ರಾಜ್ಯ ಸರಕಾರಿ ನೌಕರರಿಗೆ ಅಂಕುಶ: ಸರ್ಕಾರದ ನಡೆಗೆ ನೌಕರರ ಆಕ್ರೋಶ

ರಾಜ್ಯ ಸರಕಾರಿ ನೌಕರರನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಬಿಜೆಪಿ ಸರಕಾರ  ಮುಂದೆ ಬಂದಿದೆ.  ಕರ್ನಾಟಕ ನಾಗರಿಕ ಸೇವಾ  ನಿಯಮಗಳ 2020  ಎಂಬ ಪರಿಷ್ಕೃತ ಕರಡನ್ನು ಅಕ್ಟೋಬರ್ 27 ರಂದು ಹೊರಡಿಸಿದೆ. ಈ ನಿಯಮ ಜಾರಿಯಾದರೆ ಸರಕಾರಿ ನೌಕರರ ಚಟುವಟಿಕೆಗಳಿಗೆ ಬ್ರೆಕ್ ಬೀಳುವುದಲ್ಲದೆ? ಸರಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಭಿರುಚಿಯನ್ನು ನಿಯಂತ್ರಿಸವ ಕಾನೂನಾಗಲಿದೆ.

ಒಂದರ್ಥಲ್ಲಿ ಸರಕಾರಿ ನೌಕರರನ್ನು ಕಟ್ಟಿ ಹಾಕುವ ಕೆಲಸ ಆರಂಭಗೊಂಡಿದೆ. ಈ ಕರಡು ರಚನೆಗೆ ಕಾರಣವಾದರು ಏನು?  ಈ ಕರಡಲ್ಲಿ ಏನಿದೆ? ಇದರ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು? ಮುಂದೆ ಓದಿ.

ಕರ್ನಾಟಕ ರಾಜ್ಯ ಸರಕಾರವು ಅಕ್ಟೋಬರ್ 27 ರಂದು  ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಮಯ 2020  ಎಂಬ ಕರಡನ್ನು ಹೊರಡಿಸಿದೆ. ಈಗಾಗಲೆ  ಇರುವ ಸರಕಾರಿ ನೌಕರರ ನಡುವಳಿಕೆ ಮತ್ತು  ಶಿಸ್ತಿನ ಕುರಿತ ನಿಯಮಗಳಿಗೆ ಬದಲಾವಣೆ ತರಲು ರಾಜ್ಯ ಸರಕಾರ ಮುಂದಾಗಿದೆ. ಈವರೆಗೆ ಈ ಕಾಯ್ದೆಗಳು ನೌಕರರಿಗೆ ಮಾತ್ರ ಅನ್ವಯವಾಗುತ್ತಿದ್ದವು, ಇದೀಗ ಅವರ ಕುಟುಂಬ ಹಾಗೂ ಸಂಬಂಧಿಕರಿಗೆ ಅನ್ವಯವಾಗುವಂತೆ ವಿಸ್ತರಿಸಲಾಗುತ್ತಿದೆ.

ಸರಕಾರಿ ನೌಕರ ಹಾಗೂ ಅವರ ಕುಟುಂಬ ಯಾವುದೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗುವ ಹಾಗಿಲ್ಲ, ಚಲನಚಿತ್ರ, ಧಾರಾವಾಹಿ, ನಾಟಕಗಳಲ್ಲಿ ಭಾಗವಹಿಸುವಂತಿಲ್ಲ. ಪತ್ರಿಕೆಗಳಿಗೆ ಕಥೆ, ಕವನ, ಲೇಖನ ಬರೆಯುವಂತಿಲ್ಲ, ಸರಕಾರದ ವಿರುದ್ಧ ಮಾತನಾಡುವಂತಿಲ್ಲ, ಪ್ರತಿಭಟಿಸುವಂತಿಲ್ಲ ಒಟ್ಟಾರೆ ಪ್ರತಿರೋಧದ ಧ್ವನಿಯನ್ನು ಹತ್ತಿಕುವುದಕ್ಕಾಗಿ ಸರಕಾರಿ ನೌಕರರ ಮೇಲೆ ಈ ಅಸ್ತ್ರವನ್ನು ಬಿಡಲು ರಾಜ್ಯ ಸರಕಾರ ಮುಂದಾಗಿದೆ.

ಸರಕಾರದ   ಈ ನಡೆಗೆ ನೌಕರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ನಮ್ಮ ಅಭಿರುಚಿಗೆ ಧಕ್ಕೆ ತರಲಾಗುತ್ತದೆ. ಸರಕಾರ ತಂದಿರುವ  ಈ ಕರಡು ಅಧಿಸೂಚನೆಯನ್ನು ವಾಪಸ್ಸ ಪಡೆಯಬೇಕು ಎಂದು  ಕರ್ನಾಟಕ ಸರಕಾರ ಸಚಿವಾಲಯ ನೌಕರರ ಸಂಘಟನೆಯ ಅಧ್ಯಕ್ಷರಾದ ಪಿ. ಗುರುಸ್ವಾಮಿಯವರು ಆಗ್ರಹಿಸಿದ್ದಾರೆ.

ಭಾರತದ ಸಂವಿಧಾನ  ಎಲ್ಲ ನಾಗರಿಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಸರಕಾರಿ ನೌಕರರಿಗೆ ಇದು ಅನ್ವಯವಾಗುವುದಿಲ್ಲವೆ?  ಸಂಪೂರ್ಣ ನಿಯಂತ್ರದ ಮೂಲಕ ಅಧಿಕಾರದ  ಯಜಮಾನಕೀಯತೆ ನೌಕರರ ಸ್ವಾತಂತ್ರ್ಯವನ್ನು ಹರಣಮಾಡುವ ನಿಯಮ ಇದಾಗಿದೆ ಎಂದು ಚಿಂತಕ ಶ್ರೀಪಾದ್ ಆರೋಪಿಸಿದ್ದಾರೆ.

ರಾಜ್ಯ ಸರಕಾರವು ಸರಕಾರಿ ನೌಕರರು ಪಾಲಿಸಬೇಕಾದ ಶಿಷ್ಟಾಚಾರದ ಕುರಿತು ನಿಯಮಗಳನ್ನು ತರಲು ಹೊರಟಿರುವುದು ಬ್ರೀಟೀಷ್ ವಸಾಹತುಶಾಹಿ ಮನೋಭಾವವನ್ನು ತೋರಿಸುತ್ತದೆ. ನಾವು ಇದನ್ನು ವಿರೋಧಿಸುತ್ತಿದ್ದೇವೆ. ಕೂಡಲೇ ಇದನ್ನು ಹಿಂಪಡೆಯದೆ ಇದ್ದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕುಟದ ಪ್ರಧಾನಕಾರ್ಯದರ್ಶಿ ಎಚ್.ಎಸ್. ಜಯಕುಮಾರ ತಿಳಿಸಿದ್ದಾರೆ.

ಒಂದು ಸರಕಾರ ನೌಕರರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಹಜ. ಇದು ಹಿಂದಿನಿಂದಲೂ ನಡೆಯುತ್ತಿದೆ. ಆದರೆ ಅವರ ಸಂಪೂರ್ಣ ಸ್ವಾತಂತ್ರವನ್ನು ಹರಣಮಾಡಿ ಗುಲಾಮರಂತೆ ನಡೆಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ನೌಕರರಲ್ಲಿರುವ ಅಭಿರುಚಿಯನ್ನು ಪ್ರೋತ್ಸಾಹಿಸಬೇಕೆ ಹೊರತು ಕೊಲ್ಲುವ ಕೆಲಸವನ್ನು ಮಾಡಬಾರದು. ಇಷ್ಟೆಲ್ಲ ವಿರೊಧ ವ್ಯಕ್ತವಾಗುತ್ತಿರುವಾಗ ಸರಕಾರ ಈ ನಿಯಮವನ್ನು ವಾಪಸ್ ಪಡೆಯಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *