ಜರ್ನಾ ದಾಸ್  ವೈದ್ಯರವರ ಮೇಲೆ  ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರ ಕಠಿಣ ಶಿಕ್ಷೆಗೆ JMS ಆಗ್ರಹ

ಬೆಂಗಳೂರು; ಜ. 20 : ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಹ ಕಾರ್ಯದರ್ಶಿ ಮತ್ತು ರಾಜ್ಯ ಸಭಾ ಸದಸ್ಯರು ಆಗಿರುವ ಜರ್ನಾ ದಾಸ್  ವೈದ್ಯರವರ ಮೇಲೆ ಬಿ.ಜೆ.ಪಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು ಜೆಎಂಎಸ್ ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತ್ರಿಪುರಾ ರಾಜ್ಯದ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಹ ಕಾರ್ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯರು ಆಗಿರುವ ಜರ್ನಾ ದಾಸ್  ಬೈದ್ಯರ ವರ ಮೇಲೆ ಬಿ.ಜೆ.ಪಿ ಕಾರ್ಯಕರ್ತರು  ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ಅಖಿಲ ಭಾರತ  ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಅಪರಾಧಿಗಳನ್ನು ಕೂಡಲೇ ಬಂಧಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ದೇವಿಯವರು ಒತ್ತಾಯಿಸಿದ್ದಾರೆ.

ಎಡ ಚಳುವಳಿಯ ಕಛೇರಿಯ ಮೇಲೆ ಗೂಂಡಾಗಳಿಂದ ಧಾಳಿ ಹಲ್ಲೆ ನಡೆದಿದೆ ಎಂಬ ಮಾಹಿತಿ ಸಿಕ್ಕಾಗ ಜರ್ನಾ ಅಲ್ಲಿರುವ ಕಾರ್ಯಕರ್ತರ ರಕ್ಷಣೆಗಾಗಿ ಧಾವಿಸಿರುತ್ತಾರೆ. ಆ ಸಂಧರ್ಭದಲ್ಲಿ ಸುಮಾರು ಮೂವತ್ತು  ಜನರಿರುವ ಗೂಂಡಾ ಪಡೆ ಕೈಯಲ್ಲಿ ಲಾಠಿ, ದೊಣ್ಣೆ ಕಬ್ಬಿಣದ ಸಲಾಕೆಗಳು ಮುಂತಾದ ಸಲಕರಣೆಗಳನ್ನು   ಹಿಡಿದು  ಜರ್ನಾರವರ ಹಿಂಬಾಲಿಸಿ  ಅವರ ಮೇಲೆ ಧಾಳಿ ಮಾಡಿ ಕೊಲೆಗೈಯುವ ಪ್ರಯತ್ನ ನಡೆಸಿದಲ್ಲದೆ  ಅವರ ಬಳಿಯಿದ್ದ ಹಣ ಮತ್ತಿತರ ವಸ್ತುಗಳನ್ನು ಕಿತ್ತುಕೊಂಡು ಅವರ ಬೆಂಗಾವಲು ಸಿಬ್ಬಂದಿಯ ಮೇಲೆ  ಹಲ್ಲೆ ಮಾಡಲಾಗಿದೆ. ಗಂಭೀರ ಸ್ವರೂಪದ ಗಾಯಗಳಿಂದ ಅವರೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಲ್ಲದೆ,  ತ್ರಿಪುರಾದ ಜನರನ್ನು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ  ಪೋಲೀಸರು ವಿಫಲರಾಗಿರುವುದು ಸಾಬೀತಾಗಿದೆ. ಈ ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸಬೇಕು, ನಿರ್ಲಕ್ಷ್ಯ ತೆ ವಹಿಸಿದ ಪೋಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಆಗ್ರಹಿಸಿದ್ದಾರೆ.

ಜರ್ನಾದಾಸ್ ಬೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಆಸ್ತಿಪಾಸ್ತಿ ಗಳಿಗೆ ಆದ‌ ನಷ್ಟಕ್ಕೆ ತ್ರಿಪುರಾ ಸರಕಾರ ಪರಿಹಾರ ನೀಡಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *