ಉದ್ಯೋಗ ಖಾತ್ರಿ ಯೋಜನೆಯ ವೇತನ ಹೆಚ್ಚಳಕ್ಕೆ ಆಗ್ರಹ

ಕುಂದಾಪುರ : ಉದ್ಯೋಗ ಖಾತ್ರಿ ಯೋಜನೆಯ ವೇತನ ಹೆಚ್ಚಿಳಕ್ಕೆ ಆಗ್ರಹಿಸಿ ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರಿಗೆ ದಿನಕ್ಕೆ ರೂ 600 ಕೂಲಿ ವೇತನ, ವಾಷಿ೯ಕ 200 ದಿನಗಳ ಕೆಲಸ ಹಾಗೂ ನಗರ ಪ್ರದೇಶಕ್ಕೆ ನರೇಗಾ ಯೋಜನೆ ವಿಸ್ತರಣೆಗೆ ಒತ್ತಾಯಿಸಿ ಕುಂದಾಪುರ ತಾಲೂಕು ಪಂಚಾಯತ್ ಕಚೇರಿ ಎದುರು ಕೂಲಿಕಾರರು ಪ್ರತಿಭಟನೆ ಮೂಲಕ ರಾಜ್ಯ ಸರಕಾರಕ್ಕೆ ಸಾಮೂಹಿಕವಾಗಿ ಮನವಿ ಸಲ್ಲಿಸಿದರು.

ಇದನ್ನೂ ಓದಿ : ಉದ್ಯೋಗ ಖಾತ್ರಿ ಯೋಜನೆಗೆ ಬೇಡಿಕೆ ಹೆಚ್ಚಾಗುತ್ತಿದೆ – ಇತ್ತ ಕೇಂದ್ರ ಹಣ ಕಡಿತ ಮಾಡಿದೆ

ಮನವಿಗೂ ಮುನ್ನ ಕಾಮಿ೯ಕ ಭವನದಲ್ಲಿ ಕೃಷಿಕೂಲಿಕಾರರ ಬೃಹತ್ ಸಮಾವೇಶವನ್ನು ಕಾಮಿ೯ಕ ಮುಖಂಡ ಎಚ್. ನರಸಿಂಹ ಉದ್ಘಾಟಿಸಿ ಮಾತನಾಡಿ ಕರೊನಾ ಸಂಕಷ್ಟದ ಪರಹಾರ ಧನವನ್ನು ಬಿಡುಗಡೆ ಮಾಡದ ಸರಕಾರದ ನೀತಿಯನ್ನು ಖಂಡಿಸುತ್ತೇವೆ. ಈ ಕೂಡಲೇ ಪರಿಹಾರ ಧನವನ್ನು ಎಲ್ಲಾ ಕೃಷಿಕೂಲಿಕಾರರಿಗೆ ಬಿಡುಗಡೆಗೆ ಒತ್ತಾಯಿಸುವುದಕ್ಕಾಗಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆನೀಡಿದರು.

ಸಮಾವೇಶದಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ, ಮಹಾಬಲವಡೇರ ಹೋಬಳಿ, ನಾಗರತ್ನ ನಾಡ, ಬಲ್ಕೀಸ್ ಮೊದಲಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *