ಅ.12ರಂದು ರೈತ ಹುತಾತ್ಮ ದಿನ: ಸಂಯುಕ್ತ ಹೋರಾಟ-ಕರ್ನಾಟಕ ಕರೆ

ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಇತ್ತೀಚಿಗೆ ಅಂದರೆ, ಅಕ್ಟೋಬರ್‌ 03ರಂದು ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆಯಲ್ಲಿ ರೈತರನ್ನು ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರೈತ ಹುತಾತ್ಮ ದಿನ ಆಚರಿಸಲು ಸಂಯುಕ್ತ ಹೋರಾಟ – ಕರ್ನಾಟಕ ಕರೆ ನೀಡಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ದುರ್ಘಟನೆಯಲ್ಲಿ ಲವ್ ಪ್ರೀತ್ ಸಿಂಗ್(20), ಗುರ್ ವಿಂದರ್ ಸಿಂಗ್(19),  ದಲ್ಜಿತ್ ಸಿಂಗ್(35), ನಚ್ಚ್ ರತ್ ಸಿಂಗ್(60), ರಮಣ್ ಕಶ್ಯಪ್ ಹುತಾತ್ಮರಾದ ರೈತರು.

ಅಕ್ಟೋಬರ್‌ 12ರಂದು ಸಂಜೆ 6 ಗಂಟೆಗೆ ಮಾಲಾರ್ಪಣೆ ಮಾಡಿ ಸ್ಥಳೀಯ ಘಟಕ‌ ಮಟ್ಟದಲ್ಲಿ /ಮನೆಗಳ  ಮುಂದೆ ಹುತಾತ್ಮರ ಪೊಟೋ ಇಟ್ಟು 5 ಮೇಣದ ಬತ್ತಿ /ದೀಪ ಬೆಳಗುವ ಮೂಲಕ  ಶ್ರದ್ದಾಂಜಲಿ ಸಲ್ಲಿಸಬೇಕೆಂದು ಸಂಯು ಹೋರಾಟ – ಕರ್ನಾಟಕ ಕರೆ ನೀಡಿದೆ.

ಅಕ್ಟೋಬರ್‌ 12ರ ಸಂಜೆ 5 ಗಂಟೆಗೆ ಬೆಂಗಳೂರು ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ರೈತ ಹುತಾತ್ಮ ದಿನಾಚರಣೆ ನಡೆಯಲಿದೆ.

ತಾವಿರುವ ಸ್ಥಳಗಳಲ್ಲೇ, ಅಂದರೆ ಊರಗಳಲ್ಲಿ, ಗ್ರಾಮ-ಪ್ರದೇಶದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲು ಕೋರಿದೆ. ಹುತಾತ್ಮ ರೈತರ ಆಶಯಗಳಿಗಾಗಿ ಹೋರಾಟ ಮುನ್ನಡೆಸುವ ಸಂಕಲ್ಪ ತೊಡಲು ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *