ಭಾರತೀಯ ವಾಣಿಜ್ಯೋದ್ಯಮಿ ಬಿ.ಆರ್. ಶೆಟ್ಟಿ ತಮ್ಮ ಕಂಪನಿಯ ಜೊತೆ 2020ರಲ್ಲಿ ಮಾಡಿಕೊಂಡಿದ್ದ ವಿದೇಶ ವಿನಿಮಯ ಬಿಸಿನೆಸ್ ಅಗ್ರಿಮೆಂಟ್ ಪ್ರಕಾರ ಹಣ ಪಾವತಿಸುವಲ್ಲಿ ವಿಫಲವಾಗಿದ್ದಾರೆ. ವಿದೇಶಿ ವಿನಿಮಯ ವ್ಯವಹಾರ ವಹಿವಾಟಿನ ಭಾಗವಾಗಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ಗೆ ಪೂರ್ಣ ಮೊತ್ತ ಪಾವತಿಸಬೇಕೆಂದು ಲಂಡನ್ ಕೋರ್ಟ್ 131 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ರೂ 9,68,27,99,500) ಪಾವತಿಸಬೇಕೆಂದು ಆದೇಶ ನೀಡಿದೆ.
ಅಬುಧಾಬಿಯ ಭಾರತೀಯ ಕೋಟ್ಯಾಧಿಪತಿ ಬಾವಗುತ್ತು ರಘುರಾಮ ಶೆಟ್ಟಿ ಅಲಿಯಾಸ್ ಬಿ ಆರ್ ಶೆಟ್ಟಿ 2020ರಲ್ಲಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ವಿದೇಶಿ ವಿನಿಮಯ ವ್ಯಾಪಾರ ವಹಿವಾಟು ಒಪ್ಪಂದದ ಭಾಗವಾಗಿ ಸದರಿ ಬ್ಯಾಂಕ್ ಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗಿತ್ತು. ಇದೇ ವಿಷಯವಾಗಿ ದುಬೈ ಕೋರ್ಟ್ ಬಿ.ಆರ್ ಶೆಟ್ಟಿ ವಿರುದ್ಧ ತೀರ್ಪು ನೀಡಿತ್ತು. ದುಬೈ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅವರು ಲಂಡನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ದುಬೈ ಕೋರ್ಟ್ ಸಹ ಬಾರ್ಕ್ಲೇಸ್ ಕಂಪನಿ ಪರ ಆದೇಶ ನೀಡಿತ್ತು. ಬಿ.ಆರ್.ಶೆಟ್ಟಿ ಆರ್ಥಿಕವಾಗಿ ದಿವಾಳಿಗೆ ಒಳಗಾಗಿದ್ದಾರೆ ಮತ್ತು ಅವರು ಸರಿಯಾದ ಕಾನೂನು ಪ್ರಾತಿನಿಧ್ಯವನ್ನು ಪಡೆಯಲು ಮೊಕದ್ದಮೆಯನ್ನು ಮುಂದೂಡುವಂತೆ ಕೇಳಿಕೊಂಡ ಅವರ ಪರ ವಕೀಲರು ಯುಕೆನಲ್ಲಿ ಡಿಸೆಂಬರ್ ನಡೆದ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು. ಲಂಡನ್ ನ್ಯಾಯಾಧೀಶರು ಆ ಅರ್ಜಿಯನ್ನು ತಿರಸ್ಕರಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ಕೋರ್ಟ್ ಬಿ.ಆರ್. ಶೆಟ್ಟಿ ಅವರ ಮನವಿಯನ್ನು ತಿರಸ್ಕರಿಸಿದೆ. ಬಾರ್ಕ್ಲೇಸ್ ಗೆ ಪಾವತಿಸಬೇಕಿರುವ, ತಮ್ಮ ಕಕ್ಷಿದಾರ ಬಿ.ಆರ್.ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲುಹಾಕಿಕೊಳ್ಳಲಾಗಿದೆ. ತೀರ್ಪನ್ನು ಮುಂದೂಡುವಂತೆ ಮತ್ತೊಮ್ಮೆ ನ್ಯಾಯಾಲಯವನ್ನು ಕೋರಿದರು. ಆದರೆ ಲಂಡನ್ ಕೋರ್ಟ್ ಆ ಮನವಿಯನ್ನು ತಿರಸ್ಕರಿಸಿದೆ. ಭಾರತ ಸೇರಿದಂತೆ ಇತರ ದೇಶಗಳು, ಲಂಡನ್ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಪ್ರತಿನಿಧಿಗಳು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.
ಕರ್ನಾಟಕದ ಉಡುಪಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಿಆರ್ ಶೆಟ್ಟಿ ಐಷಾರಾಮಿ ಜೀವನಕ್ಕೆ ಮತ್ತೊಂದು ಹೆಸರು. ಇಲ್ಲದ ಆಸ್ತಿ ಇದೆ ಎಂದು ತೋರಿಸಿ ಐಷಾರಾಮಿ ಜೀವನ ನಡೆಸಿದ ಎಂಬ ಆರೋಪಗಳಿವೆ. ತಮ್ಮ ಶೈಕ್ಷಣಿಕ ಅರ್ಹತೆಗಳೊಂದಿಗೆ ಫಾರ್ಮಾ ವಲಯದಲ್ಲಿ ಮಾರಾಟ ಪ್ರತಿನಿಧಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿ ಅಲ್ಲಿ ಫಾರ್ಮಸಿಯಲ್ಲಿ ಕ್ಲಿನಿಕಲ್ ಪದವಿ ಪಡೆದರು. ನಂತರ ಅವರು 1975ರಲ್ಲಿ ‘ಅಬುಧಾಬಿಯಲ್ಲಿ ತಮ್ಮದೇ ಆದ ಎನ್‌ಎಂಸಿ ಹೆಲ್ತ್ ಹೆಸರಿನಲ್ಲಿ ಆಸ್ಪತ್ರೆಗಳ ನೆಟ್ ವರ್ಕ್ ಸ್ಥಾಪಿಸಿದರು. 2019 ರಲ್ಲಿ ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಅವರು ಭಾರತದ 42ನೇ ಶ್ರೀಮಂತ ವ್ಯಕ್ತಿ, ಅಬುಧಾಬಿಯ ಐದನೇ ಶ್ರೀಮಂತ ಭಾರತೀಯರಲ್ಲಿ ಒಬ್ಬರು ಎಂದು ಹೇಳಿತ್ತು. ಪ್ರಸ್ತುತ 19 ದೇಶಗಳಲ್ಲಿ ಅವರಿಗೆ ಸೇರಿದ 194 ಆಸ್ಪತ್ರೆಗಳಿವೆ.