ನವದೆಹಲಿ: ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನತೆಗೆ ಕೇಂದ್ರ ಮತ್ತೊಂದು ಶಾಕ್ ನೀಡಿ, ಮಾ.1 ರಂದು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಳ ಮಾಡಿದೆ.
ಮಾ.1 ರಿಂದಲೇ ಜಾರಿಗೆ ಬಂದಿದ್ದು, ಪರಿಷ್ಕೃತ ದರದ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿಯೇತರ ಪ್ರತಿ ಸಿಲಿಂಡರ್ ದರ (14.2 ಕೆ.ಜಿ) 819 ರೂಪಾಯಿಯಾಗಿದೆ.
ಸಬ್ಸಿಡಿಯೇತರ ಎಲ್ ಪಿಜಿ ಸಿಲಂಡರ್ ಗಳ ದರ ಪರಿಷ್ಕರಣೆ ಪ್ರತಿ ತಿಂಗಳು ನಡೆಯಲಿದ್ದು, ಪ್ರತಿ ತಿಂಗಳ ಮೊದಲ ದಿನ ದರ ಏರಿಕೆ ಜಾರಿಯಾಗಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಯ ಪ್ರಕಾರ ದರ ಬದಲಾವಣೆಯಾಗಲಿದೆ. ಫೆಬ್ರವರಿ ತಿಂಗಳಲ್ಲಿ ಎಲ್ ಪಿಜಿ ಸಿಲಿಂಡರ್ ದರವನ್ನು ಮೂರು ಬಾರಿ ಏರಿಕೆ ಮಾಡಲಾಗಿತ್ತು. ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿರುವಾಗಲೇ ಎಲ್ ಪಿಜಿ ದರ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಗಗನಮುಖವಾಗಿ ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ ಹಾಕಲಾಗುತ್ತಿದೆ.
ಫೆಬ್ರವರಿ ತಿಂಗಳಿನಿಂದ ಅಡುಗೆ ಅನಿಲ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಜೊತಗೆ ಗ್ಯಾಸ್ ಸಿಲಿಂಡರ್ ಬೆಲೆಯೂ ಸಹ ಹೆಚ್ಚಾಗುತ್ತಿರುವುದು ಜನಸಾಮಾನ್ಯರಿಗೆ ವಿಪರೀತ ಹೊರೆಯಾಗಿದೆ . ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು, ಗ್ರಾಹಕರನ್ನು ಸಂಕಷ್ಟಕ್ಕೆ ಕೊಂಡೆಯುತ್ತಿದೆ. ಪೆಟ್ರೋಲ್, ಡೀಸೇಲ್, ಅಡುಗೆ ಅನಿಲ ದರ ದಿನ ನಿತ್ಯ ಏರಿಕೆಯಾಗುತ್ತಿದ್ದು, ಸಾರಿಗೆ ಮತ್ತು ಅಡುಗೆ ಪದಾರ್ಥಗಳ ದರ ಹೆಚ್ಚಾಗಬಹುದು ಎಂದು ಸಾರ್ವಜನಿಕರು ಆತಂಕಪಡುವಂತಾಗಿದೆ.