ಮಹಿಳಾ ಸಂಘಟನೆ ಬಗ್ಗೆ ಅವಹೇಳನಕಾರಿ ಹೇಳಿಕೆ: ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ಕೌಟುಂಬಿಕ ವಿಚಾರವಾಗಿ ದೂರು ನೀಡಲು ಹೋದ ನಾಗರತ್ಮಮ್ಮ ಹಾಗೂ ಅವರೊಂದಿಗೆ ಹೋದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ಮುಖಂಡರಾದ ಮಂಗಳ ಕುಮಾರಿ ಅವರಿಗೆ ಅಗೌರವ ತೋರಿ ಮಹಿಳಾ ಸಂಘಟನೆ ಬಗ್ಗೆ ಜನವರಿ 22ರಂದು ಅವಹೇಳನಕಾರಿಯಾಗಿ ಮಾತನಾಡಿದ ಬಾಗಲಗುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನಿಲ್ ವಿರುದ್ಧ ಠಾಣೆ ಎದುರು ಜೆಎಂಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮಲ್ಲಸಂದ್ರ ವಾರ್ಡಿನ ರವೀಂದ್ರ ನಗರದ ಮನೆ ಕೆಲಸಗಾರರ ಸಂಘದ ಸದಸ್ಯೆ ದೂರನ್ನು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಮೊದಲು ದೂರು ದಾಖಲಿಸಿಕೊಳ್ಳದೇ ಎರಡು ಗಂಟೆ ಕಾಯಿಸಿರುವ ಘಟನೆ ನಡೆದಿತ್ತು. ಪೀಣ್ಯ ದಾಸರಹಳ್ಳಿ ವ್ಯಾಪ್ತಿಯ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಂದು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ರವರು ಮಹಿಳಾ ಸಂಘಟನೆಯ ಮುಖಂಡರನ್ನು ಠಾಣೆಯ ಬಾಗಿಲಿನಲ್ಲಿ ತಡೆದು ಇವರು ರೋಲ್ ಕಾಲ್ ಸಂಘಟನೆಯವರು ಬ್ರೋಕರ್ ಕೆಲಸ ಮಾಡುತ್ತಾರೆ. ಇವರನ್ನು ಠಾಣೆಯೊಳಗೆ ಸೇರಿಸಬೇಡಿ ಎಂದು ಅವಮಾನ ಮಾಡಿರುತ್ತಾರೆ. ಇದಲ್ಲದೆ ದೂರುದಾರರಾದ ನಾಗರತ್ನಮ್ಮ ನವರನ್ನು ಎಷ್ಟು ದುಡ್ಡು ಕೊಟ್ಟಿದ್ದೀರಾ? ಎಂದು ನಮ್ಮ ಸಂಘಟನೆ ಬಗ್ಗೆ ಮಾತನಾಡಲು ಬಿಡದೆ ಸಂಘಟನೆ ಹಾಗೂ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನ ಮಾಡಿದ್ದರು.

ಇನ್ಸ್‌ಪೆಕ್ಟರ್ ಸುನೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಯಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಎಸಿಪಿ ಮನವಿ ಸ್ವೀಕರಿಸಿ ಪ್ರಕರಣದ ಕುರಿತು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮಿ ಮಾತನಾಡಿದರು. ಜಿಲ್ಲಾ ಮುಖಂಡರಾದ ಲಲಿತ ಶೆಣೈ, ಟಿ.ಲೀಲಾವತಿ, ಮಂಗಳ ಕುಮಾರಿ, ವಿಜಯಲಕ್ಷ್ಮಿ, ಅನಿತಾ, ಲಕ್ಷ್ಮಿ, ಶಮೀಮಾ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಟನೆಯನ್ನು ಬೆಂಬಲಿಸಿ ಸಿಪಿಐ(ಎಂ) ಬೆಂಗಳೂರು ಉತ್ತರ ವಲಯ ಕಾರ್ಯದರ್ಶಿ ಹುಳ್ಳಿ ಉಮೇಶ್ ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *