು ಅಂತಿಮವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯ ಖಾಸಗೀಕರಣ ಮತ್ತು ಕೇಂದ್ರೀಕರಣಕ್ಕೆ ಬಾಗಿಲು ತೆರೆಯುತ್ತದೆ ಎಂದು   ಸೂಚಿಸುತ್ತದೆ.  ಕೆಳಸ್ತರದಲ್ಲಿರುವ ಹಲವಾರು ವಿದ್ಯಾರ್ಥಿಗಳಿಗೆ ಅಂತಹ ಸಂಪನ್ಮೂಲಗಳಿಗೆ ಪ್ರವೇಶಾವಕಾಶ ಸಾಧ್ಯವಾಗುವುದಿಲ್ಲ.

ಯು.ಜಿ.ಸಿ. ಯು ಸಮ್ಮಿಶ್ರಿತ  ಮಾದರಿಯ ಶಿಕ್ಷಣವನ್ನು ಉತ್ತೇಜಿಸುತ್ತಿರುವುದು ಪರೋಕ್ಷವಾಗಿ ಬೈಜು(BYJU),  ಅನ್‍ಅಕಾಡೆಮಿ(Unacademy) ಮತ್ತು ಟುಟೋಪಿಯ(Tutopia) ದಂತಹ ಕಾರ್ಪೊರೇಟ್‌ಗಳನ್ನು ಪ್ರೋತ್ಸಾಹಿಸುತ್ತದೆ.  ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್‌ಗಳಿಂದಾಗಿ, ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟವು ಮತ್ತು ಹೆಚ್ಚಾಗಿ ಬೋಧನೆ ಮತ್ತು ಕಲಿಕೆಯು ‘ಡಿಜಿಟಲ್ ಮೋಡ್’ಗೆ ಬದ್ಧವಾಗಿವೆ.  ಆಗಸ್ಟ್ 2021 ರಲ್ಲಿ, 15 ರಾಜ್ಯಗಳಲ್ಲಿ ಪ್ರಖ್ಯಾತ ಸಾಮಾಜಿಕ ವಿಜ್ಞಾನಿಗಳು ನಡೆಸಿದ “ಶಾಲಾ ಮಕ್ಕಳ ಆನ್‌ಲೈನ್ ಮತ್ತು ಆಫ್‌ಲೈನ್ ಕಲಿಕೆ” ಸಮೀಕ್ಷೆಯು ಊಹಿಸಲಾಗದಷ್ಟು ಹೆಚ್ಚಿನ ‘ಡಿಜಿಟಲ್ ವಿಭಜನೆ’ ಉಂಟಾಗಿರುವುದನ್ನು ಬಹಿರಂಗಪಡಿಸುತ್ತದೆ. ಕೇವಲ ಶೇ.  8 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಶೇಕಡಾ 24 ರಷ್ಟು ನಗರ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ನಲ್ಲಿ ನಿಯಮಿತವಾಗಿ ಅಧ್ಯಯನ ಮಾಡುತ್ತಿದ್ದಾರೆ.  ಇದರರ್ಥ ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ನಾಲ್ಕನೇ ಮೂರು ಭಾಗದಷ್ಟು ಶಾಲಾ ವಿದ್ಯಾರ್ಥಿಗಳು ಯಾವುದೇ ಆನ್‌ಲೈನ್ ಕಲಿಕೆಯ ಅವಕಾಶಗಳನ್ನು ಹೊಂದಿರಲಿಲ್ಲ.  ಸಮ್ಮಿಶ್ರಿತ ಮೋಡ್ (ಟಿವಿ/ಆನ್‌ಲೈನ್ ತರಗತಿಗಳ ಮೂಲಕ) ಬೋಧನೆ ಕೆಲವರಿಗೇ ಸೀಮಿತವಾಗಿ ಉಳಿಯಿತು ಮತ್ತು ಕಳೆದ ಎರಡು ವರ್ಷಗಳಲ್ಲಿ, ಕೆಳಸ್ತರದ ವಿಭಾಗಗಳ ವಿದ್ಯಾರ್ಥಿಗಳು ಈ ಪರಿಧಿಯಿಂದ ಅತೀ ಹೆಚ್ಚು ಹೊರಗೇ ಇಡಲ್ಪಟ್ಟರು. ಈ ಡಿಜಿಟಲ್ ವಿಭಜನೆಯು ಜಾತಿ, ವರ್ಗ ಮತ್ತು ಇತರ ಸಂಪನ್ಮೂಲ ಅಸಮಾನತೆಗಳ ಉಪ-ಉತ್ಪನ್ನವಾಗಿದೆ ಮತ್ತು ಬಡ ವಿದ್ಯಾರ್ಥಿಗಳು ಕಲಿಕೆ ಅಥವಾ ಶಿಕ್ಷಣವನ್ನು ಮುಂದುವರೆಸುವುದನ್ನು ತಡೆಯುತ್ತದೆ.

ಎಲ್ಲಾ ನಾಗರೀಕರ ಶಿಕ್ಷಣಕ್ಕೆ ಮೂಲ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ತನ್ನ ಅಸಮರ್ಥತೆಯನ್ನು ಮರೆಮಾಚಲು ಯತ್ನಿಸುತ್ತಿದೆ.  ವಾಸ್ತವವಾಗಿ, ವಿದ್ಯಾರ್ಥಿಗಳಿಗೆ ‘ಆತ್ಮ ನಿರ್ಭರ್’ ಆಗಲು ಒತ್ತಾಯಿಸುತ್ತಾ, ಕಲಿಕೆಯ ಹೊರೆಯನ್ನು ವಿದ್ಯಾರ್ಥಿಗಳ ಕಡೆಗೆ ವರ್ಗಾಯಿಸಿದೆ.  ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬಲ್ಲ  ಹೊಸ ಬೋಧನಾ ವೃತ್ತಿಪರರಿರುವ ದೊಡ್ಡ ಮಟ್ಟದ ಶಾಲಾ ಮೂಲಸೌಕರ್ಯ  ದೂರದ ಕನಸಾಗಿ ಉಳಿದಿದೆ.  ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗಿ ಸಂಸ್ಥೆಗಳನ್ನು ಉತ್ತೇಜಿಸಲು ಎನ್‍.ಇ.ಪಿ.ಪರಿಸರದಲ್ಲಿ ಶಿಕ್ಷಣಕ್ಕೆ ಬಜೆಟ್ ಹಂಚಿಕೆಗಳು ಸ್ಥಗಿತ ಸ್ಥಿತಿಯಲ್ಲಿರುವಾಗ  ‘ಒಂದು ತರಗತಿ-ಒಂದು ಟಿವಿ ಚಾನೆಲ್’ ಎಂಬ ಪದಗುಚ್ಛಕ್ಕೆ ‘ಯಾರೊಬ್ಬರಿಗೂ ಕಲಿಕೆ ಇಲ್ಲ’ ಎಂಬ ಪದಗುಚ್ಛವನ್ನು ಸೇರಿಸಬೇಕಾಗುತ್ತದೆ.  ಒಂದೆಡೆ, ಚೀನಾ ಶಿಕ್ಷಣದ ಖಾಸಗೀಕರಣದ ವಿರುದ್ಧ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದೆಡೆ, ಭಾರತದಲ್ಲಿ, ಆನ್‌ಲೈನ್ ಶಿಕ್ಷಣ ವೇದಿಕೆಗಳ ತ್ವರಿತ ಬೆಳವಣಿಗೆ, ಶಿಕ್ಷಣ ಕ್ಷೇತ್ರದ ಖಾಸಗೀಕರಣ ಮತ್ತು ಡಿಜಿಟಲ್ ವಿಭಜನೆಯನ್ನು ಸರ್ಕಾರವು ಪರೋಕ್ಷವಾಗಿ ಅನುಮೋದಿಸುತ್ತಿರುವುದು ಕಾಣ ಬರುತ್ತಿದೆ.  ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಇಂಟರ್ನೆಟ್ ಸಂಪರ್ಕಗಳು ಲಭ್ಯವಿರದ ವಿದ್ಯಾರ್ಥಿಗಳು ಅತಿ ಹೆಚ್ಚು ಕಷ್ಟಪಡುವಂತಾಗಿದೆ. ಮೊಬೈಲ್ ಡೇಟಾದ ವೆಚ್ಚ ಹೆಚ್ಚುತ್ತಿರುವಾಗ  ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.

ಎಸ್‍ಎಫ್‍ಐನ ಸಂಶೋಧನಾ ಪತ್ರಿಕೆ “ರಿಸರ್ಚರ್’ ಪ್ರಕಾರ,’ ‘ದೂರ ಕಲಿಕೆ’ಯ ಕಾರ್ಯಕ್ರಮಗಳು ಸಹ ಈಗ ದುರ್ಬಲ ಸ್ಥಿತಿಯಲ್ಲಿವೆ.  ಡಿಜಿಟಲ್ ವಿಭಜನೆಯು ಬಾಲದುಡಿಮೆಯನ್ನು ಅನಿವಾರ್ಯಗೊಳಿಸಿದೆ.  ಶಾಲೆಬಿಟ್ಟ ಮಕ್ಕಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರನ್ನು ಮನೆಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿದೆ.  ವಿವಿಧ ಸಂಶೋಧನಾ ಅಧ್ಯಯನಗಳ ಪ್ರಕಾರ ಕೇವಲ 20% ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯ ಸೌಲಭ್ಯ ಹೊಂದಿದ್ದಾರೆ, ಮತ್ತು ವಾಸ್ತವದಲ್ಲಿ, ಆ 20%ದಲ್ಲೂ ಅರ್ಧದಷ್ಟು ಮಾತ್ರ ಆನ್‌ಲೈನ್ ತರಗತಿಗಳಿಗೆ ಸೇರಿರುತ್ತಾರೆ. ಮತ್ತೊಂದು ಸಮೀಕ್ಷೆಯು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 37%ದಷ್ಟು ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ದೈನಂದಿನ ಅಧ್ಯಯನದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ.  ಅವರಲ್ಲಿ ಕೆಲವರು ಪ್ರಾಥಮಿಕ  ಲೆಕ್ಕದ ಮತ್ತು ಅಕ್ಷರದ ಸಾಮರ್ಥ್ಯವನ್ನೂ  ಕಳೆದುಕೊಂಡಿದ್ದಾರೆ.

ಶೈಕ್ಷಣಿಕ ಮೂಲಸೌಕರ್ಯದಲ್ಲಿ ತೀವ್ರ ಸುಧಾರಣೆ ಇಂದಿನ ಅಗತ್ಯವಾಗಿದೆ.  ಆದರೆ ಮೋದಿ ಸರ್ಕಾರವು ಶಿಕ್ಷಣ ಕ್ಷೇತ್ರದ ಮೇಲಿನ ವೆಚ್ಚವನ್ನು ಶೇಕಡಾ 6 ರಷ್ಟು ಕಡಿಮೆ ಮಾಡಿದೆ.  ರಾಜ್ಯಗಳ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ, ಆದರೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ನಿರ್ಲಕ್ಷಿಸಲಾಗುತ್ತಿದೆ.  30 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚಬೇಕೆಂದು ಎನ್‍.ಇ.ಪಿ.ಸೂಚಿಸುತ್ತದೆ, ಆದರೆ ಭಾರತದಲ್ಲಿ, 38 %ದಷ್ಟು ಹಳ್ಳಿಗಳು 500 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. ಅಂತಹ ಪ್ರದೇಶಗಳಲ್ಲಿ, ಶಾಲೆಗಳನ್ನು ಮುಚ್ಚಲಾಗುತ್ತದೆ ಮತ್ತು ಎರಡು ಅಥವಾ ಹೆಚ್ಚಿನ ಶಾಲೆಗಳನ್ನು ‘ವಿಲೀನಗೊಳಿಸಲಾಗುತ್ತದೆ’.  ಇದು ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಶಾಲೆ ಬಿಡುವವರ(ಡ್ರಾಪ್ಔಟ್) ಪ್ರಮಾಣವನ್ನು ಹೆಚ್ಚಿಸುತ್ತದೆ.

ನನ್ನ ಮೊಟ್ಟೆ ಎಲ್ಲಿದೆ?

ಇಂದು ಇಡೀ ದೇಶವೇ ಉತ್ತರ ಪ್ರದೇಶ ಚುನಾವಣೆಯತ್ತ ಗಮನಹರಿಸಿದೆ.  ಅಲ್ಲಿ, 1000 ಮಕ್ಕಳಲ್ಲಿ 60 ಮಕ್ಕಳು ಐದು ವರ್ಷದೊಳಗೆ ಸಾಯುತ್ತಾರೆ.  ಭಾರತದ ಮಕ್ಕಳ ಸಾವಿನ ಪ್ರಮಾಣವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತೆಯೇ ಇದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ.  ಈ ಸಮಯದಲ್ಲಿ, ನಾವು ಏರುತ್ತಿರುವ ಡ್ರಾಪ್ಔಟ್ ದರವನ್ನು ಎದುರಿಸುತ್ತಿರುವಾಗ, ಮಧ್ಯಾಹ್ನದ ಊಟ ಯೋಜನೆ ಮತ್ತು ಅಂಗನವಾಡಿ ಯೋಜನೆಯು ಅತ್ಯಂತ ಉಪಯುಕ್ತವಾಗಿದೆ, ಆದರೆ ಮಧ್ಯಾಹ್ನದ ಊಟದ ಸೇವೆಗಳಲ್ಲಿ ಪಿಪಿಪಿ(‘ಸಾರ್ವಜನಿಕ-ಖಾಸಗಿ ಭಾಗೀದಾರಿಕೆ’) ಮಾದರಿಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ.  ಪ್ರಸಕ್ತ ಶೈಕ್ಷಣಿಕ ಬಜೆಟ್‌ನಲ್ಲಿ ಈ ಮಹತ್ವದ ಕ್ಷೇತ್ರಕ್ಕೆ ಅತ್ಯಲ್ಪ ಹಣ ಮೀಸಲಿಡಲಾಗಿದೆ.  ಪಿಪಿಪಿ ಮಾದರಿಯು ಕಾರ್ಯರೂಪಕ್ಕೆ ಬಂದರೆ ಮತ್ತು ಇಸ್ಕಾನ್  ಅಥವಾ ‘ಅಕ್ಷಯ ಪಾತ್ರ’ದಂತಹ ಸಂಸ್ಥೆಗಳು  ಒಪ್ಪೊಂದ ಮಾಡಿಕೊಂಡರೆ,  ಸಸ್ಯಾಹಾರಿ ಊಟಕ್ಕೆ ಅವರ ಒತ್ತು ಮಕ್ಕಳ ಪೋಷಣೆಯ ಸುತ್ತಲಿನ ಕಾಳಜಿಯನ್ನು ನಿರ್ಲಕ್ಷಿಸುತ್ತದೆ.

ಕೇಂದ್ರವು ಪ್ರತಿ ಪ್ರಾಥಮಿಕ ವಿದ್ಯಾರ್ಥಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಒದಗಿಸುತ್ತದೆ.  ಉನ್ನತ ಪ್ರಾಥಮಿಕಕ್ಕೆ, ಮಿತಿಯು ದಿನಕ್ಕೆ 150 ಗ್ರಾಂ.  ಆದಾಗ್ಯೂ, ಪ್ರಚಂಡ ಭ್ರಷ್ಟಾಚಾರದಿಂದಾಗಿ, ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣಗಳು ಸಿಗುವುದು ಅಪರೂಪ.  ಅಂದಾಜುಗಳ ಪ್ರಕಾರ, ಪ್ರತಿ ಪ್ರಾಥಮಿಕ ವಿದ್ಯಾರ್ಥಿಗೆ ದಿನಕ್ಕೆ ಕೇವಲ 4.97 ರೂ.ಗಳನ್ನು ನಿಗದಿಪಡಿಸಲಾಗಿದೆ.  ಉನ್ನತ ಪ್ರಾಥಮಿಕಕ್ಕೆ, ಮೊತ್ತವು 7.45 ರೂ.  ಇಂತಹ ಸಣ್ಣ ಹಂಚಿಕೆಗಳೊಂದಿಗೆ ಪೌಷ್ಟಿಕ ಆಹಾರವನ್ನು ಖಚಿತಪಡಿಸಿಕೊಳ್ಳುವುದು ಅಸಾಧ್ಯ.  ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಧಾರ್ಮಿಕ ಸಂಘಟನೆಗಳೊಂದಿಗೆ ಮಧ್ಯಾಹ್ನದ ಊಟ ಆರಂಭಿಸಿವೆ.  ಅವರು ಮೊಟ್ಟೆ ಅಥವಾ ಯಾವುದೇ ಮಾಂಸಾಹಾರಿ ಆಹಾರವನ್ನು ನೀಡುವುದನ್ನು ನಿಲ್ಲಿಸಿದ್ದಾರೆ.  ಇತ್ತೀಚಿಗೆ ಎಸ್‍ಎಫ್‍ಐ ಬಾವುಟದ  ಅಡಿಯಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗೆ ಒತ್ತಾಯಿಸಿ ಮತಪ್ರದರ್ಶನ ನಡೆಸಿದ್ದಾರೆ.

ಶೈಕ್ಷಣಿಕ ಸಾಲ

ಎನ್‍.ಇ.ಪಿ.  ಅನುದಾನದ ಬದಲಿಗೆ ವಿದ್ಯಾರ್ಥಿ ಸಾಲಗಳ ಮೇಲೆ ಸ್ಪಷ್ಟವಾಗಿ ಗಮನ ನೆಟ್ಟಿದೆ. ಪಶ್ಚಿಮ ಬಂಗಾಳ ಸರ್ಕಾರವು ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿತು.  ಇಂತಹ ಯೋಜನೆಗಳನ್ನು ಅನುಮೋದಿಸುವ ಮೂಲಕ ಸರ್ಕಾರವು ಖಾಸಗಿ ಸಂಸ್ಥೆಗಳ ಶುಲ್ಕವನ್ನು ಹೆಚ್ಚಿಸಲು ಪ್ರೋತ್ಸಾಹಿಸುತ್ತಿದೆ.  ಶಿಕ್ಷಣ ದುಬಾರಿಯಾಗುತ್ತಿದೆ.  ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಅರೆಕಾಲಿಕ ಕೆಲಸ ಮಾಡುತ್ತಿದ್ದಾರೆ.  ಎಸ್‍ಎಫ್‍ಐ ಸಾಲದ ಬದಲಿಗೆ ವಿದ್ಯಾರ್ಥಿ ಸಹಾಯ, ಅನುದಾನ ಮತ್ತು ಫೆಲೋಶಿಪ್‌ಗಳ ಬೇಡಿಕೆ ಮುಂದಿಟ್ಟಿದೆ.  ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿರುವುದರಿಂದ ಸಾಲ ನೀಡುವ ವಿಚಾರ ವಿದ್ಯಾರ್ಥಿಗಳ ಪಾಲಿಗೆ ಬಲೆಯಾಗಿದೆ.

ಎಸ್‌ಎಸ್‌ಸಿ ಮತ್ತು ಟಿಇಟಿಯ ನ್ಯಾಯಯುತ ಮತ್ತು ಸಕಾಲಿಕ ನೇಮಕಾತಿಗಾಗಿ ವಿಶ್ವವಿದ್ಯಾಲಯದ ಪದವೀಧರರು ಈಗ ಬೀದಿಗಿಳಿದಿದ್ದಾರೆ.  ಆದರೆ ಸರ್ಕಾರವು ಪ್ರಾಧ್ಯಾಪಕರ ನಿವೃತ್ತಿಯ ವಯಸ್ಸನ್ನು 65 ರಿಂದ 68 ಕ್ಕೆ ಹೆಚ್ಚಿಸಿದೆ. ಈ ಕ್ರಮದಿಂದ ಸರ್ಕಾರಕ್ಕೆ ಎರಡು ರೀತಿಯಲ್ಲಿ ಲಾಭವಿದೆ.  ಮೊದಲಿಗೆ, ಅವರು ಪಿಂಚಣಿ ಉಳಿಸಬಹುದು.  ಎರಡನೆಯದಾಗಿ, ಇದು ಅನಿಯಮಿತ ನೇಮಕಾತಿಯಿಂದ ಸೃಷ್ಟಿಯಾದ ಶೂನ್ಯವನ್ನು ತುಂಬಲು ಸಹಾಯ ಮಾಡುತ್ತದೆ.  ಪಿಎಚ್‌ಡಿ ಹೊಂದಿರುವವರು ಕಾಲೇಜುಗಳಲ್ಲಿ ಗುತ್ತಿಗೆ ಉದ್ಯೋಗಗಳನ್ನು ಪಡೆಯಲು ಒದ್ದಾಡುತ್ತಿರುವಾಗ ಇದೆಲ್ಲವನ್ನೂ ಮಾಡಲಾಗುತ್ತಿದೆ.

ಈ ಹಂತದಲ್ಲಿ, ಎರಡು ವರ್ಷಗಳ ಲಾಕ್‌ಡೌನ್ ಮತ್ತು ಆಫ್‌ಲೈನ್ ಶಿಕ್ಷಣ ವ್ಯವಸ್ಥೆಯು ಬಹುತೇಕ ನಿಷ್ಕ್ರಿಯಗೊಂಡಿರುವ ಸನ್ನಿವೇಶದಲ್ಲಿ , 2022-23 ರ ಬಜೆಟ್ ಹಂಚಿಕೆಗಳು ಕೆಲವು ಬಿಕ್ಕಟ್ಟುಗಳನ್ನು ಪರಿಹರಿಸುವ ಪ್ರಯತ್ನವನ್ನು ತೋರಿಸುತ್ತವೆ ಎಂಬುದು ಎಲ್ಲರ  ನಿರೀಕ್ಷೆಯಾಗಿತ್ತು.  ಬದಲಾಗಿ, ಹಂಚಿಕೆಗಳು ಎನ್‍.ಇ.ಪಿ.  ಸಲಹೆಗಳಿಗೆ ಅನುಗುಣವಾಗಿವೆ: ಒಟ್ಟು ಹಂಚಿಕೆಯ ಕೇವಲಶೇಕಡಾ 3 ರಷ್ಟು ಶಾಲಾ ಶಿಕ್ಷಣ ಸಚಿವಾಲಯಕ್ಕೆ ಮತ್ತು ಉನ್ನತ ಶಿಕ್ಷಣ ಸಚಿವಾಲಯಕ್ಕೆ, ಒಟ್ಟು ರೂ.103 ಸಾವಿರ ಕೋಟಿಗಳು.   ಕೇಂದ್ರೀಯ ವೆಚ್ಚದಲ್ಲಿ ಶಿಕ್ಷಣ (ಮತ್ತು ಆರೋಗ್ಯ) ಕ್ಷೇತ್ರದ ಈ ಪಾಲನ್ನು ಇಷ್ಟೊಂದು ಇಳಿಸಿರುವುದು ನಿಜವಾಗಿಯೂ ಒಂದು ಅಪರಾಧವೇ ಸರಿ. ಸ್ವತಃ ಬಜೆಟ್ ಭಾಷಣವೇ  ವಿದ್ಯಾರ್ಥಿಗಳಲ್ಲಿ, ವಿಶೇಷವಾಗಿ ಸಾರ್ವಜನಿಕ ಸಂಸ್ಥೆಗಳಲ್ಲಿ ಕಲಿಯುವವರಿಗೆ ಕಲಿಕೆಯ ನಷ್ಟವಾಗಿದೆ ಎಂದು ಗುರುತಿಸುತ್ತದೆ.

ಏನು ಮಾಡಬೇಕು?  

ಯಾವುದೇ ಅಂಚಿಗೆ ತಳ್ಳ್ಪಟ್ಟ ಕುಟುಂಬಗಳ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಲು   ಬಿಡುವುದಿಲ್ಲ ಎಂದು ಎಸ್‌ಎಫ್‌ಐ ನಿರ್ಧರಿಸಿದೆ. ಸಮಾಜದಿಂದ ‘ಡ್ರಾಪ್ ಔಟ್’ ವಿದ್ಯಮಾನವನ್ನು ಅಳಿಸಿಹಾಕುವ ಗುರಿಯನ್ನು ಅದು ಇಟ್ಟುಕೊಂಡಿದೆ. ಡ್ರಾಪ್ ಔಟ್ ಆಗಿರುವ ವಿದ್ಯಾರ್ಥಿಗಳು ಮತ್ತೆ ತರಗತಿಗಳಿಗೆ ಮರಳಬೇಕೆಂದು  ಅವರು ಮನೆ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.  ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಇಳಿಕೆ, ಸೀಟು ಹೆಚ್ಚಳ, ಹಾಸ್ಟೆಲ್ ಸೌಲಭ್ಯಗಳ ಅಭಿವೃದ್ಧಿ, ವಿಶೇಷ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯಿತಿ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೊಡ್ಡ ಮಟ್ಟದ ಚಳವಳಿಗೆ ತಯಾರಿ ನಡೆಯುತ್ತಿದೆ.

ಈ ದುರ್ಬಲ ಪರಿಸ್ಥಿತಿ ಕುರಿತಂತೆ  ಎಸ್‌ಎಫ್‌ಐ ಸಮಗ್ರವಾಗಿ ಯೋಜಿಸಿದೆ.  ಕೋವಿಡ್ ವಿಧಿ-ವಿಧಾನಗಳೊಂದಿಗೆ ಶಾಲೆಗಳನ್ನು ಮುಂದುವರಿಸಲು ಸಾಧ್ಯವಿದೆ.  ಇಡೀ ರಾಜ್ಯಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಶಾಲೆಗಳನ್ನು ಪುನರಾರಂಭಿಸುವಾಗ ಕೋವಿಡ್ ಸೋಂಕಿನ ಪ್ರದೇಶ-ನಿರ್ದಿಷ್ಟ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.  ಎಲ್ಲಾ ವಿದ್ಯಾರ್ಥಿಗಳಿಗೆ ಶೇ.100 ರಷ್ಟು ಲಸಿಕೆಯನ್ನು ಸಾಧ್ಯವಾದಷ್ಟು ಬೇಗ ಕೊಡಬೇಕು.  ಕ್ಯಾಂಪಸ್‌ಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೆ ಮಾಸ್ಕ್ಗಳನ್ನು,  ಸ್ಯಾನಿಟೈಸರ್‍ಗಳನ್ನು ವಿತರಿಸಬೇಕು.  ಶಿಕ್ಷಕರು, ಪಾಲಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡಂತೆ ಮಧ್ಯಾಹ್ನದ ಊಟದ ಸೇವೆಯನ್ನು ಖಚಿತಪಡಿಸಿಕೊಳ್ಳಬೇಕು.  ವಿದ್ಯಾರ್ಥಿಗಳು ಮತ್ತು ಪೋಷಕರು ಮತ್ತೆ ಶಾಲೆಗಳಿಗೆ ಸೇರಲು ಪ್ರೋತ್ಸಾಹಿಸಬೇಕು.

ಅನು: ರಾಮು ಎಸ್‍.ಕೆ.

Donate Janashakthi Media

Leave a Reply

Your email address will not be published. Required fields are marked *