“ದ್ವೇಷದ ಭಾಷಣಗಳು ಮತ್ತು ಹಿಂಸಾಚಾರ-ನರಮೇಧಕ್ಕೆ ಕರೆಗಳನ್ನು ಖಂಡಿಸಬೇಕು” ರಾಷ್ಟ್ರಪತಿ ಮತ್ತು ಪ್ರಧಾನಿಗಳಿಗೆ ಐವರು ನಿವೃತ್ತ ಸೇನಾ ಮುಖ್ಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿಷ್ಠಿತರ ಪತ್ರ

01 ಜನವರಿ 2022 ನವದೆಹಲಿ: ಸಶಸ್ತ್ರ ಪಡೆಗಳ ಐವರು ಮಾಜಿ ಮುಖ್ಯಸ್ಥರು ಸೇರಿದಂತೆ ವಿವಿಧ ಮಾಜಿ ಸಶಸ್ತ್ರ ಪಡೆ ಅಧಿಕಾರಿಗಳು, ಅಧಿಕಾರಿಗಳು ಮತ್ತು ಪ್ರಮುಖ ನಾಗರಿಕರು ರಾಷ್ಟ್ರಪತಿ, ಪ್ರಧಾನ ಮಂತ್ರಿ , ದೇಶದ  ಮುಖ್ಯ ನ್ಯಾಯಾಧೀಶರು,  ಗೃಹಮಂತ್ರಿ,ರಕ್ಷಣಾ ಮಂತ್ರಿ, ಲೋಕಸಭಾ ಮತ್ತು ರಾಜ್ಯಸಭಾದ ಅಧ್ಯಕ್ಷರುಗಳು  ಅವರಿಗೆ ಬರೆದಿರುವ ಪತ್ರದಲ್ಲಿ  . ಹರಿದ್ವಾರದಲ್ಲಿ ಧರ್ಮ ಸಂಸದ್ ಎಂದು ಕರೆಯಲ್ಪಡುವಲ್ಲಿ ಕೆಲವು ಹಿಂದೂ ನಾಯಕರಿಂದ ಮತ್ತು ಅದೇ ವೇಳೆಗೆ ದಿಲ್ಲಿಯಲ್ಲಿ ಸಾರ್ವ ಜನಿಕ ಪ್ರತಿಜ್ಞಾಸ್ವೀಕಾರ ಎಂಬ ಕಾರ್ಯಕ್ರಮದಲ್ಲಿ  ಹಿಂಸಾಚಾರಕ್ಕೆ ಪ್ರಚೋದನೆಯನ್ನು ತಡೆಯಿರಿ ಎಂದು ಕೋರಿದ್ದಾರೆ.

“ಭಾರತೀಯ ಮುಸ್ಲಿಮರ ನರಮೇಧದ ಬಹಿರಂಗ ಕರೆ” ಮತ್ತು ದೇಶದಲ್ಲಿ ಕ್ರಿಶ್ಚಿಯನ್ನರು, ದಲಿತರು ಮತ್ತು ಸಿಖ್ಖರಂತಹ ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತ , “ಯಾವ ವ್ಯಕ್ತಿಗಳು ಅಥವಾ ಪಕ್ಷಗಳು ಅಂತಹ ನರಮೇಧಕ್ಕೆ ಕರೆಗಳನ್ನು ಪ್ರಾರಂಭಿಸಿದರೂ, ಭಾರತ ಸರ್ಕಾರ ಮತ್ತು ಉನ್ನತ ಮಟ್ಟದಲ್ಲಿ ನ್ಯಾಯಾಂಗವು ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಈ ಪ್ರತಿಷ‍್ಠಿತರು ಈ ಪತ್ರದಲ್ಲಿ ಹೇಳಿದ್ದಾರೆ.

ನೌಕಾಪಡೆಯ ಮಾಜಿ ಮುಖ್ಯಸ್ಥರುಗಳಾಗಿದ್ದ ಅಡ್ಮಿರಲ್ ಲಕ್ಷ್ಮೀನಾರಾಯಣ ರಾಮದಾಸ್, ಅಡ್ಮಿರಲ್ ವಿಷ್ಣು ಭಾಗವತ್ , ಅಡ್ಮಿರಲ್ ಅರುಣ್ ಪ್ರಕಾಶ್ ,  ಅಡ್ಮಿರಲ್ ಆರ್.ಕೆ.ಧೋವನ್, ವಾಯುಪಡೆಯ ಮಾಜಿ ಮುಖ್ಯಸ್ಥ  ಏರ್ ಚೀಫ್ ಮಾರ್ಷಲ್ ಎಸ್.ಪಿ.ತ್ಯಾಗಿ, ಸೇನಾಪಡೆಯ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ವಿಜಯ್ ಒಬೆರಾಯ್ ಮತ್ತಿತರ ರಂಗಗಳ ಪ್ರತಿಷ್ಠಿತ ನಾಗರಿಕರು ನಿರ್ದಿಷ್ಟವಾಗಿ, ಸಾಧುಗಳಲ್ಲಿ ಒಬ್ಬರು ಸೇನೆಗೆ ಮಾಡಿದ ಕರೆಯನ್ನು ಉಲ್ಲೇಖಿಸಿದ್ದಾರೆ.

“ಒಬ್ಬ ಭಾಷಣಕಾರರು ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡು ಸ್ವಚ್ಛತಾ ಅಭಿಯಾನದಲ್ಲಿ (ಸಫಾಯಿ ಅಭಿಯಾನ) ಭಾಗವಹಿಸುವಂತೆ ಸೇನೆ ಮತ್ತು ಪೊಲೀಸರಿಗೆ ಕರೆ ನೀಡಿದರು. ಇದು ನಮ್ಮದೇ ಪ್ರಜೆಗಳ ನರಮೇಧದಲ್ಲಿ ಭಾಗವಹಿಸುವಂತೆ ಸೇನೆಯನ್ನು ಕೇಳುತ್ತದೆ ಮತ್ತು ಇದು ಖಂಡನೀಯ ಮತ್ತು ಸ್ವೀಕಾರಾರ್ಹವಲ್ಲ. ನಮ್ಮ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರದೊಳಗಿನ ಯಾವುದೇ ಶಾಂತಿ ಮತ್ತು ಸೌಹಾರ್ದತೆಯ ಉಲ್ಲಂಘನೆಯು ಶತ್ರುತ್ವದ ಬಾಹ್ಯ ಶಕ್ತಿಗಳನ್ನು ಉತ್ತೇಜಿಸುತ್ತದೆ, ”ಎಂದು ಪತ್ರವು ರಾಷ್ಟ್ರೀಯ ಭದ್ರತೆಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.

“ರಾಷ್ಟ್ರಪತಿಗಳೇ  ಮತ್ತು ಪ್ರಧಾನ ಮಂತ್ರಿಗಳೇ, ಅಂತಹ ಪ್ರಯತ್ನಗಳನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ನಿಮ್ಮನ್ನುಆಗ್ರಹಿಸುತ್ತೇವೆ ಮತ್ತು ಹಿಂಸಾಚಾರಕ್ಕೆ ಇಂತಹ ಪ್ರಚೋದನೆಯನ್ನು ನಿಸ್ಸಂಗ್ದಿದ್ಧ ಮಾತುಗಳಲ್ಲಿ ಖಂಡಿಸಬೇಕು ಎಂದು ನಿಮ್ಮನ್ನು ಆಗ್ರಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

“ದ್ವೇಷದ ಸಾರ್ವಜನಿಕ ಅಭಿವ್ಯಕ್ತಿಗಳೊಂದಿಗೆ ಹಿಂಸೆಗೆ ಇಂತಹ ಪ್ರಚೋದನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಇದು ಆಂತರಿಕ ಭದ್ರತೆಯ ಗಂಭೀರ ಉಲ್ಲಂಘನೆಗಳು  ಮಾತ್ರವೇ  ಅಲ್ಲ, ಇದು ನಮ್ಮ ರಾಷ್ಟ್ರದ ಸಾಮಾಜಿಕ ಹಂದರವನ್ನು  ಚಿಂದಿ ಮಾಡಬಹುದು.”ಎಂದಿರುವ  ಪತ್ರವು ಮುಂದುವರಿದು, “ಆದ್ದರಿಂದ ನಮ್ಮ ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ರಕ್ಷಿಸಲು ನಾವು ಸರ್ಕಾರ, ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ಗೆ ತುರ್ತಾಗಿ ಕೆಲಸ ಮಾಡಬೇಕೆಂದು ಕೇಳುತ್ತೇವೆ. ಸಂವಿಧಾನವು ಯಾವುದೇ ನಂಬಿಕೆಯವರು ಧರ್ಮದ ಮುಕ್ತ  ಆಚರಣೆಗೆ ಅವಕಾಶವನ್ನು  ಒದಗಿಸುತ್ತದೆ. ಧರ್ಮದ ಹೆಸರಿನಲ್ಲಿ ಇಂತಹ ಧ್ರುವೀಕರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಈ ನಿವೃತ್ತ ಸೇನಾಧಿಕಾರಿಗಳೂ ಸೇರಿದಂತೆ ಈ ಪ್ರತಿಷ್ಠಿತ ನಾಗರಿಕರು ಹೇಳಿದ್ದಾರೆ.

ಅಲ್ಲದೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಈ ಕರೆಗಳನ್ನು ಖಂಡಿಸಬೇಕು, ತಮ್ಮ ಕಾರ್ಯಕರ್ತರು ಸಂಯಮದಿಂದ ವರ್ತಿಸುವಂತೆ ನೋಡಿಕೊಳ್ಳುತ್ತ ಜಾತ್ಯತೀತತೆ, ಸೋದರತ್ವ ಮತ್ತು ಎಲ್ಲರಿಗೂ ನ್ಯಾಯದ ಮಾದರಿಯನ್ನು ಹಾಕಿ ಕೊಡಬೇಕು ಎಂದಿರುವ ಅವರು ದೇಶದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳೂ ರಾಜಕೀಯದಲ್ಲಿ ಧರ್ಮವನ್ನು ಬಳಸದಂತೆ ಎಚ್ಚರ ವಹಿಸಬೇಕು ಮತ್ತು ನಮ್ಮ ಸಂವಿಧಾನ ಮತ್ತು ಜನರ ಕಲ್ಯಾಣವನ್ನು ಎತ್ತಿ ಹಿಡಿಯಬೇಕು, ಈ ಮೂಲಕ ಎಲ್ಲರಿಗೂ ರಾಷ್ಟ್ರೀಯ ಮತ್ತು ಮಾನವ ಭದ್ರತೆಯನ್ನು ಖಚಿತಪಡಿಸಬೇಕು ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *