ಖಗೋಳಪ್ರೇಮಿಗಳಿಗೆ ಮತ್ತೊಂದ ಅವಕಾಶ. ಈ ವರ್ಷದಲ್ಲಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನವೆಂಬರ್ 19ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರಗ್ರಹಣವಾಗಿರುವುದರಿಂದ ಸುಮಾರು ಮೂರು ಗಂಟೆಗಳ ಕಾಲ ಗೋಚರವಾಗಲಿದೆ.
2021ರ ನವೆಂಬರ್ 19 ಶುಕ್ರವಾರ ಚಂದ್ರಗ್ರಹಣ ಸಂಭವಿಸಲಿದೆ. ವರ್ಷಕ್ಕೆ ಗರಿಷ್ಠ ಮೂರು ಬಾರಿ ಮಾತ್ರ ಸಂಭವಿಸಬಹುದಾದ ಚಂದ್ರಗ್ರಹಣವಾಗಿದೆ. 2021ರ ಮೊದಲ ಚಂದ್ರಗ್ರಹಣ ಮೇ 26ರಂದು ಸಂಭವಿಸಿತ್ತು. ಅದು ಸೂಪರ್ ಮೂನ್ ಮತ್ತು ಕೆಂಪು ರಕ್ತಚಂದ್ರವಾಗಿತ್ತು. ನವೆಂಬರ್ 19 ರಂದು ವರ್ಷದ ಕೊನೆಯ ಚಂದ್ರಗ್ರಹಣ. ಮುಂದಿನ ಚಂದ್ರಗ್ರಹಣವು 2022ರ ನವೆಂಬರ್ 8ರಂದು ಭಾರತದಲ್ಲಿಯೂ ಗೋಚರಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ.
ಇದನ್ನು ಓದಿ: ವರ್ಷದ ಮೊದಲ ಸೂರ್ಯಗ್ರಹಣ: ಮಹತ್ವವೂ ಕೌತುಕವು ಒಳಗೊಂಡಿದೆ
ಭಾಗಶಃ ಚಂದ್ರಗ್ರಹಣ ಭಾರತೀಯ ಕಾಲಮಾನದ ಪ್ರಕಾರ (ನವೆಂಬರ್ 18ರ ಮಧ್ಯರಾತ್ರಿ) 12 ಗಂಟೆ 48 ನಿಮಿಷಕ್ಕೆ ಆರಂಭವಾಗಲಿದೆ. ಭಾಗಶ ಚಂದ್ರಗ್ರಹಣ ಐ.ಎಸ್.ಟಿ. 16 ಗಂಟೆ 17 ನಿಮಿಷಕ್ಕೆ ಕೊನೆಗೊಳ್ಳಲಿದೆ.
ಈ ಚಂದ್ರಗ್ರಹಣ 21ನೇ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದೆ. 2018ರಲ್ಲಿ 1 ಗಂಟೆ 43 ನಿಮಿಷಗಳ ಕಾಲ ಗೋಚರಿಸಿದ್ದ ಚಂದ್ರಗ್ರಹಣವೇ ಅತಿ ದೀರ್ಘಾವಧಿಯದ್ದು ಎಂದು ದಾಖಲಾಗಿತ್ತು. 2001 ರಿಂದ 2100 ರ ಅವಧಿಯಲ್ಲಿ ಒಮ್ಮೆ ಮಾತ್ರ ಇಂಥ ಗ್ರಹಣ ಸಂಭವಿಸಲಿದೆ. ನವೆಂಬರ್ 19ರ 3 ಗಂಟೆ 28 ನಿಮಿಷ 23 ಸೆಕೆಂಡ್ ನಷ್ಟು ಸುದೀರ್ಘ ಕಾಲ ಖಗ್ರಾಸ ಗ್ರಹಣ ಇರಲಿದೆ. ಚಂದ್ರಗ್ರಹಣ ವೀಕ್ಷಿಸಲು ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ಸ್ ಬಳಸುವ ಅಗತ್ಯವಿಲ್ಲ. ಗ್ರಹಣ ಗೋಚರವಾಗುವ ಪ್ರದೇಶದ ಜನತೆ ಬೆಳಗಿನ ಜಾವ 2.19 ಹಾಗೂ 5.47ಕ್ಕೆ ಹೊರಗಡೆ ಬಂದು ಆಕಾಶ ನೋಡಿದರೆ ಸಾಕು ಚಂದ್ರಗ್ರಹಣ ಗೋಚರಿಸುತ್ತದೆ.
ಭಾರತೀಯ ಹವಾಮಾನ ಇಲಾಖೆ(ಐಎಂಡಿ), ನಾಸಾ, ಟೈಮ್ ಅಂಡ್ ಡೇಟ್ ಮೂಲಗಳ ಪ್ರಕಾರ ಈ ಬಾರಿಯ ಚಂದ್ರಗ್ರಹಣ ಶತಮಾನದ ದೀರ್ಘವಾದ ಭಾಗಶಃ ಗ್ರಹಣವಾಗಿದೆ. ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ. ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಮಹಾಸಾಗದಲ್ಲೂ ಗೋಚರಿಸಲಿದೆ. ಸುಮಾರು 50 ದೇಶಗಳಲ್ಲಿ ಚಂದ್ರಗ್ರಹಣವನ್ನು ಅಲ್ಲಿನ ಕಾಲಮಾನ ಪ್ರಕಾರ ವೀಕ್ಷಿಸಬಹುದು.
ಇದನ್ನು ಓದಿ: ನಾಳೆ ಪೂರ್ಣ ಚಂದ್ರಗ್ರಹಣ: ಭಾರತದ ಕೆಲವೆಡೆ ಮಾತ್ರ ಗೋಚರ
ಇಂಡಿಯಾನಾದ ಹೋಲ್ಕಾಂಬ್ ವೀಕ್ಷಣಾಲಯವು ಚಂದ್ರನ ಹೆಚ್ಚಿನ ಭಾಗವನ್ನು ಆವರಿಸುವ ಗ್ರಹಣದಿಂದ ಏನನ್ನು ನಿರೀಕ್ಷಿಸಬಹುದು ಎಂಬುದದರ ಬಗ್ಗೆ ಗ್ರಾಫಿಕ್ ಅನ್ನು ಹಂಚಿಕೊಂಡಿದೆ. “ಇದು 580 ವರ್ಷಗಳಲ್ಲಿ ದೀರ್ಘವಾದ ಭಾಗಶಃ ಚಂದ್ರಗ್ರಹಣವಾಗಿದೆ” ಎಂದು ಟ್ವೀಟ್ ಮಾಡಿದೆ.
ಹುಣ್ಣಿಮೆಯ ದಿನ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಅಂದರೆ, ಮೂರೂ ಒಟ್ಟಿಗೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣವು ಚಂದ್ರ ಸಂಪೂರ್ಣವಾಗಿ ಭೂಮಿಯ ಸಂಪೂರ್ಣ ಛಾಯೆಯಡಿ ಬಂದಾಗ ಘಟಿಸುತ್ತದೆ ಮತ್ತು ಭಾಗಶಃ ಚಂದ್ರಗ್ರಹಣವು ಚಂದ್ರನ ಭಾಗಶಃ ಭಾಗ ಭೂಮಿಯ ಛಾಯೆಯಡಿ ಬಂದಾಗ ಸಂಭವಿಸುತ್ತದೆ.