ಖಾಸಗಿ ಶಾಲೆಗಳ ಶುಲ್ಕವನ್ನು ಕಡಿತಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸರಕಾರದ ಈ ನಿರ್ಧಾರಕ್ಕೆ ಪರ ವಿರೋಧದ ಚರ್ಚೆಗಳು ಬರುತ್ತಿವೆ. ಸರಕಾರದ ನಿರ್ಧಾರವನ್ನು ಖಾಸಗಿ ಶಾಲೆಗಳು ವಿರೋಧ ಮಾಡಿದರೆ, ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಸರಕಾರದ ನಿಲುವನ್ನು ಸ್ವಾಗತಿಸಿವೆ.
ಕೊರೊನಾ ಹಾಗೂ ಲಾಕ್ಡೌನ್ ಹಿನ್ನಲೆಯಲ್ಲಿ ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಖಾಸಗಿ ಶಾಲೆಗಳ ಶುಲ್ಕವನ್ನು ಕಡಿತ ಮಾಡಬೇಕು ಎಂದು ಪೋಷಕರ ಸಂಘಟನೆ ಮತ್ತು ವಿದ್ಯಾರ್ಥಿ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿದ್ವು, ಅವರ ಬೇಡಿಕೆಯನ್ನು ಪರಿಗಣಿಸಿದ್ದ ಸರಕಾರ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ 30% ಹಣವನ್ನು ಕಡಿತ ಮಾಡಿ ಆದೇಶವನ್ನು ಹೊರಡಿಸಿತ್ತು, ಸರಕಾರದ ಈ ನಿಲುವನ್ನು ಖಂಡಿಸಿ, 8 ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಯನ್ನು ನಡೆಸಿದರು. ಶುಲ್ಕ ಕಡಿತದ ಆದೇಶವನ್ನು ಪರಿಷ್ಕರಿಸಬೇಕು ಎಂದು ಸರಕಾರಕ್ಕೆ ಒತ್ತಾಯವನ್ನು ಮಾಡಿದರು.
ಇದನ್ನು ಓದಿ : ಖಾಸಗಿ ಶಾಲೆಗಳ ದುಬಾರಿ ಶುಲ್ಕ ವಸೂಲಾತಿಗೆ ಕಡಿವಾಣ ಹಾಕಲು ವಿದ್ಯಾರ್ಥಿಗಳ ಆಗ್ರಹ
ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟಕ್ಕೆ ಪೋಷಕರು ಆಕ್ರೋಶವ್ಯಕ್ತಪಡಿಸಿದ್ದು, ಖಾಸಗಿ ಶಾಲೆಗಳು ಇಂತಹ ಸಮಯದಲ್ಲೂ ವ್ಯಾಪಾರಿ ಮನೋಭಾವನೆಯನ್ನು ಬಿಡಬೇಕು, ಬಡ ಪೋಷಕರ ಸಂಕಷ್ಟಗಳನ್ನು ಅರಿಯಬೇಕು. ಹಾಗೂ ಸರಕಾರ ಖಾಸಗಿ ಶಾಲೆಗಳ ಹೋರಾಟಕ್ಕೆ ಮಣಿಯಬಾರದು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಖಾಸಗಿ ಶಾಲೆಗಳು ಎತ್ತಿರುವ ಬೇಡಿಕೆ ಸಹಜವಾಗಿದೆ ಎಂದು ಬಹುತೇಕರಿಗೆ ಅನಿಸುತ್ತದೆ. ಅಲ್ಲಿರುವ ಶಿಕ್ಷಕರಿಗೆ ಶುಲ್ಕ ಕೊಡಬೇಕು, ಶಾಲೆಯನ್ನು ನಿರ್ವಹಣೆ ಮಾಡಬೇಕು, ಇದು ಸುಲಬದ ಕೆಲಸವಲ್ಲ. ಹಾಗಾಗಿ ಅವರು ಕೇಳುತ್ತಾ ಇರುವುದು ತಪ್ಪಲ್ಲ ಎಂಬ ಚರ್ಚೆಗಳು ಕೂಡ ನಡೆಯುತ್ತವೆ. ಈ ಚರ್ಚೆಗಳು ನಡೆಯುವುದ ತಪ್ಪಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದು ವರ್ಷ ಮಾತ್ರ ಶುಲ್ಕ ಕಡಿತ ಮಾಡಿದರೆ ಯಾವ ಸಮಸ್ಯೆಯು ಅವರಿಗೆ ಆಗುವುದಿಲ್ಲ. ಕೋಟ್ಯಾಂತರ ರೂ ದುಡ್ಡು ಶಾಲೆಯ ಅಂಕೌಂಟನಲ್ಲಿದೆ. ಅದಕ್ಕೆ ಬೇಕಾದ ದಾಖಲೆಗಳು ಕೂಡಾ ನಮ್ಮ ಬಳಿ ಇವೆ.
ಇದನ್ನು ಓದಿ : ಶುಲ್ಕ ಕಟ್ಟದಿದ್ದಕ್ಕೆ ವಿದ್ಯಾರ್ಥಿ- ಪೋಷಕರ ಮೇಲೆ ಹಲ್ಲೆ ನಡೆಸಿದ ಖಾಸಗಿ ಶಿಕ್ಷಣ ಸಂಸ್ಥೆ
ಹೀಗಿದ್ದಾಗ ಕೇವಲ 30% ಶುಲ್ಕವನ್ನು ಕಡಿತಗೊಳಿಸಿ ಎಂದು ಸರಕಾರ ಹೇಳಿದರೂ ಸರಕಾರದ ವಿರುದ್ಧ ಇವರು ಪ್ರತಿಭಟನೆ ನಡೆಸುತ್ತಿರುವುದ ಎಷ್ಟು ಸರಿ? ಕಳೆದ 9 ತಿಂಗಳು ನಡೆದ ಆನ್ಲೈನ್ ಕ್ಲಾಸ್ ಹೆಸರಿನಲ್ಲಿ ಎಲ್ಲಾ ಶುಲ್ಕವನ್ನು ಈಗಾಗಲೆ ಬಾಚಿಕೊಂಡಿದ್ದಾರೆ. ದುಡ್ಡು ಕೊಡದೆ ಇದ್ದ ಮಕ್ಕಳಿಗೆ ಆನ್ಲೈನ್ ಪ್ರವೇಶಕ್ಕೂ ಅವಕಾಶವನ್ನು ಕೊಡದಿರುವ ಘಟನೆಗಳು ಅನೇಕ ಕಡೆಗಳಲ್ಲಿ ನಡೆದಿದ್ದವು. ಖಾಸಗಿ ಶಿಕ್ಷಕರು ಕೊವೀಡ್ ಸಮಯದಲ್ಲಿ ವೇತನ ನೀಡಿಲ್ಲ ಎಂದು ಖಾಸಗಿ ಶಾಲೆಗಳು ವೇತನವನ್ನು ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಿದ್ದರು. ಕಳೆದ 9 ತಿಂಗಳ ಅವಧಿಯಲ್ಲಿ ಒಂದೂ ರೂ ಯನ್ನು ಖರ್ಚು ಮಾಡದೆ, ವಿದ್ಯಾರ್ಥಿಗಳಿಂದ ಆನ್ಲೈನ್ ಕ್ಲಾಸ್ ನಲ್ಲಿ ಹಣವನ್ನು ಪಡೆದ ಖಾಸಗಿ ಶಾಲೆಗಳು ಈಗ ಶುಲ್ಕ ಕಡಿತದ ವಿರುದ್ಧ ಹೋರಾಟ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಎಂಬುದು ತಜ್ಞರ ವಾದವಾಗಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸ್ವಲ್ಪ ಹಿಂದಕ್ಕೆ ಹೋಗೋಣ, ಇಲ್ಲಿಯವರೆಗೆ ಖಾಸಗಿ ಶಾಲೆಗಳು ಒಬ್ಬ ವಿದ್ಯಾರ್ಥಿಗೆ ನಿಗದಿ ಮಾಡಿದಷ್ಟು ಹಣವನ್ನು ಪೋಷಕರು ನೀಡುತ್ತಾ ಬಂದಿದ್ದಾರೆ. ಆದರೆ ಖಾಸಗಿ ಶಾಲೆಗಳು ಇಂತಿಷ್ಟೆ ಶುಲ್ಕವನ್ನು ಪಡೆಯಬೇಕು ಎಂದು ಸರಕಾರ ಹೇಳಿದಾಗ, ಆ ನಿಯಮಗಳನ್ನು ಎಷ್ಟು ಖಾಸಗಿ ಶಾಲೆಗಳು ಜಾರಿ ಮಾಡಿರಬುಹುದು ಎಂದು ಹುಡಿಕಿದರೆ, ಯಾವ ಖಾಸಗಿ ಶಾಲೆಯು ಆ ಪಟ್ಟಿಗೆ ಸೇರುವುದಿಲ್ಲ. ಶಿಕ್ಷಣ ಹಕ್ಕುಗಳ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿಯವರೆಗೆ ಖಾಸಗಿ ಶಾಲೆಗಳು ಹಣವನ್ನು ಪಡೆಯುತ್ತಾ ಬಂದಿವೆ. ಸರಕಾರ ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಮಾಡಿದ್ದು ಎಷ್ಟು? ಮತ್ತು ಇಲ್ಲಿವರೆಗೆ ಅವರು ಪಡೆದದ್ದು ಎಷ್ಟು ಎಂಬ ಮಾಹಿತಿಯನ್ನು ಬಹುಶಃ ಅನೇಕರು ಕೇಳಿಯೇ ಇರುವುದಿಲ್ಲ. ಅಂತಹ ಅಂಕಿ ಅಂಶಗಳನ್ನು ನಾವೀಗ ತಿಳಿತಾ ಹೋಗೋಣ.
ಸುಂಕದ ಕಟ್ಟೆ ಬಳಿ ಇರುವ ಅಪೋಲೊ ಶಾಲೆ, ಸೆಂಟ್ಪಾಲ್, ನ್ಯೂಕಾರ್ವೆಲ್, ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಮುನೇಶ್ವರ ನಗರದ ಪ್ರಸನ್ ಪಬ್ಲಿಕ್ ಶಾಲೆ, ಮಿಲ್ಲತ್ಹಳ್ಳಿ (ನಾಗರಬಾವಿ) ಕನ್ಯಾಕುಮಾರಿ ವಿದ್ಯಾಸಂಸ್ಥೆ, ಕ್ರೈಸ್ತಕಿಂಗ್ ಪಬ್ಲಿಕ್ ಶಾಲೆ, ಸಂಪಂಗಿ ರಾಮನಗರದ ಕೆಂಬ್ರಿಡ್ಜ್ ಪಬ್ಲಿಕ್ ಶಾಲೆ, ಕೊಪ್ಪಳದ ಎಸ್,ಎಫ್,ಎಸ್, ಸ್ವಾಮಿ ವಿವೇಕಾನಂದ, ವಿದ್ಯಾನಿಕೇತನ ಸೇರಿದಂತೆ 30 ಕ್ಕೂ ಹೆಚ್ಚು ಶಾಲೆಗಳ ದಾಖಲಾತಿಯನ್ನು ಅಧ್ಯಯನ ಮಾಡಿ ಈ ವರದಿಯನ್ನು ನಿಮ್ಮ ಮುಂದೆ ವಿವರಿಸ್ತಾ ಇದ್ದೇವೆ. ಒಂದು ಖಾಸಗಿ ಶಾಲೆ ಸರಕಾರದಿಂದ ಜಾಗ, ನೀರು, ಕರೆಂಟ್, ಇತ್ಯಾದಿ ಸೌಲಭ್ಯಗಳಲ್ಲಿ ರಿಯಾಯಿತಿಯನ್ನು ಪಡೆದಿರುತ್ತವೆ. ಆದರೂ ಕೂಡಾ ಬಿಲ್ಡಿಂಗ್ ಫಂಡ್ , ಶೂ, ಸಾಕ್ಸ್, ನೋಟ್ ಬುಕ್ ಹೆಸರಿನಲ್ಲಿ ಹಣವನ್ನು ಪಡೆಯುತ್ತಿರುವುದನ್ನು ನಾವು ದಿನನಿತ್ಯ ನೋಡ್ತಾ ಇದ್ದೇವೆ.
ಇದನ್ನು ಓದಿ : ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಪೋಸ್ಟರ್ ಪ್ರದರ್ಶನ ಮತ್ತು ಪ್ರತಿಭಟನೆ
1983 ರ ಕರ್ನಾಟಕ ಶಿಕ್ಷಣ ಕಾಯಿದೆ ಅನ್ವಯ ಮತ್ತು 1995 ರ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕಾಯಿದೆಯ ನಿಯಮಗಳು 28.10.1999 ರಂದು ಜಾರಿಗೆ ಬರುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿತ್ತು. ಈ ನಿಯಮಗಳ ಪ್ರಕಾರ 1 ರಿಂದ 5 ರ ವರೆಗೆ ಬೋಧನೇತರ ಶುಲ್ಕ ಪಡೆಯಬಾರದೆಂದು ಹಾಗೂ ವಿಶೇಷ ಅಭಿವೃದ್ಧಿ ಶುಲ್ಕವಾಗಿ ಅನುದಾನ ರಹಿತ ಶಾಲೆಗಳು 600 ರೂ ಸಂಗ್ರಹಿಸಬೇಕು. ಈ ಹಣವನ್ನು ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧ ಎಂದು ಶಿಕ್ಷಣ ಕಾಯ್ದೆ ಹೇಳುತ್ತದೆ. ಆದರೆ ಬಿಷಪ್ ಕಾಟನ್ ಶಿಕ್ಷಣ ಸಂಸ್ಥೆಯು ಎಲ್.ಕೆ.ಜಿ ಪ್ರವೇಶಕ್ಕೆ 2 ಲಕ್ಷ ರೂ ನಿಗದಿ ಮಾಡಿದೆ. ಗಂಗಾವತಿಯ ವಿದ್ಯಾನಿಕೇತನ ಶಾಲೆ 30 ಸಾವಿರಕ್ಕೂ ಹೆಚ್ಚು ಶುಲ್ಕವನ್ನು ನಿಗದಿ ಮಾಡಿದೆ. ಖಾಸಗಿ ಶಾಲೆಗಳನ್ನು ನಿಯಂತ್ರಣ ಮಾಡುವುದಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ಖಾಸಗಿ ಶಾಲೆಗಳ ಶುಲ್ಕ ಎಷ್ಟಿರಬೇಕು ಎಂದು ನಿರ್ಧರಿಸಿತು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಜಿಲ್ಲಾ ಶಿಕ್ಷಣ ರೆಗ್ಯೂಲೆಟಿಂಗ್ ಪ್ರಾಧಿಕಾರ (District Education Regulatory Authority (DERA) ಅಂತಾ ನಾ ವೇನು ಕರೆಯುತ್ತೇವೆ ಅದರ ಪ್ರಕಾರ ಒಂದು ಖಾಸಗಿ ಶಾಲೆಯ ಶುಲ್ಕ ಎಷ್ಟಿರಬೇಕು ಅಂದರೆ ಶಾಲೆಯ ಒಟ್ಟು ಖರ್ಚು ವರ್ಷಕ್ಕೆ 60,000 ಸಾವಿರ ಇದೆ ಎಂದು ಲೆಕ್ಕ ಹಾಕೋಣ, ಆ ಶಾಲೆಯಲ್ಲಿ 8 ಜನ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ ಎಂದು ಕೊಳ್ಳೋಣ, ಸರಾಸರಿ ತಿಂಗಳಿಗೆ 10 ಸಾವಿರ ವೇತನ, ಒಂದು ವರ್ಷಕ್ಕೆ 9 ಲಕ್ಷದ 60 ಸಾವಿರ ರೂ ಆಗುತ್ತದೆ ಒಟ್ಟು 10 ಲಕ್ಷದ 20 ಸಾವಿರ ಆ ಶಾಲೆಯ ಖರ್ಚಾಗುತ್ತದೆ. ಅದಕ್ಕೆ 30% ಹೆಚ್ಚುವರಿ ಹಣ ಸೇರಿಸಿಕೊಳ್ಳಲು ಕಾಯ್ದೆ ಅವಕಾಶವನ್ನು ನೀಡಿದೆ ಅದರ ಪ್ರಕಾರ 30% ಅಂದ್ರೆ 3 ಲಕ್ಷ ಹಣ ಹೆಚ್ಚುವರಿ ಸೇರಿಸಬೇಕಾಗುತ್ತದೆ ಆಗ ಒಟ್ಟು 13 ಲಕ್ಷದ 20 ಸಾವಿರ ರೂ ಆಗುತ್ತದೆ. 300 ಜನ ಮಕ್ಕಳ ಇದ್ದರೆ ಅದರಲ್ಲಿ ಇದನ್ನು ಭಾಗಿಸಬೇಕಾಗುತ್ತದೆ ಅಂದ್ರೆ 13 ಲಕ್ಷದ 23 ಸಾವಿರ ಡಿವೈಡೆಡ್ ಬೈ 300 ಮಾಡಿದರೆ ಆಗ ನಮಗೆ ಸಿಗುವ ಉತ್ತರ 4400 ರೂ. ಇದು ಉದಾಹರಣೆ ಇಷ್ಟು. ಅಬ್ಬಬ್ಬಾ ಅಂದ್ರೆ 5000 ಕ್ಕಿಂತ ಹೆಚ್ಚಿಗೆ ಶುಲ್ಕ ದಾಟಲು ಸಾಧ್ಯವೆ ಇಲ್ಲ, ಖಾಸಗಿ ಶಾಲೆಗಳು ಇಲ್ಲಿಯವರೆಗೆ ಪಡೆದ ಶುಲ್ಕ ಎಷ್ಟು? 30% ಶುಲ್ಕವನ್ನು ಕಡಿತ ಮಾಡುವುದರಿಂದ ಕಾಸಗಿ ಶಾಲೆಗೆ ಏನಾದರೂ ಸಮಸ್ಯೆ ಇದೆಯಾ ಎಂಬುದನ್ನು ನೀವೆ ಸ್ವಲ ಆಲೋಚನೆ ಮಾಡಿ.
ಸರಕಾರದ ಸೌಲಭ್ಯಗಳನ್ನು ಪಡೆದು ಸರಕಾರದ ವಿರುದ್ಧವೇ ಈಗ ಖಾಸಗಿ ಶಾಲೆಗಳು ತಿರುಗಿ ಬಿದ್ದರಿವುದಕ್ಕೆ ಸರಕಾರವೇ ಕಾರಣ ಯಾಕೆ ಅಂದ್ರ ಕಾಯ್ದೆಗಳನ್ನು ಹಲ್ಲುಕಿತ್ತ ಹಾವಿನಂತೆ ಮಾಡಿದ್ದು ಇವರೆ, ಅದಕ್ಕೂ ಕಾರಣ ಇದೆ, ಅದು ಏನು ಅಂದ್ರೆ? ಖಾಸಗಿ ಶಾಲೆಗಳನ್ನು ಬಹುತೇಕರು ಆರಂಭ ಮಾಡಿದ್ದು ಯಾರು ಅಂದ್ರೆ ರಾಜಕಾರಣಿಗಳು ಮತ್ತು ಸ್ವಾಮಿಜಿಗಳು. ಸರಕಾರಿ ಶಾಲೆಗಳನ್ನು ಬಲಪಡಿಸಿ, ಖಾಸಗಿ ಶಾಲೆಗಳನ್ನು ನಿಯಂತ್ರಿಸಿದ್ದರೆ ಸರಕಾರಕ್ಕೆ ಇವತ್ತು ಇಂತಹ ಸ್ಥಿತಿ ಬರುತ್ತಿರಲಿಲ್ಲ. ಈಗಾಲೂ ಖಾಸಗಿ ಶಾಲೆಗಳ ಹೋರಾಟಕ್ಕೆ ಸರಕಾರ ಮಣಿದರೂ ಅಚ್ಚರಿ ಪಡಬೇಕಿಲ್ಲ, ಸರಕಾರ ತನ್ನ ನ್ಯೂನೆತೆಗಳನ್ನು ಸರಿ ಮಾಡಿಕೊಂಡು ಶಿಕ್ಷಣದ ಮಾರಾಟಕ್ಕೆ ಬ್ರೆಕ್ ಹಾಕಿ ಸಾರ್ವಜಿನಿಕ ಶಿಕ್ಷಣವನ್ನು ಬಲ ಪಡಿಸಲು ಮುಂದಾಗಬೇಕಿದೆ.