ಐಟಿ ನಿಯಮಗಳು ಕೆಲವೆಡೆ ಸುದ್ದಿ ತತ್ವಕ್ಕೆ ವಿರುದ್ಧವಾಗಿವೆ – ಡಿಜಿಪಬ್

ದೆಹಲಿ : ಇತ್ತೀಚೆಗೆ ಸರಕಾರ ಜಾರಿಗೆ ತಂದಿರುವ ‘ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021’ (ಐಟಿ ನಿಯಮಗಳು) ಗೆ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್  ಬಲವಾದ ಅಕ್ಷೇಪವನ್ನು ವ್ಯಕ್ತಪಡಿಸಿದೆ, ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಮಂತ್ರಿ ಪ್ರಕಾಶ್ ಜಾವಡೇಕರ್ ಅವರಿಗೆ “ಕೆಲವೆಡೆಗಳಲ್ಲಿ  ಐಟಿ ನಿಯಮಗಳು ಒಂದು ಪ್ರಜಾಪ್ರಭುತ್ವದಲ್ಲಿ ಸುದ್ದಿಯ ಮೂಲಭೂತ ತತ್ವ ಮತ್ತು ಅದರ ಪಾತ್ರಕ್ಕೆ ವಿರುದ್ಧವಾಗಿರುವಂತೆ ಕಾಣುತ್ತದೆ” ಎಂದು ಪತ್ರ ಬರೆದಿದೆ.

ಭಾರತದ ಡಿಜಿಟಲ್ ಸುದ್ದಿ ಪ್ರಕಟಣೆಗಳ ಅತಿ ದೊಡ್ಡ ಸಂಘಟನೆಯಾಗಿರುವ  ಡಿಜಿಪಬ್  ( DIGIPUB ) ಫೌಂಡೇಷನ್  ಸಂಬಂಧಪಟ್ಟ ಎಲ್ಲ ಭಾಗೀದಾರರೊಂದಿಗೆ ಸಮಾಲೋಚನೆಗಳು ನಡೆಯುವ ವರೆಗೆ  ಈ ನಿಯಮಗಳನ್ನು ರದ್ದುಗೊಳಿಸಬೇಕು ಅಥವಾ ತಡೆಹಿಡಿಯಬೇಕು ಎಂದು ವಿನಂತಿಸಿದೆ. ಡಿಸೆಂಬರ್ 2, 2020 ರಂದು ಸಂಬಂಧಪಟ್ಟ ಸಚಿವಾಲಯಕ್ಕೆ ಪತ್ರ ಬರೆದಿದ್ದರೂ, ಉತ್ತರವ ಸಿಕ್ಕಿಲ್ಲ, ಆದರೆ ಈಗಲೂ ತಡವಾಗಿಲ್ಲ ಎಂದು ಅದು ಹೇಳಿದೆ.

“ಐಟಿ ನಿಯಮಗಳು, 2021, ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿವೆ, ಇದು ಭಾರತೀಯ ಅಂತರ್ಜಾಲವನ್ನು ಮೂಲಭೂತವಾಗಿ ಬದಲಾಯಿಸುತ್ತದೆ ”ಎಂದು ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ ( ಅಂತರ್ಜಾಲ ಸ್ವಾತಂತ್ರ್ಯ ಪ್ರತಿಷ್ಠಾನ-ಐಎಫ್ಎಫ್) ಟ್ವೀಟ್ ಮಾಡಿದೆ.

“ಕೆಲವು ಸ್ಥಳಗಳಲ್ಲಿ ಈ ನಿಯಮಗಳು ಸುದ್ದಿಯ ಮೂಲಭೂತ ತತ್ವ ಮತ್ತು ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರಕ್ಕೆ ವಿರುದ್ಧವಾಗಿರುವಂತೆ  ಕಂಡುಬರುತ್ತವೆ. ಸುದ್ದಿ ಮಾಧ್ಯಮಗಳನ್ನು ಜವಾಬುದಾರರಾಗಿ ಮಾಡುವ ಕಾನೂನುಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೂ, ಈ ನಿಯಮಗಳು ಕಾರ್ಯಾಂಗ ಸರ್ಕಾರಕ್ಕೆ ಪ್ರಸಕ್ತ ವ್ಯವಹಾರಗಳು ಅಥವಾ ಸುದ್ದಿಗಳು ಎಂದು ಪ್ರಕಟಿಸಿರುವುದನ್ನು ತೆಗೆಯಲು ಅನುವು ಮಾಡಿಕೊಡುತ್ತವೆ(ನಿಯಮ 14.)” ಎಂದು ಡಿಜಿಪಬ್ ಹೇಳಿದೆ. ಪ್ರಸಕ್ತ ವ್ಯವಹಾರಗಳ ಪ್ರಕಟಣೆಯು ಸಂವಿಧಾನದ ಕಲಮು 19 (1) (ಎ) ಅಡಿಯಲ್ಲಿ ಖಾತರಿಪಡಿಸಿದ ಪ್ರಕಾಶಕ ಅಥವಾ ಲೇಖಕರ ಅಭಿವ್ಯಕ್ತಿಯ ಮೂಲಭೂತ ಹಕ್ಕನ್ನು ಮಾತ್ರವಲ್ಲದೆ ನಾಗರಿಕರ ಮಾಹಿತಿ ಪಡೆಯುವ ಹಕ್ಕನ್ನು ಕೂಡ ಪ್ರತಿನಿಧಿಸುತ್ತದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

“ಸುದ್ದಿ ಪೋರ್ಟಲ್‌ಗಳು ಅಥವಾ ಪ್ರಕಟಣೆಗಳ ವಿಷಯವನ್ನು ನಿಯಂತ್ರಿಸುವ ಅನಿರ್ಬಂಧಿತ ಅಧಿಕಾರವನ್ನು ಕಾರ್ಯಾಂಗವು ಹೊಂದುವುದು ಸಾಂವಿಧಾನಿಕ ಯೋಜನೆಯ ಮೇಲಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೇಲೆಯೇ ಮಾಡುವ  ಪ್ರಹಾರವಾಗುತ್ತದೆ” ಎಂದು ಅದು ಹೇಳಿದೆ.

ಈ ನಿಯಮಗಳಲ್ಲಿ “ಅಸಂಗತತೆಗಳು” ಇವೆ. ಇದು ಸಂಪೂರ್ಣ ಕಾನೂನು ಪ್ರಕ್ರಿಯೆಯನ್ನು ಬದಿಗೊತ್ತುತ್ತದೆ,  ಮಾನಹಾನಿಯೆಂಬ  ದೂರು ವಿಚಾರಣೆಗೆ ಅರ್ಹವಾಗಿದೆಯೇ ಇಲ್ಲವೇ ಎಂಬುದನ್ನು ಅಧಿಕಾರಶಾಹಿಗಳನ್ನು ಒಳಗೊಂಡಿರುವ ಮತ್ತು ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಡುವ ಒಂದು ವ್ಯವಸ್ಥೆಯು  ನಿರ್ಧರಿಸುತ್ತದೆ ಮತ್ತು ಅದು ಯಾವುದೇ ಪ್ರಸಕ್ತ ವ್ಯವಹಾರಗಳ ಪ್ರಕಟಣೆಯ ವಿಷಯವು ಲಭ್ಯವಾಗದಂತೆ ನಿರ್ಬಂಧಿಸಬಹುದು ಎಂದು ಮುಂದುವರೆದು ಡಿಜಿಪಬ್ ಹೇಳಿದೆ.

ಇದನ್ನೂ ಓದಿ : ಮುಖ್ಯವಾಹಿನಿಯಲ್ಲ, ಕಾರ್ಪೊರೆಟ್ ಮಾಧ್ಯಮ, ಪರ್ಯಾಯವಲ್ಲ, ಜನತಾ ಮಾಧ್ಯಮ : ಸಾಯಿನಾಥ್

ಒಂಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ ವ್ಯವಹಾರಗಳ ಪೋರ್ಟಲ್ ಡಿಜಿಟಲ್ ಸ್ವರೂಪದಲ್ಲಿ ಲಿಖಿತ ಪತ್ರಿಕೆಯಾಗಿದೆ. 1950 ರ ದಶಕದ ಆರಂಭದಿಂದಲೂ, ಪ್ರೆಸ್ ಕೌನ್ಸಿಲ್(ಪತ್ರಿಕಾ ಮಂಡಳಿ)  ಸ್ಥಾಪನೆಯ ಹಿಂದೆ, ಪ್ರಕಟಣೆಯ ಹಿತದೃಷ್ಟಿಯಿಂದಷ್ಟೇ ಅಲ್ಲ, ಒಟ್ಟು ಸಾರ್ವಜನಿಕರ ಹಿತದೃಷ್ಟಿಯಿಂದ ಸುದ್ದಿಗಳು ಮತ್ತು ವಿಚಾರಗಳನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಹರಡಿಸಲು ಲಿಖಿತ ಮಾಧ್ಯಮವನ್ನು ಎಲ್ಲಾ ಕಾರ್ಯಾಂಗದ ಹಸ್ತಕ್ಷೇಪಗಳಿಂದ ದೂರವಿಡಬೇಕು ಎಂಬ ವಿಚಾರ ಇರುವುದನ್ನು   ಡಿಜಿಪಬ್‍ ಒತ್ತಿ ಹೇಳಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಡಿಜಿಪಬ್  ಎಲ್ಲ ಭಾಗೀದಾರರೊಂದಿಗೆ ವಿವರವಾದ ಸಮಾಲೋಚನೆ ನಡೆಸುವಂತೆ” ಸರ್ಕಾರವನ್ನು ಒತ್ತಾಯಿಸಿತ್ತು. “ಸಾಂಕ್ರಾಮಿಕದ ಮಧ್ಯೆ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಆರ್ಥಿಕ ವ್ಯವಸ್ಥೆಗಳು, ಹೂಡಿಕೆಗಳು ಮತ್ತು ಉದ್ಯೋಗಗಳು ಕುಂಠಿತಗೊಳ್ಳುತ್ತಿರುವಾಗ,ಸರ್ಕಾರದ ಇಂತಹ ನಡೆಗಳು ಒಳ್ಳೆಯದಕ್ಕಿಂತ ಹಾನಿ ಮಾಡುವ ಹಾನಿ ಮಾಡುವ ಸಂಭವವೇ ಹೆಚ್ಚಿದೆ. ನಿರ್ಬಂಧಿಸುವ ಧೋರಣೆಗಳು  ಉದ್ಯೋಗ ನಷ್ಟ ಸೇರಿದಂತೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ”ಎಂದು ಡಿಜಿಪಬ್‍ ಸರಕಾರಕ್ಕೆ ಬರೆದಿರುವ ಈ ಪತ್ರ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *