ಚಂಡೀಗಢ: ಪಂಜಾಬ್ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ವಿದ್ಯುತ್ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ(ಎಎಪಿ) ಮುಖಂಡ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಸತತ 24 ಗಂಟೆ ವಿದ್ಯುತ್ ನೊಂದಿಗೆ 300 ಯೂನಿಟ್ವರೆಗೆ ಪ್ರತಿ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುವುದು ತಿಳಿಸಿದ ಕೇಜ್ರಿವಾಲ್ ಅವರು, ಅದರೊಂದಿಗೆ ಈ ಹಿಂದಿನ ವಿದ್ಯುತ್ ಶುಲ್ಕವನ್ನೂ ಮನ್ನಾ ಮಾಡುವುದಾಗಿ ಅವರು ಹೇಳಿದ್ದಾರೆ.
ಇದನ್ನು ಓದಿ: ದೆಹಲಿಯಲ್ಲಿ ಮತದಾನ ಕೇಂದ್ರಗಳೇ ಕೋವಿಡ್ ಲಸಿಕಾ ಕೇಂದ್ರಗಳು: ಅರವಿಂದ್ ಕೇಜ್ರಿವಾಲ್
ʻನಾವು ದೆಹಲಿಯಲ್ಲಿ ವಿದ್ಯುತ್ ಉತ್ಪಾದಿಸುವುದಿಲ್ಲ. ಆದರೂ ಎಲ್ಲರಿಗೂ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪೂರೈಸುತ್ತಿದ್ದೇವೆ. ನಾವು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವವರು. ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದರೆ ಅಲ್ಲಿಯೂ ಉಚಿತ ವಿದ್ಯುತ್ ಪೂರೈಸುತ್ತೇವೆ. ವಿದ್ಯುತ್ ಉತ್ಪಾದಕ ರಾಜ್ಯವಾಗಿದ್ದರೂ ಸಹ ಅಲ್ಲಿ ದೇಶದಲ್ಲಿ ಪಂಜಾಬ್ನಲ್ಲಿಯೇ ವಿದ್ಯುತ್ ಅತಿ ಹೆಚ್ಚು ದುಬಾರಿ ಮತ್ತು ಎಲ್ಲರಿಗೂ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲʼ ಎಂದು ಹೇಳಿದರು.
ಇಂದು ಚಂಡೀಗಢಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿ ಎಎಪಿ ಪಕ್ಷವು ಪಂಜಾಬ್ನಲ್ಲಿ ಜಯಶಾಲಿಯಾಗುತ್ತಿದ್ದಂತೆ ವಿದ್ಯುತ್ ಬಿಲ್ ಮನ್ನಾ ಘೋಷಣೆ ಜಾರಿಗೆ ತರಲಾಗುವುದಾಗಿ ತಿಳಿಸಿದ್ದಾರೆ.
ಇದು ಕೇವಲ ಭರವಸೆಯಲ್ಲ ಎಂದು ಸ್ಪಷ್ಟಪಡಿಸಿದ ಅರವಿಂದ್ ಕೇಜ್ರಿವಾಲ್ ಅವರು, ಕ್ಯಾಪ್ಟನ್(ಹಾಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್) ಭರವಸೆಗಳು 5 ವರ್ಷಗಳ ನಂತರವೂ ಈಡೇರಿಲ್ಲ. ಅಂತೆ ನಮ್ಮ ಭರವಸೆಯಾಗಿ ಉಳಿಸದೆ, ಅದನ್ನು ಸಾಧಿಸಲಿದ್ದೇವೆ ಎಂದರು.
ಈ ಯೋಜನೆಯಿಂದಾಗಿ ರಾಜ್ಯದ ಶೇ. 77 ರಿಂದ 80ರಷ್ಟು ಜನತೆಗೆ ಫಲಾನುಭವಿಗಳುಗಳಿದ್ದಾರೆ. ಆದರೆ 24 ಗಂಟೆ ವಿದ್ಯುತ್ ನೀಡಲು ಮೂರು ವರ್ಷ ಬೇಕಾಗಬಹುದು ಸ್ಪಷ್ಟಪಡಿಸಿದರು.
ಇದನ್ನು ಓದಿ: ದರ ಏರಿಕೆಯ ಶಾಕ್ ಮೇಲೆ ಶಾಕ್! ರಾಜ್ಯ ಸರಕಾರದಿಂದ ಕರೆಂಟ್ ಶಾಕ್
2015 ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎರಡು ವರ್ಷದ ಬಳಿಕ ಅಂದರೆ 2017ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 77 ಸ್ಥಾನ ಗಳಿಸಿ ಅಧಿಕಾರವಹಿಸಿಕೊಂಡರೆ, ಎಎಪಿ ಭಾರಿ ಪ್ರಯತ್ನದ ಹೊರತಾಗಿಯೂ 20 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದ ಸ್ಥಾನಮಾನ ಪಡೆದಿದುಕೊಂಡಿತು. ಹಿಂದಿನ ಚುನಾವಣೆಯಲ್ಲಿ ಎಎಪಿ ಪಕ್ಷವು 25 ಲಕ್ಷ ಉದ್ಯೋಗ, 5 ರೂಪಾಯಿಗೆ ಊಟ, ಉಚಿತ ವೈಫೈ, ವೃದ್ಧಾಪ್ಯ ವೇತನ ಮತ್ತು ರಾಜ್ಯವನ್ನು ಮಾದಕ ವಸ್ತು ಮುಕ್ತ ಮಾಡುವುದಾಗಿ ಪಕ್ಷ ಘೋಷಣೆ ಮಾಡಿತ್ತು.
ದೆಹಲಿಯಲ್ಲಿ ಸತತ ಎರಡನೇ ಬಾರಿ ಗೆಲುವು ಸಹ ಶಿಕ್ಷಣ ಮತ್ತು ವಿದ್ಯುತ್ ಕ್ಷೇತ್ರದಲ್ಲಿನ ಕೊಡುಗೆಗಳು ಮತ್ತು ಅಭಿವೃದ್ಧಿ ಕಾರ್ಯಗಳೇ ಎಎಪಿ ಪಕ್ಷವನ್ನು ಕೈಹಿಡಿದಿವೆ ಎಂದು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.