ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಿ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ

ಬೆಂಗಳೂರು: ರಾಜ್ಯದ ವಾಸ್ತವ ಆರ್ಥಿಕ ಪರಿಸ್ಥಿತಿ ಹೇಗಿದೆ ಎನ್ನುದರ ಕುರಿತು ಶ್ವೇತ ಪತ್ರ ಹೊರಡಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ ಇದ್ದಂತೆ. ಈ ಹಿಂದೆ ಕೂಡ ಬಿಎಸ್ ವೈ ಸಿಎಂ ಆಗಿದ್ದಾಗ ಸಾಲ ಹೆಚ್ಚಿತ್ತು. 2008-13 ರಲ್ಲಿ ಸಾಲದ ಪ್ರಮಾಣ ಶೇ  94.18 ಏರಿಕೆಯಾಗಿತ್ತು. 2013-18 ರ ಅವಧಿಯಲ್ಲಿ 78% ರಷ್ಟಿತ್ತು. ಆದರೆ ಈ ವರ್ಷ 4, 57,899 ಕೋಟಿ ಸಾಲ ಹೆಚ್ಚಿದೆ. ಇದು ಕೊನೆಗೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. 2020-21ರಲ್ಲಿ 69 ಸಾವಿರ ಕೋಟಿ ಸಾಲ ಮಾಡಲಾಗಿದೆ. ಬಿಎಸ್ ವೈ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಕೇವಲ 3 ವರ್ಷದಲ್ಲಿ1, 90, 000 ಸಾಲ ಮಾಡಿದ್ದಾರೆ. ಪ್ರತಿ ವರ್ಷ ಸಾಲದ ಪ್ರಮಾಣ 72,000 ಕೋಟಿ ತಲುಪಲಿದೆ. ಕಳೆದ ವರ್ಷ 69 ಸಾವಿರ ಕೋಟಿ ಸಾಲಮಾಡಿದ್ದಿರಿ.ಕೋವಿಡ್ ನಿರ್ವಹಣೆಗೆ 5400 ಕೋಟಿ ಖರ್ಚಾಗಿದೆ. ಉಳಿದ ಸಾಲದ ಹಣ ಎಲ್ಲಿಗೆ ಹೋಯ್ತು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಗತ್ಯ ಇರುವವರಿಗೆ ಪ್ರಾಣವಾಯು ನೀಡಲು ಸಿದ್ಧವಾದ ಬಿಎಂಟಿಸಿ ಬಸ್

ನಮ್ಮ ಸರ್ಕಾರದ ಅವಧಿಯಲ್ಲಿ ಜಿಎಸ್​ಡಿಪಿ ಪ್ರಮಾಣ 17 ರಿಂದ 20 ರೊಳಗಿತ್ತು. ಇದು ದೇಶದಲ್ಲೇ ಅತ್ಯುತ್ತಮ ನಿರ್ವಹಣೆಯಾಗಿತ್ತು. ಆದರೆ ಈಗ ಅದು 26.9 ರಷ್ಟಾಗಿದೆ. ನಿಯಮದ ಪ್ರಕಾರ ಶೇ 25ನ್ನು ಮೀರುವಂತಿಲ್ಲ. ಸಾಲಮಾಡಲೆಂದೇ ನೀವು ನಿಯಮ ತಿದ್ದುಪಡಿ ತಂದಿದ್ದೀರಿ. ಕೇಂದ್ರ ನಮ್ಮಿಂದ 2,50,000 ಕೋಟಿ ಸಂಪತ್ತನ್ನ ಸಂಗ್ರಹಿಸುತ್ತೆ. ಪೆಟ್ರೋಲ್,ಡಿಸೆಲ್​ನಿಂದ 30.000 ಕೋಟಿ ದೋಚುತ್ತಿದೆ. ಆದರೆ ಈ ವರ್ಷ ಕೊಟ್ಟಿದ್ದು ೫೦,೦೦೦ಕೋಟಿ ಮಾತ್ರ. ಕೇಂದ್ರದಿಂದ ನಮಗೆ ಬರಬೇಕಾಗಿದ್ದು1,00,000 ಕೋಟಿ. ಕೇಂದ್ರ ನಮಗೆ ವಂಚಿಸಿದ್ದರಿಂದಲೇ ಈ ಪರಿಸ್ಥಿತಿ ಬಂದಿದೆ. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಶೇ 45-50 ವೆಚ್ಚವಾಗ್ತಿದೆ. ರಾಜ್ಯದ ಖನಿಜ ಸಂಪತ್ತನ್ನ ಬಿಡಿಗಾಸಿಗೆ ಮಾರುತ್ತಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *