ಖಾಸಗೀಕರಣ ಸಂವಿಧಾನದ ಮೂಲ ತತ್ವಕ್ಕೇ ವಿರುದ್ಧ

ಪ್ರೊ.ಪ್ರಭಾತ್ ಪಟ್ನಾಯಕ್

ಸಾರ್ವಜನಿಕ ವಲಯದ ಖಾಸಗೀಕರಣವೆಂದರೆ ಕೆಲವು ದೊಡ್ಡ ಏಕಸ್ವಾಮ್ಯ ಮನೆತನಗಳಿಗೆ ಅಥವಾ ದೊಡ್ಡ ಅಂತರಾಷ್ಟ್ರೀಯ ಉದ್ಯಮಗಳಿಗೆ ಸ್ವತ್ತುಗಳನ್ನು ಮಾರಾಟ ಮಾಡುವುದು ಎಂದೇ ಅರ್ಥ, ಏಕೆಂದರೆ ಅವುಗಳನ್ನು ಖರೀದಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸುವಷ್ಟು ಶಕ್ತಿ ಬೇರೆ ಯಾರಿಗೂ ಇಲ್ಲ. ಆದ್ದರಿಂದ ಇದು ಪ್ರಭುತ್ವದ ಜವಾಬ್ದಾರಿಯನ್ನು ಕೈಬಿಡುವುದು ಮತ್ತು ಅರ್ಥವ್ಯವಸ್ಥೆಯ ಮರುವಸಾಹತೀಕರಣದ ಪ್ರಕ್ರಿಯೆಯೊಂದಿಗೆ,  ಸಂವಿಧಾನದಲ್ಲಿ ವಿಧಿಸಿರುವ ಪ್ರಭುತ್ವ ನೀತಿಯ ನಿರ್ದೇಶನ ತತ್ವಗಳನ್ನು ಕೈಬಿಡುವ ಪ್ರಕ್ರಿಯೆಯೂ ಆಗುತ್ತದೆ. ಸಂಕ್ಷಿಪ್ತವಾಗಿ, ಇದು ಸಂವಿಧಾನದ ಸಾಮಾಜಿಕ ತತ್ತ್ವಶಾಸ್ತ್ರಕ್ಕೆ ತದ್ವಿರುದ್ಧವಾದ, ವಿದೇಶಿ ಬಂಡವಾಳಕ್ಕೆ ಅಡಿಯಾಳಾಗುವ ಮತ್ತು ಕಲ್ಯಾಣ ಪ್ರಭುತ್ವಕ್ಕೆ ಬದ್ಧತೆಯನ್ನು ತ್ಯಜಿಸುವ ಒಂದು ಸಾಮಾಜಿಕ ತತ್ವಶಾಸ್ತ್ರವಾಗಿ ಬಿಡುತ್ತದೆ.

‘ಸಾರ್ವಜನಿಕ ವಲಯ ಮತ್ತು ಸಾರ್ವಜನಿಕ ಸೇವೆಗಳನ್ನು ಕುರಿತ ಜನತಾ ಆಯೋಗ’ ತನ್ನ ಇತ್ತೀಚಿನ ವರದಿಯಲ್ಲಿ ಸಾರ್ವಜನಿಕ ವಲಯದ ಆಸ್ತಿಗಳನ್ನು ಸಾರಾಸಗಟು ಖಾಸಗೀಕರಣಗೊಳಿಸುವ ಮೋದಿ ಸರ್ಕಾರದ ತೀರಾ ಅಸಂವಿಧಾನಿಕ ನಡೆಯ ಬಗ್ಗೆ ಗಮನ ಸೆಳೆದಿದೆ. ದೇಶದ ಸಂವಿಧಾನವು ಕೇವಲ ರಾಜಕೀಯ ಆಡಳಿತಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳು ಮತ್ತು ನಿಯಮಗಳ ಕಂತೆಯಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದು ಒಂದು ನಿರ್ದಿಷ್ಟ ಸಾಮಾಜಿಕ ತತ್ತ್ವಶಾಸ್ತ್ರವನ್ನು ಅಭಿವ್ಯಕ್ತಗೊಳಿಸುತ್ತದೆ, ಈ ತತ್ವಶಾಸ್ತ್ರ ಪ್ರಭುತ್ವದ ವಿವಿಧ ಅಂಗಗಳ ನಡವಳಿಕೆಯ ಬಗ್ಗೆ ಹೇಳುತ್ತದೆ ಮತ್ತು ರಾಷ್ಟ್ರ ಯಾವ ಆಧಾರಭೂತ ನಂಬಿಕೆಗಳ ಸುತ್ತ ಅಸ್ತಿತ್ವಕ್ಕೆ ಬಂದಿದೆಯೋ ಅವುಗಳನ್ನು ಒಳಗೊಂಡಿದೆ. ವಸಾಹತುಶಾಹಿ-ವಿರೋಧಿ ಹೋರಾಟದ ಪರಿಣಾಮವಾಗಿ ರಾಷ್ಟ್ರದ ರಚನೆಯು ಐತಿಹಾಸಿಕವಾಗಿ ಅಭೂತಪೂರ್ವ ಏಕತೆಯ ಪ್ರದರ್ಶನದಲ್ಲಿ ಜನರನ್ನು ಒಟ್ಟುಗೂಡಿಸಿದ ಮಾಜಿ-ವಸಾಹತುಶಾಹಿ ರಾಷ್ಟ್ರಗಳ ವಿಷಯದಲ್ಲಂತೂ ಇದು ವಿಶೇಷವಾಗಿ ಸತ್ಯ. ಹೊಸದಾಗಿ ರೂಪುಗೊಂಡ ರಾಷ್ಟ್ರ-ಪ್ರಭುತ್ವದ ಸಂವಿಧಾನದ ತಳಹದಿಯಲ್ಲಿರುವ ಸಾಮಾಜಿಕ ತತ್ತ್ವಶಾಸ್ತ್ರವು ಈ ರೀತಿ ಒಟ್ಟುಗೂಡಿಸುವ ಪರಿಕಲ್ಪನೆಯ ಆಧಾರವನ್ನು ಒದಗಿಸುತ್ತದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ “ಮೂಲ ರಚನೆ”ಯ ಸಿದ್ಧಾಂತವನ್ನು ಪ್ರತಿಪಾದಿಸಿದೆ; ಆದರೆ ಈ “ಮೂಲ ರಚನೆ”ಯ ಅತ್ಯಂತ ಮೂಲಭೂತವಾಗಿರುವಂತದ್ದು ಸಂವಿಧಾನದ ತಳಹದಿಯಾಗಿರುವ ಸಾಮಾಜಿಕ ತತ್ವಶಾಸ್ತ್ರವಾಗಿದೆ. ಈ ಸಾಮಾಜಿಕ ತತ್ತ್ವಶಾಸ್ತ್ರವನ್ನು ಬದಲಾಯಿಸಬೇಕಾದರೆ ಸಂವಿಧಾನದ ಬದಲಾವಣೆಯೇ ಆಗಬೇಕಾಗುತ್ತದೆ. ಅಂದರೆ ಸಂವಿಧಾನದಲ್ಲಿ ನಿಗದಿಪಡಿಸಿದ ಕಟ್ಟುನಿಟ್ಟಾದ ಕಾರ್ಯವಿಧಾನಗಳನ್ನು ಅನುಸರಿಸಬೇಕು,ಮಾತ್ರವಲ್ಲ, ಈ ಬಗ್ಗೆ ಒಟ್ಟಾರೆ ಸಮಾಜದಲ್ಲಿ ಅತ್ಯಂತ ವ್ಯಾಪಕವಾದ ಚರ್ಚೆಯೂ ಸಹ ಅಗತ್ಯವಾಗಿರುತ್ತದೆ, ಈ ಮೂಲಕ ರಾಷ್ಟ್ರ-ಪ್ರಭುತ್ವವನ್ನು ಸೃಷ್ಟಿಸಿದ ಜನರ ಐಕ್ಯತೆಯ ಆಧಾರಕ್ಕೇ ಧಕ್ಕೆಯಾಗಬಾರದು.. ಇದನ್ನು ಸಂಸತ್ತಿನಲ್ಲಿ ಬಹುಮತವನ್ನು ಹೊಂದಿರುವ ಸರ್ಕಾರ ತನ್ನ ಬಹುಮತವನ್ನು ಬಳಸಿಕೊಂಡು ಬದಲಾವಣೆಯನ್ನು ಮುಂದೊತ್ತುವುದು ಖಂಡಿತವಾಗಿಯೂ ಸಲ್ಲ. ಆದರೂ ಮೋದಿ ಸರ್ಕಾರ ಸಾರ್ವಜನಿಕ ವಲಯದ ಆಸ್ತಿಗಳ ಖಾಸಗೀಕರಣ ಮತ್ತು “ನಗದೀಕರಣ”ದ ತನ್ನ ಅಜೆಂಡಾದೊಂದಿಗೆ ಮಾಡಲು ಪ್ರಯತ್ನಿಸುತ್ತಿರುವುದು ಇದನ್ನೇ-ಆಯಕಟ್ಟಿನದಲ್ಲದ ವಲಯಗಳಲ್ಲಿ ಸಾರ್ವಜನಿಕ ವಲಯವನ್ನು ಹೆಚ್ಚು ಕಡಿಮೆ ಮುಚ್ಚಿಬಿಡುವುದು, ಮತ್ತು ಆಯಕಟ್ಟಿನ ವಲಯಗಳಲ್ಲಿ ಅವುಗಳ ಉಪಸ್ಥಿತಿ ಮುಂದುವರೆದರೂ ಅದನ್ನು ಸಾಂಕೇತಿಕವಾಗಿ ಮಾತ್ರ ಇಡುವುದು.

ಸಾರ್ವಜನಿಕ ವಲಯ ಏಕೆ?

ಭಾರತದಲ್ಲಿ ಸಾರ್ವಜನಿಕ ವಲಯವನ್ನು ಹಲವಾರು ಕಾರಣಗಳಿಗಾಗಿ ರಚಿಸಲಾಗಿದೆ: ವಿದೇಶಿ ಬಂಡವಾಳದ ಹಿಡಿತದಿಂದ ದೇಶದ ಕಚ್ಚಾ ವಸ್ತುಗಳ ಸಂಪನ್ಮೂಲಗಳನ್ನು(ಉದಾ, ತೈಲ ವಲಯ) ಬಿಡಿಸಿ ಹತೋಟಿ ಪಡೆಯುವುದು; ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವುದು, ಈ ಮೂಲಕ, ವಿದೇಶಿ ಬಂಡವಾಳದ ಮೇಲೆ ಅವಲಂಬಿತವಾಗುವುದನ್ನು ಮತ್ತು ಅದರ ಪ್ರಾಬಲ್ಯಕ್ಕೆ ಒಳಗಾಗುವುದನ್ನು ತಪ್ಪಿಸುವುದು (ಉದಾ, ಭಾರೀ ವಿದ್ಯುತ್ ವಲಯದಲ್ಲಿ); ಅಗತ್ಯ ಸೇವೆಗಳನ್ನು ಸಾರ್ವಜನಿಕರಿಗೆ ಕಡಿಮೆ ಅಥವಾ ಶೂನ್ಯ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು(ಉದಾ, ಆರೋಗ್ಯ, ಶಿಕ್ಷಣ, ವಿದ್ಯುತ್); ಖಾಸಗಿ ಸಂಪನ್ಮೂಲಗಳು ಸಂಪೂರ್ಣವಾಗಿ ಅಥವಾ ಸಾಕಷ್ಟು ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರದ ನಿರ್ದಿಷ್ಟ ವಲಯಗಳಲ್ಲಿ (ಉದಾಹರಣೆಗೆ, ಮೂಲಸೌಕರ್ಯ) ಸಾರ್ವಜನಿಕ ಸಂಪನ್ಮೂಲಗಳನ್ನು ವಿನಿಯೋಗಿಸುವ ವಿಧಾನಗಳನ್ನು ಒದಗಿಸುವುದು; ಕೃಷಿ ಉತ್ಪನ್ನವನ್ನು ಸಮಂಜಸವಾದ ಬೆಲೆಯಲ್ಲಿ ಸಂಗ್ರಹಿಸುವ ಮೂಲಕ ರೈತ ಕೃಷಿಗೆ ಬೆಂಬಲವನ್ನು ಒದಗಿಸುವುದು(ಉದಾ, ಎಫ್‌ಸಿಐ); ಸಾಲ ಸಿಗದೇ ಬಳಲಬೇಕಾಗುವ ಪುಟ್ಟ ಉತ್ಪಾದನಾ ವಲಯಕ್ಕೆ ಸಾಲವನ್ನು ಒದಗಿಸುವುದು; (ಉದಾ, ಸಾರ್ವಜನಿಕ ವಲಯದ ಬ್ಯಾಂಕುಗಳು). ಸಾರ್ವಜನಿಕ ವಲಯ ಮೂಡಿಬರಲು ಇದ್ದ ಇವೆಲ್ಲ ಕಾರಣಗಳು ಆರ್ಥಿಕ ವಸಾಹತೀಕರಣವನ್ನು ಕಳಚಿ ಹಾಕುವ ಪ್ರಕ್ರಿಯೆಯ ಭಾಗವಾಗಿದ್ದವು ಮತ್ತು ಇವೆಲ್ಲ ಸಂವಿಧಾನದಲ್ಲಿ ನಿರೂಸಿದ ಪ್ರಭುತ್ವ ನೀತಿಯ ನಿರ್ದೇಶನ ತತ್ವಗಳಲ್ಲಿ ವ್ಯಕ್ತಪಡಿಸಿದ ಕಣ್ಣೋಟಕ್ಕೆ ಅನುಗುಣವಾಗಿದ್ದವು. ವಾಸ್ತವವಾಗಿ ಸಾರ್ವಜನಿಕ ವಲಯ ಮತ್ತು ಸಾರ್ವಜನಿಕ ಸೇವೆಗಳ ಮೇಲಿನ ಜನತಾ ಆಯೋಗದ ವರದಿಯು ಒತ್ತಿಹೇಳುವಂತೆ, ಈ ಕಣ್ಣೋಟಕ್ಕೆ ಅನುಗುಣವಾಗಿ ಭಾರತದಲ್ಲಿ ಕಲ್ಯಾಣ ಪ್ರಭುತ್ವವನ್ನು ಸಾಧಿಸಲು ಸಾರ್ವಜನಿಕ ವಲಯವನ್ನು ಒಂದು ಅತ್ಯಗತ್ಯ ಸಾಧನವಾಗಿ ರಚಿಸಲಾಗಿತ್ತು.

ಸಾರ್ವಜನಿಕ ವಲಯದ ಖಾಸಗೀಕರಣವೆಂದರೆ ಕೆಲವು ದೊಡ್ಡ ಏಕಸ್ವಾಮ್ಯ ಮನೆತನಗಳಿಗೆ ಅಥವಾ ದೊಡ್ಡ ಅಂತರಾಷ್ಟ್ರೀಯ ಉದ್ಯಮಗಳಿಗೆ ಸ್ವತ್ತುಗಳನ್ನು ಮಾರಾಟ ಮಾಡುವುದು ಎಂದೇ ಅರ್ಥ, ಏಕೆಂದರೆ ಅವುಗಳನ್ನು ಖರೀದಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸುವಷ್ಟು ದೊಡ್ಡವರು ಬೇರೆ ಯಾರೂ ಇಲ್ಲ. ಆದ್ದರಿಂದ ಇದು ಪ್ರಭುತ್ವದ ಜವಾಬ್ದಾರಿಯನ್ನು ಕೈಬಿಡುವುದು ಮತ್ತು ಅರ್ಥವ್ಯವಸ್ಥೆಯ ಮರುವಸಾಹತೀಕರಣದ (ಅರ್ಥವ್ಯವಸ್ಥೆಯ “ಪ್ರಬಲ ಔನ್ನತ್ಯ”ವನ್ನು ಸ್ವಾತಂತ್ರ‍್ಯದ ಮುಕ್ಕಾಲು ಶತಮಾನದ ನಂತರ ಮತ್ತೆ ಮಹಾನಗರೀಯ ಬಂಡವಾಳಕ್ಕೆ ವಹಿಸಿಕೊಡುವ) ಪ್ರಕ್ರಿಯೆಯೊಂದಿಗೆ ಸಂವಿಧಾನದಲ್ಲಿ ವಿಧಿಸಿರುವ ಪ್ರಭುತ್ವ ನೀತಿಯ ನಿರ್ದೇಶನ ತತ್ವಗಳನ್ನು ಕೈಬಿಡುವ ಪ್ರಕ್ರಿಯೆಯನ್ನು ಸಂಯೋಜಿಸುವ ಕ್ರಿಯೆಯಯಾಗುತ್ತದೆ. ಸಂಕ್ಷಿಪ್ತವಾಗಿ, ಇದು ಸಂವಿಧಾನದ ಸಾಮಾಜಿಕ ತತ್ತ್ವಶಾಸ್ತ್ರಕ್ಕೆ ತದ್ವಿರುದ್ಧವಾದ ಒಂದು ಸಾಮಾಜಿಕ ತತ್ವಶಾಸ್ತ್ರವನ್ನು(ಅದನ್ನು ಹಾಗೆಂದು ಕರೆಯಬಹುದಾದರೆ) ಪ್ರತಿಪಾದನೆಯಾಗಿ ಬಿಡುತ್ತದೆ; ಮೆಟ್ರೋಪಾಲಿಟನ್ (ಮಹಾನಗರೀಯ) ಬಂಡವಾಳಕ್ಕೆ ಅಡಿಯಾಳುತನವನ್ನು, ಒಂದು ಕಲ್ಯಾಣ ಪ್ರಭುತ್ವಕ್ಕೆ ಬದ್ಧತೆಯನ್ನು ತ್ಯಜಿಸುವುದರೊಂದಿಗೆ ಸಂಯೋಜಿಸುವ ಒಂದು ಸಾಮಾಜಿಕ ತತ್ವಶಾಸ್ತ್ರವಾಗಿ ಬಿಡುತ್ತದೆ.

‘ಮೂರು ಬಾರಿ ಹೇಳಿದರೆ ಸತ್ಯ”!

ಈ ಸ್ವತ್ತುಗಳನ್ನು ಹೆಚ್ಚಾಗಿ, ಅವುಗಳ ನಿಜವಾದ ಮೌಲ್ಯಕ್ಕಿಂತ ಕಡಿಮೆ ಬೆಲೆಯಲಿಯ್ಲೇ ಮಾರಲಾಗುವುದರಿಂದ, ಅದು ಬಂಡವಾಳದ ಆದಿ ಸಂಚಯದ ಪ್ರಕ್ರಿಯೆಯೇ ಆಗುತ್ತದೆ. ಉದಾಹರಣೆಗೆ, ಖರೀದಿಸುವ ಮೆಟ್ರೋಪಾಲಿಟನ್ ಬಂಡವಾ¼ದ ಅಥವಾ ದೊಡ್ಡ ಭಾರತೀಯ ಗುಂಪಿನ ಆಸ್ತಿಗಳಿಗೆ 100 ರೂ.ಗಳನ್ನು ಸೇರಿಸಿದರೂ, ಅದಕ್ಕೆ ಪ್ರತಿಯಾಗಿ ಪಡೆಯುವುದು ರೂ 50 ಮಾತ್ರ. ಇದು ದೇಶದಲ್ಲಿ ಸಂಪತ್ತಿನ ಅಸಮಾನತೆಯನ್ನು ಹದಗೆಡಿಸುತ್ತದೆ; ಮತ್ತು ಆದಾಯದ ಅಸಮಾನತೆಯು ಸಂಪತ್ತಿನ ಅಸಮಾನತೆಯಿಂದ ಹುಟ್ಟಿಕೊಂಡಿರುವುದರಿಂದ, ಇದು ಆದಾಯದ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇವೆಲ್ಲವೂ ಸ್ಪಷ್ಟವಾಗಿಯೂ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವ ದೇಶ ಆಡಲಿತದ ಗುರಿಗೆ ಮತ್ತು ಸಂವಿಧಾನದ ನಿರ್ದೇಶನ ತತ್ವಗಳಿಗೆ ವಿರುದ್ಧವಾದ ಸಂಗತಿ. ಆದ್ದರಿಂದ ಸಂವಿಧಾನಕ್ಕೆ ಎದುರಾಗಿ ಮೋದಿ ಸರ್ಕಾರದ ಪಾಪವು ಕೇವಲ ಲೋಪವಲ್ಲ, ತಪ್ಪು ಕೃತ್ಯದ ಅತ್ಯಂತ ಲಜ್ಜೆಗೆಟ್ಟ ರೂಪವೇ ಆಗುತ್ತದೆ.

ವಿಪರ್ಯಾಸವೆಂದರೆ, ಸಂವಿಧಾನದ ಸಾಮಾಜಿಕ ತತ್ತ್ವಶಾಸ್ತ್ರವನ್ನು ಈ ರೀತಿ ಕೈಬಿಡುವ ಬಗ್ಗೆ ಯಾವುದೇ ಸಾರ್ವಜನಿಕ ಚರ್ಚೆ ನಡೆದಿಲ್ಲವಷ್ಟೇ ಅಲ್ಲ, ಅದಕ್ಕೆ ಕಾರಣಗಳನ್ನು ಸಹ ಸರ್ಕಾರವು ವಿವರಿಸಿಲ್ಲ. ಈಗ ಅಸ್ತಿತ್ವದಲ್ಲಿರುವಂತೆ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸ ಬೇಕಾಗಿರುವುದಾದರೂ ಏತಕ್ಕೆ ಎಂಬುದನ್ನು ಎಂದೂ ಸ್ಪಷ್ಟಪಡಿಸಲಾಗಿಲ್ಲ; ಖಾಸಗೀಕರಣಕ್ಕೆ ಒದಗಿಸಲಾದ ಏಕೈಕ ಸಮರ್ಥನೆಯೆಂದರೆ ಸಾರ್ವಜನಿಕ ವಲಯವು ಅರ್ಥವ್ಯವಸ್ಥೆಯಲ್ಲಿ ಕನಿಷ್ಠ ಅಸ್ತಿತ್ವವನ್ನು ಮಾತ್ರ ಹೊಂದಿರಬೇಕು ಎಂಬ ಮೋದಿಯವರ ಪ್ರತಿಪಾದನೆಯಷ್ಟೇ. ಲೆವಿಸ್ ಕ್ಯಾರೊಲ್ ಅವರ “ದಿ ಹಂಟಿಂಗ್ ಆಫ್ ದಿ ಸ್ನಾರ್ಕ್” ಎಂಬ ಅಸಂಗತ ಪದ್ಯದಲ್ಲಿ ಒಂದು ಪಾತ್ರವು “ವಾಟ್ ಐ ಟೆಲ್ ಯು ಥ್ರೀ ಟೈಮ್ಸ್ ಈಸ್ ಟ್ರೂ” ಅಂದರೆ ನಾನು ಮೂರು ಬಾರಿ ಹೇಳುವಂತದ್ದು ಸತ್ತ ಎಂದು ಹೇಳುವಂತೆ, ಮೋದಿಯವರು ಮೂರು ಬಾರಿ ಹೇಳುವುದು ನಿಜವೆಂದು ಭಾವಿಸಲಾಗಿದೆ, ಯಾವುದೇ ವಾದ ಮತ್ತು ಚರ್ಚೆಯ ಅಗತ್ಯವಿಲ್ಲ. ಇದು ಸಂವಿಧಾನಕ್ಕೆ ತಿರಸ್ಕಾರದ ಪ್ರದರ್ಶನವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ, ಯಾವುದೇ ಬೆಲೆ ತೆತ್ತಾದರೂ ಅದನ್ನು ಪ್ರತಿರೋಧಿಸಬೇಕಾಗಿದೆ.

ಕೆಳಹಂತದ ಅಧಿಕಾರಿಗಳು, ಒತ್ತಿ ಕೇಳಿದಾಗ, ಮೋದಿ ಸರ್ಕಾರದ ಬೃಹತ್ ಖಾಸಗೀಕರಣ ಯೋಜನೆಗಳನ್ನು ಬೆಂಬಲಿಸಲು ಯಾವುದೇ ವಾದವನ್ನು ನೀಡುವುದಿಲ್ಲ, ಆದರೆ ಸರ್ಕಾರದ ಬಜೆಟ್‌ಗೆ ಸಂಪನ್ಮೂಲಗಳನ್ನು ಸಂಗ್ರಹಿಸುವ ಸಾಧನ ಎಂದಷ್ಟೇ ಒಟ್ಟಾರೆಯಾಗಿ ಖಾಸಗೀಕರಣದ ಪ್ರಯೋಜನಗಳನ್ನು ಉಲ್ಲೇಖಿಸುತ್ತಾರೆ. ಆದರೆ ಇದು ತಾರ್ಕಿಕವಾಗಿ ಸಂಪೂರ್ಣವಾಗಿ ದೋಷಪೂರಿತವಾದ ವಾದವಾಗಿದೆ. ಸಂಪನ್ಮೂಲ ಕ್ರೋಢೀಕರಣದ ಸಾಧನವಾಗಿ ಖಾಸಗೀಕರಣವು ವಿತ್ತೀಯ ಕೊರತೆಯ ವಿಧಾನಕ್ಕಿಂತ ಭಿನ್ನವೇನೂ ಆಗಿಲ್ಲ. ಆದರೆ ಅದರ ಪರಿಣಾಮಗಳು ಮಾತ್ರ ಮಾರಕವಾಗಿವೆ.

‘ಹರಿವು’ ಮತ್ತು  ‘ದಾಸ್ತಾನು’

ಇಲ್ಲಿ ನಾವು “ಸ್ಟಾಕ್”(ದಾಸ್ತಾನು)ಗಳು ಮತ್ತು “ಫ್ಲೋ”(ಹರಿವು)ಗಳ ನಡುವೆ ವ್ಯತ್ಯಾಸವನ್ನು ನೋಡಬೇಕು. ಹಣಕಾಸಿನ ಕೊರತೆಯು ಸರ್ಕಾರದ ವರಮಾನಕ್ಕಿಂತ ಸರ್ಕಾರದ ವೆಚ್ಚ ಎಷ್ಟು ಅಧಿಕವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ; ವೆಚ್ಚ ಮತ್ತು ವರಮಾನ ಎರಡೂ ಹರಿವುಗಳು. ಇದು ಅರ್ಥವ್ಯವಸ್ಥೆಯಲ್ಲಿ ಒಟ್ಟು ಬೇಡಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ; ಮತ್ತು ಅಂತಹ ಸೇರ್ಪಡೆಯು ಉತ್ಪಾದನೆ ಮತ್ತು ಉದ್ಯೋಗದ ಮಟ್ಟವನ್ನು ಹೆಚ್ಚಿಸಲು ಅಥವಾ ದುಡಿಯುವ ಜನರ ಹಣದ ಆದಾಯಕ್ಕೆ ಹೋಲಿಸಿದರೆ ಬೆಲೆಗಳ ಮಟ್ಟವನ್ನು ಹೆಚ್ಚಿಸಲು (ಉತ್ಪನ್ನದ ಹೆಚ್ಚಳ ಸಾಧ್ಯವಾಗದಿದ್ದರೆ)ಕಾರಣವಾಗುವುದರಿಂದ, ಅದು ಖಾಸಗಿ ಉಳಿತಾಯವನ್ನು ಎರಡೂ ರೀತಿಯಲ್ಲಿ ಹೆಚ್ಚಿಸುತ್ತದೆ ಮತ್ತು ಆದ್ದರಿಂದ ಉಳಿತಾಯದಲ್ಲಿನ ಈ ಹೆಚ್ಚಳವನ್ನು ಎರವಲು ಪಡೆಯಲು ಸರ್ಕಾರವನ್ನು ಶಕ್ತಗೊಳಿಸುತ್ತದೆ. ಸರ್ಕಾರವು ಎರವಲು ಪಡೆಯುವ ಉಳಿತಾಯವು ಅದು ಖಾಸಗಿ ಕೈಗಳಿಗೆ ಹಾಕಿದ ಮೊತ್ತಕ್ಕೆ ಸಮನಾಗಿರುತ್ತದೆ (ಸರಳತೆಗಾಗಿ, ಮುಚ್ಚಿದ ಆರ್ಥಿಕತೆ ಎಂದು ಊಹಿಸಲಾಗಿದೆ). ಹೀಗಾಗಿ ಖಾಸಗಿ ಉಳಿತಾಯವು ಉಳಿತಾಯ ಮಾಡುವವರು ಬಳಕೆಯಲ್ಲಿ ಯಾವುದೇ ತ್ಯಾಗವನ್ನು ಮಾಡದೆಯೇ ಖಾಸಗಿ ಹೆಚ್ಚಾಗುತ್ತದೆ; ಮತ್ತು ಎಲ್ಲಾ ಉಳಿತಾಯಗಳು ಸಂಪತ್ತಿಗೆ ಸೇರ್ಪಡೆಗಳಾಗಿರುವುದರಿಂದ, ವಿತ್ತೀಯ ಕೊರತೆಯು ಸಂಪತ್ತಿನ ಅಸಮಾನತೆಯನ್ನು ನಿಷ್ಕಾರಣವಾಗಿ ಹೆಚ್ಚಿಸುತ್ತದೆ.

ವಿತ್ತೀಯ ಕೊರತೆಯ ಬದಲಿಗೆ, ಸರ್ಕಾರವು ಹಣವನ್ನು ಸಂಗ್ರಹಿಸಲು ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡಿದರೆ ಈ ಸಂಪೂರ್ಣ ಪ್ರಕ್ರಿಯೆಯು ಸ್ವಲ್ಪವೂ ಬದಲಾಗುವುದಿಲ್ಲ. ಒಂದೇ ವ್ಯತ್ಯಾಸವೆಂದರೆ, ವಿತ್ತೀಯ ಕೊರತೆಗೆ ಹಣಕಾಸು ನೀಡಲು ಸರ್ಕಾರವು ಬ್ಯಾಂಕ್‌ಗಳಿಂದ ಸಾಲ ಪಡೆಯುವ (ಇದು ನಂತರ ಒಂದು ಸಮಾನವಾದ ಮೊತ್ತ ಠೇವಣಿಗಳಾಗಿ ಬ್ಯಾಂಕ್‌ಗಳಿಗೆ ಹರಿಯುವಂತೆ ಮಾಡುತ್ತದೆ) ಬದಲು, ಬಂಡವಾಳಶಾಹಿಗಳು ಸಾರ್ವಜನಿಕ ವಲಯದ ಆಸ್ತಿಗಳನ್ನು ಖರೀದಿಸಲು ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಾರೆ ಮತ್ತು ಖರ್ಚು ಮಾಡಲು ಸರ್ಕಾರಕ್ಕೆ ಹಣವನ್ನು ಹಸ್ತಾಂತರಿಸುತ್ತಾರೆ. ಅದರ ಸ್ಥೂಲ ಆರ್ಥಿಕ ಪರಿಣಾಮವೆಂದರೆ, ಪರೋಕ್ಷವಾಗಿ, ಸರ್ಕಾರಿ ವೆಚ್ಚಕ್ಕಾಗಿ ಬ್ಯಾಂಕ್ ಹಣಕಾಸು ಪಡೆಯುವ ಈ ವಿಧಾನವು ಸರ್ಕಾರಿ ವೆಚ್ಚಗಳಿಗೆ ನೇರವಾಗಿ ಬ್ಯಾಂಕ್ ಹಣಕಾಸು ಪಡೆಯುವುದಕ್ಕಿಂತ ಭಿನ್ನವಾಗಿರುವುದಿಲ್ಲ: ಇದು ಒಟ್ಟಾರೆ ಬೇಡಿಕೆಗೆ ಅದೇ ಮೊತ್ತವನ್ನು ಸೇರಿಸುತ್ತದೆ ಮತ್ತು ಸಂಪತ್ತಿನ ಅಸಮಾನತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಣಕಾಸಿನ ಕೊರತೆಯ ಸಂದರ್ಭದಲ್ಲಿ ಖಾಸಗಿ ವಲಯವು ನೇರವಾಗಿ ಅಥವಾ ಪರೋಕ್ಷವಾಗಿ (ಬ್ಯಾಂಕ್‌ಗಳ ಮೂಲಕ), ಸರ್ಕಾರದ ಮೇಲಿನ ಕಾಗದದ ಹಕ್ಕುಗಳನ್ನು (ಸರ್ಕಾರಿ ಬಾಂಡ್‌ಗಳ ರೂಪದಲ್ಲಿ) ಹೊಂದಿದೆ; ಖಾಸಗೀಕರಣದ ಸಂದರ್ಭದಲ್ಲಿ ಅದು ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಇಕ್ವಿಟಿಯನ್ನು ಹೊಂದಿದೆ (ಮತ್ತು ಆ ಮೂಲಕ ಅವುಗಳನ್ನು ನಿಯಂತ್ರಿಸುತ್ತದೆ). ಹೀಗಾಗಿ ಸ್ಥೂಲ ಆರ್ಥಿಕ ಪರಿಣಾಮಗಳು ಒಂದೇ ಆಗಿರುವಾಗ, ಖಾಸಗೀಕರಣವು ಲಾಭ ಗಳಿಸುವ ಉದ್ದೇಶದಿಂದ ಕಂಪನಿಗಳ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ತೆಗೆದುಕೊಳ್ಳಲು ಅನುಮತಿಸುತ್ತದೆ, ಅದರಿಂದ ಜನರಿಗೆ ಪ್ರಯೋಜನವಾಗುವುದಿಲ್ಲ.

ವಿತ್ತೀಯ ಕೊರತೆಯು ಸರ್ಕಾರಕ್ಕೆ ಋಣಭಾರವನ್ನು ಉಂಟುಮಾಡಿದರೆ, ಖಾಸಗೀಕರಣವು ಸಾಲ-ಸೃಷಿಸುವಂತದ್ದು ಆಗಿರುವುದಿಲ್ಲ ಮತ್ತು ಅದರಿಂದಾಗಿ ಸರ್ಕಾರವು ನಂತರ ಬಡ್ಡಿ ಪಾವತಿಯ ಬಾಧ್ಯತೆಗಳನ್ನು ಹೊಂದಿರಯವುದಿಲ್ಲ ಎಂದು ಕೆಲವೊಮ್ಮೆ ವಾದಿಸಲಾಗುತ್ತದೆ. ಆದರೆ ಈ ವಾದದಲ್ಲಿ, ಖಾಸಗೀಕರಣವು ಸರಕಾರಕ್ಕೆ ಬರಬಹುದಾಗಿದ್ದ ಪ್ರತಿಫಲದ ಹರಿವನ್ನು ಖಾಸಗಿಯವರ ಕೈಗೆ ಹಾಕುತ್ತದೆ ಎಂಬ ಸಂಗತಿ ಕಾಣೆಯಾಗಿದೆ. ಪ್ರತಿಫಲ (ರಿಟರ್ನ್)ಗಳನ್ನು ಬಿಟ್ಟುಕೊಡುವುದು ಎಂದರೆ ಬಡ್ಡಿ ಪಾವತಿ ಮಾಡಿದಂತೆಯೇ. ಆದ್ದರಿಂದ ಎರಡೂ ಸಂದರ್ಭಗಳಲ್ಲಿ ಸರ್ಕಾರಕ್ಕೆ ವರಮಾನ ನಷ್ಟದ ಹರಿವು ಇರುತ್ತದೆ; ಸರ್ಕಾರವು ಆದಾಯ ಅಥವಾ ಸಂಪತ್ತಿನ ತೆರಿಗೆಯ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸಿದರೆ ಮಾತ್ರ ಈ ಹರಿವು ಇರುವುದಿಲ್ಲ, ಹೊರತು ಖಾಸಗೀಕರಣದ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸಿದರೆ ಅಲ್ಲ.

ಹೀಗಾಗಿ, ದೋಷಪೂರಿತ ಆರ್ಥಿಕ ತರ್ಕಗಳ ಆಧಾರದ ಮೇಲೆ, ಮೋದಿ ಸರ್ಕಾರವು ಸಂವಿಧಾನದ ತಳಹದಿಯಾಗಿರುವ ಸಾಮಾಜಿಕ ತತ್ವವನ್ನು ಕೈಬಿಟ್ಟು ಸಾರ್ವಜನಿಕ ವಲಯವನ್ನು ತಮ್ಮ ಕೆಲವು ಪ್ರೀತಿಪಾತ್ರ ಬಂಟರಿಗೆ ಹಸ್ತಾತರಿಸುತ್ತದೆ. ತಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಮೋದಿ ಆಗಾಗ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಪ್ರಸ್ತಾವನೆಯು ಸ್ವಾತಂತ್ರ‍್ಯೋತ್ತರ ಭಾರತದಲ್ಲಿ ಭ್ರಷ್ಟಾಚಾರದ ಅತ್ಯಂತ ಹಗರಣಾತ್ಮಕ ನಿದರ್ಶನವಾಗಿದೆ.

ಅನು:ಕೆ.ವಿ.

Donate Janashakthi Media

Leave a Reply

Your email address will not be published. Required fields are marked *