ಬೆಂಗಳೂರು :ಜ. 27 : ಕೆಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿ ಗಣರಾಜ್ಯೋತ್ಸವ ದಿನದಂದು ಅನ್ನದಾತರ ಪರ್ಯಾಯ ಪರೇಡ್ ವಿಜೃಂಬಣೆಯಿಂದ ನಡೆಯಿತು. ಈ ಅನ್ನದಾತನ ಹೋರಾಟಕ್ಕೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು ರೈತರ ಪರ್ಯಾಯ ಪರೇಡ್ ಗೆ ಮತ್ತಷ್ಟು ಮೇರಗು ತುಂಬಿದೆ.
ಇತಿಹಾಸದಲ್ಲೇ ಮೊಟ್ಟ ಮೊದಲ ಭಾರಿಗೆ ರಾಜ್ಯಧಾನಿಯಲ್ಲಿ ರಾಷ್ಟ ಧ್ವಜದೊಂದಿಗೆ ಕೆಂಪು, ನೀಲಿ, ಶ್ವೇತ ಪಥಾಕೆ ಬಾವುಟಗಳೊಂದಿಗೆ ಹಸಿರು ಶಾಲುಗಳು ರಾರಾಜಿಸಿ ಒಗ್ಗಟ್ಟಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಅನ್ನದಾತನು ತನ್ನ ಸ್ವಾಭಿಮಾನದ ಸಂಕೇತವಾಗಿರು ಹಸಿರು ಶಾಲುಗಳನ್ನು ಬೀಸಿದರೆ, ಕೆಂಪು ಶ್ರಮಜೀವಿಗಳ ಸಂಕೇತವಾಗಿ , ನೀಲಿ ದಲಿತರ ಸಂಕೆವಾಗಿ, ಶ್ವೇತ ಪಥ ವಿದ್ಯಾರ್ಥಿ, ಮಹಿಳೆಯರ ಸಂಕೇಂತವಾಗಿ ರೈತನ ಬೆಂಬಲಕ್ಕೆ ನಿಂತಿದ್ದವು.
ಬೆಂಗಳೂರಿನ ಫ್ರೀಡಂ ಪಾರ್ಕ್, ನೈಸ್ ರೂಡ್, ಹೊಸಕೋಟೆ ಜಂಕ್ಷನ್, ಬಿಡದಿ ಕೈಗಾರಿಕಾ ಪ್ರದೇಶಗಳಿಂದ ಆರಂಭಗೊಂಡ ರೈತರ ಪರೇಡ್ ತಾವು ಇದ್ದ ಕಡೆಗಳಲ್ಲಿ ಧ್ವಜಾರೋಹಣ ನೇರೆವೇರಿಸಿದರು. ಇನ್ನು ಕೆಲವು ಕಡೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಪಥ ಸಂಚಲ ಆರಂಭಿಸಿದ್ದಾರೆ.
ನಗರದ ಹಲವು ಭಾಗಗಳಿಂದ ಬಂದಿರುವ ಪರೇಡ್ ಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕ್ರಾಂತಿ ಗೀತೆಗಳನ್ನು ಹಾಡುತ್ತಾ, ರೈತರ ಹೋರಾಟಕ್ಕೆ ಬೆಂಬಲದ ಘೋಷಣೆಗಳನ್ನು ಕೂಗುತ್ತಾ ದಂಡು ದಂಡಾಗಿ ನಗರದತ್ತ ಆಗಮಿಸಿದ್ದರು. ಕೆಲವು ಕಡೆ ದಾರಿ ಮಧ್ಯದಲ್ಲಿ ಪೊಲೀಸ್ ರು ಪರ್ಯಾರ ಪರೇಡ್ ಗೆ ಅಡ್ಡಿ ಉಂಟುಮಾಡಿದ್ದರು. ಮಾತಿನ ಚಕಮುಕಿ ನಡೆದಿದ್ದು, ಇನ್ನು ಕೆಲವುಗಳಲ್ಲಿ ಟ್ಯ್ರಾಟರ್ ಗಳ ಮೂಲಕ ರೈತರು ಬಂದರೆ ಟೋಲ್ ಗಳ ಒಳಗಡೆ ಬಿಡದೇ ಅವರನ್ನು ತಡೆಹಿಡಿದ್ದರು.
ಮೂಲೆ ಮೂಲೆಗಳಿಂದ ರಾಜ್ಯಧಾನಿಯ ಹೃದಯ ಭಾಗವಾದ ಫ್ರಿಡಂ ಪಾರ್ಕ್ ನತ್ತ ಸಭೆ ಸೇರಿದರು. ಈ ಸಭೆಯಲ್ಲಿ ಹತ್ತು ಸಾವಿರ ಜನಸಂಖ್ಯೆ ಸೇರಿದ್ದರು. ರೈತರ ಹೋರಾಟಕ್ಕೆ ಬೆಂಬಲ ನೀಡಲು ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ, ಪ್ರಗತಿಪರ, ಸಿಖ್ ಸಮುದಾಯ, ಮುಸ್ಲಿಂ ಸಂಘಟನೆ, ಅಲ್ಪ ಸಂಖ್ಯಾತ ಸಮುದಾಯ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿದ್ದವು.
ಪ್ರಮುಖವಾಗಿ ಈ ಪರೇಡ್ ನಲ್ಲಿ ಧರ್ಮ, ಜಾತಿಗಳ ಅಂಗುಗಳಿಗೆ ಸ್ಥಾನವಿಲ್ಲ ಎಂಬುದಕ್ಕೆ ಈ ಹೋರಾಟ ಸಾಕ್ಷಿಯಾಗಿದೆ. ಇಲ್ಲಿ ಮುಸ್ಲಿಂ ಸಮುದಾಯದವರು, ಸಿಖ್ ಸಮುದಾಯದವರು ಬಂದಿರುವ ಅಷ್ಟು ಹೋರಾಟಗಾರರಿಗೆ ಊಟ ನೀಡಿ ಐಕ್ಯತೆ ಮೇರೆದಿದ್ದಾರೆ. ಈ ಹೋರಾಟವನ್ನು ರೈತರ ಕ್ರಾಂತಿ ಎಂದು ಹೇಳಬಹುದು.
ಮೋದಿ ಸರಕಾರದ ವಿರುದ್ದ ರೈತ, ಜನಪರ ಸಂಘಟನೆಗಳು ಕರೆ ನೀಡಿದ್ದ ರೈತ ಗಣರಾಜ್ಯೋತ್ಸವ ಪರೇಡ್ ಎಲ್ಲೆಡೆ ಅತ್ಯಂತ ಯಶಸ್ಬಿಯಾಗಿ ನಡೆಯಿತು. ಯುವಜನರು, ಮಹಿಳೆಯರು ಉತ್ಸಾಹದಿಂದ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ರ್ಯಾಲಿಗೆ ಮೆರಗು ತಂದಿದ್ದರು. ಆ ಮೂಲಕ ವಿವಿಧ ಭಾಗಗಳಲ್ಲಿ ಮೋದಿ ಸರಕಾರದ ವಿರುದ್ದ ದೊಡ್ಡ ಧ್ವನಿಯ ಧಿಕ್ಕಾರ ಮೊಳಗಿತು. ಈ ಪರ್ಯಾಯ ಪರೇಡ್ ಗೆ ಬೆಂಲವಾಗಿ ಬೆಂಗಳೂರು ಅಲ್ಲದೇ ರಾಜ್ಯದ ಹಲವು ಭಾಗಗಳಾದ ಕಲಬುರ್ಗಿ, ಕೊಪ್ಪಳ, ರಾಯಚೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಚಿಕ್ಕಬಳ್ಳಾಪುರ, ಗದಗ್, ಹುಬ್ಬಳ್ಳಿ, ಮಂಗಳೂರು, ಅಂಕೋಲ, ವಿಜಯನಗರ, ಧಾರವಾಡ, ಬಳ್ಳಾರಿ ಸೇರಿದಂತೆ ಅನೇಕ ಕಡೆಗಳಲ್ಲಿ ದ್ವಜಾರೋಹಣ ಮಾಡಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ಮಂಗಳೂರಿನಲ್ಲಿ ನಡೆದ ರೈತರ ಪರೇಡ್ ನಲ್ಲಿ ಡಿವೈ ಎಫ್ ಐನ ಸದಸ್ಯರು ಚೇ ಅವರ ಭಾವ ಚಿತ್ರ ಉಳ್ಳ ಟೀ ಶರ್ಟ್ ಧರಿಸಿದ್ದರು. ಚೇ ಅಂದರೆ ಪ್ರೀತಿ ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕೆನ್ನು ಚೇ ಮಾತನ್ನು ಇಲ್ಲಿ ಕಾಣಬಹುದಾಗಿತ್ತು.
ಮೋದಿ ಸರಕಾರದ ಕರಾಳ ಕಾನೂನುಗಳ ವಾಪಸ್ಸಾತಿಗಾಗಿ ಒತ್ತಾಯಿಸಿ ಧಾರವಾಡದ ಕಲಾ ಭವನದಿಂದ ಹೈಕೋರ್ಟ್ ವರೆಗೆ ನಡೆದ ಬೃಹತ್ ಟ್ಯಾಕ್ಟರ್ ಪೆರೇಡ್ ನಡೆಯಿತು. ಟಂಟಂ ವಾಹನಗಳು ಸಾಥ್ ನೀಡಿದವು.
ಇನ್ನು ಅಂಕೋಲದಲ್ಲಿ ನೇಗಿಲ ಹೊತ್ತುಕೊಂಡು ರೈತರ ಪರ್ಯಾರ ಪರೇಡ್ ನಡೆಸಿದ್ದಾರೆ.
ಇತರ ಜಿಲ್ಲೆಗಳಲ್ಲಿ ಕಂಡ ರೈತರ ಪರ್ಯಾಯ ಪರೇಡ್ ದೃಶ್ಯಗಳು