ಯುಪಿಎ ಸರಕಾರ ವಿಶ್ವಬ್ಯಾಂಕಿನ ಮುನ್ನೆಚ್ಚರಿಕೆಗಾದರೂ ಲಕ್ಷ್ಯ ಕೊಡಲಿ!

ಸಂಪುಟ – 06, ಸಂಚಿಕೆ 05, ಜನವರಿ, 29, 2012

7

ನಮ್ಮ ಹಣಕಾಸು ವಲಯವನ್ನು ತೆರೆಯದಂತೆ ತಡೆದುದರಿಂದಲೇ ಜಾಗತಿಕ ಕುಸಿತದ ವಿನಾಶಕಾರಿ ಪ್ರಭಾವವನ್ನು ಎದುರಿಸಿ ನಿಲ್ಲಲು ಭಾರತಕ್ಕೆ ನೆರವು ಸಿಕ್ಕಿತು ಎಂಬ ನಮ್ಮ ಸ್ವಂತ ಅನುಭವದಿಂದಲೂ ಪಾಠ ಕಲಿಯಲು ನಿರಾಕರಿಸಿರುವ ಯುಪಿಎ-2 ಸರಕಾರ, ಈಗ ಜಗತ್ತಿನ ಶ್ರೀಮಂತ ದೇಶಗಳ ಬಳಿ ಮುಂದುವರೆಯುತ್ತಿರುವ ಹಿಂಜರಿತದ ವಿಷವತರ್ುಲವನ್ನು ಬೇಧಿಸುವಂತಹ ಹಣಕಾಸು ಅಥವ ಆಥರ್ಿಕ ಮದ್ದುಗುಂಡುಗಳೇನೂ ಇಲ್ಲ ಎಂಬ ವಿಶ್ವಬ್ಯಾಂಕಿನ ಇತ್ತೀಚಿನ ಮುನ್ನೆಚ್ಚರಿಕೆಗೂ ಕುರುಡಾಗಿರುವಂತೆ ಕಾಣುತ್ತಿದೆ. ಇನ್ನಷ್ಟು ಉದಾರೀಕರಣ ಕ್ರಮಗಳನ್ನು ತಂದು ವಿದೇಶಿ ಹಣವನ್ನು ಆಕಷರ್ಿಸಿ ನಮ್ಮ ಬೆಳವಣಿಗೆಗೆ ಉತ್ತೇಜನೆ ಪಡೆಯಬಹುದು ಎಂದು ಕನಸು ಕಾಣುತ್ತಿದೆ.

ಭಾರತದ ಆಥರ್ಿಕ ಒಂದು ವರ್ಷದ ನಿಧಾನಗತಿಯ ಬೆಳವಣಿಗೆಯ ನಂತರ ಈಗ ಮತ್ತೆ ಹಿಂದಿನಂತೆ ಚುರುಕುಗೊಳ್ಳುವುದು ಖಂಡಿತ ಎಂದು ಪ್ರಧಾನ ಮಂತ್ರಿಗಳು ಮತ್ತು ನವ-ಉದಾರವಾದಿ ಪಂಡಿತರುಗಳು ಆಶಾವಾದವನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಅವರ ಗುರುಗಳು, ಅಂದರೆ, ವಿಶ್ವಬ್ಯಾಂಕ್ ನೀಡಿರುವ ಎಚ್ಚರಿಕೆ ಈ ಆಶಾವಾದದ ಮೇಲೆ ತಣ್ಣೀರೆರಚಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ನಿದರ್ಿಷ್ಟವಾಗಿ ಭಾರತ, 2008-09ರ ಜಾಗತಿಕ ಆಥರ್ಿಕ ಕುಸಿತದಷ್ಟು ಅಥವ ಅದಕ್ಕಿಂತಲೂ ಕೆಟ್ಟದಾದ ಒಂದು ಬಿಕ್ಕಟ್ಟಿಗೆ ಸಿದ್ಧವಾಗಿರಬೇಕು ಎಂದು ವಿಶ್ವಬ್ಯಾಂಕ್ ಅಶುಭಸೂಚಕ ಎಚ್ಚರಿಕೆ ನೀಡಿದೆ.

ಜಗತ್ತಿನ ಅತಿ ದೊಡ್ಡ ಆಥರ್ಿಕ ಪ್ರದೇಶವಾದ ಯುರೋಪಿಯನ್ ಸಂಘ ಹಿಂಜರಿತ ಅನುಭವಿಸುತ್ತಿರುವಾಗಲೇ, ಜಾಗತಿಕ ಆಥರ್ಿಕದ ಚಾಲಕಶಕ್ತಿ-ಅಭಿವೃದ್ಧಿಶೀಲ ದೇಶಗಳು- ನಿಧಾನಗೊಂಡಿದೆ; ಇವೆರಡೂ ಪರಸ್ಪರ ಉಣಿಸಬಹುದು ಎಂದು ಜನವರಿ 18 ರ ಮುಂಜಾನೆ ಮಾತಾಡುತ್ತ, ವಿಶ್ವಬ್ಯಾಂಕಿನ ಮಹದಾಥರ್ಿಕ ವಿಭಾಗದ ಮುಖ್ಯಸ್ಥರು ಹೇಳಿರುವುದಾಗಿ ಲಂಡನ್ನಿನ ಫಿನಾನ್ಶಿಯಲ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ. ವಿಶ್ವ ಬ್ಯಾಂಕ್ನ ಆಥರ್ಿಕ ಭವಿಷ್ಯವಾಣಿಗಳು ಜೂನ್ 2011ರಲ್ಲಿ ಮಾಡಿದ್ದಕ್ಕಿಂತ ಬಹಳಷ್ಟು ಕೆಳಗಿಳಿದಿವೆ. 2011ರಲ್ಲಿ ವ್ಯಕ್ತಗೊಳಿಸಿದ ಭಯ ಈಗ ನಿಜವಾಗಿದೆ. ಜಾಗತಿಕ ಆಥರ್ಿಕ 2012ರಲ್ಲಿ 2.5ಶೆ.ದಷ್ಟು, 2013ರಲ್ಲಿ 3.1ಶೇ.ದಷ್ಟು ಬೆಳೆಯ ಬಹುದು ಎನ್ನಲಾಗಿದೆ. ಹಿಂದಿನ ಭವಿಷ್ಯವಾಣಿ ಈ ಎರಡೂ ವರ್ಷಗಳಲ್ಲಿ 3.6ಶೇ. ಬೆಳವಣಿಗೆ ಇರಬಹುದು ಎಂದಿತ್ತು. ಇದುವರೆಗೆ ಯುರೋ ವಲಯದ ದೇಶಗಳ ಆಥರ್ಿಕಗಳು ಪ್ರತ್ಯೇಕವಾಗಿ ಕುಗ್ಗುತ್ತಿರುವುದನ್ನು ಕಾಣುತ್ತಿದ್ದೆವು, ಇನ್ನು ಮುಂದೆ ಇಂತಹ ಆಥರ್ಿಕ ಕುಗ್ಗುವಿಕೆ ಇಡೀ ಯುರೋವಲಯದಲ್ಲಿ ಒಟ್ಟಾಗಿ ಕಾಣಬರಲಿದೆ- ಅಂದರೆ 2012ರಲ್ಲಿ ಆಥರ್ಿಕ ಬೆಳವಣಿಗೆಯೆಂಬುದೇ ಈ ಪ್ರದೇಶದಲ್ಲಿ ಇರುವುದಿಲ್ಲ, ಬದಲಿಗೆ ಇಳಿಕೆಯಿರುತ್ತದೆ. ಇತರ ಮುಂದುವರೆದ ದೇಶಗಳು ಹೆಚ್ಚೆಂದರೆ 2.1 ಶೇ. ಬೆಳವಣಿಗೆ ಕಾಣಬಹುದು.

ಕೈಗೂಡದ ನಿರೀಕ್ಷೆ
ಜಗತ್ತಿನ ಶ್ರೀಮಂತ ದೇಶಗಳ ಬಳಿ ಮುಂದುವರೆಯುತ್ತಿರುವ ಹಿಂಜರಿತದ ವಿಷವತರ್ುಲವನ್ನು ಬೇಧಿಸುವಂತಹ ಹಣಕಾಸು ಅಥವ ಆಥರ್ಿಕ ಮದ್ದುಗುಂಡುಗಳೇನೂ ಈಗ ಇಲ್ಲ ಎಂದು ವಿಶ್ವಬ್ಯಾಂಕ್ ಎಚ್ಚರಿಸಿರುವಾಗ ಭಾರತದಲ್ಲಿ ಇನ್ನಷ್ಟು ಉದಾರೀಕರಣ ವಿದೇಶಿ ಹಣವನ್ನು ಆಕಷರ್ಿಸಿ ನಮ್ಮ ಬೆಳವಣಿಗೆಗೆ ಉತ್ತೇಜನೆ ಸಿಗಬಹುದು ಎಂಬುದು ಬಹುದೂರದ ನಿರೀಕ್ಷೆಯಾಗಿ ಕಾಣುತ್ತಿದೆ.

ಹೀಗಿದ್ದಾಗ್ಯೂ, ಯುಪಿಎ-2 ಸರಕಾರ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಹತ್ವದ ಹಣಕಾಸು ಸುಧಾರಣಾ ಶಾಸನಗಳನ್ನು ತರಲು ಹೊರಟಂತಿದೆ. ಇವು ಎಡಪಕ್ಷಗಳು ಯುಪಿಎ-1 ಆಳ್ವಿಕೆಯಲ್ಲಿ ಬಾರದಂತೆ ತಡೆದಿದ್ದ ಶಾಸನಗಳು. ನಮ್ಮ ಹಣಕಾಸು ವಲಯವನ್ನು ಈ ರೀತಿ ತೆರೆಯದಂತೆ ತಡೆದುದರಿಂದಲೇ ಜಾಗತಿಕ ಕುಸಿತದ ವಿನಾಶಕಾರಿ ಪ್ರಭಾವವನ್ನು ಎದುರಿಸಿ ನಿಲ್ಲಲು ಭಾರತಕ್ಕೆ ನೆರವು ಸಿಕ್ಕಿತು ಎಂಬ ನಮ್ಮ ಸ್ವಂತ ಅನುಭವದಿಂದಲೂ ಪಾಠ ಕಲಿಯಲು ನಿರಾಕರಿಸಿರುವ ಈ ಸರಕಾರ, ಈಗ ವಿಶ್ವಬ್ಯಾಂಕಿನ ಇತ್ತೀಚಿನ ಮುನ್ನೆಚ್ಚರಿಕೆಗೂ ಕುರುಡಾಗಿರುವಂತೆ ಕಾಣುತ್ತಿದೆ.

ನಮ್ಮ ವಿಮಾವಲಯದೊಳಕ್ಕೆ ಹಣಕಾಸು ಹರಿವಿನ ಮಿತಿಯನ್ನು ಹೆಚ್ಚಿಸುವ ಶಾಸನ, ಖಾಸಗಿ ಭಾರತೀಯ ಬ್ಯಾಂಕುಗಳನ್ನು ವಹಿಸಿಕೊಳ್ಳಲು ವಿದೇಶಿ ಬ್ಯಾಂಕುಗಳಿಗೆ ಅನುಮತಿ ಕೊಡುವ ಬ್ಯಾಂಕಿಂಗ್ ಸುಧಾರಣೆ ಮತ್ತು ಪೆನ್ಶನ್ ನಿಧಿಗಳನ್ನು ಖಾಸಗೀಕರಿಸುವ ಶಾಸನವಲ್ಲದೆ, ರಾಜ್ಯ ವಿಧಾನಸಭಾ ಚುನಾವಣೆಗಳು ಮುಗಿದ ಕೂಡಲೇ ಚಿಲ್ಲರೆ ವ್ಯಾಪಾರದಲ್ಲಿ ಎಫ್ಡಿಐ ಗೆ ಅವಕಾಶ ನೀಡುವ ಶಾಸನಕ್ಕೂ ಸರಕಾರ ಸಿದ್ಧವಾಗುತ್ತಿರುವಂತೆ ಕಾಣುತ್ತಿದೆ. ಇದು ಅಗಾಧ ಪ್ರಮಾಣದಲ್ಲಿ ಉದ್ಯೋಗನಷ್ಟಗಳನ್ನುಂಟು ಮಾಡಿ ನಮ್ಮ ಆಥರ್ಿಕದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ನಮ್ಮ ಬಹುಪಾಲು ಜನತೆಯ ಜೀವನಾಧಾರದ ಮೇಲೆ ದಾಳಿ ಮಾಡುತ್ತದೆ ಎಂದು ಈ ಅಂಕಣದಲ್ಲಿ ಮುಂದಿಟ್ಟ ತರ್ಕಗಳಿಗೆ ಯಾವುದೇ ರೀತಿಯಲ್ಲಿ ಒಪ್ಪಬಹುದಾದ ಉತ್ತರ ಕೊಡಲು ಇದುವರೆಗೆ ಈ ಸರಕಾರಕ್ಕೆ ಆಗಿಲ್ಲ.

ವಿದೇಶಿ ಬಂಡವಾಳವನ್ನು ಆಕಷರ್ಿಸುವುದಕ್ಕಾಗಿ
ಚಿಲ್ಲರೆ ವ್ಯಾಪಾರವನ್ನು ಎಫ್ಡಿಐ ಗೆ ತೆರೆಯುವ ಪ್ರಧಾನ ಕಾರಣ ಬಹುಶಃ ವಿದೇಶಿ ಬಂಡವಾಳವನ್ನು ಆಕಷರ್ಿಸಿ ಅವರು ಭಾರತದಿಂದ ಸೂಪರ್ ಲಾಭಗಳನ್ನು ಗಳಿಸುವಂತೆ ಮಾಡುವುದು. ಹೀಗೆ ಬಂಡವಾಳ ಹರಿದು ಬಂದರೆ ಆಥರ್ಿಕದಲ್ಲಿ ವಿಶ್ವಾಸ ಉಂಟಾಗುತ್ತದೆ, ಅದು ಒಳ್ಳೆಯ ಭಾವನೆಯ ಅಂಶವನ್ನು ಉದ್ದೀಪಿಸುತ್ತದೆ, ಶೇರು ಸೂಚ್ಯಂಕ ಏರುವಂತೆ ಮಾಡುತ್ತದೆ, ಆಮೂಲಕ ಭಾರತ ಕೆಲವೇ ಕೆಲವರಿಗೆ ಇನ್ನಷ್ಟು ಹೋಳೆಯುವಂತೆ ಮಾಡುತ್ತದೆ. ಇಲ್ಲಿರುವ ಒತ್ತು ಇದು ಚಿಲ್ಲರೆ ವ್ಯಾಪಾರದ ಮೇಲೆ ಅಥವ ಭಾರತೀಯ ಜನತೆಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಮೇಲಲ್ಲ, ಬದಲಾಗಿ ವಿದೇಶಿ ಬಂಡವಾಳವನ್ನು ಆಕಷರ್ಿಸುವುದರ ಮೇಲೆ. ಆದರೆ ವಿಶ್ವಬ್ಯಾಂಕಿನ ಭವಿಷ್ಯವಾಣಿಯ ಪ್ರಕಾರ, ಹೀಗಾಗುವ ಸಂಭವ ಬಹಳ ಕಡಿಮೆ, ಒಂದು ವೇಳೆ, ಆಕಷರ್ಿಸಲು ಸಾಧ್ಯವಾದರೂ ಮನಮೋಹನಸಿಂಗ್ ಸರಕಾರ ನಿರೀಕ್ಷಿಸುವ ಮಟ್ಟದಲ್ಲಂತೂ ಸಾಧ್ಯವೇ ಇಲ್ಲ. ಎನ್ರೊನ್ಗೆ ಭಾರತದ ಇಂಧನ ಭದ್ರತೆ ನಿಮರ್ಿಸುವ ಹೆಸರಿನಲ್ಲಿ ಬೃಹತ್ ಪ್ರಮಾಣದ ರಿಯಾಯ್ತಿಗಳನ್ನು ಕೊಡುವಾಗ ಅವನ್ನು ಸಮಥರ್ಿಸಿಕೊಳ್ಳಲು ಇಂತಹುದೇ ತರ್ಕಗಳನ್ನು ಮುಂದಿಡಲಾಗಿತ್ತು. ನಂತರ ಎನ್ರೊನ್ ಕತೆಯೇನಾಯ್ತು ಎಂಬುದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಎನ್ರೊನ್ನ ಹೂಡಿಕೆಗಳು ಇಂತಹುದೇ ಒಳ್ಳೆಯ ಭಾವನೆಯ ಅಂಶವನ್ನು ಒದಗಿಸಿದ್ದವು. ಇವೆಲ್ಲದರ ಒಟ್ಟು ಫಲಿತಾಂಶವೆಂದರೆ ಒಂದು ಮಹಾ ಅನರ್ಥ. ಅದೇ ರೀತಿ ಚಿಲ್ಲರೆ ವ್ಯಾಪಾರದಲ್ಲಿ ರೈತರು ಮತ್ತು ಬಳಕೆದಾರರ ಬಗ್ಗೆ ಕಾಳಜಿ ಕೇವಲ ಕಣ್ಣೊರೆಸುವ ತಂತ್ರವಷ್ಟೇ.

ಅಭಿವೃದ್ಧಿಶೀಲ ದೇಶಗಳಲ್ಲಿ ಚೀನಾಕ್ಕೆ ಮಾತ್ರವೇ ಮುಂಬರಲಿರುವ ಈ ಹೊಸ ಜಾಗತಿಕ ಆಥರ್ಿಕ ಹಿಂಜರಿತವನ್ನು ಎದುರಿಸಿ ನಿಲ್ಲುವ ಸಾಮಥ್ರ್ಯ ಮತ್ತು ಇಚ್ಛಾಶಕ್ತಿಯಿರುವುದು ಎಂದೂ ವಿಶ್ವಬ್ಯಾಂಕ್ ಹೇಳಿದೆ. ಆದರೆ ಚೀನಾದ ಈ ಸಾಮಥ್ರ್ಯ ಕೂಡ 2008ಕ್ಕಿಂತ ಈಗ ಬಹಳಷ್ಟು ದುರ್ಬಲಗೊಂಡಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ.

ಭಾರತ ನವ-ಉದಾರವಾದಿ ನೀತಿಗಳನ್ನು ಅನುಸರಿಸುವ ಮೂಲಕ ಜಾಗತಿಕ ಆಥರ್ಿಕ ಹಿಂಜರಿತದ ಪರಿಣಾಮವನ್ನು ಅಳಿಸಿ ಹಾಕುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಬದಲಿಗೆ ಅದು ನಮ್ಮ ದೇಶದಲ್ಲಿ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಶ್ರೀಮಂತರಿಗೆ ವಿಪರೀತ ತೆರಿಗೆ ರಿಯಾಯ್ತಿಗಳನ್ನು ಕೊಡುವ ಬದಲು ಈ ಹಣವನ್ನು ಸಂಗ್ರಹಿಸಿ ನಮ್ಮ ಬಹು ಅಗತ್ಯವಿರುವ ಸಾಮಾಜಿಕ ಮತ್ತು ಆಥರ್ಿಕ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಳಾಗಿ ಬಳಸಬೇಕು, ಅಮೂಲಕ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿಮರ್ಿಸಬೇಕು ಎಂದು ನಾವು ಈ ಪತ್ರಿಕೆಯ ಅಂಕಣಗಳಲ್ಲಿ ಹೇಳುತ್ತ ಬಂದಿದ್ದೇವೆ. ಇದರ ಪರಿಣಾಮವಾಗಿ ಆಂತರಿಕ ಬೇಡಿಕೆಯಲ್ಲಿ ಉಂಟಾಗುವ ಬೆಳವಣಿಗೆ ಒಂದು ಆರೋಗ್ಯಕರ ಬೆಳವಣಿಗೆ ದರಕ್ಕೆ ಪೋಷಕವಾಗ ಬಲ್ಲದು.

ಬಂಡವಾಳಶಾಹಿ ಉದ್ಧಟತನ
1981ರಿಂದ 22 ವರ್ಷಗಳ ಕಾಲ, ಅಂದರೆ ದಕ್ಷಿಣ ಏಶ್ಯಾದಲ್ಲಿ ಸುಧಾರಣೆಗಳ ವರ್ಷಗಳಲ್ಲಿ ಮಲೇಸ್ಯಾದ ಪ್ರಧಾನ ಮಂತ್ರಿಯಾಗಿದ್ದ ಮಹಾತೀರ್ ಮೊಹಮ್ಮದ್ ಒಂದು ಮಲೇಸ್ಯಾದ ಗಾದೆಯನ್ನು ಉದ್ಧರಿಸುತ್ತಿದ್ದರು-ಅದರ ಅರ್ಥ, ನಿನಗೆ ದಾರಿಯೇನಾದರೂ ತಪ್ಪಿದರೆ, ಆರಂಭಕ್ಕೆ ಹಿಂದಿರುಗಿ ಮತ್ತೆ ಆರಂಭಿಸು ಎಂದು (ಇಂತಹ ಜಾಣತನದ ಮಾತುಗಳು ಸುಮಾರಾಗಿ ಎಲ್ಲ ನಾಗರಿಕತೆಗಳಲ್ಲೂ ಕಾಣ ಸಿಗುತ್ತವೆ). ಆದರೇನು ಮಾಡುವುದು, ಜಾಗತಿಕ ಬಂಡವಾಳಶಾಹಿ ಇಂತಹ ಜಾಣತನದಿಂದ ಪಾಠ ಕಲಿಯದಷ್ಟು ಉದ್ಧಟತನ ಹೊಂದಿದೆ. ಅದರ ಬದಲು, ನವ-ಉದಾರವಾದಿ ಪಥ್ಯಗಳು ಸಂಯಮವನ್ನು ಹೇರಬೇಕೆಂದು ಪ್ರತಿಪಾದಿಸುತ್ತವೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ, ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದಷ್ಟೇ ಎಂಬುದನ್ನು ನಾವು ಈ ಹಿಂದೆ ಕಂಡಿದ್ದೇವೆ.

ನಾವು ಹೇಗೆ ತಾನೇ ಇತಿಹಾಸವನ್ನು ತಪ್ಪಾಗಿ ಓದಲು, ಜಾನ್ ಮೆನಾಡರ್್ ಕೀನ್ಸ್ ನ ಬೋಧನೆಗಳನ್ನು ತುಚ್ಛವಾಗಿ ಕಾಣಲು ಸಾಧ್ಯವಾಯಿತು? ಎನ್ನುತ್ತದೆ ನ್ಯೂಯಾಕರ್್ ಪುಸ್ತಕ ವಿಮಶರ್ೆ. 1930ರ ಮಹಾಕುಸಿತದ ನಂತರದ ವರ್ಷಗಳಲ್ಲಿ ಕೀನ್ಸ್ ಸಾರ್ವಜನಿಕ ಹೂಡಿಕೆಗಳ ಮೂಲಕ ಪ್ರಭುತ್ವದ ಸಕ್ರಿಯ ಮಧ್ಯಪ್ರವೇಶದಿಂದ ಮಾತ್ರ ಬಂಡವಾಳಶಾಹಿ ಪೂರ್ಣ ಉದ್ಯೋಗವನ್ನು ಸಾಧಿಸಬಲ್ಲದು ಎಂದು ಪ್ರತಿಪಾದಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಅವರ ಪ್ರಕಾರ, ಬಂಡವಾಳಶಾಹಿಯನ್ನು ಉಳಿಸಲು, ಸಮಾಜವಾದ ಅದನ್ನು ಕೈವಶ ಮಾಡಿಕೊಳ್ಳದಂತೆ ರಕ್ಷಿಸಲು ಇರುವ ದಾರಿ ಇದೊಂದೇ.

ನಿಸ್ಸಹಾಯಕ ಮಾಟಗಾರ
ಮನಮೋಹನ ಸಿಂಗ್ ಸರಕಾರ ನಾವು ಮೇಲೆ ಹೇಳಿರುವ ಸೂಚನೆಗಳನ್ನು ಸ್ವೀಕರಿಸುವ ಬದಲು ನವ-ಉದಾರವಾದಿ ಅಜೆಂಡಾವನ್ನೇ ರಭಸದಿಂದ ಅನುಸರಿಸುವುದನ್ನು ಮುಂದುವರೆಸುತ್ತಿದೆ. ಇದು ನಮ್ಮ ಆಥರ್ಿಕಕ್ಕೆ ಮತ್ತು ನಮ್ಮ ಬಹುಪಾಲು ಜನತೆಗೆ ವಿನಾಶಕಾರಿಯಾಗಬಹುದಷ್ಟೇ. ಬಂಡವಾಳಶಾಹಿಯು ಗೋಡೆಯ ಮೇಲಿನ ಅತಿ ದಪ್ಪಕ್ಷರಗಳ ಬರಹಗಳನ್ನೂ ಉಪೇಕ್ಷಿಸುವ ಒಂದು ಪ್ರವೃತ್ತಿಯನ್ನು ಹೊಂದಿದೆ. ಬಂಡವಾಳಶಾಹಿ ಎಂತಹ ದೈತ್ಯಪ್ರಮಾಣದ ಉತ್ಪಾದನಾ ಮತ್ತು ವಿನಿಮಯ ಸಾಧನಗಳನ್ನು ಸೃಷ್ಟಿಸುತ್ತದೆಯೆಂದರೆ, ಅದು ತನ್ನ ಮಾಟ-ಮಂತ್ರಗಳ ಮೂಲಕ ಪಾತಾಳ ಲೋಕದಿಂದ ಆವಾಹಿಸುವ ಶಕ್ತಿಯನ್ನು ತಾನೇ ನಿಯಂತ್ರಿಸಲಾರದ ಮಾಟಗಾರನಂತಾಗುತ್ತದೆ ಎಂದು ಮಾಕ್ಸರ್್ ಒಂದೊಮ್ಮೆ ಹೇಳಿದ್ದರು. ಇದು ವ್ಯವಸ್ಥೆಯ ಬಿಕ್ಕಟ್ಟು. ಕೆಲವು ವ್ಯಕ್ತಿಗಳ ದುರಾಸೆ, ಹಣದಾಹದಿಂದ ಉಂಟಾದ್ದಲ್ಲ. ಈ ವ್ಯವಸ್ಥೆಯನ್ನು ಕಿತ್ತೊಗೆದಾಗ ಮಾತ್ರವೇ ಮಾನವ ಕುಲದ ನಿಜವಾದ ವಿಮೋಚನೆ ಸಾಧ್ಯ.

ಈ ನಡುವೆ ಭಾರತದಲ್ಲಿ ಯುಪಿಎ ಸರಕಾರ ತನ್ನ ನವ-ಉದಾರವಾದಿ ಧೋರಣೆಯ ದಿಕ್ಕನ್ನು ಬದಲಿಸಿ, ನಮ್ಮ ಬಹು ಆವಶ್ಯಕ ಮೂಲರಚನೆಗಳನ್ನು ಕಟ್ಟಲು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿಮರ್ಿಸಲು ಸಾರ್ವಜನಿಕ ಖಚರ್ುಗಳಲ್ಲಿ ಭಾರೀ ಹೂಡಿಕೆಗಳನ್ನು ಮಾಡುವಂತೆ ಅದರ ಮೇಲೆ ಇನ್ನಷ್ಟು ಒತ್ತಡಗಳನ್ನು ಹಾಕಬೇಕಾಗಿದೆ. ನಮ್ಮ ಜನಗಳ ಜೀವನಾಧಾರವನ್ನು ಉತ್ತಮ ಪಡಿಸಲು ಇರುವ ದಾರಿ ಇದೊಂದೇ.
0

Donate Janashakthi Media

Leave a Reply

Your email address will not be published. Required fields are marked *