ಎಚ್ಚರ !!!? ವಾಟ್ಸ್​​ಆ್ಯಪ್​ ಪಿಂಕ್​​ ಲಿಂಕ್​ ನಿಮ್ಮ ಮೊಬೈಲ್​ಗೂ ಬಂತೇ? ಹಾಗಾದ್ರೆ ನೀವೇನು ಮಾಡ್ಬೇಕು??

ಸೈಬರ್ ಭದ್ರತಾ ವಿಶ್ಲೇಷಕ ರಾಜಶೇಖರ್ ರಾಜಹರಿಯಾ  ಏನು ಹೇಳುತ್ತಾರೆ? 

ಎಚ್ಚರ್‌ !! ಎಚ್ಚರ್‌ !!! Apply New Pink Look on Your Whatsapp And Enjoy Whats app new Features. http://lookpink.xyz/?whatsapp ಹೀಗೊಂದು ಲಿಂಕ್‌ ನಿಮಗೆ ಬಂದಿರುತ್ತೆ ಅದನ್ನು ಕ್ಲಿಕ್‌ ಮಾಡಬೇಡಿ 

ಎರಡು-ಮೂರು ದಿನಗಳಿಂದ ಪಿಂಕ್​ ವಾಟ್ಸ್​ಆ್ಯಪ್​ ಎಂಬ ಶಬ್ದ ಪದೇಪದೆ ಕಿವಿಗೆ ಬೀಳುತ್ತಲೇ ಇದೆ. ವಾಟ್ಸ್​ಆ್ಯಪ್ ಬಳಕೆದಾರರಿಗೆ ಲಿಂಕ್​ ಬರುತ್ತಿದ್ದು, ಅದನ್ನು ಕ್ಲಿಕ್ ಮಾಡಿದವರ ಫೋನ್​ಗೆ ವೈರಸ್ ಅಟ್ಯಾಕ್ ಆಗಿ, ಹ್ಯಾಕ್ ಆಗುತ್ತಿದೆ…! ಬಳಕೆ ಮಾಡಿದ ನೂರಾರು ಜನ ಆರೋಪವನ್ನು ಮಾಡುತ್ತಿದ್ದಾರೆ.

ಇದು ವಾಟ್ಸ್​ಆ್ಯಪ್​ನ ಹೊಸ ವರ್ಶನ್​. ಪಿಂಕ್​ ಟ್ರೇಡ್​ಮಾರ್ಕ್ ಹೊಂದಿದೆ. ಇದರಲ್ಲೂ ಸಹ ಮೆಸೇಜ್​, ಚಾಟ್​ ಮಾಡಬಹುದು. ಇನ್ನು ಪಿಂಕ್ ವಾಟ್ಸ್​ಆ್ಯಪ್​ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ಲಿಂಕ್​ವೊಂದು ವಾಟ್ಸ್​ಆ್ಯಪ್​ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್​ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್​ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ.

ಗೂಗಲ್‌ ಪೇ, ಫೋನ್‌ ಪೇ ಮೂಲಕ ಲಿಂಕ್‌ ಕಳುಹಿಸಿ ನಿಮಗೆ ಹಣ ಬಂದಿದೆ ಪಡೆದು ಕೊಳ್ಳುಲು ಈ ಲಿಂಕ್‌ ಕ್ಲಿಕ್‌ ಮಾಡಿ ಎಂಬ ಸಂದೇಶ್‌, ಫೋನ್‌ ಕರೆಗಳು, ಫೆಸ್ಬುಕ್‌ ಫೇಕ್‌ ಐಡಿ ರಚಿಸಿ ಹಣ ಕೇಳುವ ಜಂಜಾಟದಿಂದ ಈಗಾಗಗಲೇ ಅನೇಕರು ಸಾಕಷ್ಟು ಕಿರಿ ಕಿರಿ ಅನುಭವಿಸಿದ್ದಾರೆ. ಈ ರೀತಿ ಫೋನ್​ಗಳನ್ನು ಹ್ಯಾಕ್​ ಮಾಡಲು ಇಂಥ ಲಿಂಕ್​ಗಳನ್ನು ಕಳಿಸಿ ಗಿಮಿಕ್ ಮಾಡುವುದು ಹಳೇ ವಿಧಾನ. ಇದೀಗ ಪಿಂಕ್​ ವಾಟ್ಸ್​ ಆ್ಯಪ್​ ಎಂಬ ಹೊಸ ರೂಪದೊಂದಿಗೆ ಮತ್ತೆ ಸದ್ದುಮಾಡುತ್ತಿದೆ. ಈ ಲಿಂಕ್ ನಿಮ್ಮ ವಾಟ್ಸ್​ಆ್ಯಪ್​ಗೂ ಬರಬಹುದು. ಹಾಗೊಮ್ಮೆ ಬಂದರೆ ತುಂಬ ಆತಂಕ ಪಡುವ ಅಗತ್ಯವಿಲ್ಲ. ಕ್ಲಿಕ್ ಕೂಡ ಮಾಡಬೇಡಿ. ಆ ಲಿಂಕ್​ನಿಂದ ದೂರವೇ ಇರಿ ಎಂದು ಸೈಬರ್ ಭದ್ರತಾ ವಿಶ್ಲೇಷಕರು ಹೇಳಿದ್ದಾರೆ.

https://twitter.com/rajaharia/status/1384070098114154500?s=19

ಅಂತರ್ಜಾಲ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ವಾಟ್ಸ್​ಆ್ಯಪ್​ ಪಿಂಕ್ ಬಗ್ಗೆ ಎಚ್ಚರಿಕೆಯಿಂದ ಇರಿ. ಪಿಂಕ್ ವಾಟ್ಸ್​ಆ್ಯಪ್​ ಹೆಸರಲ್ಲಿ ವೈರಸ್ ಹರಿದಾಡುತ್ತಿದೆ. ಈ ಲಿಂಕ್​ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್​ನಲ್ಲಿರುವ ಎಲ್ಲವನ್ನೂ ಕಳೆದುಕೊಳ್ಳುತ್ತೀರಿ. ಹ್ಯಾಕ್​ ಆಗುತ್ತದೆ ಎಂದಿದ್ದಾರೆ.

ಪಿಂಕ್​ ವಾಟ್ಸ್​ಆ್ಯಪ್​ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ಎಪಿಕೆ ಆ್ಯಪ್​ ಡೌನ್​ಲೋಡ್ ಆಗಿ, ನಮ್ಮ ಇಡೀ ಮೊಬೈಲ್ ಹ್ಯಾಕ್ ಆಗುತ್ತದೆ. ಹಾಗಾಗಿ ಅಧಿಕೃತ ಆ್ಯಪ್​ ಸ್ಟೋರ್ ಆಗಿರುವ ಗೂಗಲ್​ ಅಥವಾ ಆ್ಯಪಲ್​ ಆ್ಯಪ್​ಸ್ಟೋರ್​ಗಳಲ್ಲಿ ಇರುವ ಆ್ಯಪ್​ಗಳನ್ನು ಮಾತ್ರ ಡೌನ್​ಲೋಡ್ ಮಾಡಿಕೊಳ್ಳಬೇಕು. ಉಳಿದಂತೆ ಯಾವುದೇ ಲಿಂಕ್ ಮೂಲಕ ಹೋಗಿ ಆ್ಯಪ್​ಗಳನ್ನು ಡೌನ್​​ಲೋಡ್ ಮಾಡಿಕೊಳ್ಳಬಾರದು ಎಂದು ಟೆಕ್​ ತಜ್ಞರು ಹೇಳಿದ್ದಾರೆ. ಫೋನ್​ನಲ್ಲಿರುವ ವೈಯಕ್ತಿಕ ಡಾಟಾ ಕದಿಯಲು ಇಂಥ ಲಿಂಕ್​ಗಳನ್ನು ಬಳಕೆ ಮಾಡಲಾಗುತ್ತದೆ. ಬ್ಯಾಂಕಿಂಗ್​​ ವ್ಯವಹಾರಕ್ಕೆ ಸಂಬಂಧಪಟ್ಟ ಪಾಸ್​ವರ್ಡ್​ಗಳೂ ಹ್ಯಾಕರ್​ಗಳ ಪಾಲಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ವಾಟ್ಸ್​ಆ್ಯಪ್​ ಪಿಂಕ್ ಅಥವಾ ವಾಟ್ಸ್ಆ್ಯಪ್ ಗೋಲ್ಡ್​ ಕೂಡ ಹ್ಯಾಕರ್​ಗಳ ಇನ್ನೊಂದು ಗಿಮಿಕ್​ ಆಗಿದ್ದು, ಫೇಕ್ ಫೀಚರ್​ ಆಗಿದೆ. ಈ ಲಿಂಕ್ ಬಂದರೆ ಇಗ್ನೋರ್ ಮಾಡಿ. ಡಿಲೀಟ್​ ಮಾಡಿಬಿಡಿ ಎಂದು ಸಲಹೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *