ಮುನಿಸಿಪಾಲ್ ಕಾರ್ಮಿಕರ ಖಾಯಮಾತಿಗಾಗಿ ವಿಧಾನಸೌಧ ಎದುರು ಅನಿರ್ದಿಷ್ಟ ಹೋರಾಟ

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರ ಪಾಲಿಕೆಗಳಲ್ಲಿ ಗುತ್ತಿಗೆ, ಹೋರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ  ವೇತನದ ಅಡಿಯಲ್ಲಿ  ದುಡಿಯುತ್ತಿರುವ  ಪೌರ ಕಾರ್ಮಿಕರು, ಲೋಡರ್‌ಗಳು, ವಾಟರ್ ಮ್ಯಾನ್‌ಗಳು, ಕಸದ ಅಟೋ ಚಾಲಕರು, ಕಂಪ್ಯೂಟರ್ ಅಪರೇಟರ್‌ಗಳು, ಯು.ಜಿ.ಡಿ ಕಾರ್ಮಿಕರು, ಕಛೇರಿ ಸಹಾಯಕರು ಒಳಗೊಂಡ ಮುನಿಸಿಪಾಲ್‌ ಕಾರ್ಮಿಕರು ಉದ್ಯೋಗ ಭದ್ರತೆಯಿಲ್ಲದೆ, ದುಡಿಯುವಂತಹ ಪರಿಸ್ಥಿತಿ ಇಂದಿಗೂ ಇದೆ ಎಂದು ಹರೀಶ್ ನಾಯಕ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಹರೀಶ್‌ ನಾಯಕ್‌ ಮುನಿಪಾಲ್‌ ಕಾರ್ಮಿಕರ ಸೇವೆ ಎಲ್ಲಾ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ಅದರಲ್ಲೂ ನಮ್ಮ ಸೇವೆಯು ಚಿಕ್ಕನ್ ಗುನ್ಯಾ, ಕೊರೊನಾದಂತ  ಸಂಕಷ್ಟದ ಸಂದರ್ಭದಲ್ಲಿ ಸಹ ನಾಗರಿಕರಿಗೆ ಮೂಲಭೂತ ಅಗತ್ಯವಾದ  ಸೇವೆಗಳನ್ನು ನೀಡಿದ್ದಾರೆ, ಅಲ್ಲದೆ ಸೇವೆ ನೀಡುತ್ತಾ ಬರುತ್ತಿದ್ದಾರೆ. ತಮ್ಮ ಜೀವನ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ಲಾಕ್‌ಡೌನ್, ಸೀಲ್‌ಡೌನ್ ಗಳ ಸಂದರ್ಭದಲ್ಲಿಯೂ ನಮ್ಮ ಕೆಲಸ ನಿಂತಿಲ್ಲ. ಇಂತಹ ಸಂದರ್ಭದಲ್ಲಿ ಸುಮಾರು  60-70ಕ್ಕೂ  ಹೆಚ್ಚು ಮಂದಿ ತಮ್ಮ  ಜೀವ  ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಿಕ ಸಮಾಜಕ್ಕೆ ಈ ಸೇವೆಗಳು ಅಗತ್ಯವೆಂಬುದು ಸಾಬಿತಾಗಿದೆʼʼ ಎಂದರು.

ʻಮೇಲಿನ ಎಲ್ಲಾ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು, ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜು, ಇಲಾಖೆಯ  ಪ್ರಧಾನ ಕಾಯದರ್ಶಿಗಳಿಗೆ  ಮನವಿ ಪತ್ರಗಳನ್ನು  ಅರ್ಪಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮವನ್ನು ವಹಿಸಿಲ್ಲʼ ಎಂದು ಹೇಳಿದರು.‌

ಇದನ್ನು ಓದಿ: ಕಸ ಗುಡಿಸುವುದು ಶಿಕ್ಷೆಯಾದರೆ- ಪೌರ ಕಾರ್ಮಿಕರರು ಮಾಡಿದ ತಪ್ಪೇನು ?

ಸಂಘಟನೆಯು ರಾಜ್ಯ ಪ್ರಧಾನ  ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ ʻಹತ್ತಾರು ವರುಷಗಳಿಂದ ಈ  ಸೇವಾಯಲ್ಲಿರುವ ಕಾರ್ಮಿಕರಿಗೆ ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಇಲ್ಲದಾಗಿದೆ. ಈ ಕಾರ್ಮಿಕ ಸೇವಗಳನ್ನು ಖಾಯಂಗೊಳಿಸುವುದು ಅಲ್ಲದೆ  ಇತರೆ  ಹಕ್ಕೊತ್ತಾಯಗಳನ್ನು ಪರಿಗಣಿಸಿ ಸರ್ಕಾರವು ಶೀಘ್ರದಲ್ಲಿ ಕ್ರಮವಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಖಾಯಂ ಕಾರ್ಮಿಕರು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಸಮಾನ ವೇತದದಡಿಯಲ್ಲಿ ಕೆಲಸ ನಿರ್ವಹಿಸುವ ಮುನಿಸಿಪಾಲ್ ನೌಕರರು ದಿನನಿತ್ಯ ಮಾಡುತ್ತಿದ್ದಾರೆ. ಒಂದೇ ಸ್ವರೂಪದ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರ ಸಂಬಳ- ಸೇವಾ ಸೌಲಭ್ಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ . ಅದರೆ  ಸರ್ಕಾರವು ನಿರಂತರವಾಗಿ ಖಾಯಂಮೇತರ ನೌಕರರಿಗೆ  ತಾರತಮ್ಯ ಮಾಡುತ್ತಲೇ ಬಂದಿದೆ. ಸಂಬಳವು ಸೇರಿದಂತೆ ಇತರೆ ಎಲ್ಲಾ ಸೇವಾ ಸೌಲಭ್ಯಗಳನ್ನು ಸಮಾನವಾಗಿ ನೀಡುವಂತೆ  ಸಂಘವು ಒತ್ತಾಯಿಸುತ್ತದೆ ಎಂದರು.

ಪೌರ ಕಾರ್ಮಿಕರ  ದಿನಾಚರಣೆಯ ಭತ್ಯೆಯನ್ನು ನೀಡುವಲ್ಲಿಯೂ ತಾರತಮ್ಯವನ್ನು ವೆಸಗುವ ಪೌರಾಡಳಿತ ನಿರ್ದೇಶನಾಲಯವು ಈ ಭತ್ಯೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಮಾತ್ರ ನೀಡುವಂತೆ ಸೂಚಿಸಿದೆ. ಈ ಸೌಲಭ್ಯವು ಇದೆ ಕೆಲಸ ನಿರ್ವಹಿಸುವ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಗಳ ಅಡಿಯಲ್ಲಿ ದುಡಿಯುತಿರುವ ಮುನಿಸಿಪಾಲ್  ಕಾರ್ಮಿಕರಿಗೆ  ವಿಸ್ತರಿಸಲು ಸಂಘವು ಅಗ್ರಹಿಹಿಸಿದೆ.

ಮುನಿಸಿಪಾಲ್ ಕಾರ್ಮಿಕರ ಹಕ್ಕೋತ್ತಾಯಗಳ ಪರಿಹರಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ  ಮುನಿಸಿಪಾಲ್  ಕಾರ್ಮಿಕರ ಸಂಘ(ರಿ.) ಸಿಐಟಿಯು ಇತರೆ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ವಿಧಾನಸೌಧ ಎದುರು ಅನಿಧಿಷ್ಟ  ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿವೆ.

ಸಂಘದ ಹಕ್ಕೋತ್ತಾಯಗಳು

  1. ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ  ಪೌರ ಕಾರ್ಮಿಕರು, ಲೋಡರ್‌ಗಳು, ವಾಟರ್ ಮ್ಯಾನ್‌ಗಳು, ಕಸದ ಅಟೋ ಚಾಲಕರು, ಕಂಪ್ಯೂಟರ್ ಅಪರೇಟರ್‌ಗಳು, ಯು.ಜಿ.ಡಿ. ಕಾರ್ಮಿಕರು, ಕಛೇರಿ ಸಹಾಯಕರು, ಇವರ  ಸೇವೆಗಳನ್ನು  ಹಂತ – ಹಂತವಾಗಿ ಖಾಯಂಗೊಳಿಸಬೇಕು. ಕೋವಿಡ್ ಲಾಕ್ ಡೌನ್ ಸಮಯದಲ್ಲಿ  ಜೀವದ ಹಂಗು ತೊರೆದು  ಕೆಲಸ ಮಾಡುತ್ತಿರುವ ಎಲ್ಲಾ ಮುನಿಸಿಪಾಲ್ ಕಾರ್ಮಿಕರನ್ನು ಕೊರೊನಾ ವಾರಿರ್ಯಸ್ಸ್ ಎಂದು ಪರಿಗಣಿಸಿ ರೂ.50 ಲಕ್ಷ ವಿಮಾ ಸೌಲಭ್ಯವನ್ನು ನೀಡಬೇಕು.
  2. ಹತ್ತಾರು ವರ್ಷಗಳ ಕಾಲ ದುಡಿದು ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿರುವ ಕಾರ್ಮಿಕರ ಕುಟುಂಬಗಳು ದುಡಿವ ಮುಖ್ಯಸ್ಥರನ್ನು ಕಳೆದುಕೊಂಡು ಬೀದಿಗೆ ಬಿದ್ದಿರುತ್ತಾರೆ. ಹಾಗಾಗಿ ಅವರು ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿದ್ದಲ್ಲಿ ಅವರ ಅವಲಂಬಿತರಿಗೆ ಕಡ್ಡಾಯವಾಗಿ ಮಾನವೀಯತೆಯ ನೆಲೆಯಲ್ಲಿ ಕೆಲಸ ನೀಡಬೇಕು.
  3. ಮುನಿಸಿಪಾಲ್‌ ಕಾರ್ಮಿಕರನ್ನು ಖಾಯಂಗೊಳಿಸುವ ತನಕ ಎಲ್ಲಾ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
  4. ಎಲ್ಲಾ ಕಾರ್ಮಿಕರಿಗೆ ಸಂಬಳ ಸಹಿತ ವಾರದ ರಜೆ, ರಾಷ್ಟ್ರೀಯ ಹಬ್ಬಗಳು-ಇತರೆ ಪ್ರಮುಖ ಸರ್ಕಾರಿ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಅಥವಾ ಮರಣ ಹೊಂದುವ ಮುನಿಸಿಪಲ್  ಕಾರ್ಮಿಕರು/ ಅವಲಂಬಿತರಿಗೆ  ಉಪಧನ ನೀಡುವ ಸಂಬಂದ ಸ್ಪಷ್ಟವಾದ ಅದೇಶವನ್ನು ಹೊರಡಿಸಬೇಕು.
  5. ಗುತ್ತಿಗೆದಾರರು ಕಾರ್ಮಿರರಿಂದ ನಿಗದಿತವಾದ ಪಿ.ಎಫ್. ಹಾಗು ಇ.ಎಸ್. ಐ. ವಂತಿಗೆಗಳನ್ನು ಸರಿಯಾಗಿ ಪಾವತಿಸದೆ ಹಲವೆಡೆ ಹಗರಣಗಳು ನಡೆದಿವೆ. ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸಬೇಕು.
  6. ಎಲ್ಲಾ ಗುತ್ತಿಗೆ ಮುನಿಸಿಪಾಲ್ ಕಾರ್ಮಿಕರು ಅಲ್ಪವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೆ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿನ ಉಚಿತ ನಿವೇಶನವನ್ನು ನೀಡಬೇಕು.
  7. ಪ್ರವಾಸಿ ತಾಣಗಳಲ್ಲಿ ಸರ್ಕಾರ ಪಟ್ಟಣ ಪಂಚಾಯತ್ ಅಸ್ತಿತ್ವಕ್ಕೆ ತಂದಿದೆ. ಪಟ್ಟಣ ಜನಸಂಖ್ಯೆ ಕಡಿಮೆ ಇದ್ದು ಪ್ರತಿದಿನವೂ ಬಂದು ಹೋಗುವ ಜನಸಂಖ್ಯೆ 10,000ಕ್ಕೂ ಹೆಚ್ಚಾಗಿದೆ. ಪಟ್ಟಣ ಪಂಚಾಯತಿಗೆ ನಿಗದಿಪಡಿಸಿದ ನೌಕರರ ಸಂಖ್ಯೆ ವಿಸ್ತರಿಸುವುದು. ಸಾವಿರಾರು ಜನ ಬಂದುಹೊಗುವ ಕಾರಣ ಅಲ್ಲಿನ ಜನಸಂಖ್ಯೆಯನ್ನು ಅಷ್ಟೆ ಮಾನದಂಡವಾಗಿಸದೆ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಎಲ್ಲಾರ ಸೇವೆಗಳನ್ನು ಪರಿಗಣಿಸಬೇಕು.
  8. ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿ ಮೇಲ್ದರ್ಜೆಗೆ ಏರಿಸಲಾಗಿರುವ ಎಲ್ಲಾಕಡೆಗಳಲ್ಲಿ ನೌಕರರನ್ನು ಮುಂದುವರಿಸಬೇಕು ಅಲ್ಲದೆ ಅವರ ಸೇವೆಗಳನ್ನು ಪೌರಾಡಳಿತ ಇಲಾಖೆ ವಹಿಸಿ ಕೊಳ್ಳಬೇಕು.
  9. ಕಸದ ಜೊತೆ ಕೆಲಸಮಾಡುವ ಎಲ್ಲಾ ಪೌರಕಾರ್ಮಿಕರು , ಲೋಡರ್ಸ್‌, ಕ್ಲೀನರ್ಸ್‌ ಮತ್ತು ಕಸದ ವಾಹನದ ಚಾಲಕರನ್ನು ಪೌರ ಕಾರ್ಮಿಕರೆಂದು ಪರಿಗಣಿಸಬೇಕು.
  10. ಎಲ್ಲಾ ಕಾರ್ಮಿಕರಿಗೆ ಸಮವಸ್ತ್ರ, ಸುರಕ್ಷತ ಸಲಕರಣೆಗಳನ್ನು ಕಡ್ಡಾಯವಾಗಿ ನೀಡಬೇಕು.
  11. ನಗರಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಸಂಖ್ಯೆ ನಿಗದಿಗೆ ಸಿ.ಎಂಡ್.ಆರ್ ಇದೆ. ಪೌರಕಾರ್ಮಿಕ ಸಂಖ್ಯೆ ನಿಗದಿಪಡಿಸುವಾಗ ಸಿ.ಎಂಡ್.ಆರ್, 700 ಜನಸಂಖ್ಯೆಗೆ ಒಬ್ಬರಂತೆ ಮತ್ತು ಸಾಲಿಡ್ ವೇಸ್ಟ್ ಮ್ಯಾನೇಜಮೆಂಟ್ ಈ ಮೂರು ಆದೇಶಗಳಿದ್ದು ಸರ್ಕಾರ ಯಾವುದಾದರೂ ಒಂದು ಜಾರಿಗೆ ತರಲು ನಿರ್ದಿಷ್ಟ ಆದೇಶ ಹೊರಡಿಸಬೇಕು.
Donate Janashakthi Media

Leave a Reply

Your email address will not be published. Required fields are marked *