ಬಸ್‌ ಸೌಲಭ್ಯ ಕಲ್ಪಿಸಲು ಎಸ್‌ಎಫ್‌ಐ ಪ್ರತಿಭಟನೆ

ಇಂಡಿ: ತಾಲೂಕಿನ ಗ್ರಾಮಿಣ ಪ್ರದೇಶಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೂಡಗಿ ಬಬಲಾದ ಚವಡಿಹಾಳ ಮಾರ್ಗದಿಂದ ವಿದ್ಯಾರ್ಥಿಗಳು ಆಟೊ ಮತ್ತು ಖಾಸಗಿ ವಾಹನಗಳಿಂದ ಪ್ರಯಾಣ ಮಾಡುತ್ತಿದ್ದಾರೆ. ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ ಬಸ್ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಬಂದ ವ್ಯವಸ್ಥಾಪಕರು ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಮತ್ತು ಎರಡು ದಿನದಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಮುಖಂಡ ಸಾಗರ ಕೂಡಗಿ, ಜೆಡಿಎಸ್‌ ಪಕ್ಷದ  ತಾಲ್ಲೂಕು ಅಧ್ಯಕ್ಷರು ಬಿ ಡಿ ಪಾಟೀಲ್‌, ಸಿಐಟಿಯು ತಾಲೂಕು ಅಧ್ಯಕ್ಷರು ಭಾರತಿ ವಾಲಿ, ರೈತ ಸಂಘದ ಮುಂಖಡ ಭೀಮಾಶಂಕರ ಪೂಜಾರಿ, ಸಾಮಾಜಿಕ ಹೋರಾಟಗಾರ ಶಂಕರಗೌಡ ಪಾಟೀಲ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Donate Janashakthi Media

Leave a Reply

Your email address will not be published. Required fields are marked *