ಬಳ್ಳಾರಿ : ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದು ಗಡಿನಾಡು ಬಳ್ಳಾರಿಯಲ್ಲಿ ಮತದಾನ ಪ್ರಕ್ರಿಯೆ ಕೊವೀಡ್ ನಿಯಮಗಳನ್ನು ಒಳಗೊಂಡು ಪ್ರಾರಂಭವಾಗಿದೆ.
ಬಳ್ಳಾರಿಯ ತಾಲೂಕು ಕಚೇರಿಯ ಮತದಾನ ಕೇಂದ್ರ ಸೇರಿದಂತೆ ಜಿಲ್ಲೆಯ 26 ಪೊಲಿಂಗ್ ಬೂತ್ ಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಪ್ರಕ್ರೀಯೆ ಪ್ರಾರಂಭವಾಗಿದೆ. 4237 ಪುರುಷರು, 2616 ಮಹಿಳಾ ಮತದಾರರು ಸೇರಿದಂತೆ ಒಟ್ಟು ಬಳ್ಳಾರಿ ಜಿಲ್ಲೆಯಲ್ಲಿ 6753 ಶಿಕ್ಷಕ, ಉಪನ್ಯಾಸಕರ ಮತಗಳಿವೆ. ಕೊರೋನಾ ಸೊಂಕೀತರಿಗೆ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. ಚುನಾವಣೆ ನಿಮಿತ್ತ ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಲು ಬಳ್ಳಾರಿ ಜಿಲ್ಲೆಯಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 6 ಜನ DYSP, 12 CPI, 28 PSI, 76 ASI, 106 HC, 192 PC, 29 WPC, 11 DAR 02 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ.
ಈಶಾನ್ಯ ಶಿಕ್ಷಕ, ಪದವೀಧರ, ಕ್ಷೇತ್ರದ ಚುನಾವಣೆ ಹಿನ್ನಲೆ, ಮತದಾನ ಕೇಂದ್ರಕ್ಕೆ ಭೇಟಿ ಶಾಸಕ ಸೋಮಶೇಖರ್ ರೆಡ್ಡಿ, ಬಳ್ಳಾರಿಯ ತಹಸೀಲ್ದಾರ್ ಕಚೇರಿಯಲ್ಲಿಯೋ ಪೊಲಿಂಗ್ ಬೂತ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇನ್ನೂ ಇದೇ ವೇಳೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಈ ಬಾರಿ ಈಶಾನ್ಯ ಶಿಕ್ಷಕ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಶಶೀಲ್ ಜೀ ನಮೋಶಿಯವರು ಗೆಲವು ಸಾಧಿಸುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ರೇಸ್ಪಾನ್ಸ್ ಇದೆ, ನಾವು ಎಲ್ಲಾ ಶಿಕ್ಷಕರನ್ನೂ, ಉಪನ್ಯಾಸಕರನ್ನು ತಲುಪಿದ್ದೇವೆ. ಈ ಬಾರಿ ನಮಗೆ ಗೆಲುವು ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಮತ್ತು ನಮ್ಮ ಬಿಜೆಪಿ ಪಕ್ಷದ ಕೆಲಸ ನೋಡಿ ನಮಗೆ ಮತದಾನ ಮಾಡುತ್ತಾರೆ. ನಮೋಶಿ ಅವರು ಗೆಲುವು ಸಾಧಿಸುತ್ತಾರೆ ಎಂದಿದ್ದಾರೆ.