ಭೋಪಾಲ್: ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು ಎಂದು ಬಿಜೆಪಿ ನಾಯಕಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಮಾ ಭಾರತಿಯ ಈ ವಿವಾದಾತ್ಮಕ ಹೇಳಿಕೆವೊಂದರ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಅಧಿಕಾರಿಗಳು ಏನೂ ಅಲ್ಲ, ಅವರು ಇರುವದೇ ನಮ್ಮ ಚಪ್ಪಲಿಗಳನ್ನು ತೆಗೆದುಕೊಳ್ಳಲು. ನಾನು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ, ಮಧ್ಯ ಪ್ರದೇಶ ಸಿಎಂ ಆಗಿ ಮತ್ತು ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಶಾಹಿ ಎಂದರೆ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.
ನಾವು(ರಾಜಕಾರಣಿಗಳು) ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಂತರವೇ ಫೈಲ್ ಪ್ರಕ್ರಿಯೆಗೆ ಮುಂದಾಗುತ್ತದೆ ಎಂದು ಉಮಾ ಭಾರತಿ ಅವರು ಶನಿವಾರ ಭೋಪಾಲ್ ನ ತಮ್ಮ ನಿವಾಸದಲ್ಲಿ ಒಬಿಸಿ ನಿಯೋಗದೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ. ನೆನ್ನೆದಿನ ವಿವಾದಾತ್ಮಕ ಹೇಳಿಕೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ತೀವ್ರ ಟೀಕೆ ವ್ಯಕ್ತವಾದವು. ನಂತರ ಉಮಾ ಭಾರತಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.