- ಚಿತ್ರರಂಗ, ರಾಜಕೀಯದಿಂದ ದೂರ ಉಳಿದಿರುವ ನಟಿ ರಮ್ಯಾ
- ಹಿಂದುತ್ವದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಮ್ಯಾ
- ರಮ್ಯಾ ಮಾತಿನ ಕುರಿತು ಪರ-ವಿರೋಧ ಚರ್ಚೆ ಶುರು
ಬೆಂಗಳೂರು : ನಟಿ, ಮಾಜಿ ಸಂಸದೆ ರಮ್ಯಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಹಿಂದುತ್ವ ಮತ್ತು ಹಿಂದೂಯಿಸಂ ಬಗ್ಗೆ ಅವರು ನೀಡಿರುವ ವ್ಯಾಖ್ಯೆ ಸಾಮಾಜಿಕ ತಾಣದಲ್ಲಿ ಪರ, ವಿರೋಧದ ಚರ್ಚೆಗೆ ಕಾರಣವಾಗಿದೆ.
“ಹಿಂದುತ್ವ ಮತ್ತು ಹಿಂದೂಯಿಸಂ ಒಂದೇ ವಿಚಾರವಲ್ಲ.ಹಿಂದೂಯಿಸಂ ರಾಜಕೀಯವಾಗಿಲ್ಲ, ಆದರೆ ಹಿಂದುತ್ವದಲ್ಲಿ ರಾಜಕೀಯವಿದೆ. ಹಿಂದೂಯಿಸಂ ಎಲ್ಲರನ್ನೊಳಗೊಂಡು, ಎಲ್ಲರನ್ನು ಪ್ರೀತಿಸುವುದಾಗಿದೆ. ಇದಕ್ಕೆ ವಿರುದ್ಧವಾಗಿರುವುದು ಹಿಂದುತ್ವವಾಗಿದೆ. ನಿಜವಾದ ಹಿಂದುಗಳಿಗೆ ಅದರ ವ್ಯತ್ಯಾಸ ತಿಳಿದಿದೆ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಇಂಗ್ಲೀಷ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಮ್ಮ ಪುರಾತನ ಹಿಂದೂ ಧರ್ಮವು ರಾಜಕಾರಣಿಗಳಿಂದ ಒಂದು ರಾಜಕೀಯ ಸಾಧನವಾಗಿ ಬಳಕೆ ಆಗುತ್ತಿರುವುದನ್ನು ನೋಡಲು ನೋವಾಗುತ್ತದೆ. ನಾನು ಹಿಂದೂ ಅಷ್ಟೇ. ಯಾವ ಪಕ್ಷ ಕೂಡ ನನ್ನ ಹಿಂದೂಯಿಸಂ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ’ ಎಂದು ರಮ್ಯಾ ಅವರು ತಮ್ಮ ಪೋಸ್ಟ್ ನಲ್ಲಿ ಅಭಿಪ್ರಾಯ ತಿಳಿಸಿದ್ದಾರೆ. ರಮ್ಯಾ ಅವರ ಈ ಪೋಸ್ಟ್ಗೆ ಕಮೆಂಟ್ ಮಾಡಿರುವ ಅನೇಕರು ಬೆಂಬಲ ಸೂಚಿಸಿದ್ದಾರೆ ಮತ್ತು ನಟಿಯ ಮಾತುಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ.
ಸರಿಯಾದ ವ್ಯಾಖ್ಯಾನ….
ನಾನೂ ಸಹ ಇದೇ ಧೋರಣೆ ಹೊಂದಿದ್ದೇನೆ
ಅವರ ಮಾತು ಮತ್ತು ಆಲೋಚನೆಗಳನ್ನು ಅನುಮೋದಿಸುತ್ತೇನೆ….